top of page
News Articles
Sathyapatha News Plus


ಕೆಎಸ್ಆರ್ಟಿಸಿ ದಸರಾ ವಿಶೇಷ ಪ್ರವಾಸ ಪ್ಯಾಕೇಜ್ ಅಕ್ಟೋಬರ್ 25ರವರೆಗೆ ವಿಸ್ತರಣೆ
ಮಂಗಳೂರು ಹಾಗೂ ಉಡುಪಿ ವಿಭಾಗಗಳಿಂದ ವಿವಿಧ ಪ್ರಸಿದ್ಧ ದೇವಾಲಯಗಳು ಮತ್ತು ಪ್ರವಾಸಿ ತಾಣಗಳಿಗೆ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ದಸರಾ ವಿಶೇಷ ಬಸ್ ಪ್ರವಾಸ ಪ್ಯಾಕೇಜ್ಗಳನ್ನು ಅಕ್ಟೋಬರ್ 25 ರವರೆಗೆ ವಿಸ್ತರಿಸಿ ಕೆಎಸ್ಆರ್ಟಿಸಿ ಮಂಗಳೂರು ವಿಭಾಗವು ಆದೇಶಿಸಿದೆ. ಆರಂಭದಲ್ಲಿ ಈ ಪ್ರವಾಸಗಳನ್ನು ಅಕ್ಟೋಬರ್ 11 ರಿಂದ 20 ರವರೆಗೆ ಮಾತ್ರ ನಡೆಸಲು ಯೋಜಿಸಲಾಗಿತ್ತು. ಆದರೆ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಪ್ರಯಾಣಿಕರ ಬೇಡಿಕೆಗೆ ಸ್ಪಂದಿಸಿ ದಿನಾಂಕವನ್ನು ಲಂಬಿಸಲಾಗಿದೆ. ಮಂಗಳೂರು ಪ್ಯಾಕೇಜ್ ("ದಸರಾ ನವದುರ್ಗಾ ದರ್ಶನ"): ಮಂಗಳೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಬೆಳಗ್ಗೆ 8 ಗಂಟೆ
Oct 201 min read


ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಉಗ್ರರ ಅಡಗುತಾಣ ಭೇದಿಸಿದ ಭದ್ರತಾ ಪಡೆಗಳು: ಶಸ್ತ್ರಾಸ್ತ್ರ ವಶ
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಉಗ್ರರ ಗುಹೆಯಲ್ಲಿದ್ದ ಅಡಗುತಾಣವನ್ನು ಪತ್ತೆ ಮಾಡಿದೆ. ಭಾರತೀಯ ಸೇನೆಯ 60ನೇ ರಾಷ್ಟ್ರೀಯ ರೈಫಲ್ಸ್ ತುಕಡಿಯು ಖಚಿತ ಮಾಹಿತಿಯ ಮೇರೆಗೆ ಕೋತ್ರಾಂಕಾ ತಹಸಿಲ್ನ 'ಚೋರ್ ಹಿಲ್' ಬಳಿ ಶೋಧ ನಡೆಸಿ ಈ ಕಾರ್ಯಾಚರಣೆ ಕೈಗೊಂಡಿದೆ. ಈ ಗುಹೆಯಿಂದ ಅಂಡರ್-ಬ್ಯಾರೆಲ್ ಗ್ರೆನೇಡ್ ಲಾಂಚರ್ ಗ್ರೆನೇಡ್ಗಳು, ಎಕೆ-47 ಮ್ಯಾಗಜೀನ್ ಹಾಗೂ 18 ಸುತ್ತು ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಗ್ರರು ನಡೆಸಲು ಉದ್ದೇಶಿಸಿದ್ದ ಸಂಭಾವ್ಯ ವಿಧ್ವಂಸಕ ಕೃತ್ಯಗಳನ್ನು ಈ ಮೂಲಕ ಯಶಸ್ವಿಯಾಗಿ ತಡೆಯಲಾಗಿದ
Oct 201 min read


