top of page
News Articles
Sathyapatha News Plus


ಗ್ಯಾಸ್ ಪಂಪ್ನಲ್ಲಿ ಆಟೋ ಚಾಲಕನ ಅಟ್ಟಹಾಸ: ಸಿಬ್ಬಂದಿ ಮೇಲೆ ಹಲ್ಲೆ, ದಾಂಧಲೆ!
ಬಂಟ್ವಾಳದ ಮೆಲ್ಕಾರ್ ಬಳಿಯ ಗ್ಯಾಸ್ ಪಂಪ್ ಏಜೆನ್ಸಿಯಲ್ಲಿ ಶುಕ್ರವಾರ ಸಂಜೆ ಅಫ್ರೀಝ್ ಎಂಬಾತ ಸಿಬ್ಬಂದಿ ಅಶ್ವಿನ್ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮ್ಯಾನೇಜರ್ ಕುನಲ್ ಭುಕ್ಕಿಯಾ ನೀಡಿದ ದೂರಿನಂತೆ, ಆರೋಪಿಯು ಕಚೇರಿಯ ಸೊತ್ತುಗಳನ್ನು ಧ್ವಂಸಗೊಳಿಸಿದ್ದಾನೆ. ಈ ಕೃತ್ಯದಿಂದ ಸುಮಾರು ₹48,000 ಮೌಲ್ಯದ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಂ ಅಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಅಫ್ರೀಝ್ ವಿರುದ್ಧ ತನಿಖೆ ಆರಂಭಿಸಿದ್ದು, ಆಟೋರಿಕ್ಷಾ ಮೂಲಕ ಪಂಪ್ ಆವರಣಕ್
Mar 211 min read


ನೇತ್ರಾವತಿ ನದಿ ತೀರದಲ್ಲಿ ರಾಶಿ ರಾಶಿ ಆಧಾರ್ ಕಾರ್ಡ್ ಪತ್ತೆ: ತನಿಖೆಗೆ ಸ್ಪೀಕರ್ ಯು.ಟಿ. ಖಾದರ್ ಸೂಚನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ ನೇತ್ರಾವತಿ ನದಿ ತೀರದಲ್ಲಿ ನೂರಾರು ಆಧಾರ್ ಕಾರ್ಡ್ಗಳು ಅನಾಥವಾಗಿ ಬಿದ್ದಿರುವುದು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. ಪುದು ಗ್ರಾಮದ ನಿವಾಸಿಗಳ ವಿಳಾಸ ಹೊಂದಿರುವ ಈ ಕಾರ್ಡ್ಗಳು ನದಿಯಲ್ಲಿ ತೇಲಿ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಗ್ರಾಮ ಪಂಚಾಯತ್ ಗಮನಕ್ಕೆ ತಂದಿದ್ದಾರೆ. ಸರ್ಕಾರದ ಪ್ರಮುಖ ಗುರುತಿನ ಚೀಟಿಗಳು ಹೀಗೆ ನದಿ ಪಾಲಾಗಿರುವುದು ವ್ಯವಸ್ಥೆಯ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸ್ಥಳೀಯರು ಆಪಾದಿಸಿದ್ದಾರೆ. ಈ ಗಂಭೀರ ಘಟನೆಯನ್ನು ಗಮನಿಸಿದ ಸ್ಥಳ
Mar 51 min read


ಬಜತ್ತೂರು: ಅನಧಿಕೃತ ಕೋಳಿ ಅಂಕದ ಮೇಲೆ ಪೊಲೀಸ್ ದಾಳಿ; ಮೂವರ ಬಂಧನ
ಬಜತ್ತೂರು ಗ್ರಾಮದ ಮಣಿಕ್ಕಳ ಎಂಬಲ್ಲಿ ನಡೆಯುತ್ತಿದ್ದ ಅನಧಿಕೃತ ಕೋಳಿ ಅಂಕದ ಮೇಲೆ ಉಪ್ಪಿನಂಗಡಿ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ. ಮಾರ್ಚ್ 3ರಂದು ಗಸ್ತು ನಿರತವಾಗಿದ್ದ ಉಪನಿರೀಕ್ಷಕ ಸುತೇಶ್ ಕೆ.ಪಿ. ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದ್ದು, ಕೋಳಿಗಳ ಕೂಗಿನ ಸದ್ದನ್ನಾಧರಿಸಿ ಸ್ಥಳಕ್ಕೆ ತೆರಳಿದಾಗ ಜೂಜಾಟ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ದಾಳಿಯಲ್ಲಿ ಸತೀಶ್, ಮುರಳಿ ಮತ್ತು ಮೋನಪ್ಪ ಕೆ. ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ಸ್ಥಳದಿಂದ ಐದು ಹುಂಜಗಳು, ಕೋಳಿ ಕಾಲುಗಳಿಗೆ ಕಟ್ಟುವ ಚೂರಿಗಳು, 2,300 ರೂ. ನಗದು ಹಾಗೂ ಒಂದು ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಂ
Mar 51 min read


