top of page
News Articles
Sathyapatha News Plus


ಸುಬ್ರಹ್ಮಣ್ಯದಲ್ಲಿ ತೆರವು ಕಾರ್ಯಾಚರಣೆ: ಶ್ರೀನಿಕೇತನ ಕಟ್ಟಡಕ್ಕೆ ಮಾತ್ರ ವಿನಾಯಿತಿಯೇ? ಸಾರ್ವಜನಿಕರ ಪ್ರಶ್ನೆ!
ಸುಬ್ರಹ್ಮಣ್ಯ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ನಡೆಯುತ್ತಿರುವ ಕಟ್ಟಡ ತೆರವು ಕಾರ್ಯಾಚರಣೆ ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವು ಕಟ್ಟಡಗಳ ತೆರವು ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದ್ದರೆ, ದೇವಸ್ಥಾನದ ಸಮೀಪದಲ್ಲಿರುವ ಶ್ರೀನಿಕೇತನ ಕಟ್ಟಡದ ತೆರವು ವಿಳಂಬವಾಗುತ್ತಿರುವುದೇಕೆ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಸುಬ್ರಹ್ಮಣ್ಯ ಮತ್ತು ಆದಿ ಸುಬ್ರಹ್ಮಣ್ಯ ಪ್ರದೇಶಗಳಲ್ಲಿ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕೆಲವು
Oct 101 min read


ದೆಹಲಿಯಲ್ಲಿ ಪ್ರತಿಭಟನೆಗೆ ಬ್ರೇಕ್? ಧ್ರುವ್ ರಾಠಿ ಸೇರಿ 150 ಮಂದಿ ಪೊಲೀಸ್ ವಶಕ್ಕೆ!
ನವದೆಹಲಿ: CJP ಸಂಘಟನೆಯ ಪ್ರತಿಭಟನೆಗೆ ಮುನ್ನ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಯೂಟ್ಯೂಬರ್ ಧ್ರುವ್ ರಾಠಿ ಸೇರಿದಂತೆ ಸುಮಾರು 150 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ಗುರುಗ್ರಾಮದಲ್ಲಿರುವ ಧ್ರುವ್ ರಾಠಿ ಅವರ ನಿವಾಸಕ್ಕೆ 50ಕ್ಕೂ ಹೆಚ್ಚು ಪೊಲೀಸರು ತೆರಳಿ ಅವರನ್ನು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ವರದಿಯಲ್ಲಿ ಉಲ್ಲೇಖವಾಗಿದೆ. ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದವರನ್ನು ತಡೆಯಲು ಪೊಲೀಸರು ಭಾರೀ ಭದ್ರತಾ ವ್ಯವಸ್ಥೆ ಕೈಗೊಂಡಿದ್ದಾರೆ. ಬೆಳಗ್ಗೆ 9:35ರ ಸುಮಾರಿಗೆ ಕನ್ನಾಟ್ ಪ್ಲೇಸ್ನಲ್ಲಿ
Oct 101 min read


ಬರ ಪರಿಹಾರ ನೀಡಿಲ್ಲ: ರಿಯಲ್ ಎಸ್ಟೇಟ್ನಲ್ಲೇ ಮುಳುಗಿದೆ ಸರ್ಕಾರ - ಬಿ.ವೈ. ವಿಜಯೇಂದ್ರ ಆಕ್ರೋಶ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಬರದಿಂದ ತತ್ತರಿಸಿರುವ ರೈತರ ನೆರವಿಗೆ ಬಾರದೆ, ಕೇವಲ ರಿಯಲ್ ಎಸ್ಟೇಟ್ ಮತ್ತು ಟೌನ್ಶಿಪ್ ನಿರ್ಮಾಣದಲ್ಲೇ ಮುಳುಗಿದೆ. ಸರ್ಕಾರ ದಿವಾಳಿಯಾಗಿದ್ದು, ಆರ್ಥಿಕ ತುರ್ತು ಪರಿಸ್ಥಿತಿ ಎದುರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರುಕಾಲು ವರ್ಷಗಳಾದರೂ ನುಡಿದಂತೆ ನಡೆಯದೆ ಕೇವಲ ಜಾಹೀರಾತು ಪ್ರಚಾರದಲ್ಲಷ್ಟೇ ತೊಡಗಿದೆ. ಒಂದೇ ಒಂದು ಹೊಸ ಯೋಜನೆ ಜಾರಿ ಮಾಡಿಲ್ಲ. ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಹಾಗೂ
Oct 91 min read