ಉಪ್ಪಿನಂಗಡಿ: ಬೈಕ್ ತಡೆದು ಚೂರಿ ತೋರಿಸಿ ನಗದು, ಮೊಬೈಲ್ ದರೋಡೆ; ಮೂವರ ವಿರುದ್ಧ ಪ್ರಕರಣ ದಾಖಲು
ಉಪ್ಪಿನಂಗಡಿ-ಗುರುವಾಯನಕೆರೆ ರಸ್ತೆಯಲ್ಲಿ ಶುಕ್ರವಾರ ಬೈಕ್ ಅಡ್ಡಗಟ್ಟಿ ಚೂರಿ ತೋರಿಸಿ ಬೆದರಿಸಿ, ಇಬ್ಬರಿಂದ ಎರಡು ಮೊಬೈಲ್ ಹಾಗೂ ನಗದು ದರೋಡೆ ಮಾಡಿರುವ ಘಟನೆ ನಡೆದಿದೆ. ಕಡಬ ತಾಲ್ಲೂಕಿನ ಕೋನಾಜೆ ನಿವಾಸಿ ಮಿಥಿಲೇಶ್ ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ತನ್ವೀಶ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಿಥಿಲೇಶ್ ಹಾಗೂ ಅವರ ಅತ್ತೆ ಮಗಾಧೇವಿ ಬೈಕ್ನಲ್ಲಿ ಬರುತ್ತಿದ್ದಾಗ ಆರೋಪಿಗಳು ಕಾರಿನಲ್ಲಿ ಬಂದು ದರೋಡೆ ಎಸಗಿದ್ದಾರೆ. "ನನ್ನ ಹಣ ಎಲ್ಲಿ, ಯಾಕೆ ಕೊಟ್ಟಿಲ್ಲ" ಎಂದು ಪ್ರಶ್ನಿಸಿ ಚೂರಿ ತೋರಿಸಿ ಬೆದರಿಸಿ, ಜೇಬಿನಲ್ಲಿದ್ದ ಒಟ್ಟು 5 ಸಾವಿರ ರೂ. ಮೌಲ್ಯದ ಎರಡು
Oct 191 min read


ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹೊರಭಾಗದಲ್ಲಿ ಅಂಗಡಿ ವಿಚಾರ: ಹೂವಿನ ವ್ಯಾಪಾರಿಗಳ ನಡುವೆ ಮಾರಾಮಾರಿ
ಬೆಳ್ತಂಗಡಿ: ಪ್ರಸಿದ್ಧ ದೇವಸ್ಥಾನವಾದ ಕೊಕ್ಕಡ ಗ್ರಾಮದ ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ಹೊರಭಾಗದಲ್ಲಿರುವ ಅಂಗಡಿಯ ವಿಚಾರವಾಗಿ ಹೂವಿನ ವ್ಯಾಪಾರಿಗಳ ನಡುವೆ ತೀವ್ರ ಸ್ವರೂಪದ ಮಾರಾಮಾರಿ ನಡೆದಿರುವ ಘಟನೆ ವರದಿಯಾಗಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದೆ. ದೇವಸ್ಥಾನದ ಟ್ರಸ್ಟ್ಗೆ ಸೇರಿದ ಅಂಗಡಿಗಳ ಅಧಿಕೃತ ಏಲಂ ಪ್ರಕ್ರಿಯೆ ನಡೆದಿತ್ತು. ಈ ಪ್ರಕ್ರಿಯೆಯ ಮೂಲಕ ರಾಘವ ಎಂಬುವವರು ಹೂವಿನ ಸ್ಟಾಲ್ನ ಹಕ್ಕನ್ನು ಪಡೆದುಕೊಂಡಿದ್ದರು. ಆದರೆ, ಏಲಂ ಪ್ರಕ್ರಿಯೆ ಸಂಪೂರ್ಣವಾಗಿ ಮುಕ್ತಗೊಂಡ ಬಳಿಕವೂ, ಈ ಹಿಂದೆ ಅದೇ ಅಂಗಡಿಯನ್ನು ನಡೆಸಿಕೊಂಡು ಬರುತ್ತಿದ್ದ
Oct 181 min read


