top of page
News Articles
Sathyapatha News Plus


ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ಇನ್ಮುಂದೆ 'ಮುಟ್ಟಿನ ಕಪ್' ವಿತರಣೆ: ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ಬೆಂಗಳೂರು: ರಾಜ್ಯದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿನಿಯರ ಆರೋಗ್ಯ ಮತ್ತು ನೈರ್ಮಲ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಆಯ್ದ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿದ್ದ 'ಮುಟ್ಟಿನ ಕಪ್' ವಿತರಣಾ ಯೋಜನೆಯು ಅಭೂತಪೂರ್ವ ಯಶಸ್ಸು ಕಂಡ ಹಿನ್ನೆಲೆಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಈಗ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಅಧಿಕೃತವಾಗಿ ನಿರ್ಧರಿಸಿದೆ. ಈ ಹೊಸ ಕ್ರಮವು ವಿದ್ಯಾರ್ಥಿನಿಯರಿಗೆ ಮುಟ್ಟಿನ ಸಮಯದಲ್ಲಿ ಎದುರಾಗುವ ಸಮಸ್ಯೆಗಳನ್ನು ನಿವಾರಿಸುವುದಲ್ಲದೆ, ಪರಿಸರ ಸ್ನೇಹಿ ನೈರ್ಮಲ್ಯ ವ್ಯವಸ್ಥೆಯನ್ನು ಉತ
Jan 71 min read


ಹೊಸಕೋಟೆ: ಚೀಟಿ ವಿವಾದ – ಸಹೋದರನ ಮನೆಗೆ ಬೆಂಕಿ ಹಚ್ಚಲು ಹೋಗಿ ತಾನೇ ಸುಟ್ಟ ಆರೋಪಿ
ಚೀಟಿ ವ್ಯವಹಾರದಲ್ಲಿ ನಷ್ಟ ಅನುಭವಿಸಿದ ವ್ಯಕ್ತಿಯೋರ್ವ, ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಸಹೋದರನ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ವೇಳೆ ತಾನೇ ಗಂಭೀರವಾಗಿ ಸುಟ್ಟುಕೊಂಡ ಘಟನೆ ಹೊಸಕೋಟೆ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಮಂಗಳವಾರ ಮಧ್ಯರಾತ್ರಿ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಮುನಿರಾಜು ಎಂದು ಗುರುತಿಸಲಾಗಿದ್ದು, ಆತ ಸಹೋದರ ರಾಮಕೃಷ್ಣನ ಮನೆಯನ್ನೇ ಸುಡಲು ಸಂಚು ರೂಪಿಸಿದ್ದಾನೆ ಎನ್ನಲಾಗಿದೆ. ಬೆಂಕಿ ಹಚ್ಚುವ ವೇಳೆ ಕೈಯಲ್ಲಿದ್ದ ಪೆಟ್ರೋಲ್ ಡಬ್ಬದಿಂದ ಏಕಾಏಕಿ ಬೆಂಕಿ ಹೊತ್ತಿಕೊಂಡು ಮುನಿರಾಜುವೇ ಸುಟ್ಟುಕೊಂಡಿದ್ದಾನೆ. “ಕಾಪಾಡಿ, ಕಾಪಾಡಿ” ಎಂದು ಕಿರುಚಿದ ಶಬ್ದ
Jan 71 min read


ಪುತ್ತೂರು: ವಿದ್ಯುತ್ ತಂತಿ ತುಂಡಾಗಿ ಬಿದ್ದು ಅಗ್ನಿ ಅವಘಡ - 900ಕ್ಕೂ ಅಧಿಕ ಅಡಿಕೆ ಗಿಡಗಳು ಭಸ್ಮ
ಪುತ್ತೂರು: ತಾಲೂಕಿನ ಕುರಿಯ ಗ್ರಾಮದ ಬೂಡಿಯಾರು ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 900ಕ್ಕೂ ಹೆಚ್ಚು ಅಡಿಕೆ ಗಿಡಗಳು ಬೆಂಕಿಗಾಹುತಿಯಾಗಿವೆ. ಬೂಡಿಯಾರಿನ ಗಣೇಶ್ ರೈ ಎಂಬವರಿಗೆ ಸೇರಿದ ತೋಟದ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿ ಇದ್ದಕ್ಕಿದ್ದಂತೆ ತುಂಡಾಗಿ ಬಿದ್ದಿದ್ದೇ ಈ ದುರಂತಕ್ಕೆ ಕಾರಣವಾಗಿದೆ. ಉತ್ತಮವಾಗಿ ಬೆಳೆದು ನಿಂತಿದ್ದ ಅಡಿಕೆ ಗಿಡಗಳು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗಿದ್ದು, ಕೃಷಿಕರ ಶ್ರಮವೆಲ್ಲವೂ ಬೂದಿಯಾಗಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ ವಿದ್ಯುತ್ ತಂತಿ ಕಡಿದು ಬಿದ್ದಾಗ, ಅದರಲ್ಲಿ ಹರಿಯುತ್ತಿದ್ದ ವಿದ್ಯುತ್ನಿಂದಾಗಿ ಕಿಡಿ ಉ
Jan 71 min read


