top of page
News Articles
Sathyapatha News Plus


11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆಯತ್ನ ಪ್ರಕರಣದ ಆರೋಪಿ ಮಂಗಳೂರು ಸಿಸಿಬಿ ವಶಕ್ಕೆ
೨೦೧೫ರಲ್ಲಿ ಮಂಗಳೂರಿನ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ, ಕಳೆದ ೧೧ ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂකಿನ ಮಲ್ಲೇನಹಳ್ಳಿ ನಿವಾಸಿ ಚುಂಕಿ ಆಕಾಶಭವನ ಅಲಿಯಾಸ್ ಸಂತೋಷ್ ಎಸ್ (೩೪) ಬಂಧಿತ ಆರೋಪಿಯಾಗಿದ್ದಾನೆ. ೨೦೧೫ರಲ್ಲಿ ಆಕಾಶಭವನದಲ್ಲಿ ನಡೆದ ಮದುವೆಯ ಮದರಂಗಿ ಶಾಸ್ತ್ರದ ವೇಳೆ ಅಶೋಕ ಕುಮಾರ ಕೊಟ್ಟಾರಿ ಎಂಬವರ ಮೇಲೆ ಆರೋಪಿ ಸಂತೋಷ್ ತನ್ನ ಸಹಚರರೊಂದಿಗೆ ಸೇರಿ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಈ ಭೀಕರ
Jul 311 min read


ಮಾದಕ ದ್ರವ್ಯ ವಿರೋಧಿ ಅಭಿಯಾನ ನಡೆಸುತ್ತಿದ್ದವರೇ ಡ್ರಗ್ಸ್ ದಂಧೆಯಲ್ಲಿ..! ಮೂವರು ಶಿಕ್ಷಕಿಯರು ಸೇರಿ ಐವರ ಬಂಧನ
ಕೋಝಿಕ್ಕೋಡ್ (ಕೇರಳ): ಕೇರಳದ ಕೋಝಿಕ್ಕೋಡ್ ಜಿಲ್ಲೆಯ ವಡಕರ ಪ್ರದೇಶದಲ್ಲಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಮೂವರು ಶಿಕ್ಷಕಿಯರು ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಪ್ರಕರಣವು ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿರುವವರೇ ಮಾದಕ ದ್ರವ್ಯ ಜಾಲದಲ್ಲಿ ಭಾಗಿಯಾಗಿರುವ ಆರೋಪ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಪೊಲೀಸರ ಮಾಹಿತಿ ಪ್ರಕಾರ, ಬಂಧಿತ ಶಿಕ್ಷಕಿಯರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಿಂಗಳಿಗೆ ಸುಮಾರು ₹12,000 ರಿಂದ ₹13,000 ವೇತನ ಪಡೆಯುತ್ತಿದ್ದರು. ಆದರೆ, ಅವರ ಬ್ಯಾಂಕ್
Jul 301 min read


12 ವರ್ಷಗಳ ಹಿಂದಿನ ಕೊಲೆ ಪ್ರಕರಣಕ್ಕೆ ಅಂತಿಮ ತೀರ್ಪು: ಮೂವರು ಸಹೋದರರು ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ
ಮಂಗಳೂರು: 12 ವರ್ಷಗಳ ಹಿಂದೆ ನಡೆದ ಗಂಗಾಧರ ಪಾಂಗಾಳ ಹತ್ಯೆ ಪ್ರಕರಣದಲ್ಲಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಮೂವರು ಸಹೋದರರು ಸೇರಿ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. 2014ರಲ್ಲಿ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯ ಮೀನಕಳಿಯ ಗಣೇಶ್ ಶಿಪ್ಪಿಂಗ್ ಗೋಡೌನ್ ಸಮೀಪ ಗಂಗಾಧರ ಪಾಂಗಾಳ ಅವರನ್ನು ಪೂರ್ವ ದ್ವೇಷದ ಹಿನ್ನೆಲೆಯಲ್ಲಿ ಸಂಚು ರೂಪಿಸಿ ಹತ್ಯೆ ಮಾಡಲಾಗಿತ್ತು. ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿ, ಬೈಕಂಪಾಡಿ ಮೊಗವೀರ ಮಹಾಸಭೆಯ ಸದಸ್ಯತ್ವದಿಂದ ಅಮಾನತುಗೊಂಡಿದ್ದಕ್ಕೆ ಗಂಗಾಧರ ಪಾಂಗಾಳ ಅವರೇ ಕಾರಣ ಎಂದು ನಂಬಿ ದ್ವೇಷ
Jul 281 min read


ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಪೂರ್ಣ ವಿಮೆ ಪರಿಹಾರ ಸಿಗುವುದಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತಕ್ಕೊಳಗಾಗಿ ಮೃತಪಟ್ಟ ಚಾಲಕ ಅಥವಾ ಸವಾರನ ಕುಟುಂಬಕ್ಕೆ ಪೂರ್ಣ ಪ್ರಮಾಣದ ವಿಮಾ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಬೆಂಗಳೂರಿನ ಬೈಕ್ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೋಟಾರು ಅಪಘಾತ ಪರಿಹಾರ ನ್ಯಾಯಾಧಿಕರಣ (MACT) ಮೃತ ಶ್ರೀನಿವಾಸ ಹರಿಕಂತ್ರ ಅವರ ಕುಟುಂಬಕ್ಕೆ ₹3.44 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ವಿಮಾ ಕಂಪನಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಬಿ. ಗೀತಾ ಅವರಿದ್ದ ಏಕಸದಸ್ಯ ಪೀಠ, ಅಪಘಾತಕ್ಕ
Jul 251 min read


ಲಾಲ್ಬಾಗ್ ಸಿಗ್ನಲ್ ಬಳಿ ಬೈಕ್ ಸವಾರನ ಮೇಲೆ ಮಚ್ಚಿನಿಂದ ಭೀಕರ ಹಲ್ಲೆ: ಗಂಭೀರ ಗಾಯ
ಮಂಗಳೂರು: ನಗರದ ಪ್ರಮುಖ ವಲಯವಾದ ಲಾಲ್ಬಾಗ್ ಸಿಗ್ನಲ್ ಸಮೀಪ, ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರ ಮೇಲೆ ದುಷ್ಕರ್ಮಿಯೊಬ್ಬ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ ಗಾಯಗೊಂಡ ಯುವಕನನ್ನು ಪ್ರಾಥಮಿಕವಾಗಿ ವಿಕ್ಕಿ ಬಪ್ಪಾಲ್ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ ಸುಮಾರು 1:45 ರ ಸುಮಾರಿಗೆ ಅವರು ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಈ ಕೃತ್ಯ ನಡೆದಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಗಾಯಾಳುವನ್ನು ಹಿಂಬಾಲಿಸಿಕೊಂಡು ಬಂದ ಏಕಾಂಗಿ ಬೈಕ್ ಸವಾರನೊಬ್ಬ, ಚಲಿಸುತ್ತಿದ್ದಂತೆಯೇ ಅವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಯ
Jul 251 min read


ವಾಟ್ಸಪ್ಗೆ ಮದುವೆ ಆಹ್ವಾನ: APK ಫೈಲ್ ತೆರೆದ ಸರ್ಕಾರಿ ಅಧಿಕಾರಿಯ ₹9.96 ಲಕ್ಷ ಮಾಯ!
ವಾಟ್ಸಪ್ಗೆ ಮದುವೆ ಆಹ್ವಾನ: APK ಫೈಲ್ ತೆರೆದ ಸರ್ಕಾರಿ ಅಧಿಕಾರಿ ₹9.96 ಲಕ್ಷ ಕಳೆದುಕೊಂಡರು ಬೆಂಗಳೂರು, ಜು. 22: ವಾಟ್ಸಪ್ನಲ್ಲಿ ಅಪರಿಚಿತ ಸಂಖ್ಯೆಯಿಂದ ಬಂದ ಮದುವೆ ಆಹ್ವಾನದ ಹೆಸರಿನ APK ಫೈಲ್ ಅನ್ನು ತೆರೆದ ಪರಿಣಾಮ ಅರಣ್ಯ ಇಲಾಖೆಯ ಸರ್ಕಾರಿ ಅಧಿಕಾರಿಯೊಬ್ಬರು ಸೈಬರ್ ವಂಚಕರ ಬಲೆಗೆ ಬಿದ್ದು ಸುಮಾರು ₹9.96 ಲಕ್ಷ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಮಾಹಿತಿಯ ಪ್ರಕಾರ, ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಮೇಶ್ ಬಾಬು ಅವರಿಗೆ ಜುಲೈ 14ರ ಸಂಜೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಪ್ನಲ್ಲಿ ಮದುವೆ ಆಹ್ವಾನದ ಸಂದೇಶ ಬಂದಿದೆ. ಅದು ಸ್ನೇಹಿತ ಅಥವಾ ಪರಿಚಿತರದ್
Jul 221 min read


ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ; ಗರ್ಭಿಣಿಯಾದ ಪ್ರಕರಣದಲ್ಲಿ ಆಟೋ ಚಾಲಕ ಬಂಧನ
ಬೆಳ್ತಂಗಡಿ, ಜು. 21: ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿ ಗರ್ಭಿಣಿಯನ್ನಾಗಿಸಿದ ಆರೋಪದಡಿ ಆಟೋ ರಿಕ್ಷಾ ಚಾಲಕನನ್ನು ಬೆಳ್ತಂಗಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಉಪ್ಪಿನಂಗಡಿ ಮೂಲದ ಶುಭರಾಜ್ (28) ಎಂದು ಗುರುತಿಸಲಾಗಿದೆ. ಆರೋಪಿಯು ಅಪ್ರಾಪ್ತ ವಿದ್ಯಾರ್ಥಿನಿಯೊಂದಿಗೆ ಪರಿಚಯ ಬೆಳೆಸಿ, ಆಕೆಯನ್ನು ಪುಸಲಾಯಿಸಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎನ್ನಲಾಗಿದೆ. ಅಲ್ಲದೆ, ಈ ವಿಷಯವನ್ನು ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದನೆಂಬ ಆರೋಪವೂ ಕೇಳಿಬಂದಿದೆ. ಇತ್ತೀಚೆಗೆ ಬಾಲಕಿಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನ
Jul 211 min read


ಸುಳ್ಯ: ವಿವಾಹಿತೆ ಅನುಮಾನಾಸ್ಪದ ಸಾವು; ಅತ್ತೆ, ಮಾವನ ವಿರುದ್ಧ ಕೊಲೆ ಆರೋಪ
ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದ ಪುತ್ತೂರು ಕೆದಂಬಾಡಿಯ ಫಾತಿಮತ್ ನಿಶಾನ ಎಂಬುವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಜುಲೈ 18ರ ರಾತ್ರಿ ತಾಯಿಗೆ ಕರೆ ಮಾಡಿದ್ದ ನಿಶಾನಾ, ತನಗೆ ಗಂಡನ ಮನೆಯವರು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿರುವುದಾಗಿ ತಿಳಿಸಿದ್ದರು. ಇದೇ ವೇಳೆ ಫೋನ್ ಕಸಿದುಕೊಂಡ ಮಾವ ಅಲವಿ, ಆಕೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರೆಂದು ಆರೋಪಿಸಲಾಗಿದೆ. ಪೋಷಕರು ಸ್ಥಳಕ್ಕೆ ತೆರಳುವಷ್ಟರಲ್ಲಿ ನಿಶಾನಾ ಮೃತಪಟ್ಟಿದ್ದರು. ಕೌಟುಂಬಿಕ ಕಿರುಕುಳ ಹಾಗೂ ಹತ್ಯೆ ಆರೋಪದಡಿ ಮೃತರ ಮಾವ ಅಲವಿ, ಅತ್ತೆ ಆಯಿಷ ಮತ್ತು ನಾದಿನಿ ಫಸೀಲಾ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ (
Jul 211 min read


ಬಿಸಿ ರೋಡ್ನಲ್ಲಿ ಯುವತಿಯ ಭೀಕರ ಕೊಲೆ: ಏಕಪಕ್ಷೀಯ ಪ್ರೀತಿಗೆ ಯುವತಿ ಬಲಿ!!
ಬಂಟ್ವಾಳದ ಬಿಸಿ ರೋಡ್ನ ನೂತನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಗುರುವಾರ ಸಂಜೆ ಭೀಕರ ಘಟನೆಯೊಂದು ನಡೆದಿದೆ. ಬಸ್ಗಾಗಿ ಕಾಯುತ್ತಿದ್ದ ಯುವತಿಯ ಮೇಲೆ ಅಪರಿಚಿತ ವ್ಯಕ್ತಿಯೊಬ್ಬ ಹರಿತವಾದ ಆಯುಧದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ತಕ್ಷಣವೇ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ. ಮೃತ ಯುವತಿಯನ್ನು ಕಕ್ಕೆಪದವು ನಿವಾಸಿ ಲಾವಣ್ಯ ಗೌಡ (21) ಎಂದು ಗುರುತಿಸಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಕೃತ್ಯ ಎಸಗಿದ ಆರೋಪಿಯನ್ನು ಚೇತನ್ ಎಂದು ಗುರುತಿಸಲಾಗಿದ್ದು, ಈತ ಯುವತಿಯ
Jul 161 min read


