ನವರಾತ್ರಿ ವೈಭವ: ಕೆಎಸ್‌ಆರ್‌ಟಿಸಿಯಿಂದ 5 ವಿಶೇಷ ‘ದಸರಾ ಏಕದಿನ ಪ್ರವಾಸ ಪ್ಯಾಕೇಜ್’ ಪ್ರಕಟ!

ಮಂಗಳೂರು: ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಸಿದ್ಧ ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಭಕ್ತಾದಿಗಳ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಮಂಗಳೂರು ವಿಭಾಗವು ಬರೋಬ್ಬರಿ 5 ವಿಶೇಷ ‘ದಸರಾ ಏಕದಿನ ಪ್ರವಾಸ ಪ್ಯಾಕೇಜ್’ ಸೇವೆಗಳನ್ನು ಘೋಷಿಸಿದೆ. ಈ ವಿಶೇಷ ಬಸ್ ಸೇವೆಗಳು ಅಕ್ಟೋಬರ್ 11 ರಿಂದ ಅಕ್ಟೋಬರ್ 20 ರವರೆಗೆ ಲಭ್ಯವಿರಲಿವೆ.
ವಿಶೇಷ ಪ್ಯಾಕೇಜ್‌ಗಳ ವಿವರ:
* ಮಂಗಳೂರು ದಸರಾ 'ನವದುರ್ಗಾ ದರ್ಶನ': (ಬೆಳಿಗ್ಗೆ 8:00 – ರಾತ್ರಿ 8:30) ಮಂಗಳಾದೇವಿ, ಕಟೀಲು, ಪೊಳಲಿ, ಕುದ್ರೋಳಿ ಸೇರಿದಂತೆ ಪ್ರಮುಖ 11 ದೇವಾಲಯಗಳ ದರ್ಶನ. ಟಿಕೆಟ್ ದರ: ಹಿರಿಯರಿಗೆ ₹500, ಮಕ್ಕಳಿಗೆ ₹400.
* ತಲಕಾವೇರಿ - ಭಾಗಮಂಡಲ ಪ್ಯಾಕೇಜ್: (ಬೆಳಿಗ್ಗೆ 7:00 – ರಾತ್ರಿ 9:30) ಪುತ್ತೂರು ಮಹಾಲಿಂಗೇಶ್ವರ, ತಲಕಾವೇರಿ, ತ್ರಿವೇಣಿ ಸಂಗಮ, ಅಬ್ಬಿ ಜಲಪಾತ ಹಾಗೂ ರಾಜಾಸೀಟ್ ವೀಕ್ಷಣೆ. ಟಿಕೆಟ್ ದರ: ಹಿರಿಯರಿಗೆ ₹600, ಮಕ್ಕಳಿಗೆ ₹500.
* ಕೊಲ್ಲೂರು ಕ್ಷೇತ್ರ ದರ್ಶನ: (ಬೆಳಿಗ್ಗೆ 8:00 – ರಾತ್ರಿ 8:00) ಉಚ್ಚಿಲ, ಕಾಪು, ಮಂದಾರ್ತಿ, ಕಮಲಶಿಲೆ, ಕೊಲ್ಲೂರು ಮೂಕಾಂಬಿಕಾ ಮತ್ತು ಮಾರಣಕಟ್ಟೆ ದರ್ಶನ. ಟಿಕೆಟ್ ದರ: ಹಿರಿಯರಿಗೆ ₹600, ಮಕ್ಕಳಿಗೆ ₹500.
* ಸಿಗಂಧೂರು ಕ್ಷೇತ್ರ ದರ್ಶನ: (ಬೆಳಿಗ್ಗೆ 7:00 – ರಾತ್ರಿ 7:30) കുಂದಾಪುರ, ಸಿಗಂಧೂರು ಚೌಡೇಶ್ವರಿ ಹಾಗೂ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಭೇಟಿ. ಟಿಕೆಟ್ ದರ: ಹಿರಿಯರಿಗೆ ₹700, ಮಕ್ಕಳಿಗೆ ₹600.
* ಶೃಂಗೇರಿ ದಸರಾ ಪ್ಯಾಕೇಜ್: (ಬೆಳಿಗ್ಗೆ 8:00 – ರಾತ್ರಿ 7:30) ಕೊಡಿಯಾಡ್ಕ, ಶೃಂಗೇರಿ ಶಾರದಾಂಬೆ ದೇವಸ್ಥಾನ, ಹರಿಹರಪುರ ಮಠ ಹಾಗೂ ಕಿಗ್ಗಾ ಋಷ್ಯಶೃಂಗೇಶ್ವರ ದರ್ಶನ. ಟಿಕೆಟ್ ದರ: ಹಿರಿಯರಿಗೆ ₹600, ಮಕ್ಕಳಿಗೆ ₹500.
ಬುಕಿಂಗ್ ವಿವರ:
ಸಾರ್ವಜನಿಕರು ಸಂಸ್ಥೆಯ ಅಧಿಕೃತ ವೆಬ್‌ಸೈಟ್ www.ksrtc.in ಮೂಲಕ ಮುಂಗಡ ಟಿಕೆಟ್ ಕಾಯ್ದಿರಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಮುಂಗಡ ಬುಕಿಂಗ್ ಕೌಂಟರ್ (9663211553) ಅಥವಾ ಮಂಗಳೂರು ಬಸ್ ನಿಲ್ದಾಣ ವಿಚಾರಣೆ ಸಂಖ್ಯೆ (7760990720) ಯನ್ನು ಸಂಪರ್ಕಿಸಬಹುದಾಗಿದೆ.







Comments