ಫೆಬ್ರವರಿ 1ರ ಭಾನುವಾರವೇ ಕೇಂದ್ರ ಬಜೆಟ್ ಮಂಡನೆ ಸಾಧ್ಯತೆ: ಇತಿಹಾಸದಲ್ಲೇ ಮೊದಲ ಬಾರಿ ಇಂತಹದೊಂದು ನಿರ್ಧಾರ!
ಹೊಸದಿಲ್ಲಿ: ಮುಂದಿನ 2026-27ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ವಿಶೇಷವೆಂದರೆ, ಬಜೆಟ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಭಾನುವಾರದಂದು ಈ ಆಯವ್ಯಯ ಮಂಡನೆಯಾಗುತ್ತಿದೆ. ಬಜೆಟ್ ಅಧಿವೇಶನವು ಜನವರಿ 28ರಂದು ರಾಷ್ಟ್ರಪತಿಗಳ ಭಾಷಣದೊಂದಿಗೆ ಆರಂಭವಾಗಲಿದ್ದು, ಸಂಸದೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು (CCPA) ಬುಧವಾರದ ಸಭೆಯಲ್ಲಿ ಈ ಕುರಿತು ಅಂತಿಮ ಮೊಹರು ಒತ್ತಲಿದೆ ಎಂದು ತಿಳಿದುಬಂದಿದೆ. ೨೦೧೭ರಿಂದೀಚೆಗೆ ಬಜೆಟ್ ಅನ್ನು ಫೆಬ್ರವರಿ 1ರ ಬೆಳಿಗ್ಗೆ 11 ಗಂಟೆಗೆ ಮಂಡಿಸುವ ಸಂಪ್ರದಾಯವನ್ನು ಮಾಜಿ ಹಣಕಾಸು ಸಚಿವ ಅರ
Jan 71 min read


ಚಿನಾಬ್ ಕಣಿವೆಯಲ್ಲಿ ಭಾರತದ ಶಕ್ತಿ ಪ್ರದರ್ಶನ: ನಾಲ್ಕು ಬೃಹತ್ ಜಲವಿದ್ಯುತ್ ಯೋಜನೆಗಳಿಗೆ ವೇಗ
ಪಾಕಿಸ್ತಾನಕ್ಕೆ ತಂತ್ರಾತ್ಮಕ ನಡುಕ: ಜಲ ಮತ್ತು ವಿದ್ಯುತ್ ಮೇಲೆ ಭಾರತದ ಬಿಗಿ ಹಿಡಿತ ನವದೆಹಲಿ: ಜಮ್ಮು-ಕಾಶ್ಮೀರದ ಚಿನಾಬ್ ನದಿಯ ಪಾತ್ರದಲ್ಲಿ ಭಾರತವು ಕೈಗೆತ್ತಿಕೊಂಡಿರುವ ನಾಲ್ಕು ಮಹತ್ವದ ಜಲವಿದ್ಯುತ್ ಯೋಜನೆಗಳ ಕಾಮಗಾರಿ ಈಗ ಅಂತಿಮ ಹಂತದತ್ತ ಸಾಗುತ್ತಿದೆ. ಈ ಬೆಳವಣಿಗೆಯು ಗಡಿಯಾಚೆಗಿನ ಪಾಕಿಸ್ತಾನಕ್ಕೆ ರಾಜತಾಂತ್ರಿಕ ಹಾಗೂ ತಂತ್ರಾತ್ಮಕ ಒತ್ತಡವನ್ನು ಹೆಚ್ಚಿಸಿದೆ. ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಚೌಕಟ್ಟಿನಲ್ಲೇ ಇದ್ದರೂ, ನದಿಯ ನೀರಿನ ಹರಿವಿನ ಮೇಲೆ ಭಾರತ ಸಾಧಿಸಲಿರುವ ನಿಯಂತ್ರಣವು ಭವಿಷ್ಯದಲ್ಲಿ ನೆರೆಯ ರಾಷ್ಟ್ರಕ್ಕೆ ಬಿಸಿ ಮುಟ್ಟಿಸುವ ಸಾಧ್ಯತೆಯಿದೆ. ಚಿನಾಬ್ ನದಿಯ ಮೇಲೆ ನಿರ
Jan 72 min read


ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು: ಆರೋಗ್ಯ ಸ್ಥಿರ
ನವದೆಹಲಿ: ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಹಾಗೂ ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರನ್ನು ಸೋಮವಾರ ತಡರಾತ್ರಿ ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ಕರೆತರಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ಮತ್ತು ವೈದ್ಯಕೀಯ ಬುಲೆಟಿನ್ ತಿಳಿಸಿದೆ. ಆಸ್ಪತ್ರೆಯ ಅಧ್ಯಕ್ಷ ಡಾ. ಅಜಯ್ ಸ್ವರೂಪ್ ಅವರ ಪ್ರಕಾರ, ಚಳಿಗಾಲದ ತೀವ್ರತೆ ಮತ್ತು ದೆಹಲಿಯ ವಾಯು ಮಾಲಿನ್ಯದ ಕಾರಣದಿಂದಾಗಿ ಸೋನಿಯಾ ಗಾಂಧಿ ಅವರಲ್ಲಿ ದೀರ್ಘಕಾಲದ ಕೆಮ್ಮು ಮತ್ತು ಬ್ರಾಂಚಿಯಲ್ ಆಸ್ತಮಾ ಸಮಸ್ಯೆ ತುಸ
Jan 61 min read


ಕೆಎಸ್ಆರ್ಟಿಸಿ ಪ್ರೀಮಿಯಂ ಬಸ್ ಟಿಕೆಟ್ ದರ ಕಡಿತ
ಪ್ರಯಾಣಿಕರಿಗೆ ಸಂತೋಷದ ಸುದ್ದಿ: ಆಯ್ದ ಪ್ರೀಮಿಯಂ ಬಸ್ಗಳಿಗೆ 5–15% ಟಿಕೆಟ್ ದರ ಇಳಿಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ) ಬೆಂಗಳೂರು ಕೇಂದ್ರವಾಗಿಸಿಕೊಂಡು ಸಂಚರಿಸುವ ಆಯ್ದ ಪ್ರೀಮಿಯಂ ಬಸ್ ಸೇವೆಗಳ ಟಿಕೆಟ್ ದರವನ್ನು ಇಳಿಕೆ ಮಾಡಿದೆ. ಜನವರಿ 5, 2026ರಿಂದಲೇ ಈ ದರ ಕಡಿತ ಜಾರಿಯಾಗಿದ್ದು, ಪ್ರಯಾಣಿಕರಿಗೆ 5ರಿಂದ 15 ಶೇಕಡಾವರೆಗೆ ರಿಯಾಯಿತಿ ಲಭ್ಯವಾಗುತ್ತಿದೆ. ಈ ರಿಯಾಯಿತಿ ಕ್ರಮವು ಜನಪ್ರಿಯ ಅಂತರ್ಜಿಲ್ಲಾ ಹಾಗೂ ಅಂತರ್ರಾಜ್ಯ ಮಾರ್ಗಗಳಲ್ಲಿನ ಆಯ್ದ ಪ್ರೀಮಿಯಂ ಸೇವೆಗಳಿಗೆ ಅನ್ವಯವಾಗುತ್ತದೆ. ಏರ್ಕಂಡಿಷನ್ಡ್ ವೋಲ್ವೋ, ಮಲ್ಟಿ-ಆಕ್ಸಲ್, ಸ್ಲೀಪರ್ ಸೇರಿದಂತೆ ಕೆ
Jan 61 min read


