ಗ್ಯಾಸ್ ಪಂಪ್‌ನಲ್ಲಿ ಆಟೋ ಚಾಲಕನ ಅಟ್ಟಹಾಸ: ಸಿಬ್ಬಂದಿ ಮೇಲೆ ಹಲ್ಲೆ, ದಾಂಧಲೆ!
- Mar 21
- 1 min read

ಬಂಟ್ವಾಳದ ಮೆಲ್ಕಾರ್ ಬಳಿಯ ಗ್ಯಾಸ್ ಪಂಪ್ ಏಜೆನ್ಸಿಯಲ್ಲಿ ಶುಕ್ರವಾರ ಸಂಜೆ ಅಫ್ರೀಝ್ ಎಂಬಾತ ಸಿಬ್ಬಂದಿ ಅಶ್ವಿನ್ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಮ್ಯಾನೇಜರ್ ಕುನಲ್ ಭುಕ್ಕಿಯಾ ನೀಡಿದ ದೂರಿನಂತೆ, ಆರೋಪಿಯು ಕಚೇರಿಯ ಸೊತ್ತುಗಳನ್ನು ಧ್ವಂಸಗೊಳಿಸಿದ್ದಾನೆ. ಈ ಕೃತ್ಯದಿಂದ ಸುಮಾರು ₹48,000 ಮೌಲ್ಯದ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ.

ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಕಲಂ ಅಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಅಫ್ರೀಝ್ ವಿರುದ್ಧ ತನಿಖೆ ಆರಂಭಿಸಿದ್ದು, ಆಟೋರಿಕ್ಷಾ ಮೂಲಕ ಪಂಪ್ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸಿದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.







Comments