top of page
News Articles
Sathyapatha News Plus


ಪ್ಯಾನ್ ನಿಯಮಗಳಲ್ಲಿ ಬದಲಾವಣೆ: 2026ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಆದಾಯ ತೆರಿಗೆ ಕಾಯ್ದೆ 2026ರ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ಪ್ಯಾನ್ ಬಳಕೆ ಸಂಬಂಧಿತ ಹಲವು ಮಹತ್ವದ ಬದಲಾವಣೆಗಳನ್ನು ಕರಡು ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ. ಇವು ಸಾರ್ವಜನಿಕ ಪರಾಮರ್ಶೆಗೆ ಒಳಪಟ್ಟಿದ್ದು, ಅಂತಿಮ ನಿಯಮಗಳು ಪ್ರಕಟವಾದ ಬಳಿಕ ಜಾರಿಗೆ ಬರಲಿವೆ. ಹೊಸ ನಿಯಮಗಳು ಸಾಮಾನ್ಯ ನಾಗರಿಕರ ಹಣಕಾಸು ವ್ಯವಹಾರಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಕ್ಯಾಷ್ ಡೆಪಾಸಿಟ್, ವಾಹನ ಖರೀದಿ, ಹೋಟೆಲ್ ಪಾವತಿ, ರಿಯಲ್ ಎಸ್ಟೇಟ್ ಹಾಗೂ ಇನ್ಷೂರೆನ್ಸ್ ಕ್ಷೇತ್ರಗಳಲ್ಲಿ ಪ್ಯಾನ್ ಕಡ್ಡಾಯತೆಗೆ ಸಂಬಂಧಿಸಿದ ಮಿತಿಗಳನ್ನು ಪರಿಷ್ಕರಿಸಲಾಗಿದೆ. ಕ್
Feb 111 min read


ಬಿಎಸ್ಸಿ ಕ್ರಿಮಿನಾಲಜಿ ಓದುತ್ತಿದ್ದ ಕಾಸರಗೋಡಿನ ಹಿಂದೂ ಯುವತಿ ವಯನಾಡಿನ ಮುಸ್ಲಿಂ ಯುವಕನೊಂದಿಗೆ ಪರಾರಿ......!
ಮಂಗಳೂರು, ಫೆ.11: ಮುಕ್ಕ ಶ್ರೀನಿವಾಸ್ ಕಾಲೇಜಿನಲ್ಲಿ ಬಿಎಸ್ಸಿ ಕ್ರಿಮಿನಾಲಜಿ ಓದುತ್ತಿದ್ದ ಕಾಸರಗೋಡು ಮೂಲದ 22 ವರ್ಷದ ಯುವತಿ ಕೇರಳದ ವಯನಾಡು ಮೂಲದ ಯುವಕನೊಂದಿಗೆ ತೆರಳಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಜೋಡಿಯನ್ನು ವಯನಾಡಿನಲ್ಲಿ ಪತ್ತೆಹಚ್ಚಿದ್ದಾರೆ. ಕಾಸರಗೋಡು ಜಿಲ್ಲೆಯ ಮಧೂರು ಸಮೀಪದ ಮೀಪುಗುರಿ ನಿವಾಸಿಯಾದ ಯುವತಿ ಕಳೆದ ಮೂರು ವರ್ಷಗಳಿಂದ ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ಬಾರಿ ಬಿಎಸ್ಸಿ ಪದವಿ ಪೂರ್ಣಗೊಳಿಸಿದ್ದರೂ, ಸುರತ್ಕಲ್ ಬಳಿಯ ಪೇಯಿಂಗ್ ಗೇಸ್ಟ್ (ಪಿಜಿ) ವಸತಿಯಲ್ಲಿ ತನ್ನ ಸಹ
Feb 111 min read