ಮಂಗಳೂರು: ವಾಟರ್ ಪ್ಯೂರಿಫೈಯರ್ನಲ್ಲಿ ಎಂಡಿಎಂಎ ಸಾಗಾಟ; ಮೂವರು ಆರೋಪಿಗಳ ಬಂಧನ
₹1.63 ಕೋಟಿ ಮೌಲ್ಯದ ಸೊತ್ತು ವಶಕ್ಕೆ; ಕೇರಳ ಸೇರಿದಂತೆ ವಿವಿಧೆಡೆ ಮಾರಾಟಕ್ಕೆ ಸಂಚು ಮಂಗಳೂರು: ವಾಟರ್ ಪ್ಯೂರಿಫೈಯರ್ನಲ್ಲಿ ಎಂಡಿಎಂಎ ಮಾದಕವಸ್ತುವನ್ನು ಅಡಗಿಸಿಟ್ಟು ಕೋರಿಯರ್ ಮೂಲಕ ಮಂಗಳೂರಿಗೆ ಸಾಗಿಸಲು ಯತ್ನಿಸಿದ ಜಾಲವನ್ನು ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಒಟ್ಟು ₹1,63,84,000 ಮೌಲ್ಯದ ಮಾದಕವಸ್ತು ಸೇರಿದಂತೆ ವಿವಿಧ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ಟೋಬರ್ 8ರಂದು ರಾತ್ರಿ 10 ಗಂಟೆಗೆ ಉಳ್ಳಾಲ ತಾಲೂಕಿನ ಕುಂಪಲದ ಡಿಮಾರ್ಟ್ ಬಳಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿ
Oct 91 min read


ಮೃತಪಟ್ಟಿದ್ದಾರೆಂದು ಸುಳ್ಳು ಪ್ರಮಾಣ ಪತ್ರ ಸೃಷ್ಟಿ: ಶಾಸಕ ಯತ್ನಾಳ್ ವಿರುದ್ಧ FIR
ವಿಜಯಪುರ: ಜೀವಂತವಾಗಿರುವ ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ಸುಳ್ಳು ಮರಣ ಪ್ರಮಾಣ ಪತ್ರ ಸೃಷ್ಟಿಸಿ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಯತ್ನಿಸಿದ ಗಂಭೀರ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲಾಗಿದೆ. ನಗರದ ಬಾಗವಾನ್ ಕಾಲೋನಿಯ ಅಬ್ದುಲ್ ರಝಾಕ್ ನೀಡಿದ ದೂರಿನ ಮೇರೆಗೆ ವಿಜಯಪುರದ ಜಲನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ಹೂಡಲಾಗಿದೆ. ಶಾಸಕ ಯತ್ನಾಳ್ ಹಾಗೂ ಅವರ ಬೆಂಬಲಿಗರು ಸೆಪ್ಟೆಂಬರ್ 3 ರಂದು ನಕಲಿ ಮರಣ ಪ್ರಮಾಣ ಪತ್ರಗಳನ್ನು ನಗರ ಪಾಲಿಕೆ ಆಯುಕ್ತರಿಗೆ ಸಲ್ಲಿಸಿ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವಂತೆ ಕೋರಿದ್ದರು ಎಂದು ದೂರಿನಲ್ಲಿ ತಿಳಿಸ
Oct 91 min read


