top of page
News Articles
Sathyapatha News Plus


ನಕಲಿ ಪಾಸ್ಪೋರ್ಟ್ ಪ್ರಕರಣ: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಂಗಳೂರಿನಲ್ಲಿ ಬಂಧನ
ಮಂಗಳೂರು: ನಕಲಿ ಪಾಸ್ಪೋರ್ಟ್ ಬಳಸಿ ವಿದೇಶಕ್ಕೆ ತೆರಳಲು ಯತ್ನಿಸಿ, ಶಿಕ್ಷೆಯಾದ ಬಳಿಕ ತಲೆಮರೆಸಿಕೊಂಡಿದ್ದ ಕೇರಳದ ಕಾಸರಗೋಡಿನ ಬೇವಿಂಜೆ ನಿವಾಸಿ ವೇಲಾಯುಧನ್ (54) ಎಂಬಾತನನ್ನು ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ತಂಡ ಬಂಧಿಸಿದೆ. 2010 ಜೂನ್ 22ರಂದು ಮಂಗಳೂರು ವಿಮಾನ ನಿಲ್ದಾಣದಿಂದ ನಕಲಿ ಪಾಸ್ಪೋರ್ಟ್ನಲ್ಲಿ ವಿದೇಶಕ್ಕೆ ತೆರಳಲು ಯತ್ನಿಸಿದ್ದ ಈತನನ್ನು ಇಮಿಗ್ರೇಷನ್ ಅಧಿಕಾರಿ ಕೆ.ಎಂ. ಚಂದ್ರಶೇಖರ್ ವಶಕ್ಕೆ ಪಡೆದು ಬಜಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಸೆಷನ್ಸ್ ನ್ಯಾಯಾಲಯವು 2020ರ ಡಿಸೆಂಬರ್ 1ರಂದು ಆರೋಪಿಗೆ 1 ವರ್ಷ 6 ತಿಂಗಳ ಜೈಲು ಶಿಕ್ಷೆ ವಿಧ
Oct 81 min read


ಪುತ್ತೂರು: ಭಾರೀ ಮಳೆಗೆ ಆನೆಮಜಲು ಕೋರ್ಟ್ ಬಳಿ ಆವರಣ ಗೋಡೆ ಧರಾಶಾಹಿ – ಸಂಚಾರಕ್ಕೆ ಅಡಚಣೆ, ಕಾಮಗಾರಿ ಗುಣಮಟ್ಟಕ್ಕೆ ಸಾರ್ವಜನಿಕರ ಆಕ್ರೋಶ
ಪುತ್ತೂರು: ನಗರದಲ್ಲಿ ಸಂಜೆ ಸುರಿದ ಭಾರೀ ಮಳೆಗೆ ಆನೆಮಜಲು ನ್ಯಾಯಾಲಯದ ಬಳಿ ಇರುವ ಆವರಣ ಗೋಡೆಯೊಂದು ಕುಸಿದು ರಸ್ತೆಗೆ ಬಿದ್ದ ಘಟನೆ ಸಂಭವಿಸಿದೆ. ಕೋರ್ಟ್ ಸಂಕೀರ್ಣದ ಬಳಿಯಿರುವ ಅಂಗನವಾಡಿ ಕಟ್ಟಡದ ಸಮೀಪದಲ್ಲಿದ್ದ ಈ ಆವರಣ ಗೋಡೆ ಬಿದ್ದ ಪರಿಣಾಮ ರಸ್ತೆ ಸಂಚಾರ ಸಂಪೂರ್ಣವಾಗಿ ಬಂದ್ ಆಗಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ. ಇಷ್ಟೇ ಅಲ್ಲದೆ, ರಸ್ತೆಯ ಇನ್ನೊಂದು ಬದಿಯಲ್ಲಿರುವ ಮತ್ತೊಂದು ಆವರಣ ಗೋಡೆಯೂ ಸಹ ಕುಸಿಯುವ ಹಂತದಲ್ಲಿದ್ದು, ಸ್ಥಳೀಯರಲ್ಲಿ ಭೀತಿ ಹೆಚ್ಚಿಸಿದೆ. ವಿಶೇಷವೆಂದರೆ, ಈ ನ್ಯಾಯಾಲಯದ ನೂತನ ಸಂಕೀರ್ಣವು ಕಳೆದ ಜನವರಿಯಷ್ಟೇ ಉದ್ಘಾಟ
Oct 71 min read