ಮಂಗಳೂರಿಗರಿಗೆ ಡಬಲ್ ಶಾಕ್: ವಂದೇ ಭಾರತ್ ಮಂಗಳೂರು ನಗರಕ್ಕೆ ಇಲ್ಲ, ಗೊಮ್ಮಟೇಶ್ವರ ಎಕ್ಸ್ಪ್ರೆಸ್ ವೇಳಾಪಟ್ಟಿ ಬದಲಾವಣೆ?
ಮಂಗಳೂರು, ಫೆ.11: ಬೆಂಗಳೂರು–ಮಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂಬ ನಿರೀಕ್ಷೆಯ ನಡುವೆ ಕರಾವಳಿಗರಿಗೆ ಡಬಲ್ ಶಾಕ್ ಎದುರಾಗುವ ಸಾಧ್ಯತೆ ಮೂಡಿದೆ. ಮಂಗಳೂರು ನಗರಕ್ಕೆ ವಂದೇ ಭಾರತ್ ಪ್ರವೇಶಿಸದಿರುವ ಪ್ರಸ್ತಾವನೆ ಜೊತೆಗೆ, ಹಗಲಿನ ಜನಪ್ರಿಯ 16575/16576 ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಾಯಿಸುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಾಹಿತಿಯ ಪ್ರಕಾರ, ಬೆಂಗಳೂರು–ಗೋವಾ ವಂದೇ ಭಾರತ್ ಎಕ್ಸ್ಪ್ರೆಸ್ ಪಡೀಲ್ ಬೈಪಾಸ್ ಮೂಲಕವೇ ಸಂಚರಿಸಲಿದೆ. ಇದರಿಂದ ಮಂಗಳೂರು ಜಂಕ್ಷನ್ಗೆ ರೈಲು ಬಾರದಿರುವ ಸಾಧ್ಯತೆ ಇದೆ. ಇದೇ ವೇಳೆ, ಹೊಸ ರೈಲಿನ ವ
Feb 111 min read


ಫೆಬ್ರವರಿ 12 ರಂದು ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ
ಬ್ಯಾಂಕ್ಗಳ ಖಾಸಗೀಕರಣ ಹಾಗೂ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಹೊಸ ಕಾರ್ಮಿಕ ಸಂಹಿತೆಗಳನ್ನು ವಿರೋಧಿಸಿ ಫೆಬ್ರವರಿ 12 ರಂದು ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಯಲಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಸೇರಿದಂತೆ ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ಗಳು ಮುಷ್ಕರದಲ್ಲಿ ಭಾಗವಹಿಸಲಿದ್ದು, ಬ್ಯಾಂಕಿಂಗ್ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಬ್ಯಾಂಕ್ಗಳು ಗ್ರಾಹಕರಿಗೆ ಮುಂಚಿತ ಎಚ್ಚರಿಕೆ ನೀಡಿದ್ದಾರೆ. ಮುಷ್ಕರದ ಹಿನ್ನೆಲೆ ಯಾವುದೇ ತುರ್ತು ಬ್ಯಾಂಕಿಂಗ್ ವ್ಯವಹಾರಗಳನ್ನು ಫೆ.12 ಕ್ಕಿಂತ ಮುಂಚಿತವಾಗಿ ಪೂರ್ಣಗೊಳಿಸಿಕೊಳ್ಳುವಂತೆ ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ
Feb 111 min read


ಬೆಳ್ತಂಗಡಿ ವಿದ್ಯಾರ್ಥಿನಿ ಅಪಹರಣ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ವರದಿಯಾಗಿದ್ದ ಅಪ್ರಾಪ್ತ ವಿದ್ಯಾರ್ಥಿನಿಯ ಅಪಹರಣ ಯತ್ನ ಪ್ರಕರಣಕ್ಕೆ ಇದೀಗ ಅಚ್ಚರಿಯ ತಿರುವು ದೊರೆತಿದೆ. ಪೊಲೀಸರ ತನಿಖೆಯಲ್ಲಿ ಅಪಹರಣ ಯತ್ನವೆಂಬ ಆರೋಪ ಸುಳ್ಳು ಎಂಬುದು ಬಹಿರಂಗವಾಗಿದ್ದು, ಕಾಲೇಜಿಗೆ ಸೇರಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿನಿಯೇ ಸಿನಿಮೀಯ ಮಾದರಿಯ ನಕಲಿ ಕಥೆ ಕಟ್ಟಿಕೊಂಡಿದ್ದಾಳೆ ಎಂಬುದು ಬೆಳಕಿಗೆ ಬಂದಿದೆ. ಫೆಬ್ರವರಿ 9ರಂದು ಬೆಳಗ್ಗೆ 8.30ರ ಸುಮಾರಿಗೆ ಬೆಳ್ತಂಗಡಿ ನಗರದ ಸುದೇಮುಗೇರು ಪ್ರದೇಶದಲ್ಲಿ 16 ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸ್ಕೂಟಿಯಲ್ಲಿ ಕಾಲೇಜಿಗೆ ತೆರಳುತ್ತಿದ್ದ ವೇಳೆ
Feb 101 min read