ನಕಲಿ ಪಾಸ್ಪೋರ್ಟ್ ಪ್ರಕರಣ: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಂಗಳೂರಿನಲ್ಲಿ ಬಂಧನ
ಮಂಗಳೂರು: ನಕಲಿ ಪಾಸ್ಪೋರ್ಟ್ ಬಳಸಿ ವಿದೇಶಕ್ಕೆ ತೆರಳಲು ಯತ್ನಿಸಿ, ಶಿಕ್ಷೆಯಾದ ಬಳಿಕ ತಲೆಮರೆಸಿಕೊಂಡಿದ್ದ ಕೇರಳದ ಕಾಸರಗೋಡಿನ ಬೇವಿಂಜೆ ನಿವಾಸಿ ವೇಲಾಯುಧನ್ (54) ಎಂಬಾತನನ್ನು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ತಂಡ ಬಂಧಿಸಿದೆ. 2010 ಜೂನ್ 22ರಂದು ಮಂಗಳೂರು ವಿಮಾನ ನಿಲ್ದಾಣದಿಂದ ನಕಲಿ ಪಾಸ್ಪೋರ್ಟ್ನಲ್ಲಿ ವಿದೇಶಕ್ಕೆ ತೆರಳಲು ಯತ್ನಿಸಿದ್ದ ಈತನನ್ನು ಇಮಿಗ್ರೇಷನ್ ಅಧಿಕಾರಿ ಕೆ.ಎಂ. ಚಂದ್ರಶೇಖರ್ ವಶಕ್ಕೆ ಪಡೆದು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್ ನ್ಯಾಯಾಲಯವು 2020ರ ಡಿಸೆಂಬರ್ 1ರಂದು ಆರೋಪಿಗೆ 1 ವರ್ಷ 6 ತಿಂಗಳ ಜೈಲು ಶಿಕ್ಷೆ ವಿಧ
Oct 81 min read


ಮೂಡಬಿದ್ರೆ : ತಿರುವಿನಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ಅಪಘಾತ; 17ರ ಹರೆಯದ ಪಿಯುಸಿ ವಿದ್ಯಾರ್ಥಿ ಸಾವು
ಮೂಡುಬಿದಿರೆ: ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಗಂಭೀರ ಗಾಯಗೊಂಡಿದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮೂಡುಬಿದಿರೆ ತಾಲೂಕಿನ ಕೋಟೆಬಾಗಿಲಿನಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಕೋಟೆಬಾಗಿಲಿನ ನಿವಾಸಿ ಸುಧಾಕರ ಹೆಗ್ಡೆ ಅವರ ಪುತ್ರ, ಜೈನ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಪ್ರಶ್ಚಿತ್ ಹೆಗ್ಡೆ (17) ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಪ್ರಶ್ಚಿತ್ ಹಾಗೂ ದೀಕ್ಷಿತ್ ಹೆಗ್ಡೆ ಒಂದೇ ಸ್ಕೂಟರ್ನಲ್ಲಿ ಶಿರ್ತಾಡಿ ಕಡೆಯಿಂದ ಕೋಟೆಬಾಗಿಲಿನತ್ತ ತೆರಳುತ್ತಿದ್ದರು. ವೀರ ಮಾರುತಿ ದೇವಸ್ಥಾನದ ಸಮೀಪದ ತಿರು
Oct 81 min read


ಸಂಪಾಜೆಯಿಂದ ಮಂಗಳೂರಿಗೆ ‘ಸ್ವಚ್ಛತಾ ದಂಡಯಾತ್ರೆ’: ಅ.9ರಿಂದ ನಾಗರಾಜ್ ಬಜಾಲ್ ನೇತೃತ್ವದಲ್ಲಿ ವಿನೂತನ ಅಭಿಯಾನ
ಮಂಗಳೂರು: ರಸ್ತೆ ಬದಿಯ ತ್ಯಾಜ್ಯವನ್ನು ಸ್ವಚ್ಛಗೊಳಿಸುತ್ತಾ, ಸಾರ್ವಜನಿಕರಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ಉದ್ದೇಶದಿಂದ ಹಸಿರು ದಳದ ವತಿಯಿಂದ ಅಕ್ಟೋಬರ್ 9ರಿಂದ 17ರವರೆಗೆ ಸಂಪಾಜೆಯಿಂದ ಮಂಗಳೂರಿನವರೆಗೆ ‘ಸ್ವಚ್ಛತಾ ದಂಡಯಾತ್ರೆ’ ಹಮ್ಮಿಕೊಳ್ಳಲಾಗಿದೆ. ಪರಿಸರ ಕಾರ್ಯಕರ್ತ ಹಾಗೂ ಹಸಿರು ದಳದ ಪ್ರಾಜೆಕ್ಟ್ ಮ್ಯಾನೇಜರ್ ನಾಗರಾಜ್ ಬಜಾಲ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ 9 ದಿನಗಳ ಪಾದಯಾತ್ರೆಯಲ್ಲಿ ಸಾರ್ವಜನಿಕರು, ಸಂಘ-ಸಂಸ್ಥೆಗಳು, ಗ್ರಾಮ ಪಂಚಾಯತ್ಗಳು, ಶಾಲಾ-ಕಾಲೇಜುಗಳು ಹಾಗೂ ಯುವಕರು ಭಾಗವಹಿಸಲು ಮುಕ್ತ ಅವಕಾಶವಿದೆ. ಕಳೆದ ಬಾರಿ ಕಾರವಾರದಿಂದ ಮಂಗ
Oct 82 min read