ತಿರುಪರಂಕುಂದ್ರಂ ಬೆಟ್ಟದ ದೀಪ ಬೆಳಗುವ ವಿಚಾರ:ಮಹತ್ವದ ತೀರ್ಪು ನೀಡಿದ ಹೈಕೋರ್ಟ್
ತಮಿಳುನಾಡಿನ ಐತಿಹಾಸಿಕ ಹಾಗೂ ಧಾರ್ಮಿಕ ಮಹತ್ವ ಹೊಂದಿರುವ Thirupparankundram ಬೆಟ್ಟದಲ್ಲಿ ಕಾರ್ತಿಗೈ ದೀಪಂ ಬೆಳಗುವ ವಿಚಾರಕ್ಕೆ ಸಂಬಂಧಿಸಿದ ವಿವಾದದಲ್ಲಿ Madras High Court ಮಹತ್ವದ ತೀರ್ಪು ನೀಡಿದೆ. ಬೆಟ್ಟದ ಮೇಲಿರುವ ದೀಪಥೂನ್ ಎಂಬ ಶಿಲಾ ಸ್ತಂಭದ ಬಳಿ ದೀಪ ಬೆಳಗಲು ಅವಕಾಶ ನೀಡಿದ್ದ ಹಿಂದಿನ ಆದೇಶವನ್ನು ನ್ಯಾಯಾಲಯ ಬಲಪಡಿಸಿದೆ. ನ್ಯಾಯಾಲಯದ ಅಭಿಪ್ರಾಯದಂತೆ, ದೀಪ ಬೆಳಗುವ ಆಚರಣೆ Thirupparankundram Murugan Templeನ ದೀರ್ಘಕಾಲದ ಧಾರ್ಮಿಕ ಪರಂಪರೆಯ ಭಾಗವಾಗಿದೆ. ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಆಚರಣೆ ನಡೆಸುವ ಹೊಣೆ ಅಧಿಕಾರಿಗಳ ಮೇಲಿದೆ ಎಂದ
Jan 61 min read


ಹದಗೆಟ್ಟ ಕಡಬ ಜೂನಿಯರ್ ಕಾಲೇಜು ರಸ್ತೆ, ದುರಸ್ತಿಗೆ ಆಗ್ರಹ.
ಕಡಬ ಪಟ್ಟಣದ ಪ್ರಮುಖ ಕೇಂದ್ರ ಬಿಂದುವಾದ ತಾಲೂಕು ಕಚೇರಿಯಿಂದ ಜೂನಿಯರ್ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾರ್ವಜನಿಕರ ಸಂಚಾರಕ್ಕೆ ದುಸ್ಥಿತಿಯಲಿದೆ. ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಈ ಗುಂಡಿಗಳಲ್ಲಿ ನೀರು ತುಂಬಿ ಕೆರೆಯಂತಾಗುತ್ತಿದ್ದು, ರಸ್ತೆಯ ಆಳ ತಿಳಿಯದೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ನಿದರ್ಶನಗಳೂ ಇವೆ. ಈ ರಸ್ತೆಯು ದೈನಂದಿನ ನೂರಾರು ವಿದ್ಯಾರ್ಥಿಗಳು, ಸರ್ಕಾರಿ ಕಚೇರಿಗೆ ಬರುವ ಸಾರ್ವಜನಿಕರು ಹಾಗೂ
Jan 61 min read


ವಿಮಾನ ಪ್ರಯಾಣಿಕರಿಗೆ ಶಾಕ್: ಪವರ್ಬ್ಯಾಂಕ್ಗಳನ್ನು ಸಂಪೂರ್ಣ ನಿಷೇಧಿಸಿದ ಡಿಜಿಸಿಎ!
ಹೊಸದಿಲ್ಲಿ: ವಿಮಾನ ಪ್ರಯಾಣದ ವೇಳೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಪವರ್ಬ್ಯಾಂಕ್ಗಳನ್ನು ವಿಮಾನದೊಳಗೆ ಕೊಂಡೊಯ್ಯುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಪವರ್ಬ್ಯಾಂಕ್ಗಳನ್ನು ಹ್ಯಾಂಡ್ ಬ್ಯಾಗ್ಗಳಲ್ಲಿ ಕೊಂಡೊಯ್ಯಲು ಅವಕಾಶವಿತ್ತು. ಆದರೆ, ಇನ್ನು ಮುಂದೆ ಚೆಕ್-ಇನ್ ಲಗೇಜ್ ಮಾತ್ರವಲ್ಲದೆ, ಹ್ಯಾಂಡ್ ಬ್ಯಾಗ್ಗಳಲ್ಲೂ ಪವರ್ಬ್ಯಾಂಕ್ ಅಥವಾ ಯಾವುದೇ ರೀತಿಯ ಹೆಚ್ಚುವರಿ ಲೀಥಿಯಂ ಬ್ಯಾಟರಿಗಳನ್ನು ಕೊಂಡೊಯ್ಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಪವರ್ಬ್ಯಾಂಕ್ಗಳಲ್ಲಿ ಬಳಸಲಾಗುವ ಲೀಥಿಯಂ ಬ್ಯಾಟರಿಗಳು ತಾಂತ
Jan 51 min read