ಭಾರತ–ಪಾಕಿಸ್ತಾನ ಪಂದ್ಯ ಪಕ್ಕಾ ಆಗುತ್ತಿದ್ದಂತೇ ವ್ಯಾಪಾರ ಜ್ವರ; ಕೊಲಂಬೋ ಫ್ಲೈಟ್ ದರ ಗಗನಕ್ಕೇರಿಕೆ
ಕ್ರಿಕೆಟ್ ಈಗ ಕೇವಲ ಕ್ರೀಡೆಯಷ್ಟೇ ಅಲ್ಲ, ಕೋಟ್ಯಂತರ ಜನರ ಭಾವನೆಗಳ ಜೊತೆಗೆ ಭಾರೀ ವಾಣಿಜ್ಯ ವ್ಯವಹಾರಗಳ ಕೇಂದ್ರವಾಗಿಬಿಟ್ಟಿದೆ. ಅದರಲ್ಲೂ ಭಾರತ–ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಜಾಗತಿಕ ಮಟ್ಟದಲ್ಲಿ ಅಪಾರ ಆದಾಯ ತಂದುಕೊಡುವ ಹೈವೋಲ್ಟೇಜ್ ಈವೆಂಟ್. ಈ ಮಾತಿಗೆ ಮತ್ತೊಮ್ಮೆ ಸಾಕ್ಷಿಯೆಂಬಂತೆ, ಐಸಿಸಿ ಟಿ-20 ವಿಶ್ವಕಪ್ 2026ರಲ್ಲಿ ಭಾರತ–ಪಾಕಿಸ್ತಾನ ಪಂದ್ಯ ಖಚಿತವಾಗುತ್ತಿದ್ದಂತೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಭಾರೀ ಆದಾಯ ನಷ್ಟದಿಂದ ಪಾರಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಆರಂಭದಲ್ಲಿ ಭಾರತದ ವಿರುದ್ಧ ಪಂದ್ಯ ಆಡದಿರುವ ತೀರ್ಮಾನ ಕೈಗೊಂಡಿತ್ತು. ಆದ
Feb 101 min read


ಬೆಳ್ತಂಗಡಿಯಲ್ಲಿ ಅಪ್ರಾಪ್ತ ಕಾಲೇಜು ವಿದ್ಯಾರ್ಥಿನಿ ಅಪಹರಣ ಯತ್ನ
ಬೆಳ್ತಂಗಡಿ, ಫೆ.9: ಅಪ್ರಾಪ್ತ ವಯಸ್ಕ ಕಾಲೇಜು ವಿದ್ಯಾರ್ಥಿನಿಯನ್ನು ಅಪಹರಿಸಲು ಯತ್ನಿಸಿದ ಘಟನೆ ಬೆಳ್ತಂಗಡಿಯಲ್ಲಿ ಸೋಮವಾರ ಬೆಳಿಗ್ಗೆ ವರದಿಯಾಗಿದೆ. ಅಪಹರಣ ಯತ್ನ ವಿಫಲವಾದ ಬಳಿಕ ದುಷ್ಕರ್ಮಿಗಳು ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಫೆಬ್ರವರಿ 9ರಂದು ಬೆಳಿಗ್ಗೆ ಸುಮಾರು 8.30ರ ವೇಳೆಗೆ ಬೆಳ್ತಂಗಡಿ ನಗರದ ಸುದೇಮುಗೇರು ನಿವಾಸಿ ಹಾಗೂ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿನಿ ಕಾಲೇಜಿಗೆ ತೆರಳಲು ಸಂತೆಕಟ್ಟೆ ಕಡೆಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದಳು. ಈ ವೇಳೆ ಬಟ್ಟೆಯಿಂದ ಮುಚ್ಚಿದ ನಂಬರ್ ಪ್ಲೇಟ್ ಹೊಂದಿದ್ದ ಕಾರಿನಲ್ಲಿ ಬಂದ ಮೂವರು ಅಪರಿಚಿತರು
Feb 91 min read