ಪುತ್ತೂರು: ಭಾರೀ ಮಳೆಗೆ ಆನೆಮಜಲು ಕೋರ್ಟ್ ಬಳಿ ಆವರಣ ಗೋಡೆ ಧರಾಶಾಹಿ – ಸಂಚಾರಕ್ಕೆ ಅಡಚಣೆ, ಕಾಮಗಾರಿ ಗುಣಮಟ್ಟಕ್ಕೆ ಸಾರ್ವಜನಿಕರ ಆಕ್ರೋಶ
ಪುತ್ತೂರು: ನಗರದಲ್ಲಿ ಸಂಜೆ ಸುರಿದ ಭಾರೀ ಮಳೆಗೆ ಆನೆಮಜಲು ನ್ಯಾಯಾಲಯದ ಬಳಿ ಇರುವ ಆವರಣ ಗೋಡೆಯೊಂದು ಕುಸಿದು ರಸ್ತೆಗೆ ಬಿದ್ದ ಘಟನೆ ಸಂಭವಿಸಿದೆ. ಕೋರ್ಟ್ ಸಂಕೀರ್ಣದ ಬಳಿಯಿರುವ ಅಂಗನವಾಡಿ ಕಟ್ಟಡದ ಸಮೀಪದಲ್ಲಿದ್ದ ಈ ಆವರಣ ಗೋಡೆ ಬಿದ್ದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ. ಇಷ್ಟೇ ಅಲ್ಲದೆ, ರಸ್ತೆಯ ಇನ್ನೊಂದು ಬದಿಯಲ್ಲಿರುವ ಮತ್ತೊಂದು ಆವರಣ ಗೋಡೆಯೂ ಸಹ ಕುಸಿಯುವ ಹಂತದಲ್ಲಿದ್ದು, ಸ್ಥಳೀಯರಲ್ಲಿ ಭೀತಿ ಹೆಚ್ಚಿಸಿದೆ. ವಿಶೇಷವೆಂದರೆ, ಈ ನ್ಯಾಯಾಲಯದ ನೂತನ ಸಂಕೀರ್ಣವು ಕಳೆದ ಜನವರಿಯಷ್ಟೇ ಉದ್ಘಾಟ
Oct 71 min read


ಪಣಂಬೂರು ಬೀಚ್ನಲ್ಲಿ ಸಮುದ್ರಕ್ಕೆ ಕೊಚ್ಚಿಹೋಗಿದ್ದ ಬಾಲಕ ಹೆಜಮಾಡಿಯಲ್ಲಿ ಶವವಾಗಿ ಪತ್ತೆ
ಪಣಂಬೂರು ಬೀಚ್ನಲ್ಲಿ ಅಕ್ಟೋಬರ್ 4 ರಂದು ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದ ಬೆಳ್ತಂಗಡಿಯ ಕಸಬಾ ಗ್ರಾಮದ ರೆಂಕೆದ ಗುತ್ತು ನಿವಾಸಿ ಶ್ರೇಯಸ್ ಎಸ್. ಕುಮಾರ್ (14) ಎಂಬ ಬಾಲಕನ ಮೃತದೇಹ ಮಂಗಳವಾರ ಸಂಜೆ ಹೆಜಮಾಡಿ ಕೋಡಿಯ ಶಾಂಭವಿ ನದಿ ತೀರದಲ್ಲಿ ಪತ್ತೆಯಾಗಿದೆ. ಹುಲಿವೇಷ ಕುಣಿತದ ತರಬೇತಿಗಾಗಿ ಸ್ನೇಹಿತರೊಂದಿಗೆ ಮಂಗಳೂರಿಗೆ ಬಂದಿದ್ದ ಶ್ರೇಯಸ್, ನಂತರ ಪಣಂಬೂರು ಕಡಲತೀರಕ್ಕೆ ತೆರಳಿದ್ದಾಗ ಈ ದುರಂತ ಸಂಭವಿಸಿತ್ತು. ಭಯಬಿದ್ದ ಸ್ನೇಹಿತರು ಮರುದಿನ ಬೆಳಗ್ಗೆಷ್ಟೇ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದರು. ತಕ್ಷಣವೇ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹುಡುಕಾಟ ಆರಂಭಿಸಲಾಗಿತ್ತು.
Oct 71 min read