ಬಂಟ್ವಾಳ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಯುವತಿಯ ಹತ್ಯೆ
ಮಾರಕ ಆಯುಧದಿಂದ ದಾಳಿ; ಆರೋಪಿಯ ಪತ್ತೆಗೆ ಪೊಲೀಸರ ಶೋಧ ಬಂಟ್ವಾಳ: ಬಂಟ್ವಾಳ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಯುವತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ನಡೆದಿದೆ. ಮೃತರನ್ನು ಕಕ್ಯಪದವು ನಿವಾಸಿ ಲಾವಣ್ಯ (ಹೆಸರು ತಿಳಿಸಿದಂತೆ) ಎಂದು ಗುರುತಿಸಲಾಗಿದೆ. ಲಾವಣ್ಯ ಅವರು ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕಕ್ಯಪದವು ಕಡೆಗೆ ತೆರಳಲು ಅವರು ಕೆಎಸ್ಆರ್ಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ತಮ್ಮ ಸಂಬಂಧಿಕರೊಬ್ಬರಿಗೆ ಕರೆ ಮಾಡಿ, ತಮ್ಮ ಪಕ್ಕದಲ್ಲಿ
Jul 161 min read


ಬೆಳ್ತಂಗಡಿಯಲ್ಲಿ ನಕಲಿ ನೋಟು ಜಾಲ ಬಯಲು: ಏಳು ಮಂದಿ ಬಂಧನ
ಬೆಳ್ತಂಗಡಿಯಲ್ಲಿ ನಕಲಿ ನೋಟು ಜಾಲ ಬಯಲು: ಏಳು ಮಂದಿ ಬಂಧನ ದಕ್ಷಿಣ ಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಅಡಿಂಜೆ ಪ್ರದೇಶದಲ್ಲಿ ನಕಲಿ ನೋಟು ತಯಾರಿಸುತ್ತಿದ್ದ ಬೃಹತ್ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯ ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ನಡೆಸಿದ ದಾಳಿಯಲ್ಲಿ ಏಳು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರು ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಮೂಲದವರಾಗಿದ್ದು, ನಿರ್ಜನ ಪ್ರದೇಶದಲ್ಲಿರುವ ಬಾಡಿಗೆ ಮನೆಯಲ್ಲಿ ನಕಲಿ ನೋಟು ತಯಾರಿಕಾ ಚಟುವಟಿಕೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ದಾಳಿಯ ವೇಳೆ ನಕಲಿ ನೋಟು ಮುದ್ರಣಕ್ಕೆ ಬಳಸುತ್ತಿದ್ದ ಅತ್ಯಾಧುನ
Jul 161 min read


ಕೊಡಿಯಾಲಬೈಲು ಜೈಲಿನಲ್ಲಿ ಕೈದಿಗಳ ಬಳಿ ಮೊಬೈಲ್ ಪತ್ತೆ
ಮಂಗಳೂರಿನ ಕೊಡಿಯಾಲಬೈಲು ಜಿಲ್ಲಾ ಕಾರಾಗೃಹದಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳ ಬಳಿ ಅಕ್ರಮವಾಗಿ ಮೊಬೈಲ್ ಫೋನ್ಗಳು ಪತ್ತೆಯಾಗಿದ್ದು, ಜೈಲಿನ ಭದ್ರತೆಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ. ಜುಲೈ 7ರಂದು ರಾತ್ರಿ ಜೈಲಿನ ಅಧೀಕ್ಷಕ ಶರಣ ಬಸಪ್ಪ ಸಿಬಂದಿಯೊಂದಿಗೆ ‘ಎ‘ ಬ್ಲಾಕ್ನಲ್ಲಿ ದಿಢೀರ್ ತಪಾಸಣೆ ನಡೆಸಿದಾಗ, ಕೈದಿಗಳಾದ ಮೊಹಮ್ಮದ್ ಅಜ್ಮಲ್ ಮತ್ತು ಮೊಹಮ್ಮದ್ ಇಕ್ಬಾಲ್ ಬಳಿ ಮೊಬೈಲ್ ಪತ್ತೆಯಾಗಿವೆ. ಜೈಲಿನ ನಿಯಮ ಉಲ್ಲಂಘಿಸಿ ಮೊಬೈಲ್ ಬಳಸುತ್ತಿದ್ದ ಈ ಇಬ್ಬರು ಆರೋಪಿಗಳ ವಿರುದ್ಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಸದ್ಯ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Jul 101 min read


