top of page
News Articles
Sathyapatha News Plus


ಬೆಳ್ಳಾರೆ: ಜಲದುರ್ಗಾದೇವಿ ದೇವಸ್ಥಾನದ ಆಡಳಿತಾಧಿಕಾರಿ ವಿರುದ್ಧ ಎಸಿ ಅವರಿಗೆ ದೂರು - ತನಿಖೆಗೆ ಆಗ್ರಹ
ಬೆಳ್ಳಾರೆ: ಸುಪ್ರಸಿದ್ಧ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಸಿದ್ಧತೆಗಳ ನಡುವೆಯೇ ಆಡಳಿತಾಧಿಕಾರಿಯ ನಡೆ ವಿವಾದಕ್ಕೆ ಕಾರಣವಾಗಿದೆ. ಕಳೆದ ಕೆಲವು ವರ್ಷಗಳಿಂದ 'ಜಲಧಿ ಇವೆಂಟ್ಸ್ ಪೆರುವಾಜೆ' ಸಂಸ್ಥೆಯು ದೇವಿಯ ಮೇಲಿನ ಭಕ್ತಿಯಿಂದ ಜಾತ್ರೋತ್ಸವಕ್ಕೆ ಬೇಕಾದ ಶಾಮಿಯಾನ ವ್ಯವಸ್ಥೆಯನ್ನು ಸಂಪೂರ್ಣ ಉಚಿತವಾಗಿ ನೀಡುತ್ತಾ ಬಂದಿದೆ. ಆದರೆ, ಈ ಬಾರಿ ಉಚಿತ ಸೇವೆ ಲಭ್ಯವಿದ್ದರೂ ಸಹ ಆಡಳಿತಾಧಿಕಾರಿಯವರು ಶಾಮಿಯಾನಕ್ಕೆ ಪ್ರತ್ಯೇಕವಾಗಿ ಕೋಟೇಶನ್ (ದರಪಟ್ಟಿ) ಆಹ್ವಾನಿಸಿರುವುದು ಭಕ್ತರ ವಲಯದಲ್ಲಿ ತೀವ್ರ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಅನುಮಾನಾಸ್ಪದ ನಡೆ ಹಾಗೂ ದೂರು: ಉಚಿತವಾಗಿ
Dec 31, 20251 min read


ಪುತ್ತೂರು ಮಗು ಡೆಲಿವರಿ ಪ್ರಕರಣ: ಸಂಧಾನ ವಿಫಲ, ಶೀಘ್ರವೇ ಅಸಲಿ ಮುಖವಾಡ ಬಯಲು- ಕೆ.ಪಿ. ನಂಜುಂಡಿ
ಮಂಗಳೂರು: ಪುತ್ತೂರಿನ ಮಗು ಡೆಲಿವರಿ ಪ್ರಕರಣದಲ್ಲಿ ಡಿಎನ್ಎ ವರದಿ ಪಾಸಿಟಿವ್ ಬಂದಿದ್ದರೂ ಸಹ ಆರೋಪಿ ಶ್ರೀಕೃಷ್ಣನ ಕುಟುಂಬದವರು ಒಪ್ಪಿಕೊಳ್ಳಲು ಅಸಾಧ್ಯವಾದ ಮತ್ತು ಕಠಿಣವಾದ ಷರತ್ತುಗಳನ್ನು ವಿಧಿಸುವ ಮೂಲಕ ಸಂಧಾನ ಪ್ರಕ್ರಿಯೆಯನ್ನು ಹಳಿ ತಪ್ಪಿಸಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ. ನಂಜುಂಡಿ ಆಕ್ರೋಶ ವ್ಯಕ್ತಪಡಿಸಿದರು. ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸಂತ್ರಸ್ತೆ ಮತ್ತು ಆಕೆಯ ಕುಟುಂಬದೊಂದಿಗೆ ಪತ್ರಿಕಾಗೋಷ್ಠಿ ನಡೆಸಿದ ಅವರು, ಹಿರಿಯ ವಕೀಲರೊಂದಿಗೆ ಚರ್ಚಿಸಿದ ನಂತರ ಆರೋಪಿಗಳು ವಿಧಿಸಿರುವ ಅಸಂಗತ ಷರತ್ತುಗಳನ್ನು ದಾಖಲೆ ಸಮೇತ ಸಾರ್ವಜನಿಕವಾಗಿ ಬಹಿರಂ
Dec 30, 20251 min read


