ಮೈಸೂರು: ಫೈನಾನ್ಸ್ ದಂಧೆ ವಿರೋಧಿಸಿದ್ದಕ್ಕೆ ಯುವಕನ ಬರ್ಬರ ಹತ್ಯೆ
- sathyapathanewsplu
- 1 day ago
- 1 min read

ಮೈಸೂರು: ಫೈನಾನ್ಸ್ ಹಾವಳಿ ವಿರೋಧಿಸಿದ ಹಿನ್ನೆಲೆಯಲ್ಲಿ ವೆಲ್ಡಿಂಗ್ ಶಾಪ್ ಮಾಲೀಕ ಶಹಬಾಜ್ (26) ಎಂಬ ಯುವಕನನ್ನು ಲಾಂಗು-ಮಚ್ಚುಗಳಿಂದ ಅಟ್ಟಾಡಿಸಿ ಕೊಲೆ ಮಾಡಿರುವ ಭೀಕರ ಘಟನೆ ನಗರದ ಉದಯಗಿರಿ ಬೀಡಿ ಕಾಲೋನಿಯಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಜುಬೇರ್ ಹಾಗೂ ಆತನ ಸ್ನೇಹಿತರು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಏರಿಯಾದಲ್ಲಿ ನಡೆಸುತ್ತಿದ್ದ ಮೀಟರ್ ಬಡ್ಡಿ ದಂಧೆ ಹಾಗೂ ಅಕ್ರಮ ಆಟೋ ಪಾರ್ಕಿಂಗ್ ವಸೂಲಿಯನ್ನು ಶಹಬಾಜ್ ವಿರೋಧಿಸಿದ್ದರು. ಅಲ್ಲದೆ, ಈ ಬಗ್ಗೆ ಪೊಲೀಸರಿಗೂ ದೂರು ನೀಡಿದ್ದರು. ಇದೇ ಹಳೆ ವೈಷಮ್ಯದಿಂದಾಗಿ, ರಾತ್ರಿ ಅಂಗಡಿ ಮುಂದೆ ಕುಳಿತಿದ್ದ ಶಹಬಾಜ್ ಮೇಲೆ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳು, ಕತ್ತು ಹಾಗೂ ಹೊಟ್ಟೆಯ ಭಾಗಕ್ಕೆ ಮನಬಂದಂತೆ ಚುಚ್ಚಿ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಉದಯಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.





Comments