;
top of page

ಆಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿ ನಿಯಮ ಬದಲಾವಣೆ: ಸೇವಾ ಕೇಂದ್ರಕ್ಕೆ ತೆರಳುವ ಮುನ್ನ ಈ ವಿಷಯ ತಿಳಿದಿರಲಿ!

Oct 6
1 min read

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಆಧಾರ್ ಕಾರ್ಡ್‌ನಲ್ಲಿ ಹೆಸರು ತಿದ್ದುಪಡಿ ಹಾಗೂ ಪರಿಷ್ಕರಣೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಈ ಮಾರ್ಗಸೂಚಿಗಳು ಸೆಪ್ಟೆಂಬರ್ 18ರಿಂದಲೇ ಅನ್ವಯವಾಗುತ್ತಿವೆ. ನಕಲಿ ದಾಖಲೆಗಳ ಬಳಕೆಗೆ ತಡೆಹಾಕಲು ಮತ್ತು ಅರ್ಜಿಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.


ಹೊಸ ನಿಯಮಗಳ ಪ್ರಕಾರ, ಹೆಸರು ತಿದ್ದುಪಡಿಯನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಬದಲಾವಣೆಗೆ ನಿರ್ದಿಷ್ಟ ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ:


* ಸಣ್ಣ ತಿದ್ದುಪಡಿಗಳು: ಇನಿಷಿಯಲ್ ಸೇರ್ಪಡೆ, ಮನೆಹೆಸರು ಸೇರಿಸುವುದು, ಪದಗಳ ಕ್ರಮ ಬದಲಾವಣೆ ಹಾಗೂ ಸಣ್ಣ ಕಾಗುಣಿತ ತಪ್ಪುಗಳನ್ನು ಸರಿಪಡಿಸಲು ಪಾಸ್‌ಪೋರ್ಟ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಚಾಲನಾ ಪರವಾನಗಿಯಂತಹ ಮಾನ್ಯ ಗುರುತಿನ ಪುರಾವೆ (PoI) ಅಗತ್ಯ.


* ಮದುವೆ ಅಥವಾ ವಿಚ್ಛೇದನ: ವಿವಾಹದ ನಂತರ ಮನೆಹೆಸರು ಬದಲಾವಣೆ ಅಥವಾ ವಿಚ್ಛೇದನದ ಬಳಿಕ ಹೆಸರು ಬದಲಾಯಿಸಲು PoI ಜೊತೆಗೆ UIDAI ನಿಗದಿಪಡಿಸಿರುವ 'Annexure-D' ನಮೂನೆಯ ಅಫಿಡವಿಟ್ ಮತ್ತು ವಿವಾಹ ನೋಂದಣಿ ಪ್ರಮಾಣಪತ್ರ ಸಲ್ಲಿಸಬೇಕು.


* ಪ್ರಾದೇಶಿಕ ಭಾಷೆಯ ತಪ್ಪುಗಳು: ಇಂಗ್ಲಿಷ್‌ನಲ್ಲಿ ಸರಿಯಿದ್ದು ಕನ್ನಡ ಅಥವಾ ಇತರ ಪ್ರಾದೇಶಿಕ ಭಾಷೆಯಲ್ಲಿ ಹೆಸರು ತಪ್ಪಾಗಿದ್ದರೆ, ಅಗತ್ಯ ಗುರುತಿನ ಪುರಾವೆಯೊಂದಿಗೆ ನಿಗದಿತ ನಮೂನೆಯ ಅಫಿಡವಿಟ್ ನೀಡಬೇಕಾಗುತ್ತದೆ.


* ಸಂಪೂರ್ಣ ಹೆಸರು ಬದಲಾವಣೆ: ವ್ಯಕ್ತಿಯು ತನ್ನ ಮೂಲ ಹೆಸರನ್ನೇ ಸಂಪೂರ್ಣವಾಗಿ ಬದಲಾಯಿಸಲು ಕೇಂದ್ರ ಅಥವಾ ರಾಜ್ಯ ಸರ್ಕಾರದ ಗೆಜೆಟ್ ಅಧಿಸೂಚನೆ, ಹೊಸ ಹೆಸರಿನ ಗುರುತಿನ ಪುರಾವೆ ಹಾಗೂ ಪತ್ರಿಕೆಯಲ್ಲಿ ಪ್ರಕಟವಾದ ಜಾಹೀರಾತಿನ ಪ್ರತಿ ಕಡ್ಡಾಯ.


ಆಧಾರ್‌ನಲ್ಲಿ ಹೆಸರನ್ನು ಜೀವನದಲ್ಲಿ ಗರಿಷ್ಠ ಎರಡು ಬಾರಿ ಮಾತ್ರ ಬದಲಾಯಿಸಲು ಅವಕಾಶವಿದೆ. ಪ್ರಸ್ತುತ ಆನ್‌ಲೈನ್‌ನಲ್ಲಿ ವಿಳಾಸ ತಿದ್ದುಪಡಿಗೆ ಮಾತ್ರ ಅವಕಾಶವಿದ್ದು, ಹೆಸರು ತಿದ್ದುಪಡಿಗೆ ರೂ. 75 ಶುಲ್ಕದೊಂದಿಗೆ ಹತ್ತಿರದ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಬೇಕಾಗಿದೆ.


Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

​

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page