ಕ್ಯಾನ್ಸರ್ ಔಷಧಿಗಳ ಬೆಲೆ ಇಳಿಕೆ: ರೋಗಿಗಳಿಗೆ ಬಲವಾದ ಆರ್ಥಿಕ ಆಸರೆ
ಕೇಂದ್ರ ಸರ್ಕಾರವು 137 ಬಗೆಯ ಕ್ಯಾನ್ಸರ್ ಔಷಧಿಗಳ ಗರಿಷ್ಠ ಚಿಲ್ಲರೆ ಬೆಲೆ (MRP) ಮೇಲಿನ ವ್ಯಾಪಾರ ಲಾಭಾಂಶವನ್ನು ಶೇ. 30ಕ್ಕೆ ಮಿತಿಗೊಳಿಸಿದ್ದು, ನವೆಂಬರ್ 9ರಿಂದ ಪರಿಷ್ಕೃತ ಬೆಲೆಗಳು ಜಾರಿಗೆ ಬರಲಿವೆ. ಇದರಿಂದಾಗಿ ಪೆಂಬ್ರೊಲಿಜುಮಾಬ್, ಓಸಿಮರ್ಟಿನಿಬ್ ಸೇರಿದಂತೆ ಪ್ರಮುಖ ಔಷಧಿಗಳ ಬೆಲೆಯಲ್ಲಿ ಭಾರಿ ಕಡಿತವಾಗಲಿದೆ. ಸ್ತನ, ಪ್ರಾಸ್ಟೇಟ್ ಹಾಗೂ ಅಂಡಾಶಯ ಕ್ಯಾನ್ಸರ್ ಚಿಕಿತ್ಸೆಗಳು ಇನ್ನು ಮುಂದೆ ಹೆಚ್ಚು ಕೈಗೆಟುಕುವ ದರದಲ್ಲಿ ಲಭ್ಯವಾಗಲಿವೆ. ಪರಿಷ್ಕೃತ ಬೆಲೆಯನ್ನು ಔಷಧ ಅಂಗಡಿಗಳು ಹಾಗೂ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು. ಸರ್ಕಾರದ ಈ ಐತಿಹಾಸಿಕ ನಿರ್ಧಾರದಿಂದ ದೇಶದ ಲಕ್ಷಾಂತ
Oct 181 min read


ಇಸ್ಲಾಂಗೆ ಮತಾಂತರಗೊಂಡವರಿಗೆ ಹಿಂದುಳಿದ ವರ್ಗದ ಮೀಸಲಾತಿ ಇಲ್ಲ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು
ನವದೆಹಲಿ: ಹಿಂದೂ ಧರ್ಮದಿಂದ ಇಸ್ಲಾಂ ಅಥವಾ ಇತರ ಧರ್ಮಗಳಿಗೆ ಮತಾಂತರಗೊಂಡ ವ್ಯಕ್ತಿಯೊಬ್ಬರು, ಮತಾಂತರಕ್ಕೂ ಮೊದಲು ತಮ್ಮ ಜಾತಿಯಲ್ಲಿದ್ದ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಮಾತ್ರವೇ ಆಧಾರವಾಗಿಟ್ಟುಕೊಂಡು ಸಂವಿಧಾನದ ವಿಧಿ 16(4) ರ ಅಡಿಯಲ್ಲಿ ಮೀಸಲಾತಿ ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ವ್ಯಕ್ತಿಗಳಿಗೆ ಮೀಸಲಾತಿಗಾಗಿ 'ಹಿಂದುಳಿದ ವರ್ಗಗಳ ಮುಸ್ಲಿಂ' ಎಂದು ಪರಿಗಣಿಸಲು ತಮಿಳುನಾಡು ಸರ್ಕಾರವು 2024 ರ ಮಾರ್ಚ್ನಲ್ಲಿ ಆದೇಶ ಹೊರಡಿಸಿತ್ತು. ಈ ಅಧಿಸೂಚನೆಯನ್ನು ಮದ್ರಾಸ
Oct 161 min read


ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ – ಚರ್ಚ್ ಫಾದರ್ ವಿರುದ್ಧ ಪೋಕ್ಸೊ ಪ್ರಕರಣ ದಾಖಲು
ಮಂಗಳೂರು ನಗರದ ಚರ್ಚ್ ಒಂದರ ಧರ್ಮಗುರು ಫಾದರ್ ಸಿಪ್ರಿಯನ್ ಪಿಂಟೋ ವಿರುದ್ಧ ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಗಂಭೀರ ಆರೋಪ ಕೇಳಿಬಂದಿದೆ. ಆಗಸ್ಟ್ 14ರಂದು ಸಂಜೆ ಪ್ರಾರ್ಥನೆಗೆ ಬಂದಿದ್ದ ಬಾಲಕನಿಗೆ ಚಾಕಲೇಟ್ ನೀಡಿ ಪುಸಲಾಯಿಸಿ, ಚರ್ಚ್ನ ಕೊಠಡಿಯಲ್ಲಿ ಅಸಭ್ಯ ವರ್ತನೆ ನಡೆಸಿ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಭಯಗೊಂಡ ಬಾಲಕ ಈ ಕುರಿತು ಪೋಷಕರಿಗೆ ತಿಳಿಸಿದ್ದು, ಪೋಷಕರು ಬಿಷಪ್ ಅವರನ್ನು ಭೇಟಿಯಾದಾಗ ಪೊಲೀಸ್ ದೂರು ದಾಖಲಿಸಲು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲ
Oct 161 min read


