;
top of page

ಬಜಪೆ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿಗೆ ಭರ್ಜರಿ ಬಹುಮತ, ಕಾಂಗ್ರೆಸ್‌ಗೆ ಹಿನ್ನಡೆ

  • Writer: sathyapathanewsplu
    sathyapathanewsplu
  • Dec 24, 2025
  • 2 min read

ಮಂಗಳೂರು: ಮಂಗಳೂರು ತಾಲೂಕಿನ ಬಜಪೆ ಪಟ್ಟಣ ಪಂಚಾಯತ್‌ಗೆ ನಡೆದ ಚೊಚ್ಚಲ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಟ್ಟು 19 ಸ್ಥಾನಗಳಿಗೆ ನಡೆದ ಈ ಹಣಾಹಣಿಯಲ್ಲಿ ಬಿಜೆಪಿ 11 ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವ ಮೂಲಕ ಪಂಚಾಯತ್ ಮೇಲೆ ಬಿಜೆಪಿ ಧ್ವಜ ಹಾರಿಸಿದೆ. ಬುಧವಾರ ಮಂಗಳೂರಿನ ಮಿನಿ ವಿಧಾನಸೌಧದಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ನಿರಂತರ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.

ಚುನಾವಣಾ ಫಲಿತಾಂಶದ ಅಂಕಿಅಂಶಗಳ ಪ್ರಕಾರ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್‌ ಕೇವಲ 4 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಅಚ್ಚರಿಯ ಫಲಿತಾಂಶ ಎಂಬಂತೆ ಎಸ್‌ಡಿಪಿಐ (SDPI) 3 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಒಂದು ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ. ಬಜಪೆ ಮತ್ತು ಮಳವೂರು ಗ್ರಾಮ ಪಂಚಾಯತ್‌ಗಳನ್ನು ವಿಲೀನಗೊಳಿಸಿ ಪಟ್ಟಣ ಪಂಚಾಯತ್ ರಚನೆಯಾದ ನಂತರ ನಡೆದ ಮೊದಲ ಚುನಾವಣೆ ಇದಾಗಿದ್ದು, ಮತದಾರರು ಬಿಜೆಪಿಯ ಮೇಲೆ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ ಪ್ರಕಟವಾಗುತ್ತಿದ್ದಂತೆ ವಿಜೇತ ಅಭ್ಯರ್ಥಿಗಳ ಬೆಂಬಲಿಗರು ಮತ್ತು ಬಿಜೆಪಿ ಕಾರ್ಯಕರ್ತರು ಬಜಪೆ ಪಟ್ಟಣದಲ್ಲಿ ವಿಜಯೋತ್ಸವ ಆಚರಿಸಿದರು. ಬಿಜೆಪಿ ಅಭ್ಯರ್ಥಿಗಳಾದ ಯಶೋಧ, ಪದ್ಮನಾಭ ಪೂಜಾರಿ, ಲೋಕೇಶ್ ಪೂಜಾರಿ, ರಿತೇಶ್ ಶೆಟ್ಟಿ ಸೇರಿದಂತೆ 11 ಮಂದಿ ಆಯ್ಕೆಯಾಗಿದ್ದು, ಪಂಚಾಯತ್ ಆಡಳಿತದಲ್ಲಿ ಹೊಸ ಬದಲಾವಣೆ ತರುವ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಮತ್ತು ಎಸ್‌ಡಿಪಿಐ ಕೂಡ ಕೆಲವು ವಾರ್ಡ್‌ಗಳಲ್ಲಿ ಪ್ರಬಲ ಪೈಪೋಟಿ ನೀಡಿದರೂ ಬಹುಮತ ಗಳಿಸುವಲ್ಲಿ ವಿಫಲವಾಗಿವೆ.

| ಪಕ್ಷ - ಗೆದ್ದ ಸ್ಥಾನಗಳು |


ಬಿಜೆಪಿ - 11

ಕಾಂಗ್ರೆಸ್ - 04

ಎಸ್‌ಡಿಪಿಐ - 03

ಪಕ್ಷೇತರ -01

ಒಟ್ಟು - 19



ವಿಜೇತರ ವಿವರ:

ವಾರ್ಡ್ 1. ಯಶೋಧ (ಬಿ ಜೆ ಪಿ )

ವಾರ್ಡ್ 2. ಪದ್ಮನಾಭ ಪೂಜಾರಿ (ಬಿ ಜೆ ಪಿ )

ವಾರ್ಡ್ 3.ಜಾಕೋಬ್ ಪಿರೇರಾ (ಕಾಂಗ್ರೆಸ್ )

ವಾರ್ಡ್ 4.ಸಿರಾಜ್ ಬಜಪೆ (ಪಕ್ಷೇತರ )

ವಾರ್ಡ್ 5. ಗುಲ್ಸನ್ ಕರೀಂ (ಎಸ್ ಡಿ ಪಿ ಐ )

ವಾರ್ಡ್ 6.ವೀಣಾ ಡಿಸೋಜಾ (ಎಸ್ ಡಿ ಪಿ ಐ )

ವಾರ್ಡ್ 7.ಆಯಿಷಾ ಬಜಪೆ (ಎಸ್ ಡಿ ಪಿ ಐ )

ವಾರ್ಡ್ 8. ಲೋಕೇಶ್ ಪೂಜಾರಿ (ಬಿಜೆಪಿ )

ವಾರ್ಡ್ 9. ರಿತೇಶ್ ಶೆಟ್ಟಿ (ಬಿಜೆಪಿ )

ವಾರ್ಡ್ 10. ಶರ್ಮಿಳಾ ಶೆಟ್ಟಿ (ಬಿಜೆಪಿ )

ವಾರ್ಡ್ 11. ಚಿನ್ನಪ್ಪ ಸಾಲ್ಯಾನ್ (ಕಾಂಗ್ರೆಸ್ )

ವಾರ್ಡ್ 12. ಕಿರಣ್ (ಕಾಂಗ್ರೆಸ್ )

ವಾರ್ಡ್ 13. ಸುಪ್ರೀತಾ ಶೆಟ್ಟಿ (ಬಿಜೆಪಿ )

ವಾರ್ಡ್ 14. ಹಾಜಿರಾ ಫರ್ಜಾನಾ (ಕಾಂಗ್ರೆಸ್ )

ವಾರ್ಡ್ 15.ದಿನೇಶ್ ಶೆಟ್ಟಿ ಕೆಂಜಾರು (ಬಿಜೆಪಿ )

ವಾರ್ಡ್ 16.ರಾಜೇಶ್ ಅಮೀನ್ ಆರ್ ಕೆ (ಬಿಜೆಪಿ )

ವಾರ್ಡ್ 17. ಮಲ್ಲಿಕಾ ಚಂದ್ರಶೇಖರ್ (ಬಿಜೆಪಿ )

ವಾರ್ಡ್ 18.ರಕ್ಷಿತಾ ಶರತ್ (ಬಿಜೆಪಿ )

ವಾರ್ಡ್ 19.ಜಯಂತ್ ಪೂಜಾರಿ (ಬಿಜೆಪಿ )

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page