ಪಣಂಬೂರು ಬೀಚ್ನಲ್ಲಿ ಸಮುದ್ರಕ್ಕೆ ಕೊಚ್ಚಿಹೋಗಿದ್ದ ಬಾಲಕ ಹೆಜಮಾಡಿಯಲ್ಲಿ ಶವವಾಗಿ ಪತ್ತೆ
ಪಣಂಬೂರು ಬೀಚ್ನಲ್ಲಿ ಅಕ್ಟೋಬರ್ 4 ರಂದು ಅಲೆಗಳ ಹೊಡೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದ ಬೆಳ್ತಂಗಡಿಯ ಕಸಬಾ ಗ್ರಾಮದ ರೆಂಕೆದ ಗುತ್ತು ನಿವಾಸಿ ಶ್ರೇಯಸ್ ಎಸ್. ಕುಮಾರ್ (14) ಎಂಬ ಬಾಲಕನ ಮೃತದೇಹ ಮಂಗಳವಾರ ಸಂಜೆ ಹೆಜಮಾಡಿ ಕೋಡಿಯ ಶಾಂಭವಿ ನದಿ ತೀರದಲ್ಲಿ ಪತ್ತೆಯಾಗಿದೆ. ಹುಲಿವೇಷ ಕುಣಿತದ ತರಬೇತಿಗಾಗಿ ಸ್ನೇಹಿತರೊಂದಿಗೆ ಮಂಗಳೂರಿಗೆ ಬಂದಿದ್ದ ಶ್ರೇಯಸ್, ನಂತರ ಪಣಂಬೂರು ಕಡಲತೀರಕ್ಕೆ ತೆರಳಿದ್ದಾಗ ಈ ದುರಂತ ಸಂಭವಿಸಿತ್ತು. ಭಯಬಿದ್ದ ಸ್ನೇಹಿತರು ಮರುದಿನ ಬೆಳಗ್ಗೆಷ್ಟೇ ಕುಟುಂಬಸ್ಥರಿಗೆ ವಿಷಯ ತಿಳಿಸಿದ್ದರು. ತಕ್ಷಣವೇ ಪಣಂಬೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಹುಡುಕಾಟ ಆರಂಭಿಸಲಾಗಿತ್ತು.
Oct 71 min read


ಡಿಜಿಟಲ್ ಲೋಕಕ್ಕೆ ಪದಾರ್ಪಣೆ: ಮೊಬೈಲ್ನಲ್ಲೂ ಟೈಪ್ ಮಾಡಿ 'ತುಳು ಲಿಪಿ'!
ಬೆಂಗಳೂರು: ಕರಾವಳಿ ಕರ್ನಾಟಕದ ಜಾನಪದ ಹಾಗೂ ಸಾಂಸ್ಕೃತಿಕ ಮೂಲವಾದ ತುಳು ಭಾಷೆಯನ್ನು ಡಿಜಿಟಲ್ ಯುಗದಲ್ಲಿ ಮತ್ತಷ್ಟು ಸಕ್ರಿಯಗೊಳಿಸುವ ಉದ್ದೇಶದಿಂದ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಳಕೆದಾರರಿಗಾಗಿ ನೂತನ 'ಕುರಲ್ ತುಳು ಟಚ್' കೀಬೋರ್ಡ್ ಬಿಡುಗಡೆಯಾಗಿದೆ. ಸಾಫ್ಟ್ವೇರ್ ಡೆವಲಪರ್ಗಳಾದ ಹರ್ಷಿತ್ ದೇವಾಡಿಗ ಹಾಗೂ ಚೈತ್ರ ಪೂಜಾರಿ ಅವರು ಈ ಆವಿಷ್ಕಾರವನ್ನು ಮಾಡಿದ್ದು, ಬೆಂಗಳೂರಿನಲ್ಲಿ ನಡೆದ 'ತುಳುನಾಡ ಜಾನಪದ ಸಂಭ್ರಮ' ಕಾರ್ಯಕ್ರಮದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಇದನ್ನು ಅಧಿಕೃತವಾಗಿ ಲೋಕಾರ್ಪಣೆಗೊಳಿಸಿದೆ. ಈ ಕೀಬೋರ್ಡ್ ಪ್ರಸ್ತುತ ಆಂಡ್ರಾಯ್ಡ್ ಬಳಕೆದಾರರಿಗೆ 'ಬರವು ಸರವು' ಆ್ಯಪ
Oct 71 min read


ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕತ್ವಕ್ಕೆ ದಿಢೀರ್ ರಾಜೀನಾಮೆ ನೀಡಿದ ಹರ್ಮನ್ಪ್ರೀತ್ ಕೌರ್
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ನಾಯಕಿ ಹಾಗೂ ಅನುಭವಿ ಆಟಗಾರ್ತಿ ಹರ್ಮನ್ಪ್ರೀತ್ ಕೌರ್ ಅವರು ತಮ್ಮ ನಾಯಕತ್ವದ ಹುದ್ದೆಗೆ ದಿಢೀರ್ ರಾಜೀನಾಮೆ ಘೋಷಿಸಿದ್ದಾರೆ. ಇಂದು (ಅಕ್ಟೋಬರ್ 6) ಅಧಿಕೃತವಾಗಿ ಈ ನಿರ್ಧಾರವನ್ನು ಪ್ರಕಟಿಸಿರುವ ಅವರು, ನಾಯಕಿ ಜವಾಬ್ದಾರಿಯಿಂದ ಕೆಳಗಿಳಿಯುತ್ತಿರುವುದಾಗಿ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ನಡೆದ ಏಷ್ಯನ್ ಗೇಮ್ಸ್ 2026ರಲ್ಲಿ ಭಾರತ ತಂಡಕ್ಕೆ ಐತಿಹಾಸಿಕ ಚಿನ್ನದ ಪದಕ ಗೆದ್ದುಕೊಟ್ಟಿದ್ದ ಹರ್ಮನ್ಪ್ರೀತ್, ಯಶಸ್ಸಿನ ಉತ್ತುಂಗದಲ್ಲಿದ್ದಾಗಲೇ ಈ ನಿರ್ಧಾರ ಕೈಗೊಂಡಿರುವುದು ಕ್ರಿಕೆಟ್ ವಲಯದಲ್ಲಿ ತೀವ್ರ ಅಚ್ಚರಿ ಮೂಡಿಸಿದೆ. ತಂಡದ ನಾಯಕತ್ವದಿಂದ
Oct 61 min read


ಕಟ್ಟುಮಸ್ತಾದ ದೇಹ... ಜಿಮ್ ಟ್ರೈನರ್... ದೊಡ್ಡ ಫ್ರೆಂಡ್ಸ್ ಸರ್ಕಲ್; ಒಂದು ಪದಕ್ಕೆ ಶುರುವಾದ ಕಿರಿಕ್ ಕೊನೆಗೆ ಕೊಲೆಯಲ್ಲಿ ಅಂತ್ಯ!
ಬೆಂಗಳೂರು : ಆತನದ್ದು ಕಟ್ಟುಮಸ್ತಾದ ದೇಹ. ಜಿಮ್ ಟ್ರೈನರ್ ಬೇರೆ. ಫ್ರೆಂಡ್ಸ್ಗಳ ಸರ್ಕಲ್ ಕೂಡ ದೊಡ್ಡದಾಗಿತ್ತು. ಕ್ಲೋಸ್ ಫ್ರೆಂಡ್ಸ್ ಅಂದ್ಮೇಲೆ ಶಿಷ್ಯ, ಮಚ್ಚ, ಮಗ, ಮಾಮ್ಸ್ ಅನ್ನೋ ಪದಗಳು ಕಾಮನ್.ಆದ್ರೆ... ಇಲ್ಲೊಂದು ಪದವೇ ದೊಡ್ಡ ಕಿರಿಕ್ಗೆ ಕಾರಣವಾಗಿದೆ. “ಶಿಷ್ಯ” ಅಂತ ಕರೆದಿದ್ದಕ್ಕೆ ಶುರುವಾದ ಗಲಾಟೆ ಕೊನೆಗೆ ಒಬ್ಬ ಯುವಕನ ಪ್ರಾಣವನ್ನೇ ತೆಗೆದುಕೊಂಡಿದೆ. ಅಷ್ಟಕ್ಕೂ ಆ ರಾತ್ರಿ ಅಲ್ಲಿ ಆಗಿದ್ದೇನು? ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ... 25 ವರ್ಷದ ನಂದನ್... ಈ ಫೋಟೋದಲ್ಲಿ ಕಾಣ್ತಿರುವ ಯುವಕನ ಹೆಸರು ನಂದನ್. ವಯಸ್ಸು ಕೇವಲ 25 ವರ್ಷ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಜಿಮ್ನಲ್ಲಿ ಕೆಲಸ
Oct 62 min read