ಮತ್ತೆ ಏರಿಕೆಗೊಂಡ ಚಿನ್ನದ ದರ
ಇಂದು, ಜನವರಿ 5, 2026 ರಂದು ಕರ್ನಾಟಕದಲ್ಲಿ ಮತ್ತು ವಿಶೇಷವಾಗಿ ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಇಂದಿನ ಚಿನ್ನದ ದರಗಳು ಈ ಕೆಳಗಿನಂತಿವೆ: 24 ಕ್ಯಾರೆಟ್ ಚಿನ್ನ (ಅಪರಂಜಿ): ಪ್ರತಿ 1 ಗ್ರಾಂಗೆ ₹13,740 ಆಗಿದೆ. ಇದು ನಿನ್ನೆಗಿಂತ ₹158 ರಷ್ಟು ಹೆಚ್ಚಾಗಿದೆ. 10 ಗ್ರಾಂ ಚಿನ್ನದ ಬೆಲೆ ₹1,37,400 ತಲುಪಿದೆ. 22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): ಪ್ರತಿ 1 ಗ್ರಾಂಗೆ ₹12,595 ಆಗಿದ್ದು, ನಿನ್ನೆಗಿಂತ ₹145 ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ₹1,25,950 ಆಗಿದೆ. 18 ಕ್ಯಾರೆಟ್ ಚಿನ್ನ: ಪ್ರತಿ 1 ಗ್ರಾಂಗೆ ₹10,305 ರಂತೆ ಮಾರಾಟವಾಗುತ್
Jan 51 min read


ಪುತ್ತೂರು: ತಾಯಿ-ಮಗು ಕೆರೆಗೆ ಹಾರಿ ಸಾವು; ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲು
ಪುತ್ತೂರು: ತಾಲೂಕಿನ ವ್ಯಾಪ್ತಿಯಲ್ಲಿ ತಾಯಿ ಮತ್ತು ಮಗು ಕೆರೆಗೆ ಹಾರಿ ಮೃತಪಟ್ಟಿರುವ ಅತ್ಯಂತ ಹೃದಯವಿದ್ರಾವಕ ಘಟನೆ ವರದಿಯಾಗಿದೆ. ಮೃತರನ್ನು 34 ವರ್ಷದ ಮಹಿಳೆ ಮತ್ತು ಆಕೆಯ ಮೂರು ವರ್ಷದ ಗಂಡು ಮಗು ಎಂದು ಗುರುತಿಸಲಾಗಿದೆ. ಈ ದಾರುಣ ಘಟನೆಯು ಸ್ಥಳೀಯರಲ್ಲಿ ತೀವ್ರ ಶೋಕವನ್ನುಂಟು ಮಾಡಿದ್ದು, ಸಾವಿನ ನಿಖರ ಕಾರಣಗಳ ಬಗ್ಗೆ ತನಿಖೆ ಚುರುಕುಗೊಂಡಿದೆ. ಘಟನೆಗೆ ಸಂಬಂಧಿಸಿದಂತೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಎರಡು ಪ್ರತ್ಯೇಕ ದೂರುಗಳು ದಾಖಲಾಗಿವೆ. ಮೃತ ಮಹಿಳೆಯ ತಂದೆ ರುಕ್ಕಯ್ಯ ಗೌಡ (66) ಅವರು ನೀಡಿದ ದೂರಿನಂತೆ, ಮಗಳು ತನ್ನ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್
Jan 51 min read