ಕುಮಾರಧಾರೆಯ ಒಡಲಲ್ಲಿ 'ವಿಷದ' ಕಣ್ಣೀರು: ಶಾಸಕ ಅಶೋಕ್ ರೈ ಅವರ ಮತ್ಸ್ಯ ಕನಸಿಗೆ ಮಾಲಿನ್ಯದ ಮೃತ್ಯುಪಾಶ!
ಕುದ್ಮಾರು/ಆಲಂಕಾರು: ಪವಿತ್ರ ಕುಮಾರಧಾರ ನದಿಯು ಇಂದು ಮಾಲಿನ್ಯದ ದವಡೆಗೆ ಸಿಲುಕಿ ನಲುಗುತ್ತಿದೆ. ಕುದ್ಮಾರು ಮತ್ತು ಆಲಂಕಾರು ಗ್ರಾಮಗಳ ಜೀವನಾಡಿಯಾಗಿರುವ ಈ ನದಿಯು ಶಾಂತಿಮೊಗರು ಚೆಕ್ ಡ್ಯಾಂ ಬಳಿ ಕಿಡಿಗೇಡಿಗಳು ಎಸೆಯುತ್ತಿರುವ ತ್ಯಾಜ್ಯದಿಂದಾಗಿ ಸಾಕ್ಷಾತ್ ನರಕಸದೃಶವಾಗಿದೆ. ಇದು ಕೇವಲ ಪರಿಸರ ಮಾಲಿನ್ಯವಲ್ಲ, ಸಾವಿರಾರು ಭಕ್ತರ ಧಾರ್ಮಿಕ ಶ್ರದ್ಧೆ ಹಾಗೂ ಶಾಸಕರ ಮಹತ್ವಾಕಾಂಕ್ಷಿ ಅಭಿವೃದ್ಧಿ ಯೋಜನೆಗೆ ಬಿದ್ದಿರುವ ದೊಡ್ಡ ಪೆಟ್ಟು. 25 ಲಕ್ಷ ಮೀನುಗಳ ಭವಿಷ್ಯ ಮರೀಚಿಕೆ? ಪುತ್ತೂರು ಶಾಸಕರಾದ ಶ್ರೀ ಅಶೋಕ್ ರೈ ಅವರು ನದಿಯ ಪುನಶ್ಚೇತನಕ್ಕಾಗಿ ನೆಕ್ಕಿಲಾಡಿ ಭಾಗದಲ್ಲಿ ಲಕ್ಷಾಂತರ ಮೀನು ಮರಿಗ
Feb 231 min read


ಫೆಬ್ರವರಿ 27ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ
ಮಂಗಳೂರು: Karnataka ರಾಜ್ಯದ ಕರಾವಳಿ ಭಾಗಗಳಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗುವ ಲಕ್ಷಣಗಳು ಕಾಣಿಸಿಕೊಂಡಿವೆ. Dakshina Kannada ಜಿಲ್ಲೆಯ ಸುಳ್ಯ, ಸುಬ್ರಹ್ಮಣ್ಯ ಸುತ್ತಮುತ್ತ ಪ್ರದೇಶಗಳಲ್ಲಿ ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ಒಂದೆರಡು ಕಡೆ ತುಂತುರು ಮಳೆಯ ಸಾಧ್ಯತೆ ಇದೆ. ಉಳಿದ ಕರಾವಳಿ ಭಾಗಗಳಲ್ಲಿ ಬಿಸಿಲು-ಮೋಡ ಕವಿದ ವಾತಾವರಣ ಹಾಗೂ ಸೆಖೆ ಮುಂದುವರಿಯಲಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ, ಬಂಗಾಳ ಕೊಲ್ಲಿಯ ಉತ್ತರ ಭಾಗದಲ್ಲಿ Sri Lanka ಸಮೀಪ ಕೇಂದ್ರೀಕೃತವಾಗಿರುವ ವಾಯುಭಾರ ಕುಸಿತ ಪೂರ್ವದತ್ತ ಚಲಿಸುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಆರಂಭಿಕ ಮುನ್ಸೂಚನೆಗಿಂತ ಮಳೆಯ ಪ್ರಮಾಣ ತ
Feb 231 min read