ಕೊಲಂಬೊ ಜೈಲಿನಲ್ಲಿ ಕೈದಿಗಳ ಭೀಕರ ಜಗಳ: 25 ಸಾವು, 100ಕ್ಕೂ ಹೆಚ್ಚು ಜನರಿಗೆ ಗಾಯ
ಶ್ರೀಲಂಕಾದ ಕೊಲಂಬೊದ ನೆಗೊಂಬೊ ಜೈಲಿನಲ್ಲಿ ಕೈದಿಗಳ ಎರಡು ಗುಂಪುಗಳ ನಡುವೆ ಭೀಕರ ಘರ್ಷಣೆ ಸಂಭವಿಸಿದೆ. ಈ ಗಲಾಟೆಯ ತೀವ್ರ ಪರಿಣಾಮವಾಗಿ ಕನಿಷ್ಠ 25 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಕೈದಿಗಳು ತೀವ್ರವಾಗಿ ಗಾಯಗೊಂಡಿದ್ದಾರೆ. ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪರಾಧಿಗಳು ಹಾಗೂ ವಿಚಾರಣಾಧೀನ ಕೈದಿಗಳ ನಡುವೆ ಭಾನುವಾರವೇ ಈ ಗಲಾಟೆ ಆರಂಭವಾಗಿತ್ತು. ಆದರೆ, ಇಷ್ಟೊಂದು ದೊಡ್ಡ ಮಟ್ಟದ ರಕ್ತಸಿಕ್ತ ಘರ್ಷಣೆಗೆ ನಿಖರವಾದ ಕಾರಣ ಏನೆಂಬುದು ಸದ್ಯಕ್ಕೆ ತಿಳಿದುಬಂದಿಲ್ಲ. ಘಟನೆಯ ನಂತರ ಜೈಲಿನ ಮುಖ್ಯ ದ್ವಾರದ ಹೊರಗೆ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಗಾಯಗೊಂಡವರನ್ನು ಪೊಲೀಸ್
Jul 71 min read


ನಿಶ್ಚಿತಾರ್ಥವಾದ ಯುವಕನನ್ನು ಕೋಟೆಯಿಂದ ತಳ್ಳಿ ಕೊಲೆ ಯುವತಿ ಮತ್ತು ಪ್ರಿಯಕರ ಪೊಲೀಸ್ ಕಸ್ಟಡಿಗೆ
ಪುಣೆಯ ಲೋಹಗಢ ಕೋಟೆಯಲ್ಲಿ ನಡೆದಿದ್ದ 26 ವರ್ಷದ ಕೇತನ್ ಅಗರವಾಲ್ ಸಾವಿನ ಪ್ರಕರಣ ಇದೀಗ ಭೀಕರ ಕೊಲೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ. ನಿಶ್ಚಿತಾರ್ಥವಾಗಿದ್ದ ಕೇತನ್ ಅಗರವಾಲ್ರನ್ನು ಅವರ ಭವಿಷ್ಯದ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಸ್ನೇಹಿತ ಚೇತನ್ ಚೌಧರಿ ಸೇರಿ ಕೋಟೆಯಿಂದ ತಳ್ಳಿಹಾಕಿ ಕೊಲೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ, ಪುಣೆ ಮ್ಯಾಜಿಸ್ಟ್ರೇಟ್ ಕೋರ್ಟ್ ಇಬ್ಬರನ್ನೂ ಜೂನ್ 29ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. "ಜಾರಿ ಬಿದ್ದು ಸತ್ತಿದ್ದಾರೆ" ಎಂದು ಹೇಳಿದ್ದ ಸಿಯಾ ಜೂನ್ 18ರ
Jun 241 min read