ರಾಜ್ಯದ ಶ್ರೀಮಂತ ದೇಗುಲಗಳ ಪಟ್ಟಿ ಬಿಡುಗಡೆ: ಕುಕ್ಕೆ ಸುಬ್ರಹ್ಮಣ್ಯಕ್ಕೆ ಮೊದಲ ಸ್ಥಾನ, ಚಾಮುಂಡಿ ಬೆಟ್ಟದ ಆದಾಯದಲ್ಲಿ ಕುಸಿತ
ಬೆಂಗಳೂರು: ರಾಜ್ಯ ಮುಜರಾಯಿ ಇಲಾಖೆಯು ಇತ್ತೀಚೆಗೆ ಬಿಡುಗಡೆ ಮಾಡಿರುವ 'ಎ' ಗ್ರೇಡ್ ದೇವಾಲಯಗಳ ಆದಾಯ ಪಟ್ಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರವು ಸತತವಾಗಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ. 2023-24ರಲ್ಲಿ 146.01 ಕೋಟಿ ಇದ್ದ ಕುಕ್ಕೆ ದೇಗುಲದ ಆದಾಯವು 2024-25ರ ಅವಧಿಯಲ್ಲಿ 155.95 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. ರಾಜ್ಯದ ಟಾಪ್ 10 ಶ್ರೀಮಂತ ದೇವಾಲಯಗಳ ಪೈಕಿ ಕರಾವಳಿ ಭಾಗದ ಕುಕ್ಕೆ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಮತ್ತು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳು ಪ್ರಮುಖ ಸ್ಥಾನಗಳನ್ನು ಪಡೆಯುವ ಮೂಲಕ ಕರಾವಳಿ ದೇಗುಲಗಳ ಪಾರಮ್ಯ
Dec 30, 20251 min read


ನೆಟ್ಟಣ: ಬಾರ್ ಮಾಲೀಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿ ಕೆಲಸಗಾರ ಪರಾರಿ
ಕಡಬ: ಕಳೆದ ಏಳು ವರ್ಷಗಳಿಂದ ನಂಬಿಕಸ್ತನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನೇ ಬಾರ್ ಮಾಲೀಕರಿಗೆ ಸುಮಾರು 6.57 ಲಕ್ಷ ರೂಪಾಯಿ ವಂಚಿಸಿ ಪರಾರಿಯಾಗಿರುವ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ನೆಟ್ಟಣದಲ್ಲಿ ನಡೆದಿದೆ. ಬಿಳಿನೆಲೆ ಗ್ರಾಮದ ವಿಶಾಲ್ ಸ್ಟೀಫನ್ ಅವರ ತಾಯಿಯ ಹೆಸರಿನಲ್ಲಿ ನಡೆಯುತ್ತಿರುವ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಹರ್ಷಿತ್ ಬಿ.ಕೆ. ಎಂಬಾತ ದೀರ್ಘಕಾಲದಿಂದ ಮ್ಯಾನೇಜರ್ ಮಾದರಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದನು. ಹಣಕಾಸಿನ ವ್ಯವಹಾರ ಹಾಗೂ ಸ್ಟಾಕ್ ನಿರ್ವಹಣೆಯ ಸಂಪೂರ್ಣ ಹೊಣೆ ಹೊತ್ತಿದ್ದ ಈತ, ಮಾಲೀಕರ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಈ ಕೃತ್ಯ ಎಸಗಿದ್ದಾನ
Dec 26, 20251 min read


ಕಡಬ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಬಾಲಕೃಷ್ಣ ಕೆ.ಎಸ್.
ಕಡಬ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಡಬ ತಾಲೂಕು ಘಟಕದ 2025-28ನೇ ಸಾಲಿನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಕೆ.ಎಸ್. ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪ್ರವೀಣ್ ಚೆನ್ನಾವರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ತಾಲೂಕಿನ ಪತ್ರಕರ್ತರ ಹಿತರಕ್ಷಣೆ ಮತ್ತು ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಆಯ್ಕೆ ನಡೆದಿದೆ. ಸಂಘದ ಇತರ ಪ್ರಮುಖ ಜವಾಬ್ದಾರಿಗಳಿಗೆ ಈ ಕೆಳಗಿನವರು ಆಯ್ಕೆಯಾಗಿದ್ದಾರೆ: ನೂತನ ಪದಾಧಿಕಾರಿಗಳ ಪಟ್ಟಿ: * ಅಧ್ಯಕ್ಷರು: ಬಾಲಕೃಷ್ಣ ಕೆ.ಎಸ್. * ಪ್ರಧಾನ ಕಾರ್ಯದರ್ಶಿ: ಪ್ರವೀಣ್ ಚೆನ್ನಾವರ * ಉಪಾಧ್ಯಕ್
Dec 25, 20251 min read