ಬೆಳ್ತಂಗಡಿ ಬಂದಾರು ಗ್ರಾಮದಲ್ಲಿ ಸ್ಫೋಟ: ಕ್ರಿಕೆಟ್ ಆಡುತ್ತಿದ್ದ 11 ವರ್ಷದ ಬಾಲಕ ಗಾಯ
ಬೆಳ್ತಂಗಡಿ: ತಾಲ್ಲೂಕಿನ ಬಂದಾರು ಗ್ರಾಮದಲ್ಲಿ ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಚೆಂಡಿನಂತಹ ವಸ್ತುವೊಂದು ಸ್ಫೋಟಗೊಂಡು 11 ವರ್ಷದ ಬಾಲಕನೊಬ್ಬ ಗಾಯಗೊಂಡ ಘಟನೆ ಬುಧವಾರ ಸಂಜೆ ನಡೆದಿದೆ. ಬಂದಾರು ಗ್ರಾಮದ ಬಲಿಪೆ ನಿವಾಸಿಗಳಾದ ಮುಕುಂದ ಮತ್ತು ಜಯಶ್ರೀ ದಂಪತಿಯ ಪುತ್ರ ಅಭೀಶ್ (11) ಗಾಯಗೊಂಡ ಬಾಲಕ. ಅಂಗಳದಲ್ಲಿ ಇಬ್ಬರು ಮಕ್ಕಳು ಆಟವಾಡುತ್ತಿದ್ದಾಗ ಚೆಂಡಿನಂತಿದ್ದ ಒಂದು ಅನುಮಾನಾಸ್ಪದ ವಸ್ತು ಸಿಕ್ಕಿದ್ದು, ಅದನ್ನು ತೆಗೆದುಕೊಂಡು ಕ್ರಿಕೆಟ್ ಆಟವಾಡಲು ಬಳಸಿದ್ದರು. ಒಬ್ಬ ಬಾಲಕ ಬೌಲಿಂಗ್ ಮಾಡುತ್ತಿದ್ದ ವೇಳೆ ಅಭೀಶ್ ಬ್ಯಾಟ್ನಿಂದ ಬಾರಿಸಿದ ಕ್ಷಣದಲ್ಲಿ ಆ ವಸ್ತು ಸ್ಫೋಟಗೊಂಡಿದೆ
Feb 201 min read


ಐರ್ಲೆಂಡ್ನಲ್ಲಿ ಕಡಬದ ಯುವಕ ಅನುಮಾನಾಸ್ಪದ ಸಾವು; ಆತ್ಮಹತ್ಯೆ ಶಂಕೆ!
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಸಾಂಜೋ ಸುನಿಲ್ (31) ಅವರು ಐರ್ಲೆಂಡ್ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. Dublin ನಗರದ ಫಿಂಗ್ಲಾಸ್ ಪ್ರದೇಶದ ನಿವಾಸದಲ್ಲಿ ವಾಸವಾಗಿದ್ದ ಅವರು ಬುಧವಾರ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
Feb 191 min read


ಕಡಬ ಗುಂಡೇಟು ಪ್ರಕರಣಕ್ಕೆ ಹೊಸ ತಿರುವು - ವೈದ್ಯಕೀಯ ವರದಿ ಅಚ್ಚರಿ ಮಾಹಿತಿ ಬಹಿರಂಗ
ದಕ್ಷಿಣ ಕನ್ನಡ ಜಿಲ್ಲೆಯ ರಾಮಕುಂಜ (ಕಡಬ ತಾಲೂಕು)ದಲ್ಲಿ ಜನವರಿ 24ರಂದು ನಡೆದ 17 ವರ್ಷದ ಬಾಲಕ ಮೋಕ್ಷ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವೈದ್ಯಕೀಯ ಮಾಹಿತಿ ಹೊರಬಿದ್ದಿದೆ. ಆರಂಭಿಕವಾಗಿ ಮೋಕ್ಷ್ ತನ್ನ ತಂದೆಗೆ ಚಾಕುವಿನಿಂದ ಇರಿದು ಬಳಿಕ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬಂದ ವೈದ್ಯಕೀಯ ಪರೀಕ್ಷಾ ವರದಿ ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ. ತಂದೆ ವಸಂತ ಅಮೀನ್ ಅವರ ಹೊಟ್ಟೆ ಭಾಗಕ್ಕೆ ತಗುಲಿರುವುದು ಚಾಕುವಿನ ಗಾಯವಲ್ಲ, ಬದಲಾಗಿ ಬಂದೂಕಿನ ಗುಂಡೇಟು ಎಂದು ದೃಢಪಟ್ಟಿದೆ. ಇದರಿಂದ ಪ್ರಕರಣದ ದಿಕ್ಕೇ ಬದಲಾಗಿದೆ. ಏನಾಗಿದೆ ಘ
Feb 181 min read