ಡಿಜಿಟಲ್ ಲೋಕಕ್ಕೆ ಪದಾರ್ಪಣೆ: ಮೊಬೈಲ್ನಲ್ಲೂ ಟೈಪ್ ಮಾಡಿ 'ತುಳು ಲಿಪಿ'!
ಬೆಂಗಳೂರು: ಕರಾವಳಿ ಕರ್ನಾಟಕದ ಜಾನಪದ ಹಾಗೂ ಸಾಂಸ್ಕೃತಿಕ ಮೂಲವಾದ ತುಳು ಭಾಷೆಯನ್ನು ಡಿಜಿಟಲ್ ಯುಗದಲ್ಲಿ ಮತ್ತಷ್ಟು ಸಕ್ರಿಯಗೊಳಿಸುವ ಉದ್ದೇಶದಿಂದ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರಿಗಾಗಿ ನೂತನ 'ಕುರಲ್ ತುಳು ಟಚ್' കೀಬೋರ್ಡ್ ಬಿಡುಗಡೆಯಾಗಿದೆ. ಸಾಫ್ಟ್ವೇರ್ ಡೆವಲಪರ್ಗಳಾದ ಹರ್ಷಿತ್ ದೇವಾಡಿಗ ಹಾಗೂ ಚೈತ್ರ ಪೂಜಾರಿ ಅವರು ಈ ಆವಿಷ್ಕಾರವನ್ನು ಮಾಡಿದ್ದು, ಬೆಂಗಳೂರಿನಲ್ಲಿ ನಡೆದ 'ತುಳುನಾಡ ಜಾನಪದ ಸಂಭ್ರಮ' ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಇದನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದೆ. ಈ ಕೀಬೋರ್ಡ್ ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ 'ಬರವು ಸರವು' ಆ್ಯಪ
Oct 71 min read


ಶಾಸಕಿ ಪ್ರಯಾಣಿಸುತ್ತಿದ್ದ ಇನ್ನೋವಾಗೆ ಕಾರು ಢಿಕ್ಕಿ; ಭಾಗೀರಥಿ ಮುರುಳ್ಯ ಅಪಾಯದಿಂದ ಪಾರು
ಸುಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಅಪಘಾತಕ್ಕೀಡಾದ ಘಟನೆ ಕರಿಕ್ಕಳ–ನಿಂತಿಕಲ್ ಮಾರ್ಗದ ಮುಚ್ಚಿಲ ಎಂಬಲ್ಲಿ ನಡೆದಿದೆ. ಮಾಹಿತಿಯ ಪ್ರಕಾರ, ಶಾಸಕಿ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿನ ಮುಂಭಾಗದಲ್ಲಿ ಸಾಗುತ್ತಿದ್ದ ಕಾರೊಂದು ಏಕಾಏಕಿ ಬ್ರೇಕ್ ಹಾಕಿದೆ. ಇದರಿಂದ ಹಿಂಬದಿಯಿಂದ ಬರುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ತಪ್ಪಿ ಮುಂಭಾಗದ ಕಾರಿಗೆ ಢಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಇನ್ನೋವಾ ಕಾರಿನ ಮುಂಭಾಗಕ್ಕೆ ಹಾನಿಯಾಗಿದ್ದು, ಶಾಸಕಿ ಭಾಗೀರಥಿ ಮುರುಳ್ಯ ಹಾಗೂ ಕಾರಿನ ಚಾಲಕ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಳಿಕ ಶಾಸ
Oct 61 min read


ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ ಹರ್ಮನ್ಪ್ರೀತ್ ಕೌರ್
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕಿ ಹಾಗೂ ಅನುಭವಿ ಆಟಗಾರ್ತಿ ಹರ್ಮನ್ಪ್ರೀತ್ ಕೌರ್ ಅವರು ತಮ್ಮ ನಾಯಕತ್ವದ ಹುದ್ದೆಗೆ ದಿಢೀರ್ ರಾಜೀನಾಮೆ ಘೋಷಿಸಿದ್ದಾರೆ. ಇಂದು (ಅಕ್ಟೋಬರ್ 6) ಅಧಿಕೃತವಾಗಿ ಈ ನಿರ್ಧಾರವನ್ನು ಪ್ರಕಟಿಸಿರುವ ಅವರು, ನಾಯಕಿ ಜವಾಬ್ದಾರಿಯಿಂದ ಕೆಳಗಿಳಿಯುತ್ತಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ನಡೆದ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತ ತಂಡಕ್ಕೆ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಟ್ಟಿದ್ದ ಹರ್ಮನ್ಪ್ರೀತ್, ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಈ ನಿರ್ಧಾರ ಕೈಗೊಂಡಿರುವುದು ಕ್ರಿಕೆಟ್ ವಲಯದಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ತಂಡದ ನಾಯಕತ್ವದಿಂದ
Oct 61 min read


ಕಟ್ಟುಮಸ್ತಾದ ದೇಹ... ಜಿಮ್ ಟ್ರೈನರ್... ದೊಡ್ಡ ಫ್ರೆಂಡ್ಸ್ ಸರ್ಕಲ್; ಒಂದು ಪದಕ್ಕೆ ಶುರುವಾದ ಕಿರಿಕ್ ಕೊನೆಗೆ ಕೊಲೆಯಲ್ಲಿ ಅಂತ್ಯ!
ಬೆಂಗಳೂರು : ಆತನದ್ದು ಕಟ್ಟುಮಸ್ತಾದ ದೇಹ. ಜಿಮ್ ಟ್ರೈನರ್ ಬೇರೆ. ಫ್ರೆಂಡ್ಸ್ಗಳ ಸರ್ಕಲ್ ಕೂಡ ದೊಡ್ಡದಾಗಿತ್ತು. ಕ್ಲೋಸ್ ಫ್ರೆಂಡ್ಸ್ ಅಂದ್ಮೇಲೆ ಶಿಷ್ಯ, ಮಚ್ಚ, ಮಗ, ಮಾಮ್ಸ್ ಅನ್ನೋ ಪದಗಳು ಕಾಮನ್.ಆದ್ರೆ... ಇಲ್ಲೊಂದು ಪದವೇ ದೊಡ್ಡ ಕಿರಿಕ್ಗೆ ಕಾರಣವಾಗಿದೆ. “ಶಿಷ್ಯ” ಅಂತ ಕರೆದಿದ್ದಕ್ಕೆ ಶುರುವಾದ ಗಲಾಟೆ ಕೊನೆಗೆ ಒಬ್ಬ ಯುವಕನ ಪ್ರಾಣವನ್ನೇ ತೆಗೆದುಕೊಂಡಿದೆ. ಅಷ್ಟಕ್ಕೂ ಆ ರಾತ್ರಿ ಅಲ್ಲಿ ಆಗಿದ್ದೇನು? ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ... 25 ವರ್ಷದ ನಂದನ್... ಈ ಫೋಟೋದಲ್ಲಿ ಕಾಣ್ತಿರುವ ಯುವಕನ ಹೆಸರು ನಂದನ್. ವಯಸ್ಸು ಕೇವಲ 25 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಜಿಮ್ನಲ್ಲಿ ಕೆಲಸ
Oct 62 min read


