ಸುಳ್ಯಕ್ಕೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ನೇಮಕ: ಇಂದು ಅಧಿಕಾರ ಸ್ವೀಕಾರ

ಸುಳ್ಯ: ಕಳೆದ ಒಂದು ವರ್ಷದಿಂದ ಖಾಯಂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದ ಸುಳ್ಯ ತಾಲೂಕಿಗೆ ಕೊನೆಗೂ ನೂತನ ಬಿಇಒ (BEO) ನೇಮಕವಾಗಿದೆ. ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಯಮನೂರಪ್ಪ ಸಿದ್ದಪ್ಪ ಹರಗಿ (ವೈ.ಎಸ್. ಹರಗಿ) ಅವರನ್ನು ಸುಳ್ಯಕ್ಕೆ ವರ್ಗಾವಣೆಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.
ನೂತನ ಅಧಿಕಾರಿ ವೈ.ಎಸ್. ಹರಗಿ ಅವರು ಫೆಬ್ರವರಿ 2ರಂದು (ಇಂದು) ಸುಳ್ಯಕ್ಕೆ ಆಗಮಿಸಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಸುಳ್ಯ ತಾಲೂಕಿನಲ್ಲಿ ದೀರ್ಘಕಾಲದಿಂದ ಶೈಕ್ಷಣಿಕ ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿದ್ದವು. ಈಗ ಖಾಯಂ ಅಧಿಕಾರಿಯ ನೇಮಕದಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ವೇಗ ಸಿಗಲಿದ್ದು, ಸಾರ್ವಜನಿಕರು ಮತ್ತು ಶಿಕ್ಷಕ ವಲಯದಲ್ಲಿ ಸಂತಸ ವ್ಯಕ್ತವಾಗಿದೆ.







Comments