ಕಾಸರಗೋಡು: ತೆಯ್ಯಂ ಉತ್ಸವದಲ್ಲಿ ಅವಘಡ; ಗುರಾಣಿ ತಗುಲಿ ಯುವಕ ಪ್ರಜ್ಞೆ ತಪ್ಪಿ ಸಾವು ಬಚಾವ್!
- sathyapathanewsplu
- 3 days ago
- 1 min read

ಕಾಸರಗೋಡು: ಜಿಲ್ಲೆಯ ನೀಲೇಶ್ವರದಲ್ಲಿ ನಡೆಯುತ್ತಿದ್ದ ತೆಯ್ಯಂ ಉತ್ಸವದ ವೇಳೆ ಆಕಸ್ಮಿಕವಾಗಿ ದೈವನರ್ತಕನ ಕೈಯಲ್ಲಿದ್ದ ಗುರಾಣಿ ತಗುಲಿ ಯುವಕನೊಬ್ಬ ಕುಸಿದು ಬಿದ್ದ ಘಟನೆ ಸಂಭವಿಸಿದೆ.
ನೀಲೇಶ್ವರದ ರೈಲ್ವೆ ಮೇಲ್ಸೇತುವೆ ಸಮೀಪವಿರುವ ಪಲ್ಲಿಕ್ಕರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಈ ಅವಘಡ ನಡೆದಿದೆ. ದೇವಸ್ಥಾನದ ಉತ್ಸವದ ಅಂಗವಾಗಿ ಪೂಮಾರುತನ್ ದೈವದ ‘ವೆಲ್ಲಟ್ಟಂ’ ಆಚರಣೆ ನಡೆಯುತ್ತಿತ್ತು. ಈ ವೇಳೆ ದೈವನರ್ತಕರು ಸಾಂಪ್ರದಾಯಿಕ ವೇಗದಲ್ಲಿ ಮರದ ಗುರಾಣಿಯನ್ನು ತಿರುಗಿಸುತ್ತಿದ್ದಾಗ, ಹತ್ತಿರದಲ್ಲಿದ್ದ ಪ್ರೇಕ್ಷಕ ಯುವಕನ ತಲೆಗೆ ಗುರಾಣಿ ಬಲವಾಗಿ ತಾಕಿದೆ.
ಗುರಾಣಿ ತಲೆಗೆ ತಗುಲಿದ ತಕ್ಷಣ ಯುವಕ ಪ್ರಜ್ಞೆ ತಪ್ಪಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಅಲ್ಲಿದ್ದವರು ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ನೀಡಿದ ವೈದ್ಯರು ಆತನ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ.
ಕೆಯ್ಯಂ ಕೇರಳದ ಪ್ರಸಿದ್ಧ ಜಾನಪದ ಕಲೆಯಾಗಿದ್ದು, ನೃತ್ಯದ ವೇಳೆ ಕೈಯಲ್ಲಿ ಕತ್ತಿ ಮತ್ತು ಮರದ ಗುರಾಣಿ ಹಿಡಿದು ಬಿರುಸಿನ ಚಲನೆಗಳನ್ನು ಮಾಡುವುದು ವಾಡಿಕೆ. ಇಂತಹ ಸಂದರ್ಭಗಳಲ್ಲಿ ಜನದಟ್ಟಣೆಯಿರುವ ಕಡೆಗಳಲ್ಲಿ ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.






Comments