ಕೆಂಪುಕೋಟೆ ಸ್ಫೋಟ ಪ್ರಕರಣ: ‘ಘೋಸ್ಟ್’ ಸಿಮ್ ಹಾಗೂ ಎನ್ಕ್ರಿಪ್ಟ್ ಆ್ಯಪ್ ಬಳಸಿ ಪಾಕ್ ಏಜೆಂಟ್ಗಳೊಂದಿಗೆ ಸಂಪರ್ಕ
ನವೆಂಬರ್ 10ರಂದು ನಡೆದ ಕೆಂಪುಕೋಟೆ ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಆರೋಪಿಗಳು ಪಾಕಿಸ್ತಾನದ ಗುಪ್ತಚರ ಏಜೆಂಟ್ಗಳನ್ನು ಸಂಪರ್ಕಿಸಲು ‘ಘೋಸ್ಟ್’ ಸಿಮ್ ಕಾರ್ಡ್ಗಳು ಮತ್ತು ಎನ್ಕ್ರಿಪ್ಟ್ ಮಾಡಲಾದ ಸಂವಹನ ಆ್ಯಪ್ಗಳನ್ನು ಬಳಸುತ್ತಿದ್ದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮುಝಮ್ಮಿಲ್ ಗ್ಯಾನೀ ಮತ್ತು ಅದೀಲ್ ರಾರ್ಥ ಸೇರಿದಂತೆ ಬಂಧಿತ ಆರೋಪಿಗಳು ಭದ್ರತಾ ಸಂಸ್ಥೆಗಳ ಕಣ್ತಪ್ಪಿಸಲು ‘ಡ್ಯುಯಲ್ ಫೋನ್’ ತಂತ್ರವನ್ನು ಅನುಸರಿಸುತ್ತಿದ್ದರು. ಈ ಜಾಲದಲ್ಲಿ ಉನ್ನತ ಶಿಕ್ಷಣ ಪಡೆದ ವೈದ್ಯರು ಕೂಡ ಭಾಗಿಯಾಗಿರುವುದು ತನಿಖೆಯಿಂದ ದೃಢಪಟ್ಟಿದೆ. ತನಿಖಾ
Jan 51 min read


500 ರೂ. ನೋಟು ಅಮಾನ್ಯೀಕರಣ ಸುಳ್ಳು ಸುದ್ದಿ: ಸಾರ್ವಜನಿಕರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸ್ಪಷ್ಟನೆ
ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಸರ್ಕಾರ ಅಮಾನ್ಯಗೊಳಿಸಲಿದೆ ಮತ್ತು ಮಾರ್ಚ್ ತಿಂಗಳಿನಿಂದ ಎಟಿಎಂಗಳಲ್ಲಿ ಈ ನೋಟುಗಳು ಲಭ್ಯವಿರುವುದಿಲ್ಲ ಎಂಬ ಸುದ್ದಿಗಳು ವ್ಯಾಪಕವಾಗಿ ವೈರಲ್ ಆಗುತ್ತಿವೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರವು ಇವೆಲ್ಲವೂ ಕೇವಲ ವದಂತಿಗಳಾಗಿದ್ದು, ಇಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಈ ಮೂಲಕ ಸಾರ್ವಜನಿಕರಲ್ಲಿ ಮೂಡಿದ್ದ ಆತಂಕಕ್ಕೆ ತೆರೆ ಎಳೆದಿದೆ. ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಅಡಿಯಲ್ಲಿ ಕಾರ್ಯನಿರ್ವಹಿಸುವ 'ಫ್ಯಾಕ್ಟ
Jan 41 min read


ತ್ರಿಶೂರ್ ರೈಲು ನಿಲ್ದಾಣದಲ್ಲಿ ಭೀಕರ ಅಗ್ನಿ ಅವಘಡ: 500ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಭಸ್ಮ
ತ್ರಿಶೂರ್: ಕೇರಳದ ತ್ರಿಶೂರ್ ರೈಲು ನಿಲ್ದಾಣದ ಪಾರ್ಕಿಂಗ್ ಆವರಣದಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಸುಮಾರು 500ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿವೆ. ಇಂದು ಬೆಳಿಗ್ಗೆ 6 ಗಂಟೆಯಿಂದ 6:40ರ ಅವಧಿಯಲ್ಲಿ ಈ ದುರಂತ ಸಂಭವಿಸಿದ್ದು, ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ನೂರಾರು ವಾಹನಗಳು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಸುಟ್ಟು ಕರಕಲಾಗಿವೆ. ವಿದ್ಯುತ್ ತಂತಿಯಿಂದ ಹಾರಿದ ಕಿಡಿಯೊಂದು ಪ್ಲಾಸ್ಟಿಕ್ ಕವರ್ನಿಂದ ಮುಚ್ಚಲ್ಪಟ್ಟಿದ್ದ ವಾಹನದ ಮೇಲೆ ಬಿದ್ದಿದ್ದೇ ಈ ಅನಾಹುತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ತಕ್ಷಣ ಧಾವಿಸಿ
Jan 41 min read