ಕಡಬದಲ್ಲಿ ಕಂದಾಯ ನಿರೀಕ್ಷಕ ಲಂಚ ಸ್ವೀಕರಿಸುತ್ತಿದ್ದಾಗ ಬಯಲು – 10 ಸೆಂಟ್ಸ್ ಕನ್ವರ್ಷನ್ಗೆ 1000 ರೂ. ಬೇಡಿಕೆ!
ಕಡಬ, ಫೆ.17: ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಸಾರ್ವಜನಿಕರು ಹೈರಾಣಾಗುತ್ತಿರುವ ನಡುವೆಯೇ, ಕಡಬ ತಾಲೂಕಿನ ಕಂದಾಯ ನಿರೀಕ್ಷಕರೊಬ್ಬರು ಲಂಚ ಸ್ವೀಕರಿಸುತ್ತಿರುವ ಆರೋಪ ಬೆಳಕಿಗೆ ಬಂದಿದೆ. ತಾಲೂಕಿನ 10 ಸೆಂಟ್ಸ್ ಭೂಮಿಯ ಕನ್ವರ್ಷನ್ (ಭೂ ಪರಿವರ್ತನೆ) ಪತ್ರಕ್ಕೆ ಸಹಿ ಹಾಕಲು ಸಂಬಂಧಪಟ್ಟ ಕಂದಾಯ ನಿರೀಕ್ಷಕ ಪೃಥ್ವಿ ಎಂಬ ಅಧಿಕಾರಿ ಪ್ರತಿ ಸೆಂಟ್ಸ್ಗೆ ₹100ರಂತೆ ಲಂಚದ ಬೇಡಿಕೆ ಇಟ್ಟಿದ್ದಾರೆಯೆಂದು ಆರೋಪಿಸಲಾಗಿದೆ. ಒಟ್ಟು 10 ಸೆಂಟ್ಸ್ ಭೂಮಿಗೆ ₹1000 ಲಂಚ ಕೇಳಲಾಗಿದ್ದು, ಫೆಬ್ರವರಿ 4, 2026ರಂದು ಕಚೇರಿಯಲ್ಲೇ ಹಣ ಸ್ವೀಕರಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿರುವುದಾಗಿ
Feb 171 min read


ಕೆಲಂಬೀರಿ ಶ್ರೀ ಬ್ರಹ್ಮಬೈದೇರುಗಳ ನೇಮೋತ್ಸವದ ಅಂಗವಾಗಿ ಕ್ರೀಡಾಕೂಟ
ಕಾಣಿಯೂರು, ಫೆ.15: ಕೆಲಂಬೀರಿ ಶ್ರೀ ಬ್ರಹ್ಮಬೈದೇರುಗಳ ನೇಮೋತ್ಸವದ ಅಂಗವಾಗಿ ನಡೆದ ಕ್ರೀಡಾಕೂಟವು ಭಕ್ತಿ ಮತ್ತು ಉತ್ಸಾಹದ ನಡುವೆ ಸಡಗರದಿಂದ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳಂದೂರು ಅಶ್ವತ್ಥ ವಿವಾಹ ಮಹೋತ್ಸವ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಮುಂಡಾಳ ಅವರು, “ಆಡಂಬರದ ಭಕ್ತಿಗಿಂತ ಪರಿಶುದ್ಧವಾದ ಭಕ್ತಿಯೇ ಶ್ರೇಷ್ಠ. ದೇವರಿಗೆ ಮಾಡುವ ವೈಭವಕ್ಕಿಂತ ಮನಸ್ಸಿನ ನಿಷ್ಕಲ್ಮಶ ಭಕ್ತಿ ಮತ್ತು ಶ್ರದ್ದೆಯೇ ಮುಖ್ಯ” ಎಂದು ತಿಳಿಸಿದರು. ನಿರಂತರ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ವೃದ್ಧಿ ಸಾಧ್ಯವಾಗುತ್ತದೆ. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಹ
Feb 161 min read