ಕಲ್ಲೇರಿ: ತಿಂಗಳಿನಿಂದ ರಸ್ತೆ ಪಾಲಾಗುತ್ತಿದೆ ಕುಡಿಯುವ ನೀರು; ಪಂಚಾಯತ್ ನಿರ್ಲಕ್ಷ್ಯಕ್ಕೆ ಸಾರ್ವಜನಿಕರ ಆಕ್ರೋಶ
ಎಡಮಂಗಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎನ್ಮೂರು ಗ್ರಾಮದ ಕಲ್ಲೇರಿ ಪ್ರದೇಶದಲ್ಲಿ ಕುಡಿಯುವ ನೀರಿನ ಪೈಪ್ ಒಂದು ತಿಂಗಳಿಂದ ತನ್ನದೇ ಆದ ದಾರಿಯನ್ನು ಹುಡುಕಿಕೊಂಡು, ನಿಶ್ಚಿಂತವಾಗಿ ನೀರು ವ್ಯರ್ಥ ಮಾಡುತ್ತಾ ಸಾಗುತ್ತಿದೆ. ಎಡಮಂಗಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಎನ್ಮೂರು ಗ್ರಾಮದ ಕಲ್ಲೇರಿ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿನ ಪೈಪ್ ಒಡೆದು ಹೋಗಿದೆ. ಪೈಪ್ನಿಂದ ಚಿಮ್ಮುತ್ತಿರುವ ನೀರು ವ್ಯರ್ಥವಾಗಿ ಹರಿಯುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ತಲುಪಬೇಕಾದ ನೀರು ರಸ್ತೆಯಲ್ಲಿ ಹರಿಯುತ್ತಿದೆ. ಅಧಿಕಾರಿಗಳ ಮೌನ: ಪೈಪ್ ಒಡೆದಿರುವ ವಿಚಾರ ಗ್ರಾಮ ಪಂಚಾಯತ್ ಆಡಳಿತ ಮತ್ತು ಸಂಬಂಧಪಟ
Dec 24, 20251 min read


ಬಜಪೆ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿಗೆ ಭರ್ಜರಿ ಬಹುಮತ, ಕಾಂಗ್ರೆಸ್ಗೆ ಹಿನ್ನಡೆ
ಮಂಗಳೂರು: ಮಂಗಳೂರು ತಾಲೂಕಿನ ಬಜಪೆ ಪಟ್ಟಣ ಪಂಚಾಯತ್ಗೆ ನಡೆದ ಚೊಚ್ಚಲ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಟ್ಟು 19 ಸ್ಥಾನಗಳಿಗೆ ನಡೆದ ಈ ಹಣಾಹಣಿಯಲ್ಲಿ ಬಿಜೆಪಿ 11 ವಾರ್ಡ್ಗಳಲ್ಲಿ ಗೆಲುವು ಸಾಧಿಸುವ ಮೂಲಕ ಪಂಚಾಯತ್ ಮೇಲೆ ಬಿಜೆಪಿ ಧ್ವಜ ಹಾರಿಸಿದೆ. ಬುಧವಾರ ಮಂಗಳೂರಿನ ಮಿನಿ ವಿಧಾನಸೌಧದಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ನಿರಂತರ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಚುನಾವಣಾ ಫಲಿತಾಂಶದ ಅಂಕಿಅಂಶಗಳ ಪ್ರಕಾರ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಕೇವಲ 4 ಸ್
Dec 24, 20252 min read


