ಗೃಹಲಕ್ಷ್ಮಿಯರಿಗೆ ನವರಾತ್ರಿ ಗುಡ್‌ನ್ಯೂಸ್; 33ನೇ ಕಂತಿನ ಹಣ ಬಿಡುಗಡೆಗೆ ಗ್ರೀನ್ ಸಿಗ್ನಲ್

ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಯೋಜನೆಯ 33ನೇ ಕಂತಿನ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲು ಆರ್ಥಿಕ ಇಲಾಖೆ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಹಣ ಬಿಡುಗಡೆಗೆ ಆರ್ಥಿಕ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ ಎನ್ನಲಾಗಿದೆ. ಇದರೊಂದಿಗೆ ಈಗಾಗಲೇ ಯೋಜನೆಗೆ ಅರ್ಹರಾಗಿರುವ ಮಹಿಳೆಯರಿಗೆ 33ನೇ ಕಂತಿನ ಹಣ ಖಾತೆಗೆ ಜಮೆಯಾಗುವ ನಿರೀಕ್ಷೆ ಮೂಡಿದೆ.
ಗೃಹಲಕ್ಷ್ಮಿ ಯೋಜನೆಯಡಿ ಅರ್ಹ ಮಹಿಳಾ ಫಲಾನುಭವಿಗಳಿಗೆ ಪ್ರತಿ ತಿಂಗಳು ₹2,000 ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
ಇದೇ ವೇಳೆ, ಯೋಜನೆಯಲ್ಲಿ ಅರ್ಹ–ಅನರ್ಹ ಫಲಾನುಭವಿಗಳ ಪರಿಶೀಲನೆ ಸೇರಿದಂತೆ ಕೆಲವು ಬದಲಾವಣೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ. ಆದರೆ ಈ ಪರಿಷ್ಕರಣೆ ಪ್ರಕ್ರಿಯೆಯ ನಡುವೆಯೂ 33ನೇ ಕಂತಿನ ಹಣ ಬಿಡುಗಡೆಗೆ ಸರ್ಕಾರ ಮುಂದಾಗಿದೆ.
ಹಣ ಯಾವ ದಿನ ಖಾತೆಗೆ ಜಮೆಯಾಗಲಿದೆ ಎಂಬ ಅಧಿಕೃತ ದಿನಾಂಕಕ್ಕಾಗಿ ಫಲಾನುಭವಿಗಳು ಸರ್ಕಾರದ ಪ್ರಕಟಣೆಯನ್ನು ಗಮನಿಸಬೇಕಾಗಿದೆ.







Comments