ಪುತ್ತೂರು: ಮೋರಿಗೆ ಡಿಕ್ಕಿಯಾಗಿ ಹೊತ್ತಿ ಉರಿದ ಕಾರು; ಯುವಕ-ಯುವತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು
ಪುತ್ತೂರು: ರಾಷ್ಟ್ರೀಯ ಹೆದ್ದಾರಿ 75ರ ನೀರಕಟ್ಟೆ ಸಮೀಪದ ಕಾಂಚನ ಕ್ರಾಸ್ ಬಳಿ ಶುಕ್ರವಾರ ಭೀಕರ ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿದ ಕಾರು ಮೋರಿಗೆ ಡಿಕ್ಕಿಯಾಗಿ ಬೆಂಕಿಗಾಹುತಿಯಾಗಿದೆ. ಕಾರಿನಲ್ಲಿದ್ದ ಯುವಕ ಮತ್ತು ಯುವತಿ ಸಮಯಪ್ರಜ್ಞೆ ಮೆರೆದು ತಕ್ಷಣ ಹೊರಬಂದಿದ್ದರಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಹಾಸನದಿಂದ ಉಪ್ಪಿನಂಗಡಿ ಕಡೆಗೆ ಸಂಚರಿಸುತ್ತಿದ್ದ ಈ ಕಾರು, ಹೆದ್ದಾರಿ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನ ಮೋರಿಗೆ ವೇಗವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಇಂಜಿನ್ ಭಾಗದಲ್ಲಿ ಕಿಡಿ ಕಾಣಿಸಿಕೊಂಡು ಕ್ಷಣಾರ್
Jan 311 min read


ಕೋಳಿ ಅಂಕಕ್ಕೆ ಪೊಲೀಸರ ಬ್ರೇಕ್: ಸಂಪ್ರದಾಯ ಉಳಿಸಲು ಫೆ.1ರಂದು ಪುತ್ತೂರಿನಲ್ಲಿ ಬೃಹತ್ ಸಮಾಲೋಚನಾ ಸಭೆ
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂಜಿನ ನೆಪವೊಡ್ಡಿ ಪೊಲೀಸರು ಸಾಂಪ್ರದಾಯಿಕ ಕೋಳಿ ಅಂಕಗಳಿಗೆ ತಡೆ ನೀಡುತ್ತಿರುವುದನ್ನು ವಿರೋಧಿಸಿ ಈಗ ಹೋರಾಟದ ಕಿಚ್ಚು ಹತ್ತಿಕೊಂಡಿದೆ. ಕರಾವಳಿಯ ಈ ಪ್ರಾಚೀನ ಸಂಪ್ರದಾಯವನ್ನು ಉಳಿಸುವ ನಿಟ್ಟಿನಲ್ಲಿ 'ದಕ್ಷಿಣ ಕನ್ನಡ ಸಾಂಪ್ರದಾಯಿಕ ಆಚರಣಾ ಹಿತರಕ್ಷಣಾ ವೇದಿಕೆ'ಯು ಫೆಬ್ರವರಿ 1ರಂದು ಪುತ್ತೂರಿನ ಕೊಟೇಚಾ ಹಾಲ್ನಲ್ಲಿ ಬೃಹತ್ ಸಮಾಲೋಚನಾ ಸಭೆಯನ್ನು ಆಯೋಜಿಸಿದೆ. ಈ ಸಭೆಯಲ್ಲಿ ಕೋಳಿ ಅಂಕದ ಅಭಿಮಾನಿಗಳು, ದೈವಾರಾಧಕರು ಹಾಗೂ ಮುಖಂಡರು ಭಾಗವಹಿಸಿ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲಿದ್ದಾರೆ. ಕರಾವಳಿಯ ಧಾರ್ಮಿಕ ಚೌಕಟ್ಟಿನಲ್ಲಿ ಕೋಳಿ ಅಂಕಕ
Jan 311 min read