ನೆಲ್ಯಾಡಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಹಂದಿ ದಾಳಿ- ಮಹಿಳೆಗೆ ತೀವ್ರ ಗಾಯ
ಕಡಬ: ತಾಲೂಕಿನ ಕೌಕ್ರಾಡಿ ಗ್ರಾಮದ ಪೊಟ್ಟುಕೆರೆ ಎಂಬಲ್ಲಿ ಶನಿವಾರ (ಡಿ. 20) ಬೆಳಗ್ಗೆ ಕಾಡುಹಂದಿಯೊಂದು ಮಹಿಳೆಯ ಮೇಲೆ ಭೀಕರ ದಾಳಿ ನಡೆಸಿದೆ. ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದ ನಿವಾಸಿ ಉಮೇಶ್ ಗೌಡರ ಪತ್ನಿ ಲೀಲಾವತಿ (36) ಅವರು ಈ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಅರಣ್ಯ ಪ್ರದೇಶದಿಂದ ಏಕಾಏಕಿ ನುಗ್ಗಿ ಬಂದ ಕಾಡುಹಂದಿಯು ಮಹಿಳೆಯ ಮೇಲೆ ಎರಗಿದ್ದು, ದಾಳಿಯ ರಭಸಕ್ಕೆ ಅವರ ಎರಡು ಕೈಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಕೂಡಲೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸದ್ಯ ಲೀಲಾವತಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗ
Dec 24, 20251 min read


ಬೆಳ್ತಂಗಡಿ: ಅಪ್ರಾಪ್ತ ಬಾಲಕರ ಮೇಲೆ ಹಲ್ಲೆ ಆರೋಪ - ಜುವೆಲ್ಲರಿ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ: ಪಟ್ಟಣದ ಜುವೆಲ್ಲರಿಯೊಂದರ ಹಿಂಭಾಗದಲ್ಲಿ ಬಹಿರ್ದೆಸೆಗೆ ತೆರಳಿದ್ದ ಅಪ್ರಾಪ್ತ ಬಾಲಕರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಸೆಂಬರ್ 15, 2025 ರಂದು ಸಂಜೆ ಈ ಘಟನೆ ಸಂಭವಿಸಿದೆ. ದೂರಿನ ಪ್ರಕಾರ, ಅಪ್ರಾಪ್ತ ವಯಸ್ಸಿನ ಪಿರ್ಯಾದಿದಾರರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಬೆಳ್ತಂಗಡಿ ಪಟ್ಟಣದ ಜುವೆಲ್ಲರಿಯೊಂದರ ಹಿಂಭಾಗದ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ಜುವೆಲ್ಲರಿ ಸಿಬ್ಬಂದಿ, "ನೀವು ವಿಡಿಯೋ ಮಾಡುತ್ತಿದ್ದೀರಿ" ಎಂದು ಆರೋಪಿಸಿ ಮೂವರು ಬಾಲಕರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂ
Dec 18, 20251 min read


ಬಿಸಿರೋಡು: ಮದುವೆ ನಿಶ್ಚಯವಾಗಿದ್ದ ಯುವತಿ ನಾಪತ್ತೆ!
ಬಂಟ್ವಾಳ: ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ಈಗ ಆತಂಕದ ಛಾಯೆ ಆವರಿಸಿದೆ. ಮದುವೆಗೆ ಕೆಲವೇ ದಿನಗಳು ಬಾಕಿ ಇರುವಾಗ ಮದುಮಗಳು ಮನೆಯಿಂದ ನಾಪತ್ತೆಯಾದ ಘಟನೆ ಬಿಸಿರೋಡಿನ ಪಲ್ಲಮಜಲು ಎಂಬಲ್ಲಿ ಸಂಭವಿಸಿದೆ. ಡಿ.14 ರಂದು ಅಶ್ಪಿಯಳನ್ನು . ಬಿ ಮೂಡ ಗ್ರಾಮದ ಬಂಟ್ವಾಳದ ಯುವಕನೋರ್ವನಿಗೆ ಮದುವೆ ಮಾಡುವುದಾಗಿ ಹಿರಿಯರೊಂದಿಗೆ ಮಾತುಕತೆ ಮಾಡಿ ಯುನಿಟಿ ಹಾಲ್ ಅಲ್ಲಿ ಮದುವೆ ನಿಶ್ಷಯಿಸಿರುತ್ತಾರೆ. ಡಿ. 14 ರಂದು ಬೆಳಗ್ಗೆ ಸುಮಾರು 03:30 ಗಂಟೆ ತನಕ ಮನೆಯಲ್ಲೇ ಮಲಗಿದ್ದು ಆ ಬಳಿಕ ಬೆಳಿಗ್ಗೆ ಸುಮಾರು 04:30 ಗಂಟೆಗೆ ಬೆಳಗಿನ ಜಾವ ನೋಡಿದಾಗ ಅಕ್ಕನ ಮನೆಯಲ್ಲಿ ಇಲ್ಲದೇ ಇರುವುದು ತಿಳಿದು ಬಂದಿದೆ. ಬಳಿಕ
Dec 16, 20251 min read