ಮಂಗಳೂರು: ಕಾರು ಅಪಘಾತದಿಂದ ಬೋಂಡೇಲ್ ಚರ್ಚ್ನ ಧರ್ಮಗುರುಗಳು ಪವಾಡಸದೃಶ ಪಾರು
ಮಂಗಳೂರು: ನಗರದ ಹೊರವಲಯದ ಕಾವೂರು-ಮರಕಡ ರಸ್ತೆಯ ಮರಕಡ ಎಂಬಲ್ಲಿ ಗುರುವಾರ ಸಂಜೆ ನಡೆದ ಭೀಕರ ಕಾರು ಅಪಘಾತದಲ್ಲಿ ಬೋಂಡೇಲ್ನ ಸಂತ ಲಾರೆನ್ಸರ ಪುಣ್ಯಕ್ಷೇತ್ರದ ಧರ್ಮಗುರುಗಳಾದ ಫಾ. ಆಂಡ್ರ್ಯೂ ಲಿಯೋ ಡಿಸೋಜಾ ಅವರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸ ವರ್ಷದ ಸಂಭ್ರಮದ ನಡುವೆಯೇ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು. ಫಾ. ಆಂಡ್ರ್ಯೂ ಅವರು ನೀರುಮಾರ್ಗದಲ್ಲಿ ಆಯೋಜಿಸಲಾಗಿದ್ದ ಹೊಸ ವರ್ಷಾಚರಣೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು, ಬಜಪೆ ಮಾರ್ಗವಾಗಿ ಬೋಂಡೇಲ್ ಕಡೆಗೆ ತಮ್ಮ ಕಾರಿನಲ್ಲಿ ವಾಪಸ್ಸು ಬರುತ್ತಿದ್ದರು. ಈ ವೇಳೆ ಮರಕ
Jan 41 min read


ರಾಂಚಿ ಜಿಲ್ಲಾ ನ್ಯಾಯಾಲಯದ ಅಚ್ಚರಿ ತೀರ್ಪು: ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದ 200 ಕೆಜಿ ಗಾಂಜಾ ಇಲಿ ತಿಂದುಹಾಕಿದ ಕಾರಣ ಎನ್ಡಿಪಿಎಸ್ ಪ್ರಕರಣದಲ್ಲಿ ಆರೋಪಿಗೆ ಮುಕ್ತಿ..!
ರಾಂಚಿ: ಝಾರ್ಖಂಡ್ನ ರಾಂಚಿ ಜಿಲ್ಲಾ ನ್ಯಾಯಾಲಯ ಎನ್ಡಿಪಿಎಸ್ (ಮಾದಕ ದ್ರವ್ಯ ನಿಷೇಧ) ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ವ್ಯಕ್ತಿಯನ್ನು ಖುಲಾಸೆ ಮಾಡಿದೆ. ಕಾರಣ ಕೇಳಿದರೆ—ಪೊಲೀಸ್ ಠಾಣೆಯಲ್ಲಿ ಸಾಕ್ಷ್ಯವಾಗಿ ಸಂಗ್ರಹಿಸಿ ಇಡಲಾಗಿದ್ದ ಸುಮಾರು 200 ಕೆಜಿ ಗಾಂಜಾವನ್ನು ಇಲಿಗಳು ತಿಂದುಹಾಕಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಗಾಂಜಾವನ್ನು ಸರಿಯಾಗಿ ಸಂರಕ್ಷಣೆ ಮಾಡದೇ ನಿರ್ಲಕ್ಷ್ಯ ವಹಿಸಿದ್ದರೆಂದು ನ್ಯಾಯಾಲಯ ಕಟುವಾಗಿ ಟೀಕಿಸಿದೆ. ಸಾಕ್ಷ್ಯವೇ ಇಲ್ಲದ ಸ್ಥಿತಿಯಲ್ಲಿ ಆರೋಪಿಯನ್ನು ದೋಷಿ ಎಂದು ಸಾಬೀತುಪಡಿಸಲು ಸಾಧ್ಯವಿಲ್ಲ ಎ
Jan 31 min read


ಉಪ್ಪಿನಂಗಡಿ: ಅಕ್ರಮ ಮರ ಸಾಗಾಟ ಪತ್ತೆ; ಲಾರಿ ಸಮೇತ ಚಾಲಕನ ಬಂಧನ
ನೆಲ್ಯಾಡಿ: ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಉಪ್ಪಿನಂಗಡಿ ವಲಯ ಅರಣ್ಯ ಇಲಾಖಾಧಿಕಾರಿಗಳ ತಂಡ ಪತ್ತೆಹಚ್ಚಿದೆ. ಡಿಸೆಂಬರ್ 30ರಂದು ರಾತ್ರಿ ಈ ಕಾರ್ಯಾಚರಣೆ ನಡೆದಿದ್ದು, ಮರದ ದಿಮ್ಮಿಗಳು, ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ರಾತ್ರಿ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಈ ಅಕ್ರಮ ಬಯಲಾಗಿದೆ. ಹಾಸನದ ಕಡೆಯಿಂದ ಬಂಟ್ವಾಳದತ್ತ ಸಾಗುತ್ತಿದ್ದ ಲಾರಿಯನ್ನು (KA 21, B 5787) ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿ ಎಂಬಲ್ಲಿ ಅರಣ್ಯ ಅಧಿಕಾರಿಗಳು ಸಂಶಯದ ಮೇರೆಗೆ ತಡೆದು ಪರಿಶೀಲಿಸಿದ್ದಾರೆ. ಈ ವೇಳೆ
Jan 31 min read


