ಮಂಗಳೂರು: ಕಾರು ಅಪಘಾತದಿಂದ ಬೋಂಡೇಲ್ ಚರ್ಚ್‌ನ ಧರ್ಮಗುರುಗಳು ಪವಾಡಸದೃಶ ಪಾರು
- sathyapathanewsplu
- Jan 4
- 1 min read

ಮಂಗಳೂರು: ನಗರದ ಹೊರವಲಯದ ಕಾವೂರು-ಮರಕಡ ರಸ್ತೆಯ ಮರಕಡ ಎಂಬಲ್ಲಿ ಗುರುವಾರ ಸಂಜೆ ನಡೆದ ಭೀಕರ ಕಾರು ಅಪಘಾತದಲ್ಲಿ ಬೋಂಡೇಲ್‌ನ ಸಂತ ಲಾರೆನ್ಸರ ಪುಣ್ಯಕ್ಷೇತ್ರದ ಧರ್ಮಗುರುಗಳಾದ ಫಾ. ಆಂಡ್ರ್ಯೂ ಲಿಯೋ ಡಿಸೋಜಾ ಅವರು ಅದೃಷ್ಟವಶಾತ್ ಯಾವುದೇ ಗಾಯಗಳಿಲ್ಲದೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸ ವರ್ಷದ ಸಂಭ್ರಮದ ನಡುವೆಯೇ ನಡೆದ ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿತ್ತು.
ಫಾ. ಆಂಡ್ರ್ಯೂ ಅವರು ನೀರುಮಾರ್ಗದಲ್ಲಿ ಆಯೋಜಿಸಲಾಗಿದ್ದ ಹೊಸ ವರ್ಷಾಚರಣೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು, ಬಜಪೆ ಮಾರ್ಗವಾಗಿ ಬೋಂಡೇಲ್ ಕಡೆಗೆ ತಮ್ಮ ಕಾರಿನಲ್ಲಿ ವಾಪಸ್ಸು ಬರುತ್ತಿದ್ದರು. ಈ ವೇಳೆ ಮರಕಡ ತಲುಪುತ್ತಿದ್ದಂತೆ ಚಲಿಸುತ್ತಿದ್ದ ಕಾರಿನ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ಇದರಿಂದಾಗಿ ವಾಹನದ ಮೇಲಿನ ನಿಯಂತ್ರಣ ತಪ್ಪಿ, ಕಾರು ರಸ್ತೆ ಬದಿಯ ಮನೆಯೊಂದರ ಅಂಗಳಕ್ಕೆ ವೇಗವಾಗಿ ನುಗ್ಗಿ ಪಲ್ಟಿಯಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳೀಯ ನಿವಾಸಿಗಳು ತಕ್ಷಣ ಸ್ಥಳಕ್ಕೆ ಧಾವಿಸಿ, ಮಗುಚಿ ಬಿದ್ದಿದ್ದ ಕಾರನ್ನು ಸರಿಪಡಿಸಿ ಅದರಲ್ಲಿದ್ದ ಧರ್ಮಗುರುಗಳನ್ನು ಹೊರಕ್ಕೆ ಕರೆತಂದಿದ್ದಾರೆ. ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದರೂ, ಧರ್ಮಗುರುಗಳಿಗೆ ಯಾವುದೇ ಅನಾಹುತ ಸಂಭವಿಸದಿರುವುದು ಕಂಡು ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. "ದೇವರೇ ನನ್ನನ್ನು ಈ ಸಂಕಷ್ಟದಿಂದ ಬದುಕಿಸಿದ್ದಾನೆ" ಎಂದು ಫಾ. ಆಂಡ್ರ್ಯೂ ಲಿಯೋ ಡಿಸೋಜಾ ಅವರು ಈ ಸಂದರ್ಭದಲ್ಲಿ ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.





Comments