;
top of page

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ಘೋಷಣೆ: ಆರು ಮಂದಿ ಸಾಧಕರು ಆಯ್ಕೆ

Sep 26
1 min read

ಬೆಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು 2025 ಮತ್ತು 2026ರ ಸಾಲಿನ ವಾರ್ಷಿಕ ಗೌರವ ಪ್ರಶಸ್ತಿಗಳನ್ನು ಘೋಷಿಸಿದೆ. ತುಳು ಸಾಹಿತ್ಯ, ಸಂಶೋಧನೆ, ಜಾನಪದ ಕಲೆ, ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಆರು ಮಂದಿ ಹಿರಿಯ ಸಾಧಕರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


ಈ ಕುರಿತು ಮಾಹಿತಿ ನೀಡಿದ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್, ಪ್ರಶಸ್ತಿಯು ತಲಾ 50,000 ರೂಪಾಯಿ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 4 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಪ್ರಶಸ್ತಿ ಪುರಸ್ಕೃತರ ವಿವರ:


* 2025ರ ಸಾಲಿಗೆ:

* ಪ್ರೊ. ಬಿ. ಶಿವರಾಮ ಶೆಟ್ಟಿ (ಸಾಹಿತ್ಯ ಮತ್ತು ಸಂಶೋಧನೆ): ಮಂಗಳೂರು ವಿವಿಯ ಮಾಜಿ ಅಧ್ಯಾಪಕರಾದ ಇವರು 'ತುಲಾನಾಡಿನ ಸಸ್ಯಜನಪದ' ಸಂಶೋಧನೆಗೆ ಪಿಎಚ್‌ಡಿ ಪಡೆದಿದ್ದಾರೆ ಹಾಗೂ ತುಳು ಪಠ್ಯಕ್ರಮ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.


* ಕುಡ್ಡು ಕೊರಗ ಪಾಂಗಾಳ (ಜಾನಪದ ಕಲೆ): ಉಡುಪಿಯ ಕಾಪು ತಾಲೂಕಿನ ಇವರು ನಾಲ್ಕು ದಶಕಗಳಿಂದ ಸಾಂಪ್ರದಾಯಿಕ ಡೋಲು ಕಲಾವಿದರಾಗಿ, ಬುಟ್ಟಿ ನೇಯ್ಗೆ ಹಾಗೂ ಬಿರ್ದು ಹಾಡುಗಾರಿಕೆಯಲ್ಲಿ ಹೆಸರುವಾಸಿಯಾಗಿದ್ದಾರೆ.


* ಉಷಾ ಭಂಡಾರಿ (ರಂಗಭೂಮಿ/ಸಿನಿಮಾ): ನಟಿ, ನಿರ್ದೇಶಕಿ ಮತ್ತು ನಟನಾ ತರಬೇತುದಾರರಾದ ಇವರು ಮೂರೂವರೆ ದಶಕಗಳಿಂದ ತುಳು-ಕನ್ನಡ ನಾಟಕ, ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದಾರೆ.


* 2026ರ ಸಾಲಿಗೆ:

* ಕೆ.ಪಿ. ರಾವ್ (ಕಂಪ್ಯೂಟರ್ ತಂತ್ರಜ್ಞಾನ/ಸಾಹಿತ್ಯ): ಭಾರತೀಯ ಭಾಷೆಗಳನ್ನು ಕಂಪ್ಯೂಟರ್‌ಗೆ ಅಳವಡಿಸುವಲ್ಲಿ ಪ್ರವರ್ತಕರಾದ ಇವರು, ತುಳು ಲಿಪಿಗೆ ಸಾಫ್ಟ್‌ವೇರ್ ಹಾಗೂ ತುಳು ನಿಘಂಟು ಮುದ್ರಣಕ್ಕೆ ತಾಂತ್ರಿಕ ಕೊಡುಗೆ ನೀಡಿದ್ದಾರೆ.


* ನೇಮು ಪರವ (ಜಾನಪದ ಕಲೆ): ಪುತ್ತೂರಿನ ಕೆಯ್ಯೂರಿನವರಾದ ಇವರು ತಮ್ಮ 16ನೇ ವಯಸ್ಸಿನಿಂದಲೇ ದೈವ ನರ್ತಕರಾಗಿ ಸೇವೆ ಸಲ್ಲಿಸುತ್ತಿದ್ದು, ಹಲವಾರು ಗರಡಿ ಹಾಗೂ ದೈವಸ್ಥಾನಗಳಲ್ಲಿ ಧಾರ್ಮಿಕ ಸೇವೆ ಸಲ್ಲಿಸಿದ್ದಾರೆ.


* ಸುಧಾಕರ್ ಬನ್ನಂಜೆ (ರಂಗಭೂಮಿ/ಸಿನಿಮಾ): ನಾಲ್ಕು ದಶಕಗಳಿಂದ ರಂಗಭೂಮಿಯಲ್ಲಿರುವ ಇವರು 64 ತುಳು ಹಾಗೂ 24 ಕನ್ನಡ ನಾಟಕಗಳನ್ನು ಬರೆದಿದ್ದು, ನಿರ್ದೇಶಕರಾಗಿ, ಗೀತರಚನೆಕಾರರಾಗಿ ಸೇವೆ ಸಲ್ಲಿಸಿದ್ದಾರೆ.


Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

​

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page