ಪುತ್ತೂರಿನಲ್ಲಿ 1.6 ಕ್ವಿಂಟಾಲ್ ಗಾಂಜಾ ವಶ; ಮೂವರು ಆರೋಪಿಗಳ ಬಂಧನ
ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಯಶಸ್ವಿ ಕಾರ್ಯಾಚರಣೆಯಲ್ಲಿ ಪೊಲೀಸರು ಸುಮಾರು ರೂ.53 ಲಕ್ಷ ಮೌಲ್ಯದ 1 ಕ್ವಿಂಟಾಲ್ 6 ಕೆಜಿ 50 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾ ಮೂಲದ ವ್ಯಕ್ತಿಯೊಬ್ಬರನ್ನು ಒಳಗೊಂಡಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಂಜಾ ಸಾಗಾಟಕ್ಕೆ ಹಣ ಹಾಗೂ ವಾಹನದ ವ್ಯವಸ್ಥೆ ಮಾಡಿಕೊಟ್ಟ ಆರೋಪಿಗಳಾಗಿ ಬೆಳ್ತಂಗಡಿ ಚಾರ್ಮಾಡಿ ನಿವಾಸಿ ಮಹಮ್ಮದ್ ಫಯಾಜ್ ಡಿ.ಕೆ (27), ಬೆಳ್ತಂಗಡಿ ಕಕ್ಕಿಂಜೆ ನಿವಾಸಿ ನಝೀರ್ (42) ಮತ್ತು ಒಡಿಶಾ ಮೂಲದ ದೀಪಕ್ ಪಾತ್ರ (37)
Feb 81 min read


ಗೃಹಲಕ್ಷ್ಮಿ ಯೋಜನೆ: ಹಣ ಸೋರಿಕೆ ತಡೆಯಲು ‘ಜೀವಿತ ಪ್ರಮಾಣಪತ್ರ’ ಕಡ್ಡಾಯಕ್ಕೆ ಚಿಂತನೆ
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಈಗ ಹೊಸ ನಿಯಮ ಜಾರಿಗೆ ಮುಂದಾಗಿದೆ. ಮರಣ ಹೊಂದಿದ ಫಲಾನುಭವಿಗಳ ಖಾತೆಗೂ ಹಣ ಜಮಾ ಆಗುತ್ತಿರುವುದನ್ನು ತಡೆಗಟ್ಟಲು, ಇನ್ಮುಂದೆ ಫಲಾನುಭವಿಗಳು ‘ಜೀವಿತ ಪ್ರಮಾಣಪತ್ರ’ ಸಲ್ಲಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಗಂಭೀರ ಆಲೋಚನೆ ನಡೆಸಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ದಿನೇಶ್ ಗೂಳಿಗೌಡ ಅವರು ನೀಡಿದ ಲಿಖಿತ ಮನವಿಯನ್ನು ಪುರಸ್ಕರಿಸಿರುವ ಸಿಎಂ ಸಿದ್ದರಾಮಯ್ಯ, ಈ ಬಗ್ಗೆ ತಕ್ಷಣ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ
Feb 81 min read