ಆಧಾರ್ ಕಾರ್ಡ್ನಲ್ಲಿ ಹೆಸರು ತಿದ್ದುಪಡಿ ನಿಯಮ ಬದಲಾವಣೆ: ಸೇವಾ ಕೇಂದ್ರಕ್ಕೆ ತೆರಳುವ ಮುನ್ನ ಈ ವಿಷಯ ತಿಳಿದಿರಲಿ!
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಆಧಾರ್ ಕಾರ್ಡ್ನಲ್ಲಿ ಹೆಸರು ತಿದ್ದುಪಡಿ ಹಾಗೂ ಪರಿಷ್ಕರಣೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಈ ಮಾರ್ಗಸೂಚಿಗಳು ಸೆಪ್ಟೆಂಬರ್ 18ರಿಂದಲೇ ಅನ್ವಯವಾಗುತ್ತಿವೆ. ನಕಲಿ ದಾಖಲೆಗಳ ಬಳಕೆಗೆ ತಡೆಹಾಕಲು ಮತ್ತು ಅರ್ಜಿಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೊಸ ನಿಯಮಗಳ ಪ್ರಕಾರ, ಹೆಸರು ತಿದ್ದುಪಡಿಯನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಬದಲಾವಣೆಗೆ ನಿರ್ದಿಷ್ಟ ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ: * ಸಣ್ಣ ತಿದ್ದುಪಡಿಗಳು: ಇನಿಷಿಯಲ್ ಸೇರ್ಪಡೆ, ಮನೆಹೆಸರು ಸೇ
Oct 61 min read


ನವರಾತ್ರಿ ವೈಭವ: ಕೆಎಸ್ಆರ್ಟಿಸಿಯಿಂದ 5 ವಿಶೇಷ ‘ದಸರಾ ಏಕದಿನ ಪ್ರವಾಸ ಪ್ಯಾಕೇಜ್’ ಪ್ರಕಟ!
ಮಂಗಳೂರು: ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಸಿದ್ಧ ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಭಕ್ತಾದಿಗಳ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಮಂಗಳೂರು ವಿಭಾಗವು ಬರೋಬ್ಬರಿ 5 ವಿಶೇಷ ‘ದಸರಾ ಏಕದಿನ ಪ್ರವಾಸ ಪ್ಯಾಕೇಜ್’ ಸೇವೆಗಳನ್ನು ಘೋಷಿಸಿದೆ. ಈ ವಿಶೇಷ ಬಸ್ ಸೇವೆಗಳು ಅಕ್ಟೋಬರ್ 11 ರಿಂದ ಅಕ್ಟೋಬರ್ 20 ರವರೆಗೆ ಲಭ್ಯವಿರಲಿವೆ. ವಿಶೇಷ ಪ್ಯಾಕೇಜ್ಗಳ ವಿವರ: * ಮಂಗಳೂರು ದಸರಾ 'ನವದುರ್ಗಾ ದರ್ಶನ': (ಬೆಳಿಗ್ಗೆ 8:00 – ರಾತ್ರಿ 8:30) ಮಂಗಳಾದೇವಿ, ಕಟೀಲು, ಪೊಳಲಿ, ಕುದ್ರೋಳಿ ಸೇರಿದಂತೆ ಪ್ರಮುಖ 11 ದೇವಾ
Oct 51 min read


ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಪರಿಚಲನೆ:ಕರಾವಳಿ, ಮಲೆನಾಡಿಗೆ ಹವಾಮಾನ ಇಲಾಖೆ ಅಲರ್ಟ್
ಅರಬ್ಬಿ ಸಮುದ್ರದ ಮೇಲೆ ರೂಪುಗೊಂಡಿರುವ ಮೇಲ್ಮೈ ಚಂಡಮಾರುತದ ಪರಿಚಲನೆಯಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದೆ. ಇದರ ಪರಿಣಾಮವಾಗಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡಿನಲ್ಲಿ ಅಕ್ಟೋಬರ್ 11ರವರೆಗೆ ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಉತ್ತರ ಕನ್ನಡದಲ್ಲಿಯೂ ಮೋಡ ಕವಿದ ವಾತಾವರಣದೊಂದಿಗೆ ಹಗುರ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಲೆನಾಡು ಪ್ರದೇಶಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಸಕಲೇಶಪುರ ಭಾಗಗಳಲ್ಲಿ ಸಂಜೆ ವೇಳೆ ಗುಡುಗು ಸಹಿತ ಉತ್ತಮ ಮಳೆಯಾಗಲಿದೆ. ಈ ಭಾಗಗಳಲ್ಲಿ
Oct 51 min read


