ಪಣಂಬೂರು ಬೀಚ್‌ನಲ್ಲಿ ಸಮುದ್ರಕ್ಕೆ ಕೊಚ್ಚಿಹೋಗಿದ್ದ ಬಾಲಕ ಹೆಜಮಾಡಿಯಲ್ಲಿ ಶವವಾಗಿ ಪತ್ತೆ

ಪಣಂಬೂರು ಬೀಚ್‌ನಲ್ಲಿ ಅಕ್ಟೋಬರ್ 4 ರಂದು ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದ ಬೆಳ್ತಂಗಡಿಯ ಕಸಬಾ ಗ್ರಾಮದ ರೆಂಕೆದ ಗುತ್ತು ನಿವಾಸಿ ಶ್ರೇಯಸ್ ಎಸ್. ಕುಮಾರ್ (14) ಎಂಬ ಬಾಲಕನ ಮೃತದೇಹ ಮಂಗಳವಾರ ಸಂಜೆ ಹೆಜಮಾಡಿ ಕೋಡಿಯ ಶಾಂಭವಿ ನದಿ ತೀರದಲ್ಲಿ ಪತ್ತೆಯಾಗಿದೆ.
ಹುಲಿವೇಷ ಕುಣಿತದ ತರಬೇತಿಗಾಗಿ ಸ್ನೇಹಿತರೊಂದಿಗೆ ಮಂಗಳೂರಿಗೆ ಬಂದಿದ್ದ ಶ್ರೇಯಸ್, ನಂತರ ಪಣಂಬೂರು ಕಡಲತೀರಕ್ಕೆ ತೆರಳಿದ್ದಾಗ ಈ ದುರಂತ ಸಂಭವಿಸಿತ್ತು. ಭಯಬಿದ್ದ ಸ್ನೇಹಿತರು ಮರುದಿನ ಬೆಳಗ್ಗೆಷ್ಟೇ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದರು. ತಕ್ಷಣವೇ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹುಡುಕಾಟ ಆರಂಭಿಸಲಾಗಿತ್ತು.
ಇದೀಗ ಸಿಕ್ಕಿರುವ ಮೃತದೇಹವನ್ನು ತಂದೆ ಶೇಷಪ್ಪ ಗುರುತಿಸಿದ್ದು, ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







Comments