ಅರಂತೋಡು–ಎಲಿಮಲೆ ಸಂಪರ್ಕ ರಸ್ತೆಯ ದುರವಸ್ಥೆ-ಮರ್ಕಂಜ ದಾಟುವಲ್ಲಿ ವಾಹನ ಸವಾರರಿಗೆ ಭಾರಿ ಸಂಕಷ್ಟ
ಸುಬ್ರಹ್ಮಣ್ಯ ಹಾಗೂ ಮಡಿಕೇರಿಯನ್ನು ಸಂಪರ್ಕಿಸುವ ಪ್ರಮುಖ ಮಾರ್ಗಗಳಲ್ಲಿ ಒಂದಾದ ಅರಂತೋಡು–ಎಲಿಮಲೆ ರಸ್ತೆ ನಿತ್ಯ ಅನೇಕ ವಾಹನಗಳ ಸಂಚಾರಕ್ಕೆ ಸಾಕ್ಷಿಯಾಗುತ್ತಿದೆ. ಆದರೆ ಈ ರಸ್ತೆಯ ಮಾರ್ಕಂಜ ವ್ಯಾಪ್ತಿಯಲ್ಲಿ ಮಾತ್ರ ರಸ್ತೆ ಸಂಪೂರ್ಣ ಹದಗೆಟ್ಟು, ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ. ಒಂದೆಡೆ ಗುಂಡಿಗಳಿಂದ ತುಂಬಿದ ರಸ್ತೆ, ಮತ್ತೊಂದೆಡೆ ಮಣ್ಣು ಮತ್ತು ಜಲ್ಲಿಯು ರಸ್ತೆಮೇಲೆ ಹರಡಿಕೊಂಡಿರುವುದರಿಂದ ದ್ವಿಚಕ್ರ ವಾಹನ ಸವಾರರು, ಕಾರುಗಳು ಹಾಗೂ ಬಸ್ಗಳು ಸಂಚರಿಸುವುದು ಅತಿ ಕಷ್ಟಕರವಾಗಿದೆ. ವಿಶೇಷವಾಗಿ ಮಳೆಯಾದ ಸಂದರ್ಭಗಳಲ್ಲಿ ರಸ್ತೆ ಇನ್ನಷ್ಟು ಅಪಾಯಕಾರಿಯಾಗಿ ಮಾರ್ಪಡುತ್ತಿದ್ದ
Jan 291 min read


ಕೇರಳದಲ್ಲಿ ಭೀಕರ ಕಾರು ಅಪಘಾತ: ಸುರತ್ಕಲ್ ಮೂಲದ ಯುವಕ ಸಾವು, ನಾಲ್ವರಿಗೆ ಗಾಯ
ಮಂಗಳೂರು: ಕೇರಳದ ಕೊಟ್ಟಾಯಂನಲ್ಲಿ ಬುಧವಾರ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮಂಗಳೂರಿನ ಸುರತ್ಕಲ್ ಸಮೀಪದ ಕಾನಾ ನಿವಾಸಿ ಶಾನವಾಜ್ ಅಲಿಯಾಸ್ ಶಮೀಮ್ (26) ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಲತಃ ಮುಲ್ಕಿ ತಾಲ್ಲೂಕಿನ ಅಂಗರಗುಡ್ಡೆ ನಿವಾಸಿಯಾಗಿದ್ದ ಶಮೀಮ್, ಪ್ರಸ್ತುತ ಕಾನಾದ ಚಿರಾಗ್ ಫ್ಲಾಟ್ಸ್ನಲ್ಲಿ ವಾಸವಿದ್ದರು. ಈ ಘಟನೆಯಲ್ಲಿ ಕಾರಿನಲ್ಲಿದ್ದ ಇತರ ನಾಲ್ವರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಮೃತ ಶಮೀಮ್ ಮತ್ತು ಅವರ ಸ್ನೇಹಿತರು ಕೊಟ್ಟಾಯಂನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದಕ್ಕೆ ಬೌನ್ಸರ್ಗಳಾಗಿ ತೆರಳಿದ್ದರು. ಬುಧವಾರ ಬೆಳಿಗ್
Jan 281 min read


ಬಾಲಕ ಸುಮಂತ್ ಸಾವು ಪ್ರಕರಣ: ಕೂಲಂಕುಷ ತನಿಖೆಗೆ ಗೃಹ ಸಚಿವರಿಗೆ ಶಾಸಕ ಹರೀಶ್ ಪೂಂಜ ಆಗ್ರಹ
ಬೆಳ್ತಂಗಡಿ: ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಸುಮಂತ್ ಎಂಬ ಬಾಲಕನ ಅನುಮಾನಾಸ್ಪದ ಸಾವಿನ ಪ್ರಕರಣವು ತಾಲ್ಲೂಕಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಶಾಸಕ ಹರೀಶ್ ಪೂಂಜ ಅವರು ಒತ್ತಾಯಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಭೇಟಿಯಾದ ಶಾಸಕರು, ಪ್ರಕರಣದ ಸತ್ಯಾಸತ್ಯತೆಯನ್ನು ಶೀಘ್ರವಾಗಿ ಹೊರತರುವಂತೆ ಅಧಿಕೃತವಾಗಿ ಮನವಿ ಸಲ್ಲಿಸಿದರು. ಬಾಲಕ ಸುಮಂತ್ ಸಾವಿನ ಹಿಂದೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದು, ಇದು ಕೇವಲ ಆಕಸ್ಮಿಕವೇ ಅಥವಾ ಬೇರೆನಾದರೂ ಸಂಚು ಇದೆಯೇ ಎಂಬ ಆತಂಕ ಕುಟುಂಬಸ್ಥರನ್ನು ಕಾಡುತ್ತಿ
Jan 281 min read