ಕಾಸರಗೋಡು: ತೆಯ್ಯಂ ಉತ್ಸವದಲ್ಲಿ ಅವಘಡ; ಗುರಾಣಿ ತಗುಲಿ ಯುವಕ ಪ್ರಜ್ಞೆ ತಪ್ಪಿ ಸಾವು ಬಚಾವ್!
ಕಾಸರಗೋಡು: ಜಿಲ್ಲೆಯ ನೀಲೇಶ್ವರದಲ್ಲಿ ನಡೆಯುತ್ತಿದ್ದ ತೆಯ್ಯಂ ಉತ್ಸವದ ವೇಳೆ ಆಕಸ್ಮಿಕವಾಗಿ ದೈವನರ್ತಕನ ಕೈಯಲ್ಲಿದ್ದ ಗುರಾಣಿ ತಗುಲಿ ಯುವಕನೊಬ್ಬ ಕುಸಿದು ಬಿದ್ದ ಘಟನೆ ಸಂಭವಿಸಿದೆ. ನೀಲೇಶ್ವರದ ರೈಲ್ವೆ ಮೇಲ್ಸೇತುವೆ ಸಮೀಪವಿರುವ ಪಲ್ಲಿಕ್ಕರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಈ ಅವಘಡ ನಡೆದಿದೆ. ದೇವಸ್ಥಾನದ ಉತ್ಸವದ ಅಂಗವಾಗಿ ಪೂಮಾರುತನ್ ದೈವದ ‘ವೆಲ್ಲಟ್ಟಂ’ ಆಚರಣೆ ನಡೆಯುತ್ತಿತ್ತು. ಈ ವೇಳೆ ದೈವನರ್ತಕರು ಸಾಂಪ್ರದಾಯಿಕ ವೇಗದಲ್ಲಿ ಮರದ ಗುರಾಣಿಯನ್ನು ತಿರುಗಿಸುತ್ತಿದ್ದಾಗ, ಹತ್ತಿರದಲ್ಲಿದ್ದ ಪ್ರೇಕ್ಷಕ ಯುವಕನ ತಲೆಗೆ ಗುರಾಣಿ ಬಲವಾಗಿ ತಾಕಿದೆ. ಗುರಾಣಿ ತಲೆಗೆ ತಗುಲಿದ ತಕ್ಷಣ ಯುವಕ ಪ್ರಜ
Dec 16, 20251 min read


ಮಂಗಳೂರು: ವೃದ್ಧೆ ಮನೆಯಲ್ಲಿ ದರೋಡೆ ಪ್ರಕರಣ- ಮೂವರು ಬಂಧನ
ಮಂಗಳೂರು: ಸುರತ್ಕಲ್ ಸಮೀಪದ ಮುಕ್ಕ ಪ್ರದೇಶದಲ್ಲಿ 85 ವರ್ಷದ ವೃದ್ಧೆ ಜಲಜಾ ಅವರ ಮನೆಗೆ ನುಗ್ಗಿ ಚಿನ್ನಾಭರಣ ಮತ್ತು ನಗದು ದೋಚಿದ್ದ ಪ್ರಕರಣವನ್ನು ಸುರತ್ಕಲ್ ಪೊಲೀಸರು ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಡಿಸೆಂಬರ್ 3 ರಂದು ಕುಡಿಯುವ ನೀರು ಕೇಳುವ ನೆಪದಲ್ಲಿ ಬಂದ ಅಪರಿಚಿತರು, ವೃದ್ಧೆಯ ಮನೆ ಹಂಚು ತೆಗೆದು ಒಳನುಗ್ಗಿ, ಬೆದರಿಸಿ ಅವರ ಕುತ್ತಿಗೆಗೆ ಬೈರಾಸು ಬಿಗಿದು ಸುಮಾರು 50 ಗ್ರಾಂ ಚಿನ್ನಾಭರಣ ಮತ್ತು ₹14,000 ನಗದು ದೋಚಿ ಪರಾರಿಯಾಗಿದ್ದರು. ತನಿಖೆ ನಡೆಸಿದ ಪೊಲೀಸರು, ಶೈನ್ ಎಚ್. ಪುತ್ರನ್ ಅಲಿಯಾಸ್ ಶಯನ್ ಎಂಬಾತನನ್ನು ಮೊದಲು ಬಂಧಿಸಿದ
Dec 16, 20251 min read