ಆಧಾರ್ ಕಾರ್ಡ್ನಲ್ಲಿ ಹೆಸರು ತಿದ್ದುಪಡಿ ನಿಯಮ ಬದಲಾವಣೆ: ಸೇವಾ ಕೇಂದ್ರಕ್ಕೆ ತೆರಳುವ ಮುನ್ನ ಈ ವಿಷಯ ತಿಳಿದಿರಲಿ!
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಆಧಾರ್ ಕಾರ್ಡ್ನಲ್ಲಿ ಹೆಸರು ತಿದ್ದುಪಡಿ ಹಾಗೂ ಪರಿಷ್ಕರಣೆಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಈ ಮಾರ್ಗಸೂಚಿಗಳು ಸೆಪ್ಟೆಂಬರ್ 18ರಿಂದಲೇ ಅನ್ವಯವಾಗುತ್ತಿವೆ. ನಕಲಿ ದಾಖಲೆಗಳ ಬಳಕೆಗೆ ತಡೆಹಾಕಲು ಮತ್ತು ಅರ್ಜಿಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಹೊಸ ನಿಯಮಗಳ ಪ್ರಕಾರ, ಹೆಸರು ತಿದ್ದುಪಡಿಯನ್ನು ವಿವಿಧ ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಬದಲಾವಣೆಗೆ ನಿರ್ದಿಷ್ಟ ದಾಖಲೆಗಳನ್ನು ಕಡ್ಡಾಯಗೊಳಿಸಲಾಗಿದೆ: * ಸಣ್ಣ ತಿದ್ದುಪಡಿಗಳು: ಇನಿಷಿಯಲ್ ಸೇರ್ಪಡೆ, ಮನೆಹೆಸರು ಸೇ
Oct 61 min read


ನವರಾತ್ರಿ ವೈಭವ: ಕೆಎಸ್ಆರ್ಟಿಸಿಯಿಂದ 5 ವಿಶೇಷ ‘ದಸರಾ ಏಕದಿನ ಪ್ರವಾಸ ಪ್ಯಾಕೇಜ್’ ಪ್ರಕಟ!
ಮಂಗಳೂರು: ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಕರಾವಳಿ ಹಾಗೂ ಮಲೆನಾಡು ಭಾಗದ ಪ್ರಸಿದ್ಧ ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಭಕ್ತಾದಿಗಳ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಮಂಗಳೂರು ವಿಭಾಗವು ಬರೋಬ್ಬರಿ 5 ವಿಶೇಷ ‘ದಸರಾ ಏಕದಿನ ಪ್ರವಾಸ ಪ್ಯಾಕೇಜ್’ ಸೇವೆಗಳನ್ನು ಘೋಷಿಸಿದೆ. ಈ ವಿಶೇಷ ಬಸ್ ಸೇವೆಗಳು ಅಕ್ಟೋಬರ್ 11 ರಿಂದ ಅಕ್ಟೋಬರ್ 20 ರವರೆಗೆ ಲಭ್ಯವಿರಲಿವೆ. ವಿಶೇಷ ಪ್ಯಾಕೇಜ್ಗಳ ವಿವರ: * ಮಂಗಳೂರು ದಸರಾ 'ನವದುರ್ಗಾ ದರ್ಶನ': (ಬೆಳಿಗ್ಗೆ 8:00 – ರಾತ್ರಿ 8:30) ಮಂಗಳಾದೇವಿ, ಕಟೀಲು, ಪೊಳಲಿ, ಕುದ್ರೋಳಿ ಸೇರಿದಂತೆ ಪ್ರಮುಖ 11 ದೇವಾ
Oct 51 min read


ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಪರಿಚಲನೆ:ಕರಾವಳಿ, ಮಲೆನಾಡಿಗೆ ಹವಾಮಾನ ಇಲಾಖೆ ಅಲರ್ಟ್
ಅರಬ್ಬಿ ಸಮುದ್ರದ ಮೇಲೆ ರೂಪುಗೊಂಡಿರುವ ಮೇಲ್ಮೈ ಚಂಡಮಾರುತದ ಪರಿಚಲನೆಯಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗಿದೆ. ಇದರ ಪರಿಣಾಮವಾಗಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡಿನಲ್ಲಿ ಅಕ್ಟೋಬರ್ 11ರವರೆಗೆ ಗುಡುಗು ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಉತ್ತರ ಕನ್ನಡದಲ್ಲಿಯೂ ಮೋಡ ಕವಿದ ವಾತಾವರಣದೊಂದಿಗೆ ಹಗುರ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮಲೆನಾಡು ಪ್ರದೇಶಗಳಾದ ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಸಕಲೇಶಪುರ ಭಾಗಗಳಲ್ಲಿ ಸಂಜೆ ವೇಳೆ ಗುಡುಗು ಸಹಿತ ಉತ್ತಮ ಮಳೆಯಾಗಲಿದೆ. ಈ ಭಾಗಗಳಲ್ಲಿ
Oct 51 min read