ಪುತ್ತೂರು : ಕೈಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಗೋವುಗಳ ಸಾಗಾಟ :11 ಗೋವುಗಳ ರಕ್ಷಣೆ, ಓರ್ವ ವಶಕ್ಕೆ
ಪುತ್ತೂರು: ಅಕ್ರಮವಾಗಿ ಗೋವುಗಳನ್ನು ಕೇರಳಕ್ಕೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಸಂಪ್ಯ ಗ್ರಾಮಾಂತರ ಠಾಣೆ ಪೊಲೀಸರು, 11 ಗೋವುಗಳನ್ನು ರಕ್ಷಿಸಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಪುತ್ತೂರು ಕುಂಜೂರು ಪಂಜದ ಮಯ್ಯ ಫಾರ್ಮ್ಸ್ನಿಂದ ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಬುಳೇರಿಕಟ್ಟೆ ಮಾರ್ಗವಾಗಿ ಗೋವುಗಳನ್ನು ಕೇರಳದತ್ತ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಗೋವುಗಳನ್ನು ಕೈಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ಸಾಗಿಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರಿಂದ ದೊರೆತ ಮಾಹಿತಿಯ ಆಧಾರ
Oct 51 min read


ಕೆಪಿಎಸ್ಸಿ ಹಗರಣ: ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ಗೆ 14 ದಿನ ನ್ಯಾಯಾಂಗ ಬಂಧನ
ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರಿಗೆ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈ ಮೊದಲು ಪ್ರಕರಣದ ವಿಚಾರಣೆಗಾಗಿ ಗ್ಯಾನೇಂದ್ರ ಅವರನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು. ನ್ಯಾಯಾಲಯದ ಈ ಆದೇಶದ ಬೆನ್ನಲ್ಲೇ ಇಡಿ ಅಧಿಕಾರಿಗಳು ಗ್ಯಾನೇಂದ್ರ ಅವರನ್ನು
Oct 41 min read


ಸುಳ್ಯ: ಕೋಟಿ ವೆಚ್ಚದ ಮೀನು ಮಾರುಕಟ್ಟೆಗೆ ಬೀಗ – ನಿಗೂಢ ಮೌನದಲ್ಲಿ ನಗರ ಪಂಚಾಯತ್ ಮತ್ತು ಜನಪ್ರತಿನಿಧಿಗಳು
ಸುಳ್ಯ: ಸಾರ್ವಜನಿಕರ ತೆರಿಗೆ ಹಣದಲ್ಲಿ ಕೋಟಿ ವೆಚ್ಚ ಮಾಡಿ ನಿರ್ಮಿಸಿದ ಸುಸಜ್ಜಿತ ಮೀನು ಮಾರುಕಟ್ಟೆ ಕಳೆದ 8–9 ತಿಂಗಳಿನಿಂದ ಬಾಗಿಲು ಮುಚ್ಚಿಕೊಂಡಿದೆ. ಕಟ್ಟಡ ಸಿದ್ಧವಾಗಿದೆ, ಮಾರುಕಟ್ಟೆ ಇದೆ, ವ್ಯಾಪಾರಿಗಳೂ ಇದ್ದಾರೆ. ಆದರೆ ವ್ಯಾಪಾರ ಮಾತ್ರ ನಡೆಯುತ್ತಿಲ್ಲ! ಹಾಗಾದರೆ ಸಮಸ್ಯೆ ಏನು? ನಗರ ಪಂಚಾಯತ್ ನಿಗದಿಪಡಿಸಿರುವ ಹರಾಜು ಮೊತ್ತಕ್ಕೂ ವ್ಯಾಪಾರಿಗಳ ಬೇಡಿಕೆಗೂ ಹೊಂದಾಣಿಕೆಯಾಗದ ಕಾರಣ ಮಾರುಕಟ್ಟೆ ಆರಂಭವಾಗದೆ ಉಳಿದಿದೆ. ಹರಾಜುದಾರರು ರಿಯಾಯಿತಿಗಾಗಿ ಮನವಿ ಮಾಡಿದರೂ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇನ್ನು ಹೊರಗಿನ ಮೀನು ಮಾರಾಟಗಾರರಿಗೆ ವ್ಯಾಪಾರ
Oct 41 min read
Archive
bottom of page