ದೇವಚಳ್ಳದಲ್ಲಿ ಕೋಟಿ ಮೌಲ್ಯದ ಮರದ ದಿಮ್ಮಿಗಳು ವಶ: ಇಬ್ಬರ ಬಂಧನ, ಅಕ್ರಮ ಮರ ಕಡಿತಕ್ಕೆ ಅರಣ್ಯ ಇಲಾಖೆಯಿಂದ ಬ್ರೇಕ್
ದೇವಚಳ್ಳ ಗ್ರಾಮದ ಮುಂಡೋಡಿ ಪ್ರದೇಶದಲ್ಲಿ ಅಕ್ರಮವಾಗಿ ಕಡಿದು ಸಾಗಿಸಲಾಗುತ್ತಿದ್ದ ಅಂದಾಜು ರೂ. 10 ಲಕ್ಷ ಮೌಲ್ಯದ ಮರದ ದಿಮ್ಮಿಗಳನ್ನು ಮತ್ತು ಅವುಗಳ ಸಾಗಾಟಕ್ಕೆ ಬಳಸಿದ ವಾಹನಗಳನ್ನು ಡಿಸೆಂಬರ್ 13 ರಂದು ಅರಣ್ಯ ಇಲಾಖೆ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಮುಂಡೋಡಿಯ ನಾಗೇಶ್ ಎಂಬುವವರಿಗೆ ಸೇರಿದ ಜಾಗದಿಂದ ಒಂದು ಹೆಬ್ಬಲಸಿನ ಮರ ಮತ್ತು ಒಂದು ಮಾವಿನ ಮರವನ್ನು ಅಕ್ರಮವಾಗಿ ಕಡಿದು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಉಪ ವಲಯ ಅರಣ್ಯಾಧಿಕಾರಿ ಸೌಮ್ಯಾ ಪಿ. ಎನ್. ಅವರ ನೇತೃತ್ವದಲ್ಲಿ ನೆಲ್ಲೂರು-ಕೆಮ್ರಾಜೆ ವಲಯದ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸಿದ
Dec 15, 20251 min read


ಬೆಳ್ತಂಗಡಿ: ಅರ್ಚಕನಿಂದ ವಾಮಾಚಾರದ ಹೆಸರಿನಲ್ಲಿ ವಂಚನೆ, ಯುವತಿಗೆ ಕಿರುಕುಳ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ತೆಕ್ಕಾರು ಗ್ರಾಮದ ತುರ್ಕಜೆಯಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ದೇವಾಲಯದ ಅರ್ಚಕನೋರ್ವ ಯುವತಿಯ ಅನಾರೋಗ್ಯಕ್ಕೆ ವಾಮಾಚಾರವೇ ಕಾರಣ ಎಂದು ನಂಬಿಸಿ, ಪರಿಹಾರದ ನೆಪದಲ್ಲಿ ಆಕೆಯ ಕುಟುಂಬದ ವಿಶ್ವಾಸಗಳಿಸಿ, ಬಳಿಕ ಆಕೆಯನ್ನು ತನಗೆ ಕೊಟ್ಟು ಮದುವೆ ಮಾಡಿಕೊಡುವಂತೆ ಪೀಡಿಸಿದ್ದಾನೆ ಎನ್ನಲಾಗಿದೆ. ಮೂಲತಃ ಶಿರಸಿ ಮೂಲದ ಶಿವಗಿರಿ ಎಂಬಾತ ಸ್ಥಳೀಯ ದೇವಾಲಯವೊಂದರಲ್ಲಿ ಅರ್ಚಕನಾಗಿ ಕೆಲಸ ಮಾಡುತ್ತಿದ್ದನು. ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದ ನರ್ಸಿಂಗ್ ಕಲಿಯುತ್ತಿರುವ ಯುವತಿಯೊಬ್ಬಳು ತನ್ನ ಮನೆಯವರೊಂದಿಗೆ ಹಾಲು ಪಾಯಸದ ಸೇವೆ ಸಲ್ಲಿಸಲು ದೇವಸ್ಥಾನಕ್ಕೆ ಬಂ
Dec 13, 20251 min read