ಕೆಪಿಎಸ್ಸಿ ಹಗರಣ: ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ಗೆ 14 ದಿನ ನ್ಯಾಯಾಂಗ ಬಂಧನ
ಬೆಂಗಳೂರು: ಕೆಪಿಎಸ್ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರಿಗೆ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈ ಮೊದಲು ಪ್ರಕರಣದ ವಿಚಾರಣೆಗಾಗಿ ಗ್ಯಾನೇಂದ್ರ ಅವರನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿತ್ತು. ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿದರು. ನ್ಯಾಯಾಲಯದ ಈ ಆದೇಶದ ಬೆನ್ನಲ್ಲೇ ಇಡಿ ಅಧಿಕಾರಿಗಳು ಗ್ಯಾನೇಂದ್ರ ಅವರನ್ನು
Oct 41 min read


ಸುಳ್ಯ: ಕೋಟಿ ವೆಚ್ಚದ ಮೀನು ಮಾರುಕಟ್ಟೆಗೆ ಬೀಗ – ನಿಗೂಢ ಮೌನದಲ್ಲಿ ನಗರ ಪಂಚಾಯತ್ ಮತ್ತು ಜನಪ್ರತಿನಿಧಿಗಳು
ಸುಳ್ಯ: ಸಾರ್ವಜನಿಕರ ತೆರಿಗೆ ಹಣದಲ್ಲಿ ಕೋಟಿ ವೆಚ್ಚ ಮಾಡಿ ನಿರ್ಮಿಸಿದ ಸುಸಜ್ಜಿತ ಮೀನು ಮಾರುಕಟ್ಟೆ ಕಳೆದ 8–9 ತಿಂಗಳಿನಿಂದ ಬಾಗಿಲು ಮುಚ್ಚಿಕೊಂಡಿದೆ. ಕಟ್ಟಡ ಸಿದ್ಧವಾಗಿದೆ, ಮಾರುಕಟ್ಟೆ ಇದೆ, ವ್ಯಾಪಾರಿಗಳೂ ಇದ್ದಾರೆ. ಆದರೆ ವ್ಯಾಪಾರ ಮಾತ್ರ ನಡೆಯುತ್ತಿಲ್ಲ! ಹಾಗಾದರೆ ಸಮಸ್ಯೆ ಏನು? ನಗರ ಪಂಚಾಯತ್ ನಿಗದಿಪಡಿಸಿರುವ ಹರಾಜು ಮೊತ್ತಕ್ಕೂ ವ್ಯಾಪಾರಿಗಳ ಬೇಡಿಕೆಗೂ ಹೊಂದಾಣಿಕೆಯಾಗದ ಕಾರಣ ಮಾರುಕಟ್ಟೆ ಆರಂಭವಾಗದೆ ಉಳಿದಿದೆ. ಹರಾಜುದಾರರು ರಿಯಾಯಿತಿಗಾಗಿ ಮನವಿ ಮಾಡಿದರೂ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇನ್ನು ಹೊರಗಿನ ಮೀನು ಮಾರಾಟಗಾರರಿಗೆ ವ್ಯಾಪಾರ
Oct 41 min read


ವಿದ್ಯುತ್ ಸ್ಪರ್ಶಿಸಿ ಲೈನ್ಮ್ಯಾನ್ ರವಿ ಗೌಡ ದಾರುಣ ಸಾವು
ಕೆದಿಲದಲ್ಲಿ ಶನಿವಾರ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ವಿದ್ಯುತ್ ಸ್ಪರ್ಶಿಸಿ ಲೈನ್ಮ್ಯಾನ್ ಸಾವನ್ನಪ್ಪಿದ ದಾರುಣ ಘಟನೆ ಸಂಭವಿಸಿದೆ. ಮೃತರನ್ನು ಕೆಮ್ಮಾಯಿ ನಿವಾಸಿ ರವಿ ಗೌಡ ಎಂದು ಗುರುತಿಸಲಾಗಿದೆ. ಅವರು ಕೆದಿಲ, ಪಾಟ್ರಕೋಡಿ, ಮಿತ್ತೂರು ಮತ್ತು ಗಡಿಯಾರ ಭಾಗಗಳಲ್ಲಿ ಸೇವೆಯಲ್ಲಿದ್ದರು. ಯಾವುದೇ ವಿದ್ಯುತ್ ದೂರು ಬಂದರೂ ತಕ್ಷಣ ಸ್ಪಂದಿಸುತ್ತಿದ್ದ ರವಿ, ತಮ್ಮ ಅತ್ಯುತ್ತಮ ಸೇವಾ ಮನೋಭಾವದಿಂದ ಸ್ಥಳೀಯರ ಪ್ರೀತಿಗೆ ಪಾತ್ರರಾಗಿದ್ದರು. ಶನಿವಾರ ಕೆಲಸದ ವೇಳೆಯಲ್ಲೇ ಈ ದುರಂತ ಸಂಭವಿಸಿದ್ದು, ಸದಾ ಸಾರ್ವಜನಿಕರ ಸೇವೆಗೆ ಲಭ್ಯವಿರುತ್ತಿದ್ದ ದಕ್ಷ ಸಿಬ್ಬಂದಿಯ ಅಕಾಲಿಕ ಅಗಲಿಕೆ ಸ್ಥಳೀಯ ನಿವಾಸಿಗ
Oct 41 min read