ಚಿನ್ನದ ಬೆಲೆಯಲ್ಲಿ ಕುಸಿತ: ಇಂದಿನ ಬೆಲೆ ಎಷ್ಟಿದೆ?
ಕರ್ನಾಟಕದಲ್ಲಿ ಚಿನ್ನದ ಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಅಕ್ಟೋಬರ್ 16, 2026ರಂದು ಚಿನ್ನದ ಬೆಲೆಯಲ್ಲಿ ಸತತವಾಗಿ ಇಳಿಕೆ ಕಂಡುಬಂದಿದೆ. ಮಾರುಕಟ್ಟೆಯಲ್ಲಿ ನಿರಂತರವಾಗಿ ಬೆಲೆ ಇಳಿಯುತ್ತಿದ್ದು, ನಿನ್ನೆಯ ದರಕ್ಕೆ ಹೋಲಿಸಿದರೆ ಶೇ. 0.55ರಷ್ಟು ಕುಸಿತ ದಾಖಲಾಗಿದೆ. ಇಂದಿನ ಮಾರುಕಟ್ಟೆ ವರದಿಯಂತೆ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆಯು ಪ್ರತಿ 1 ಗ್ರಾಂಗೆ ₹14,306 ಹಾಗೂ 10 ಗ್ರಾಂಗೆ ₹1,43,060 ಇದೆ. 22 ಕ್ಯಾರೆಟ್ ಆಭರಣದ ಚಿನ್ನದ ದರವೂ ಸಹ ಇಳಿಕೆ ಹಾದಿಯಲ್ಲಿದೆ. ಮತ್ತೊಂದೆಡೆ, ಭಾರತದ ಷೇರುಪೇಟೆ ವಹಿವಾಟು ಇಂದು ಸಕಾರತ್ಮಕವಾಗಿದ್ದು, ಬಿಎಸ್ಇ ಸೆನ್ಸೆಕ್ಸ್ 25.47 ಅಂಕಗಳು ಏರಿಕ
Oct 161 min read


ಕಡಬ: ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ
ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಜೀವ ಬೆದರಿಕೆ ಪ್ರಕರಣದಲ್ಲಿ ಮಂಗಳೂರಿನ ನ್ಯಾಯಾಲಯವು ಐತಿಹಾಸಿಕ ಹಾಗೂ ಕಠಿಣ ತೀರ್ಪು ಪ್ರಕಟಿಸಿದೆ. ಕಡಬ ತಾಲೂಕಿನ ರಾಮಕುಂಜ ನಿವಾಸಿ ಶೇಖರ್ ಅಲಿಯಾಸ್ ಸೇಸಪ್ಪ (30) ಎಂಬಾತನೇ ಈ ಘಟನೆಯ ದೋಷಿಯಾಗಿದ್ದು, ಒಟ್ಟು 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ₹50,000 ದಂಡ ವಿಧಿಸಿ ಮಂಗಳೂರಿನ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸುಮಂಗಲಾ ಚಕಲಬ್ಬಿ ಅವರು ತೀರ್ಪು ನೀಡಿದ್ದಾರೆ. 2021ರ ಮೇ 8ರಂದು ಈ ಕೃತ್ಯ ನಡೆದಿತ್ತು. ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಲೈಂಗಿಕ ದ
Oct 161 min read


ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಪ್ರಮಾಣವಚನ ಸ್ವೀಕಾರ
ಬೆಂಗಳೂರು: ಕರ್ನಾಟಕದ ನೂತನ ರಾಜ್ಯಪಾಲರಾಗಿ ಬಿಜೆಪಿಯ ಹಿರಿಯ ನಾಯಕಿ ಡಾ. ಸುಧಾ ಯಾದವ್ ಅವರು ಇಂದು ಬೆಳಗ್ಗೆ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಐದು ವರ್ಷಗಳ ಸೇವೆ ಪೂರೈಸಿ ನಿರ್ಗಮಿಸುತ್ತಿರುವ ಥಾವರ್ ಚಂದ್ ಗೆಹ್ಲೋಟ್ ಅವರ ಸ್ಥಾನಕ್ಕೆ ಇವರನ್ನು ನಿಯೋಜಿಸಲಾಗಿದೆ. ಕಾರ್ಗಿಲ್ ಹುತಾತ್ಮ ಯೋಧನ ಪತ್ನಿಯಾಗಿರುವ ಡಾ. ಸುಧಾ ಯಾದವ್ ಅವರು ರಸಾಯನಶಾಸ್ತ್ರದಲ್ಲಿ ಪಿಎಚ್ಡಿ ಪಡೆದಿದ್ದು, ಮಾಜಿ ಸಂಸದೆಯಾಗಿ ಹಾಗೂ ಬಿಜೆಪಿ ಸಂಸದೀಯ ಮಂಡಳಿಯ ಪ್ರಮುಖ ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದಾರೆ. ರಾಜಭವನದ ಗಾಜಿನಮನೆಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂ
Oct 161 min read


ರೇಷನ್ ಕಾರ್ಡ್ e-KYC ಇನ್ನು ಮನೆಯಲ್ಲೇ: ‘ಅನ್ನಸೇವೆ’ ಆ್ಯಪ್ ಮೂಲಕ 5 ನಿಮಿಷದಲ್ಲಿ ಪೂರ್ಣ
ಬೆಂಗಳೂರು: ಪಡಿತರ ಚೀಟಿ (ರೇಷನ್ ಕಾರ್ಡ್) ಫಲಾನುಭವಿಗಳಿಗೆ ಆಹಾರ ಇಲಾಖೆ ಗುಡ್ನ್ಯೂಸ್ ನೀಡಿದ್ದು, ಇನ್ನು ಮುಂದೆ ಮನೆಯಲ್ಲೇ ಕುಳಿತು ಮೊಬೈಲ್ ಮೂಲಕ e-KYC ಪೂರ್ಣಗೊಳಿಸುವ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಆಹಾರ ಇಲಾಖೆ ‘ಅನ್ನಸೇವೆ’ ಆ್ಯಪ್ ಸೌಲಭ್ಯವನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳಿಗೂ ವಿಸ್ತರಿಸಿದೆ. ಕೇಂದ್ರ ಸರ್ಕಾರದ ನಿಯಮದಂತೆ ರೇಷನ್ ಕಾರ್ಡ್ ಫಲಾನುಭವಿಗಳು ಐದು ವರ್ಷಕ್ಕೊಮ್ಮೆ e-KYC ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಈ ಹಿಂದೆ e-KYCಗಾಗಿ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲಬೇಕಾಗಿತ್ತು. ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಗೆ ನಗರ ಹಾಗೂ ಪಟ್ಟಣಗಳಿಗ
Oct 151 min read


ವಿವಾಹಿತ ಪುತ್ರಿಯರಿಗೂ ತಂದೆಯ ಗೇಣಿ ಆಸ್ತಿಯಲ್ಲಿ ಸಮಾನ ಪಾಲು; ಹೈಕೋರ್ಟ್ ಮಹತ್ವದ ತೀರ್ಪು
ಧಾರವಾಡ: ವಿವಾಹವಾದ ಬಳಿಕವೂ ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿಯಲ್ಲಿ ಕಾನೂನುಬದ್ಧ ಹಕ್ಕು ಮುಂದುವರಿಯುತ್ತದೆ ಎಂದು ಕರ್ನಾಟಕ ಹೈಕೋರ್ಟ್ನ ಧಾರವಾಡ ಪೀಠ ಮಹತ್ವದ ತೀರ್ಪು ನೀಡಿದೆ. ಕರ್ನಾಟಕ ಭೂ ಸುಧಾರಣೆ ಕಾಯ್ದೆಯಡಿ ಕುಟುಂಬದ ಮುಖ್ಯಸ್ಥರಿಗೆ ಗೇಣಿ ಆಧಾರದ ಮೇಲೆ ಮಂಜೂರಾದ ಜಮೀನಿನಲ್ಲಿಯೂ ವಿವಾಹಿತ ಪುತ್ರಿಯರು ಪಾಲು ಪಡೆಯಲು ಅರ್ಹರು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದ ಜಮೀನಿಗೆ ಸಂಬಂಧಿಸಿದ ಆಸ್ತಿ ವಿವಾದದ ವಿಚಾರಣೆ ವೇಳೆ ಈ ತೀರ್ಪು ಹೊರಬಿದ್ದಿದೆ. ಕೆಳಹಂತದ ನ್ಯಾಯಾಲಯಗಳು ನೀಡಿದ್ದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿದ್ದು
Oct 141 min read


ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ನೇಮಕ
ನವದೆಹಲಿ: ದೇಶದ ಹಲವು ರಾಜ್ಯಗಳ ರಾಜ್ಯಪಾಲರ ಹುದ್ದೆಗಳಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ಕರ್ನಾಟಕದ ನೂತನ ರಾಜ್ಯಪಾಲರಾಗಿ ಡಾ. ಸುಧಾ ಯಾದವ್ ಅವರನ್ನು ನೇಮಕ ಮಾಡಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆರು ರಾಜ್ಯಗಳಿಗೆ ಹೊಸ ರಾಜ್ಯಪಾಲರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಇದರಂತೆ, ಸಿಕ್ಕಿಂನ ರಾಜ್ಯಪಾಲರಾಗಿದ್ದ ಓಂ ಪ್ರಕಾಶ್ ಮಾಥುರ್ ಅವರನ್ನು ಕೇರಳದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಕೇರಳದ ರಾಜ್ಯಪಾಲರಾಗಿದ್ದ ರಾಜೇಂದ್ರ ವಿಶ್ವನಾಥ್ ಅರ್ಲೆಕರ್ ಅವರನ್ನು ತಮಿಳುನಾಡಿನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ಇನ್ನು ಬ್ರಜ್ ಮೋಹನ್ ರಾಮ್ ಅವರನ್ನು ಒಡಿಶಾದ ರಾಜ್ಯಪಾಲರಾಗಿ
Oct 121 min read


ದಸರಾ ಹಬ್ಬದ ರಜೆ ನೀಡದೆ ಪರೀಕ್ಷೆ: ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ
ಮಂಗಳೂರು: ದಸರಾ ಹಬ್ಬದ ಸಂಭ್ರಮದ ನಡುವೆಯೂ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ನಿಗದಿಪಡಿಸಿರುವುದನ್ನು ವಿರೋಧಿಸಿ, ನಗರದ ಸೈಂಟ್ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿಯರು ಪರೀಕ್ಷೆ ಬಹಿಷ್ಕರಿಸಿ ಕಾಲೇಜು ಗೇಟ್ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಅಕ್ಟೋಬರ್ 28ರವರೆಗೆ ಪರೀಕ್ಷೆಗಳನ್ನು ಆಯೋಜಿಸಲಾಗಿದ್ದು, ದಸರಾ ರಜೆ ನೀಡದೆ ಆಡಳಿತ ಮಂಡಳಿ ಉದ್ದಟತನ ಪ್ರದರ್ಶಿಸಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಬ್ಬದ ಆಚರಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಬೆಂಬಲದೊಂದಿಗೆ ನೂರಾರು ವಿದ್ಯ
Oct 121 min read


ವಿಶೇಷ ಎಸ್ಐಆರ್ ಅಕ್ರಮ ಖಂಡಿಸಿ ವಿಪಕ್ಷಗಳಿಂದ 'ಸುಪ್ರೀಂ ಕೋರ್ಟ್ ಚಲೋ': ದೆಹಲಿಯಲ್ಲಿ ಮೆಟ್ರೋ ಬಂದ್, ಸಂಚಾರ ಅಸ್ತವ್ಯಸ್ತ
ನವದೆಹಲಿ: ಚುನಾವಣಾ ಆಯೋಗದ 'ವಿಶೇಷ ತೀವ್ರ ಪರಿಷ್ಕರಣೆ' (ಎಸ್ಐಆರ್) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಒಕ್ಕೂಟವು ಇಂದು ದೆಹಲಿಯಲ್ಲಿ ಬೃಹತ್ 'ಸುಪ್ರೀಂ ಕೋರ್ಟ್ ಚಲೋ' ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಭದ್ರತಾ ಮುನ್ನೆಚ್ಚರಿಕೆಯಾಗಿ ಕೇಂದ್ರ ದೆಹಲಿಯ ರಾಜೀವ್ ಚೌಕ್, ಸೆಂಟ್ರಲ್ ಸೆಕ್ರೆಟರಿಯೇಟ್, ಪಟೇಲ್ ಚೌಕ್, ಜನಪಥ್, ಮಂಡಿ ಹೌಸ್ ಮತ್ತು ಬಾರಾಖಂಬಾ ರಸ್ತೆಯ ಪ್ರಮುಖ 6 ಮೆಟ್ರೋ ನಿಲ್ದಾಣಗಳ ಪ್ರವೇಶ ಹಾಗೂ ನಿರ್
Oct 121 min read