ಮಂಗಳೂರಿನ ನೆಹರೂ ಮೈದಾನದಲ್ಲಿ ನೂತನ ಆಸ್ಟ್ರೋ ಟರ್ಫ್ ಫುಟ್ಬಾಲ್ ಕ್ರೀಡಾಂಗಣ ಉದ್ಘಾಟನೆ
ಮಂಗಳೂರು ನಗರದ ಹೃದಯಭಾಗದಲ್ಲಿರುವ ನೆಹರೂ ಮೈದಾನದಲ್ಲಿ ಸುಸಜ್ಜಿತ ಆಸ್ಟ್ರೋ ಟರ್ಫ್ ಫುಟ್ಬಾಲ್ ಕ್ರೀಡಾಂಗಣವು ಬುಧವಾರದಂದು ವಿಧ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕ್ರೀಡಾಭಿಮಾನಿಗಳ ಬಹುಕಾಲದ ಕನಸಾಗಿದ್ದ ಈ ಕ್ರೀಡಾಂಗಣವನ್ನು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಗೊಂಡಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಈ ಕ್ರೀಡಾಂಗಣಕ್ಕೆ ಇನ್ನಷ್ಟು ಅಗತ್ಯ ಸೌಲಭ್ಯಗಳನ್ನು ಒದಗಿಸುವ ಮೂಲಕ ಇದನ್ನು ಉನ್ನತ ದರ್ಜೆಗೆ ಏರಿಸಲಾಗುವುದು ಎಂದು ಭರವಸೆ ನ
Dec 3, 20251 min read


ಪುತ್ತೂರಿನಲ್ಲಿ ಮುಂದುವರಿದ ಬಿಜೆಪಿ-ಪುತ್ತಿಲ ಪರಿವಾರ ಜಟಾಪಟಿ: ಕಾರ್ಯಕ್ರಮದಿಂದ ಬಿಜೆಪಿ ಉಪಾಧ್ಯಕ್ಷ ಹೊರಕ್ಕೆ!
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಮುಸುಕಿನ ಜಟಾಪಟಿ ತಾರಕಕ್ಕೇರಿದೆ. ಇತ್ತೀಚೆಗೆ ನಡೆದ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಈ ಭಿನ್ನಮತ ಸ್ಫೋಟಗೊಂಡಿದ್ದು, ಪುತ್ತಿಲ ಪರಿವಾರದ ಕಾರ್ಯಕರ್ತರು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರನ್ನು ಕಾರ್ಯಕ್ರಮದಿಂದ ಹೊರದಬ್ಬಿದ ಘಟನೆ ವರದಿಯಾಗಿದೆ. ರಾಜಕೀಯ ಕೆಸರೆರೆಚಾಟ ಈಗ ದೇವರ ಕಾರ್ಯಕ್ರಮಕ್ಕೂ ಹಬ್ಬಿರುವುದು ಸ್ಥಳೀಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯು ಪುತ್ತೂರಿನಲ್ಲಿ ಪಕ್ಷದೊಳಗೆ ನಡೆಯುತ್ತಿರುವ ಆಂತರಿಕ ತಿಕ್ಕಾಟವನ್ನು ಮತ
Dec 1, 20251 min read


ಇಂದಿನ ಚಿನ್ನದ ದರ
ಇಂದಿನ (ನವೆಂಬರ್ 20, 2025) ಚಿನ್ನದ ದರಗಳು ಇಲ್ಲಿವೆ. ಕರ್ನಾಟಕದ ಪ್ರಮುಖ ನಗರಗಳಾದ ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ಬೆಲೆಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಕರ್ನಾಟಕದಲ್ಲಿ ಇಂದಿನ ಚಿನ್ನದ ದರ (ಪ್ರತಿ 10 ಗ್ರಾಂಗೆ): 24 ಕ್ಯಾರೆಟ್ ಚಿನ್ನ: ₹1,24,690 (ನಿನ್ನೆಗೆ ಹೋಲಿಸಿದರೆ ₹170 ಇಳಿಕೆ) 22 ಕ್ಯಾರೆಟ್ ಚಿನ್ನ: ₹1,14,300 (ನಿನ್ನೆಗೆ ಹೋಲಿಸಿದರೆ ₹150 ಇಳಿಕೆ)
Dec 1, 20251 min read