'ಇ-ಸ್ವತ್ತು 2.0' ತಾಂತ್ರಿಕ ದೋಷ: ಸದನದಲ್ಲಿ ಸರ್ಕಾರದ ವಿರುದ್ಧ ಕಿಶೋರ್ ಕುಮಾರ್ ಪುತ್ತೂರು ಆಕ್ರೋಶ
ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನ ಪರಿಷತ್ ಅಧಿವೇಶನದ ಶೂನ್ಯ ವೇಳೆಯಲ್ಲಿ, ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ರಾಜ್ಯದ ಗ್ರಾಮೀಣ ಭಾಗದ ಜನರು ಎದುರಿಸುತ್ತಿರುವ 'ಇ-ಸ್ವತ್ತು 2.0' ತಂತ್ರಾಂಶದ ವೈಫಲ್ಯದ ಬಗ್ಗೆ ಸರ್ಕಾರದ ಗಮನ ಸೆಳೆದರು. ಉದಯವಾಣಿ ದಿನಪತ್ರಿಕೆಯ ವರದಿಯನ್ನು ಉಲ್ಲೇಖಿಸಿದ ಅವರು, ಗ್ರಾಮೀಣ ನಾಗರಿಕರಿಗೆ ಆಸ್ತಿ ದಾಖಲೆಗಳನ್ನು ಸುಲಭವಾಗಿ ಒದಗಿಸಲು ಡಿಸೆಂಬರ್ 1ರಿಂದ ಜಾರಿಗೆ ತಂದ ಈ ಹೊಸ ತಂತ್ರಾಂಶವು, ಆರಂಭವಾದ ಒಂದೇ ತಿಂಗಳೊಳಗೆ ತಾಂತ್ರಿಕ ದೋಷಗಳಿಂದಾಗಿ ಸಂಪೂರ್ಣವಾಗಿ ಕೈಕೊಟ್ಟಿದೆ ಎಂದು ದೂರಿದರು. ತಂತ್ರಾಂಶದ ವಿಳಂಬದಿಂದಾಗಿ ಪ್ರಸ್ತುತ 36,000ಕ್ಕೂ ಹೆ
Jan 281 min read


ಕೆಲಿಂಜ ಸರ್ಕಾರಿ ಶಾಲೆಯಲ್ಲಿ ಗಣರಾಜ್ಯೋತ್ಸವದ ಸಡಗರ: ರಾಷ್ಟ್ರಧ್ವಜಕ್ಕೆ ಗೌರವ ನಮನ
ದ. ಕ.ಪಂ. ಹಿ. ಪ್ರಾ. ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ಇಂದು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಶಾಲಾ ಆವರಣದಲ್ಲಿ ನಡೆದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಅಧ್ಯಕ್ಷರಾದ ಮೋಹಿತ್ ಶೆಟ್ಟಿ ಅವರು ಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳಿಗೆ ಸಂವಿಧಾನದ ಮಹತ್ವ ಹಾಗೂ ರಾಷ್ಟ್ರಪ್ರೇಮದ ಬಗ್ಗೆ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಉಪಾಧ್ಯಕ್ಷೆ ಜಯಂತಿ, ಶಾಲಾ ಮುಖ್ಯೋಪಾಧ್ಯಾಯರು, ಕ್ಲಸ್ಟರ್ ಸಿಆರ್ಪಿ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಅಲ್ಲದೆ ಪಂಚಾಯತ್ ಸದಸ್ಯರಾದ ಪ್ರಸಾದ್ ಮತ್ತು ಸಂದೀಪ್, ಎಸ್
Jan 261 min read