ಕಾರು ಹಾಗೂ ಬೈಕ್ ಭೀಕರ ಅಪಘಾತ: ಸುಳ್ಯದ ಇಯಾಸ್ ಸೇರಿ ಮೂವರು ಸಾವು
ಕೇರಳದ ನೆಡುಂಬಸ್ಸೇರಿ ಸಮೀಪದ ಮೂಝಿಯಲ್ನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ ಕೊಡಗಿನ ಇಯಾಸ್ (22), ವಯನಾಡಿನ ದೇವಿಕಾ ಹಾಗೂ ಪಾಲಕ್ಕಾಡ್ನ ಗೋಪಿಕಾ ಸೇರಿದಂತೆ ಮೂವರು ದುರ್ಮರಣ ಹೊಂದಿದ್ದಾರೆ. ಭಾನುವಾರ ಮುಂಜಾನೆ 1.45ರ ಸುಮಾರಿಗೆ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದ ಕಾರೊಂದು ಹಿಂದಿನಿಂದ ಬೈಕ್ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಮೂವರಿಗೂ ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಇವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ದುರ್ಘಟನೆ ಕುರಿತು ನೆಡು
Oct 111 min read


ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಅಸಮಾಧಾನ
ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲೇ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳ ಆಯೋಜಿಸಲು ಹೊರಟಿರುವ ಸರ್ಕಾರದ ನಿರ್ಧಾರಕ್ಕೆ ಯದುವಂಶದ ಮಹಾರಾಜ ಹಾಗೂ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದ ಬಗ್ಗೆ ತಮಗೆ ಅಪಾರ ಗೌರವವಿದೆ. ಆದರೆ, ದಸರಾ ಮಹೋತ್ಸವ ನಡೆಯುವ ಪವಿತ್ರ ಸಂದರ್ಭದಲ್ಲೇ ಕಂಬಳವನ್ನು ಯಾಕೆ ಆಯೋಜಿಸಬೇಕು? ಎಂದು ಪ್ರಶ್ನಿಸಿದ್ದಾರೆ. ಇದು ಮೈಸೂರಿನ ಸ್ಥಳೀಯರ ಜನರ ಭಾವನೆಗಳಿಗೆ ಧಕ್ಕೆ ಉಂಟುಮಾಡುತ್ತಿದೆ ಎಂದು ಟೀಕಿ
Oct 111 min read


ಸೌದಿ ಅರೇಬಿಯಾದ ರಿಯಾದ್ ವಿಮಾನ ನಿಲ್ದಾಣದ ಮೇಲೆ ಕ್ಷಿಪಣಿ ದಾಳಿ: 12 ಸಾವು, 300ಕ್ಕೂ ಹೆಚ್ಚು ಜನರಿಗೆ ಗಾಯ
ಸೌದಿ ಅರೇಬಿಯಾದ ರಾಜಧಾನಿ ರಿಯಾದ್ನಲ್ಲಿರುವ ಪ್ರಮುಖ ಕಿಂಗ್ ಖಾಲಿದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಭೀಕರ ಕ್ಷಿಪಣಿ ದಾಳಿಯಲ್ಲಿ 12 ಜನರು ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಕುರಿತು ವರದಿಯಾಗಿದೆ. ಈ ಘಟನೆಯು ಮಧ್ಯಪ್ರಾಚ್ಯದಲ್ಲಿ ತೀವ್ರ ಆತಂಕ ಹಾಗೂ ಯುದ್ಧದ ಕಾರ್ಮೋಡವನ್ನು ಮತ್ತಷ್ಟು ದಟ್ಟವಾಗಿಸಿದೆ. ದಾಳಿಯ ವಿವರಗಳು ಮತ್ತು ಸಾವು-ನೋವುಗಳು ದೇಶೀಯ ವಿಮಾನಗಳ ಟರ್ಮಿನಲ್ಗಳಾದ 3 ಮತ್ತು 4 ಅನ್ನು ಒಳಗೊಂಡಿರುವ ವಿಮಾನ ನಿಲ್ದಾಣದ ಸಂಕೀರ್ಣಕ್ಕೆ ಈ ಕ್ಷಿಪಣಿ ಅಪ್ಪಳಿಸಿದೆ. ಮೃತಪಟ್ಟ 12 ವ್ಯಕ್ತಿಗಳಲ್ಲಿ ನಾಲ್ವರು ಸೌದಿ ಪ್ರಜೆಗಳು, ಇಬ್ಬರು ಬಾಂಗ್ಲಾದ
Oct 111 min read