ಅಕ್ರಮ ಗೋ ಸಾಗಾಟ: ನರಿಮೊಗರು ಬಳಿ ವಾಹನ ಕೆಟ್ಟು ನಿಂತು ಗೋವುಗಳನ್ನು ಬಿಟ್ಟು ಪರಾರಿ
ಪುತ್ತೂರು: ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಗಡಿಪಿಲ ಎಂಬಲ್ಲಿ ಇಂದು ಶನಿವಾರ ಮುಂಜಾನೆ ಅಕ್ರಮ ಗೋ ಸಾಗಾಟಕ್ಕೆ ಯತ್ನಿಸಿದ ಘಟನೆಯೊಂದು ನಡೆದಿದೆ. ಮುಂಜಾನೆ ಸುಮಾರು 5 ಗಂಟೆಯ ಸುಮಾರಿಗೆ ಗೋವುಗಳನ್ನು ತುಂಬಿಕೊಂಡು ಬರುತ್ತಿದ್ದ ವಾಹನವು ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದೆ ಎಂದು ತಿಳಿದುಬಂದಿದೆ. ವಾಹನ ಕೆಟ್ಟು ನಿಂತದ್ದನ್ನು ಅರಿತ ಗೋ ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳು ವಾಹನದಲ್ಲಿದ್ದ ಗೋವುಗಳನ್ನು ನಡುರಸ್ತೆಯಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಘಟನೆಯ ಕುರಿತು ಮಾಹಿತಿ ಪಡೆದ ತಕ್ಷಣ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ನ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಪರಿಶೀಲನೆ
Nov 29, 20251 min read


ಕುಕ್ಕೆ ಸುಬ್ರಹ್ಮಣ್ಯ: ಚಂಪಾಷಷ್ಟಿ ಮಹೋತ್ಸವ ಹಿನ್ನಲೆ ಮದ್ಯದಂಗಡಿ ಮುಚ್ಚಲು ಡಿಸಿ ಆದೇಶ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಪ್ರಸಿದ್ಧ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಡಿಸೆಂಬರ್ 2 ರವರೆಗೆ ನಡೆಯಲಿದ್ದು, ಜಾತ್ರೆಯ ಮುಖ್ಯ ಕಾರ್ಯಕ್ರಮಗಳ ಅಂಗವಾಗಿ ನವೆಂಬರ್ 25 ರಂದು ಪಂಚಮಿ ರಥೋತ್ಸವ ಹಾಗೂ ತೈಲಾಭ್ಯಂಜನ, 26 ರಂದು ಚಂಪಾಷಷ್ಠಿ ಮಹಾರಥೋತ್ಸವ ಆಯೋಜಿಸಲಾಗಿದೆ. ಈ ಎರಡು ದಿನಗಳಲ್ಲಿ ಸುಮಾರು 50 ರಿಂದ 60 ಸಾವಿರ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯಿದೆ. ಭಕ್ತರ ಭದ್ರತೆ, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನವೆಂಬರ್ 25 ಬೆಳಿಗ್ಗೆ 6 ಗಂಟೆಯಿಂದ 26ರ ರಾತ್ರಿ 12 ಗಂಟೆಯವರೆಗೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ
Nov 25, 20251 min read


ಪಡೀಲ್-ಕಣ್ಣೂರು ಮುಖ್ಯ ಪೈಪ್ಲೈನ್ ಹಾನಿ: ಮಂಗಳೂರು ನಗರಕ್ಕೆ ಎರಡು ದಿನದಿಂದ ನೀರು ಪೂರೈಕೆ ಸ್ಥಗಿತ
ಮಂಗಳೂರು: ನಗರದ ವಿವಿಧ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ಲೈನ್ ಪಡೀಲ್-ಕಣ್ಣೂರು ಬಳಿ ಕಾಮಗಾರಿಯ ವೇಳೆ ಹಾನಿಗೊಳಗಾದ ಕಾರಣ ಸೋಮವಾರ ಮತ್ತು ಮಂಗಳವಾರ ನಗರದಲ್ಲಿ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಈ ಅನಿರೀಕ್ಷಿತ ಅಡಚಣೆಯಿಂದಾಗಿ ಮಂಗಳೂರು ನಗರದಾದ್ಯಂತ ತೀವ್ರ ನೀರಿನ ಸಮಸ್ಯೆ ತಲೆದೋರಿದ್ದು, ಜನಜೀವನ ಅಸ್ತವ್ಯಸ್ತಗೊಂಡು ಜನರು ಪರದಾಡುವಂತಾಗಿದೆ. ತುಂಬೆ ಡ್ಯಾಂನಿಂದ ಪಡೀಲ್ ಟ್ಯಾಂಕ್ಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ಲೈನ್ 18 ಅಡಿ ಆಳದಲ್ಲಿ ಹಾದುಹೋಗಿದ್ದು, ಈ ಪೈಪ್ಲೈನ್ಗೆ ಹಾನಿಯಾಗಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಪಡೀಲ್ ಪಂಪೌಸ್ನಿಂದ ನೀರು ಪಡೆಯ
Nov 19, 20251 min read
Archive
bottom of page