ಅಕ್ಟೋಬರ್ 1ರಿಂದ ಬದಲಾಗಲಿದೆ ಈ 10 ಪ್ರಮುಖ ನಿಯಮಗಳು: ಸಾರ್ವಜನಿಕರೇ ಗಮನಿಸಿ!
ಬೆಂಗಳೂರು: ಅಕ್ಟೋಬರ್ 1, 2026ರಿಂದ ದೇಶದ ಜನರ ದೈನಂದಿನ ಜೀವನ ಮತ್ತು ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಹಲವು ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಎಲ್ಪಿಜಿ ಸಿಲಿಂಡರ್ ದರದಿಂದ ಹಿಡಿದು ಬ್ಯಾಂಕಿಂಗ್, ಎಫ್ಡಿ, ಟಿಡಿಎಸ್ ಹಾಗೂ ಬ್ಯಾಂಕ್ ರಜೆಗಳವರೆಗೆ ಹಲವು ನಿಯಮಗಳಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. 1. ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ ಪ್ರತಿ ತಿಂಗಳ ಮೊದಲ ದಿನ ತೈಲ ಮಾರುಕಟ್ಟೆ ಕಂಪನಿಗಳು ಎಲ್ಪಿಜಿ ಸಿಲಿಂಡರ್ ದರಗಳನ್ನು ಪರಿಷ್ಕರಿಸುತ್ತವೆ. ಹೀಗಾಗಿ ಅಕ್ಟೋಬರ್ 1ರಂದು ಗೃಹಬಳಕೆ ಮತ್ತು ವಾಣಿಜ್ಯ ಸಿಲಿಂಡರ್ಗಳ ಬೆಲೆಯಲ್ಲಿ ಬದಲಾವಣೆ ಆಗುವ ಸಾಧ್ಯತೆಯಿದೆ. 2. ಎಲ್
Sep 302 min read


ಗೃಹಲಕ್ಷ್ಮಿಯರಿಗೆ ನವರಾತ್ರಿ ಗುಡ್ನ್ಯೂಸ್; 33ನೇ ಕಂತಿನ ಹಣ ಬಿಡುಗಡೆಗೆ ಗ್ರೀನ್ ಸಿಗ್ನಲ್
ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಯೋಜನೆಯ 33ನೇ ಕಂತಿನ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಹಣ ಬಿಡುಗಡೆಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ಇದರೊಂದಿಗೆ ಈಗಾಗಲೇ ಯೋಜನೆಗೆ ಅರ್ಹರಾಗಿರುವ ಮಹಿಳೆಯರಿಗೆ 33ನೇ ಕಂತಿನ ಹಣ ಖಾತೆಗೆ ಜಮೆಯಾಗುವ ನಿರೀಕ್ಷೆ ಮೂಡಿದೆ. ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಮಹಿಳಾ ಫಲಾನುಭವಿಗಳಿಗೆ ಪ್ರತಿ ತಿಂಗಳು ₹2,000 ನೇರವಾಗಿ ಬ್ಯಾಂಕ್ ಖಾತೆಗೆ ವರ
Sep 291 min read