ಬಿಎಸ್ಎನ್ಎಲ್ ನೇಮಕಾತಿ 2026: ಇಂಜಿನಿಯರ್ಗಳು ಮತ್ತು ಹಣಕಾಸು ತಜ್ಞರಿಗೆ ಸುವರ್ಣಾವಕಾಶ!
ನವದೆಹಲಿ: ಕೇಂದ್ರ ಸರ್ಕಾರದ ಒಡೆತನದ ಭಾರತ ಸಂಚಾರ ನಿಗಮ ನಿಯಮಿತ (BSNL), ತನ್ನ 4G ಮತ್ತು 5G ಸೇವೆಗಳ ಉನ್ನತೀಕರಣದ ಭಾಗವಾಗಿ 'ಹಿರಿಯ ಕಾರ್ಯನಿರ್ವಾಹಕ ತರಬೇತುದಾರ' (Senior Executive Trainee - SET) ಹುದ್ದೆಗಳ ನೇಮಕಾತಿಗೆ ಚಾಲನೆ ನೀಡಿದೆ. ದೇಶಾದ್ಯಂತ ಒಟ್ಟು 120 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಫೆಬ್ರವರಿ 5 ರಿಂದ ಪ್ರಕ್ರಿಯೆ ಆರಂಭವಾಗಿದೆ. ಹುದ್ದೆಗಳ ವಿವರ: * ಟೆಲಿಕಾಂ ವಿಭಾಗ: 95 ಹುದ್ದೆಗಳು (ಅರ್ಹತೆ: BE/B.Tech - Electronics, CS, IT, Electrical) * ಫೈನಾನ್ಸ್ ವಿಭಾಗ: 25 ಹುದ್ದೆಗಳು (ಅರ್ಹತೆ: CA ಅಥವಾ CMA) ಪ್ರಮುಖ ದಿನಾಂಕಗಳು: * ಅರ್ಜಿ ಸಲ
Feb 61 min read


ಗಡಾಯಿಕಲ್ಲು ಚಾರಣಕ್ಕೆ ತಾತ್ಕಾಲಿಕ ನಿಷೇಧ
ಬೇಸಿಗೆಯ ಹಿನ್ನೆಲೆಯಲ್ಲಿ ಕಾಡ್ಗಿಚ್ಚು ತಡೆಗಟ್ಟಲು ಮುಂಜಾಗ್ರತಾ ಕ್ರಮವಾಗಿ ಬೆಳ್ತಂಗಡಿಯ ಪ್ರಸಿದ್ಧ ಗಡಾಯಿಕಲ್ಲು (ಜಮಲಾಬಾದ್ ಕೋಟೆ) ಚಾರಣವನ್ನು ಫೆಬ್ರವರಿ 7ರಿಂದ ಜಾರಿಗೆ ಬರುವಂತೆ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗವು ಈ ಆದೇಶ ಹೊರಡಿಸಿದ್ದು, ಮುಂದಿನ ಸೂಚನೆಯವರೆಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
Feb 61 min read


ಪಾಕ್: ಭೀಕರ ಆತ್ಮಾಹುತಿ ದಾಳಿ: 31 ಸಾವು, 169ಕ್ಕೂ ಹೆಚ್ಚು ಮಂದಿಗೆ ಗಾಯ
ಇಸ್ಲಾಮಾಬಾದ್: ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ನ ತರ್ಲೈ ಇಮಾಮ್ಬರ್ಗಾ ದರ್ಗಾದಲ್ಲಿ ನಡೆದ ಭೀಕರ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 31 ಮಂದಿ ಸಾವನ್ನಪ್ಪಿದ್ದು, 169ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ನಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಪ್ರಧಾನಿ ಶೆಹಬಾಜ್ ಷರೀಫ್ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಬಲೂಚಿಸ್ತಾನದಲ್ಲಿ ಪಾಕ್ ಪಡೆಗಳು ನಡಸುತ್ತಿರುವ 'ರದ್ದ್-ಉಲ್-ಫಿಟ್ನಾ-1' ಕಾರ್ಯಾಚರಣೆಯ ನಡುವೆಯೇ ಈ ದಾಳಿ ನಡೆದಿದೆ. ಕಳೆದ ಮೂರು ತಿಂಗಳಲ್ಲಿ ಪಾಕಿಸ್ತಾನದಲ್ಲಿ ಸಂಭವಿಸಿದ
Feb 61 min read


