;
top of page

ಕಡಬದಲ್ಲಿ ಕಂದಾಯ ನಿರೀಕ್ಷಕ ಲಂಚ ಸ್ವೀಕರಿಸುತ್ತಿದ್ದಾಗ ಬಯಲು – 10 ಸೆಂಟ್ಸ್ ಕನ್ವರ್ಷನ್‌ಗೆ 1000 ರೂ. ಬೇಡಿಕೆ!

  • 20 hours ago
  • 1 min read

ಕಡಬ, ಫೆ.17: ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಸಾರ್ವಜನಿಕರು ಹೈರಾಣಾಗುತ್ತಿರುವ ನಡುವೆಯೇ, ಕಡಬ ತಾಲೂಕಿನ ಕಂದಾಯ ನಿರೀಕ್ಷಕರೊಬ್ಬರು ಲಂಚ ಸ್ವೀಕರಿಸುತ್ತಿರುವ ಆರೋಪ ಬೆಳಕಿಗೆ ಬಂದಿದೆ.

ತಾಲೂಕಿನ 10 ಸೆಂಟ್ಸ್ ಭೂಮಿಯ ಕನ್ವರ್ಷನ್ (ಭೂ ಪರಿವರ್ತನೆ) ಪತ್ರಕ್ಕೆ ಸಹಿ ಹಾಕಲು ಸಂಬಂಧಪಟ್ಟ ಕಂದಾಯ ನಿರೀಕ್ಷಕ ಪೃಥ್ವಿ ಎಂಬ ಅಧಿಕಾರಿ ಪ್ರತಿ ಸೆಂಟ್ಸ್‌ಗೆ ₹100ರಂತೆ ಲಂಚದ ಬೇಡಿಕೆ ಇಟ್ಟಿದ್ದಾರೆಯೆಂದು ಆರೋಪಿಸಲಾಗಿದೆ. ಒಟ್ಟು 10 ಸೆಂಟ್ಸ್ ಭೂಮಿಗೆ ₹1000 ಲಂಚ ಕೇಳಲಾಗಿದ್ದು, ಫೆಬ್ರವರಿ 4, 2026ರಂದು ಕಚೇರಿಯಲ್ಲೇ ಹಣ ಸ್ವೀಕರಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿರುವುದಾಗಿ ತಿಳಿದುಬಂದಿದೆ.

ಸಾಮಾನ್ಯ ನಾಗರಿಕರು ತಮ್ಮ ಕಾನೂನುಬದ್ಧ ಹಕ್ಕುಗಳನ್ನು ಪಡೆಯಲು ದಿನಗಟ್ಟಲೆ ಕಚೇರಿಗಳ ಬಾಗಿಲಲ್ಲಿ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದಾಖಲೆಗಳಿಗೆ ಅನಾವಶ್ಯಕ ವಿಳಂಬ, ನಿರ್ಲಕ್ಷ್ಯ ಧೋರಣೆ, ಕೊನೆಯಲ್ಲಿ ‘ಪರಿಹಾರ’ದ ಹೆಸರಿನಲ್ಲಿ ಹಣದ ಬೇಡಿಕೆ — ಇದು ಕೆಲವು ಅಧಿಕಾರಿಗಳ ರೂಢಿಯಾದ ಕಾರ್ಯವೈಖರಿ ಎನ್ನುವುದು ಸಾರ್ವಜನಿಕರ ಆರೋಪ.

ತೆರಿಗೆ ಪಾವತಿಸುವ ಜನರ ಬೆವರಿನ ಹಣವೇ ಸಂಬಳವಾಗಿ ಪಡೆಯುವ ಅಧಿಕಾರಿಗಳು, ಅದೇ ಜನರಿಂದ ಲಂಚ ವಸೂಲಿ ಮಾಡುವುದು ಎಷ್ಟು ನ್ಯಾಯ? ಎಂಬ ಪ್ರಶ್ನೆ ಈಗ ಜೋರಾಗಿದೆ.

ಪ್ರಾಮಾಣಿಕವಾಗಿ ತೆರಿಗೆ ಪಾವತಿಸುವ ಸಾಮಾನ್ಯ ಜನರ ಶ್ರಮ ಇಂತಹ ಭ್ರಷ್ಟಾಚಾರದ ಘಟನೆಗಳಿಂದ ವ್ಯರ್ಥವಾಗುತ್ತಿದೆ.


ಈ ಪ್ರಕರಣ ಸಂಬಂಧ ಮೇಲಧಿಕಾರಿಗಳು ತನಿಖೆ ಕೈಗೊಳ್ಳುವ ಸಾಧ್ಯತೆ ಇದೆ. ವಿಡಿಯೋ ಆಧಾರವಾಗಿ ಸೂಕ್ತ ಕ್ರಮ ಜರುಗಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page