ಮಂಗಳೂರು: ವೆನ್ಲಾಕ್ ಆಸ್ಪತ್ರೆಗೆ ಹೈಟೆಕ್ ಸ್ಪರ್ಶ: 400 ಹೆಚ್ಚುವರಿ ಹಾಸಿಗೆಗಳ ಬಲ!
ಮಂಗಳೂರು: ಕರಾವಳಿ ಕರ್ನಾಟಕ ಹಾಗೂ ನೆರೆಯ ಕೇರಳದ ರೋಗಿಗಳಿಗೆ ಆಸರೆಯಾಗಿರುವ ಮಂಗಳೂರಿನ ಪ್ರಸಿದ್ಧ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಸಾಮರ್ಥ್ಯ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆಸ್ಪತ್ರೆಗೆ ಒಟ್ಟು 400 ಹೆಚ್ಚುವರಿ ಹಾಸಿಗೆಗಳನ್ನು ಕಲ್ಪಿಸಲು ಸರ್ಕಾರ ಅನುಮೋದನೆ ನೀಡಿದ್ದು, ಮೊದಲ ಹಂತದಲ್ಲಿ 200 ಹಾಸಿಗೆಗಳನ್ನು ಸೇರ್ಪಡೆಗೊಳಿಸಲು ಆರೋಗ್ಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಸೆಪ್ಟೆಂಬರ್ 18ರ ಸಂಪುಟ ಸಭೆಯ ತೀರ್ಮಾನದಂತೆ ಸೆಪ್ಟೆಂಬರ್ 25ರಂದು ಈ ಆದೇಶ ನೀಡಲಾಗಿದೆ. ಮೊದಲ ಹಂತದ 200 ಹಾಸಿಗೆಗಳಲ್ಲಿ 50 ಹಾಸಿಗೆಗಳನ್ನು ಐಸಿಯು (30 ವೆಂಟಿಲೇಟರ್, 20 ಸ್ಟೆಪ್-ಡೌನ್), 10 ಹಾಸಿಗೆಗಳ
Sep 261 min read


ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಘೋಷಣೆ: ಆರು ಮಂದಿ ಸಾಧಕರು ಆಯ್ಕೆ
ಬೆಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2025 ಮತ್ತು 2026ರ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಘೋಷಿಸಿದೆ. ತುಳು ಸಾಹಿತ್ಯ, ಸಂಶೋಧನೆ, ಜಾನಪದ ಕಲೆ, ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಆರು ಮಂದಿ ಹಿರಿಯ ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಕುರಿತು ಮಾಹಿತಿ ನೀಡಿದ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಪ್ರಶಸ್ತಿಯು ತಲಾ 50,000 ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 4 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಪ್ರಶಸ್ತಿ
Sep 261 min read


ಮಂಗಳೂರು: ಎಮ್ಮೆಕೆರೆಯಲ್ಲಿ ಗೋಡೆ ಕುಸಿದು ಐವರು ವಿದ್ಯಾರ್ಥಿಗಳಿಗೆ ಗಾಯ; ಒಬ್ಬರ ಸ್ಥಿತಿ ಗಂಭೀರ
ಮಂಗಳೂರು: ನಗರದ ಎಮ್ಮೆಕೆರೆ ಕ್ರಾಸ್ನ ರಾಮ ಲಕ್ಷ್ಮಿ ಹಾಲ್ನಲ್ಲಿ ನಡೆದ ಪದಾಧಿಕಾರಿಗಳ ಕಾರ್ಯಕ್ರಮದ ವೇಳೆ ಗೋಡೆ ಕುಸಿದು ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅತಿಯಾದ ಜನಸಂದಣಿಯಿಂದಾಗಿ ಹೊರಭಾಗದ ಕಾರಿಡಾರ್ನಲ್ಲಿ ನಿಂತಿದ್ದ ವಿದ್ಯಾರ್ಥಿಗಳು ಆಧಾರ ಗೋಡೆಗೆ ಒರಗಿಕೊಂಡಾಗ, ದುರ್ಬಲವಾಗಿದ್ದ ಗೋಡೆ ಏಕಾಏಕಿ ಕುಸಿದು ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಹೈಲ್ಯಾಂಡ್ ಆಸ್ಪತ್ರೆಗೆ ಸೇರಿಸಲಾಗಿದೆ. ಗಾಯಗೊಂಡವರಲ್ಲಿ ಮಹಮ್ಮದ್ ಶಮಾಜ್ (16) ಅವರ ಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿದ್ದಾರೆ. ಉಳಿದಂತೆ ಮಹಮ್ಮದ್ ಶನಾನ್ ಅಹಮ್ಮದ್ (18), ಹನೀಫ್ (23), ದವೂದ್ ಫರ್ಸಿನ್ ಅಹಮ್ಮದ
Sep 261 min read