ಅಪ್ರಾಪ್ತ ಫುಟ್ಬಾಲ್ ಆಟಗಾರ್ತಿ ಮೇಲೆ ಅತ್ಯಾಚಾರ: ಕೋಚ್ ಬಂಧನ
ಫುಟ್ಬಾಲ್ನಲ್ಲಿ ದೊಡ್ಡ ಅವಕಾಶಗಳ ಭರವಸೆ ನೀಡಿ ಅಪ್ರಾಪ್ತ ಆಟಗಾರ್ತಿ ಮೇಲೆ ಮೂರು ವರ್ಷಗಳ ಕಾಲ ಅತ್ಯಾಚಾರ ಎಸಗಿದ ಹಾಗೂ ವಿಡಿಯೋ ಮಾಡಿ ಬ್ಲ್ಯಾಕ್ಮೇಲ್ ಮಾಡಿದ ಆರೋಪದ ಮೇಲೆ ಫುಟ್ಬಾಲ್ ತರಬೇತುದಾರನನ್ನು ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಖಾಸಗಿ ಫುಟ್ಬಾಲ್ ತರಬೇತುದಾರ ಅಭಿಜಿತ್ ಮೆಂಡಲ್ (36) ಬಂಧಿತ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. 2023 ರಲ್ಲಿ ವಸಾಯಿಯಲ್ಲಿರುವ ತರಬೇತಿ ಅಕಾಡೆಮಿಗೆ ಸೇರಿದ್ದ 17 ವರ್ಷದ ಬಾಲಕಿಯ ನಂಬಿಕೆ ಗಳಿಸಿ ಈ ಕೃತ್ಯ ಎಸಗಿ
Jun 141 min read


ಮುಖ್ಯಮಂತ್ರಿ ಕುರ್ಚಿಗೇರಿದ ಬೆನ್ನಲ್ಲೇ ಆ್ಯಕ್ಷನ್ -ಪ್ರತಿ ತಾಲೂಕಿನಲ್ಲೂ ವಿಶೇಷ ಪೊಲೀಸ್ ಸ್ಕ್ವಾಡ್ ರಚನೆಗೆ ಸಿಎಂ ಡಿಕೆ ಶಿವಕುಮಾರ್ ಸೂಚನೆ
ರಾಜ್ಯದಲ್ಲಿ ಹೆಚ್ಚುತ್ತಿರುವ ರೌಡಿಸಂ, ಡ್ರಗ್ಸ್ ದಂಧೆ, ಜೂಜಾಟ ಹಾಗೂ ಮಟ್ಕಾ ಸೇರಿದಂತೆ ವಿವಿಧ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಬಲಪಡಿಸಲು ರಾಜ್ಯದ ಪ್ರತಿ ತಾಲೂಕಿನಲ್ಲಿ ವಿಶೇಷ ಪೊಲೀಸ್ ಸ್ಕ್ವಾಡ್ಗಳನ್ನು ರಚಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಹತ್ವದ ನಿರ್ದೇಶನ ನೀಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಸಿಎಂ, ಪ್ರತಿ ತಂಡದಲ್ಲಿ 10 ರಿಂದ 15 ಪೊಲೀಸ್ ಸಿಬ್ಬಂದಿ ಇರಲಿದ್ದಾರೆ ಎಂದು ತಿಳಿಸಿದರು. ಈ ವಿಶೇಷ ಸ್ಕ್ವಾಡ್
Jun 41 min read


ಸ್ನ್ಯಾಪ್ಚಾಟ್ನಲ್ಲಿ ಹುಡುಗಿ ಸೋಗು: ಪುತ್ತೂರು ನಿವಾಸಿಗೆ ₹4.84 ಲಕ್ಷ ವಂಚನೆ
ದಿನ ಕಳೆದಂತೆ ಸೈಬರ್ ವಂಚಕರ ಹಾವಳಿ ಹೆಚ್ಚಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸ್ನ್ಯಾಪ್ಚಾಟ್ನಲ್ಲಿ ಹುಡುಗಿಯ ಸೋಗಿನಲ್ಲಿ ಬಂದ ವಂಚಕನೊಬ್ಬ ಪುತ್ತೂರು ನಿವಾಸಿಗೆ ಬರೋಬ್ಬರಿ 4,84,203 ರೂಪಾಯಿ ವಂಚಿಸಿದ್ದಾನೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚಕನು ‘ಅನ್ನಪೂರ್ಣ ಗೌಡ’ ಎಂಬ ಹೆಸರಿನ ನಕಲಿ ಐಡಿ ಬಳಸಿ, ತಾನು ಬೆಂಗಳೂರಿನ ವಿಪ್ರೋ ಕಂಪನಿ ಉದ್ಯೋಗಿ ಎಂದು ನಂಬಿಸಿದ್ದನು. ಬಳಿಕ ವಾಟ್ಸಾಪ್ ಸಂಖ್ಯೆ ಪಡೆದು ನಿರಂತರ ಚಾಟಿಂಗ್ ಮಾಡಿದ್ದಲ್ಲದೆ, ತನಗೆ ಹಣಕಾಸಿನ ತೊಂದರೆ ಇದೆ ಎಂದು ಹಂತ ಹಂತವಾಗಿ ಲಕ್
Jun 41 min read
Archive
bottom of page