ಕೆಎಸ್ಆರ್ಟಿಸಿ: ಅಂಬಾರಿ ಮತ್ತು ಐರಾವತ ಬಸ್ಗಳಲ್ಲಿ ಹೈಟೆಕ್ ಸುರಕ್ಷತಾ ತಂತ್ರಜ್ಞಾನ ಅಳವಡಿಕೆ
ಖಾಸಗಿ ಬಸ್ಗಳ ಅಗ್ನಿ ದುರಂತಗಳಿಂದ ಆತಂಕಗೊಂಡಿರುವ ಪ್ರಯಾಣಿಕರಿಗೆ ಭರವಸೆ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (KSRTC) ತನ್ನ ಐಷಾರಾಮಿ ಬಸ್ಗಳಲ್ಲಿ ಅತ್ಯಾಧುನಿಕ ಸುರಕ್ಷತಾ ತಂತ್ರಜ್ಞಾನಗಳನ್ನು ಅಳವಡಿಸಲು ಮುಂದಾಗಿದೆ. ಮುಖ್ಯವಾಗಿ 'ಅಂಬಾರಿ ಉತ್ಸವ' ಮತ್ತು 'ಅಂಬಾರಿ 2.0' ಎಸಿ ಸ್ಲೀಪರ್ ಬಸ್ಗಳಲ್ಲಿ ಈ ಸೌಲಭ್ಯಗಳು ಮೊದಲ ಹಂತದಲ್ಲಿ ಜಾರಿಯಾಗುತ್ತಿವೆ. ಚಾಲಕರ ಮೇಲೆ ನಿಗಾ ಇಡಲು ಡ್ಯಾಶ್ ಕ್ಯಾಮ್ಗಳು ಹಾಗೂ ಅಗ್ನಿ ಅವಘಡದ ಮುನ್ಸೂಚನೆ ನೀಡಲು ಅನೌನ್ಸರ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದೆ. ಬಸ್ಗಳಲ್ಲಿ ಅಗ್ನಿ ನಂದಿಸ
Jan 31 min read


ಬಳ್ಳಾರಿಯಲ್ಲಿ ಬ್ಯಾನರ್ ಸಮರಕ್ಕೆ ಕಾಂಗ್ರೆಸ್ ಕಾರ್ಯಕರ್ತ ಬಲಿ: ಜನಾರ್ದನ ರೆಡ್ಡಿ, ಶ್ರೀರಾಮುಲು ವಿರುದ್ಧ ಎಫ್ಐಆರ್
ಬಳ್ಳಾರಿ: ನಗರದ ಹವಂಬಾವಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣದ ಬ್ಯಾನರ್ ಕಟ್ಟುವ ವಿಚಾರದಲ್ಲಿ ನಡೆದ ಭೀಕರ ಘರ್ಷಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಗುಂಡೇಟಿಗೆ ಬಲಿಯಾಗಿದ್ದಾನೆ. ಈ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ (A1), ಸೋಮಶೇಖರ ರೆಡ್ಡಿ (A2), ಶ್ರೀರಾಮುಲು (A3) ಮತ್ತು ಪಾಲಿಕೆ ವಿರೋಧ ಪಕ್ಷದ ನಾಯಕ ಮೋತ್ಕರ್ ಶ್ರೀನಿವಾಸ್ ಸೇರಿದಂತೆ ಒಟ್ಟು 11 ಜನರ ವಿರುದ್ಧ ಬ್ರೂಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ನಾರಾ ಭರತ್ ರೆಡ್ಡಿ ಅವರ ಆಪ್ತ ಚಾನಾಳ್ ಶೇಖರ್ ನೀಡಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಜನೆವರಿ 3ರಂದು ನಿಗದಿಯಾಗಿದ್ದ ವಾ
Jan 21 min read
Archive
bottom of page