ಬಂಟ್ವಾಳ: ಕೊಲೆಯತ್ನ ಪ್ರಕರಣದ ಮೂವರು ಆರೋಪಿಗಳ ಬಂಧನ, ಪೊಲೀಸ್ ಕಸ್ಟಡಿಗೆ
ಬಂಟ್ವಾಳ: ತೆಂಕಬೆಳ್ಳೂರು ಗ್ರಾಮದ ಕಮ್ಮಾಜೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ತಲವಾರು ಹಾಗೂ ಕಬ್ಬಿಣದ ರಾಡ್ನಿಂದ ಭೀಕರವಾಗಿ ಹಲ್ಲೆ ನಡೆಸಿ ಕೊಲೆಯತ್ನ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಮ್ಮುಂಜೆ ನಿವಾಸಿ ಪ್ರಶಾಂತ್ (38), ತೆಂಕಬೆಳ್ಳೂರು ನಿವಾಸಿ ರಾಮದಾಸ್ (43) ಹಾಗೂ ಬಡಗಬೆಳ್ಳೂರು ನಿವಾಸಿ ಶಂಕರ (45) ಬಂಧಿತ ಆರೋಪಿಗಳು. ತೆಂಕಬೆಳ್ಳೂರು ಗ್ರಾಮದ ಪ್ರಶಾಂತ್ ಬೆಳ್ಳಾಡ್ (41) ಹಲ್ಲೆಗೊಳಗಾದವರಾಗಿದ್ದಾರೆ. ಸೆಪ್ಟೆಂಬರ್ 20 ರಂದು ಸಂಜೆ ಪ್ರಶಾಂತ್ ಬೆಳ್ಳಾಡ್ ಅವರು ಕಮ್ಮಾಜೆಯಲ್ಲಿದ್ದಾಗ, ಆಟೋರಿಕ್ಷಾದಲ್ಲಿ ಬ
Sep 261 min read


ಬರ ಪರಿಹಾರ ಸಾಕಾಗುವುದಿಲ್ಲ, ರೈತರ ಸಾಲಮನ್ನಾ ಮಾಡಿ: ಸರ್ಕಾರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಒತ್ತಾಯ
ಬರಪೀಡಿತ ರೈತರಿಗೆ ರಾಜ್ಯ ಸರ್ಕಾರ ಘೋಷಿಸಿರುವ ತಲಾ ರೂ. 2,500 ಇನ್ಪುಟ್ ಸಬ್ಸಿಡಿ ತೀರಾ ಕಡಿಮೆಯಾಗಿದ್ದು, ಕೂಡಲೇ ರೈತರ ಸಾಲಮನ್ನಾ ಮಾಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಒತ್ತಾಯಿಸಿದ್ದಾರೆ. ಈ ಕುರಿತು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ಪ್ರಸ್ತುತ ಕಾರ್ಮಿಕರ ದಿನಗೂಲಿಯೇ ರೂ. 1,000ಕ್ಕೂ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ನಷ್ಟದಲ್ಲಿರುವ ರೈತರಿಗೆ ಕೇವಲ ರೂ. 2,500 ಪರಿಹಾರ ನೀಡಿದರೆ ನ್ಯಾಯ ಸಿಗುವುದಿಲ್ಲ. ಹೀಗಾಗಿ ಸರ್ಕಾರ ತಕ್ಷಣವೇ ಸಾಲಮನ್ನಾ ಘೋಷಿಸಿ ಸಂಕಷ್ಟದಲ್ಲಿರುವ ಅನ್ನದಾತರ ನೆರವಿಗೆ ಬರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುರುವಾರ ವಿ
Sep 261 min read


ಸೌಜನ್ಯ ಕೊಲೆ ಪ್ರಕರಣಕ್ಕೆ ಕೊನೆಗೂ ಬಿಗ್ ಟ್ವಿಸ್ಟ್: ಮರುತನಿಖೆಗೆ ಎಸ್ಐಟಿ ರಚಿಸಿ ರಾಜ್ಯ ಸರ್ಕಾರ ಆದೇಶ
ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಬೆಳ್ತಂಗಡಿಯ ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರಕರಣದ ಮರುತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ಅಧಿಕೃತ ಆದೇಶ ಹೊರಡಿಸಿದೆ. ಸುಪ್ರೀಂ ಕೋರ್ಟ್ ನೀಡಿರುವ ಸ್ಪಷ್ಟ ನಿರ್ದೇಶನದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಐಜಿಪಿ ಎನ್. ಶಶಿಕುಮಾರ್ ಅವರ ನೇತೃತ್ವದಲ್ಲಿ ಈ ಎಸ್ಐಟಿ ಕಾರ್ಯನಿರ್ವಹಿಸಲಿದ್ದು, ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಐಪಿಎಸ್ ಅಧಿಕಾರಿಗಳಾದ ನಿಶಾ ಜೇಮ್ಸ್, ಲೋಕೇಶ್ ಹಾಗೂ ಎಎಸ
Sep 251 min read
Archive
bottom of page