ಬರ ಪರಿಹಾರ ನೀಡಿಲ್ಲ: ರಿಯಲ್ ಎಸ್ಟೇಟ್ನಲ್ಲೇ ಮುಳುಗಿದೆ ಸರ್ಕಾರ - ಬಿ.ವೈ. ವಿಜಯೇಂದ್ರ ಆಕ್ರೋಶ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಬರದಿಂದ ತತ್ತರಿಸಿರುವ ರೈತರ ನೆರವಿಗೆ ಬಾರದೆ, ಕೇವಲ ರಿಯಲ್ ಎಸ್ಟೇಟ್ ಮತ್ತು ಟೌನ್ಶಿಪ್ ನಿರ್ಮಾಣದಲ್ಲೇ ಮುಳುಗಿದೆ. ಸರ್ಕಾರ ದಿವಾಳಿಯಾಗಿದ್ದು, ಆರ್ಥಿಕ ತುರ್ತು ಪರಿಸ್ಥಿತಿ ಎದುರಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರುಕಾಲು ವರ್ಷಗಳಾದರೂ ನುಡಿದಂತೆ ನಡೆಯದೆ ಕೇವಲ ಜಾಹೀರಾತು ಪ್ರಚಾರದಲ್ಲಷ್ಟೇ ತೊಡಗಿದೆ. ಒಂದೇ ಒಂದು ಹೊಸ ಯೋಜನೆ ಜಾರಿ ಮಾಡಿಲ್ಲ. ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಹಾಗೂ
Oct 91 min read


ಮೃತಪಟ್ಟಿದ್ದಾರೆಂದು ಸುಳ್ಳು ಪ್ರಮಾಣ ಪತ್ರ ಸೃಷ್ಟಿ: ಶಾಸಕ ಯತ್ನಾಳ್ ವಿರುದ್ಧ FIR
ವಿಜಯಪುರ: ಜೀವಂತವಾಗಿರುವ ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ಸುಳ್ಳು ಮರಣ ಪ್ರಮಾಣ ಪತ್ರ ಸೃಷ್ಟಿಸಿ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಯತ್ನಿಸಿದ ಗಂಭೀರ ಆರೋಪದ ಮೇಲೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲಾಗಿದೆ. ನಗರದ ಬಾಗವಾನ್ ಕಾಲೋನಿಯ ಅಬ್ದುಲ್ ರಝಾಕ್ ನೀಡಿದ ದೂರಿನ ಮೇರೆಗೆ ವಿಜಯಪುರದ ಜಲನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ಹೂಡಲಾಗಿದೆ. ಶಾಸಕ ಯತ್ನಾಳ್ ಹಾಗೂ ಅವರ ಬೆಂಬಲಿಗರು ಸೆಪ್ಟೆಂಬರ್ 3 ರಂದು ನಕಲಿ ಮರಣ ಪ್ರಮಾಣ ಪತ್ರಗಳನ್ನು ನಗರ ಪಾಲಿಕೆ ಆಯುಕ್ತರಿಗೆ ಸಲ್ಲಿಸಿ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವಂತೆ ಕೋರಿದ್ದರು ಎಂದು ದೂರಿನಲ್ಲಿ ತಿಳಿಸ
Oct 91 min read
Archive
bottom of page