ಬೆಳ್ತಂಗಡಿ: ವಿದ್ಯುತ್ ಪಂಪ್ ಆನ್ ಮಾಡುವಾಗ ಶಾಕ್ ತಗುಲಿ ವ್ಯಕ್ತಿ ದುರ್ಮರಣ
ಬೆಳ್ತಂಗಡಿ: ತಾಲೂಕಿನ ಗುರಿಪಳ್ಳದಲ್ಲಿ ಗಣರಾಜ್ಯೋತ್ಸವದ ದಿನವಾದ ಇಂದು (ಜನೆವರಿ 26) ಬೆಳಿಗ್ಗೆ ಸಂಭವಿಸಿದ ವಿದ್ಯುತ್ ಅವಘಡದಲ್ಲಿ 48 ವರ್ಷದ ವ್ಯಕ್ತಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಗುರಿಪಳ್ಳದ ಕಡಿಯಾರು ಗ್ರಾಮದ ನಿವಾಸಿ ಶಿವಪ್ರಸಾದ್ ಆದಪ್ಪ ಎಂಬವರೇ ಮೃತಪಟ್ಟ ದುರ್ದೈವಿ. ಮನೆಯ ಬಳಿಯ ನೀರಿನ ಪಂಪ್ ಆನ್ ಮಾಡಲು ಹೋದಾಗ ಈ ಘೋರ ದುರಂತ ಸಂಭವಿಸಿದೆ. ಕುಟುಂಬದ ಮೂಲಗಳ ಪ್ರಕಾರ, ಶಿವಪ್ರಸಾದ್ ಅವರು ಎಂದಿನಂತೆ ತಮ್ಮ ಬೆಳಗಿನ ದಿನಚರಿಯ ಕೆಲಸಕ್ಕೆಂದು ಹೊರಬಂದಿದ್ದರು. ಈ ವೇಳೆ ಪಂಪ್ ಸೆಟ್ ಸ್ವಿಚ್ ಹಾಕುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಗಂಭೀರವಾಗಿ ಗಾಯಗೊಂಡು ನೆಲಕ್ಕೆ ಉರುಳಿ ಬಿ
Jan 261 min read


ಪುತ್ತೂರು ಕೋಟಿ-ಚೆನ್ನಯ್ಯ ಜೋಡುಕೆರೆ ಕಂಬಳ: ಮದ್ಯ ಮಾರಾಟ ನಿಷೇದ
ಪುತ್ತೂರಿನ ಐತಿಹಾಸಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವಮಾರು ಗದ್ದೆಯಲ್ಲಿ 33ನೇ ವರ್ಷದ ‘ಕೋಟಿ-ಚೆನ್ನಯ್ಯ’ ಜೋಡುಕೆರೆ ಕಂಬಳವು ಜನವರಿ 24ರಿಂದ ಅದ್ದೂರಿಯಾಗಿ ಪ್ರಾರಂಭಗೊಳ್ಳಲಿದೆ. ಜನವರಿ 25ರವರೆಗೆ ನಡೆಯಲಿರುವ ಈ ಜಾನಪದ ಕ್ರೀಡಾಕೂಟಕ್ಕೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಕಂಬಳಾಭಿಮಾನಿಗಳು ಹಾಗೂ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದೆ. ಈ ಬೃಹತ್ ಜನಸಂದಣಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪುತ್ತೂರು ನಗರವು ಮತೀಯವಾಗಿ ಅತೀ ಸೂಕ್ಷ್ಮ ಪ್ರದೇಶವೆಂದು...
Jan 231 min read


ಪುತ್ತೂರು ಕೋರ್ಟ್ನಲ್ಲಿ ಹೈಡ್ರಾಮ: ನ್ಯಾಯಾಧೀಶರ ಮುಂದೆಯೇ ವಿಷ ಕುಡಿದು ವ್ಯಕ್ತಿ ಆತ್ಮಹತ್ಯೆಗೆ ಯತ್ನ!
ಪುತ್ತೂರು: ಇಲ್ಲಿನ ನ್ಯಾಯಾಲಯದ ಆವರಣದಲ್ಲಿ ವ್ಯಕ್ತಿಯೊಬ್ಬ ನ್ಯಾಯಾಧೀಶರ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಆತಂಕಕಾರಿ ಘಟನೆ ನಡೆದಿದೆ. ಕಾವು ನಿವಾಸಿ ರವಿ (35) ಎಂಬಾತನೇ ಈ ಕೃತ್ಯ ಎಸಗಿದವನು. ತಕ್ಷಣವೇ ಆತನನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ. ಆತ್ಮಹತ್ಯೆ ಯತ್ನಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಘಟನೆಯಿಂದ ಕೋರ್ಟ್ ಸಂಕೀರ್ಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
Jan 221 min read
Archive
bottom of page