ಗರ್ಭಪಾತಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ಐತಿಹಾಸಿಕ ತೀರ್ಪು: ತಾಯಿಯ ಹಕ್ಕೇ ಸರ್ವೋಚ್ಚ
ನವದೆಹಲಿ: ಭಾರತದಲ್ಲಿ ಗರ್ಭಪಾತದ ಕಾನೂನು ಮಿತಿಯನ್ನು ಮೀರಿದ ಸಂದರ್ಭದಲ್ಲೂ ಸುಪ್ರೀಂ ಕೋರ್ಟ್ ಇಂದು ಒಂದು ಕ್ರಾಂತಿಕಾರಿ ತೀರ್ಪು ನೀಡಿದೆ. 30 ವಾರಗಳ ಗರ್ಭಧಾರಣೆಯ ನಂತರವೂ, ವಿಶೇಷ ಸಂದರ್ಭಗಳಲ್ಲಿ ಗರ್ಭಪಾತ ಮಾಡಿಸಿಕೊಳ್ಳುವ ಹಕ್ಕು ಮಹಿಳೆಗಿದೆ ಎಂದು ನ್ಯಾಯಾಲಯ ಹೇಳಿದೆ. ಸಾಮಾನ್ಯವಾಗಿ ಭಾರತದಲ್ಲಿ 24 ವಾರಗಳವರೆಗೆ (ಸುಮಾರು 5-6 ತಿಂಗಳು) ಮಾತ್ರ ಗರ್ಭಪಾತಕ್ಕೆ ಕಾನೂನುಬದ್ಧ ಅವಕಾಶವಿದೆ. ಆದರೆ, ಹುಟ್ಟಲಿರುವ ಮಗುವಿನ ಹಕ್ಕಿಗಿಂತ ಗರ್ಭಧರಿಸಿದ ಮಹಿಳೆಯ ದೈಹಿಕ ಮತ್ತು ಮಾನಸಿಕ ಹಕ್ಕು ಹಾಗೂ ಆಕೆಯ ಸ್ವಾಯತ್ತತೆ ಅತಿ ಮುಖ್ಯ ಎಂದು ನ್ಯಾಯಪೀಠವು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ. ನ್ಯಾಯಮೂರ್
Feb 61 min read


ವಿದೇಶಿ ಪ್ರವಾಸಿಗರೊಂದಿಗೆ ಬಲವಂತದ ಸೆಲ್ಫಿ ತಗೊಂಡ್ರೆ ಜೈಲು ಫಿಕ್ಸ್: ಗೋವಾ ಪೊಲೀಸರ ಖಡಕ್ ಎಚ್ಚರಿಕೆ!
ಗೋವಾ ರಾಜ್ಯದ ಕಡಲತೀರಗಳಲ್ಲಿ ವಿದೇಶಿ ಪ್ರಜೆಗಳಿಗೆ ಕಿರುಕುಳ ನೀಡುವ ದೇಶಿ ಪ್ರವಾಸಿಗರ ವಿರುದ್ಧ ಗೋವಾ ಪೊಲೀಸರು ಈಗ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಬೀಚ್ಗಳಲ್ಲಿ ವಿದೇಶಿಯರ ಒಪ್ಪಿಗೆಯಿಲ್ಲದೆ ಅವರ ಫೋಟೋ ತೆಗೆಯುವುದು ಅಥವಾ ಬಲವಂತವಾಗಿ ಸೆಲ್ಫಿಗಾಗಿ ಒತ್ತಾಯಿಸುವುದು ಕಂಡುಬಂದರೆ ಅಂತಹವರನ್ನು ಸ್ಥಳದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಶುಕ್ರವಾರ ಎಚ್ಚರಿಸಿದ್ದಾರೆ. ದೇಶೀಯ ಪ್ರವಾಸಿಗರು ವಿದೇಶಿ ಮಹಿಳೆಯರ ಚಿತ್ರಗಳನ್ನು ಕ್ಲಿಕ್ಕಿಸಿ ಕಿರಿಕಿರಿ ಉಂಟುಮಾಡುತ್ತಿರುವ ಹಲವಾರು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇತ್ತೀಚೆಗೆ ಉತ್ತರ
Feb 61 min read


ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭಾರಿ ಕಳವು: ಪ್ರಯಾಣಿಕರ ಲಗೇಜ್ನಲ್ಲಿದ್ದ 1 ಕೋಟಿ ಮೌಲ್ಯದ ಚಿನ್ನ, ವಜ್ರಾಭರಣ ನಾಪತ್ತೆ
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳು ಕಳ್ಳತನವಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಹುಬ್ಬಳ್ಳಿ ಮೂಲದ ಮಹಿಳೆಯೊಬ್ಬರು ಕಳೆದ ನವೆಂಬರ್ನಲ್ಲಿ ದುಬೈ ಮೂಲಕ ಅಮೆರಿಕಾಕ್ಕೆ ತೆರಳುತ್ತಿದ್ದಾಗ ಈ ಕೃತ್ಯ ನಡೆದಿದೆ. ಇತ್ತೀಚೆಗೆ ಭಾರತಕ್ಕೆ ವಾಪಸ್ಸಾದ ಸಂತ್ರಸ್ತೆ ಈ ಬಗ್ಗೆ ಅಧಿಕೃತವಾಗಿ ದೂರು ದಾಖಲಿಸಿದ್ದು, ವಿಮಾನ ನಿಲ್ದಾಣದ ಭದ್ರತಾ ವ್ಯವಸ್ಥೆಯ ಬಗ್ಗೆ ಆತಂಕ ವ್ಯಕ್ತವಾಗಿದೆ. ದೂರಿನ ಪ್ರಕಾರ, ಮಹಿಳೆ ಚೆಕ್-ಇನ್ ಪ್ರಕ್ರಿಯೆಯ ವೇಳೆ ಲಗೇಜ್ ಬ್ಯಾಗ್ನಲ್ಲಿ ಆಭರಣಗಳಿರುವುದನ್ನು ಸಿಬ್ಬಂದಿಗೆ ತಿಳ
Feb 61 min read


ಇಂದಿನ ಚಿನ್ನದ ದರ ಎಷ್ಟಿದೆ ಚೆಕ್ ಮಾಡಿ
ಫೆಬ್ರವರಿ 4, 2026 ರಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ. ಕಳೆದ ಕೆಲವು ದಿನಗಳ ಇಳಿಕೆಯ ನಂತರ ಇಂದು ಬೆಲೆಯಲ್ಲಿ ದಿಢೀರ್ ಏರಿಕೆ ಕಂಡುಬಂದಿದೆ. ಇಂದಿನ ಚಿನ್ನದ ದರಗಳು (ಪ್ರತಿ 10 ಗ್ರಾಂಗೆ): 22 ಕ್ಯಾರೆಟ್ (ಆಭರಣ ಚಿನ್ನ): ₹1,41,110 (ನಿನ್ನೆಗಿಂತ ₹10 ಏರಿಕೆ). ಕೆಲವು ಮೂಲಗಳ ಪ್ರಕಾರ ಬೆಂಗಳೂರಿನಲ್ಲಿ 10 ಗ್ರಾಂಗೆ ಸುಮಾರು ₹1,47,150 ರವರೆಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ. 24 ಕ್ಯಾರೆಟ್ (ಅಪರಂಜಿ ಚಿನ್ನ): ₹1,53,940 (ನಿನ್ನೆಗಿಂತ ₹10 ಏರಿಕೆ). ನಗರವಾರು ಅಂದಾಜು ದರಗಳು (1 ಗ್ರಾಂಗೆ): ಬೆಂಗಳೂರು: 22K - ₹14,111 | 24K - ₹15
Feb 61 min read


ದಕ್ಷಿಣ ಕನ್ನಡದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ವೇಗ: ದೆಹಲಿಯಲ್ಲಿ ಕೇಂದ್ರ ಕಾರ್ಯದರ್ಶಿಗಳೊಂದಿಗೆ ಸಂಸದ ಕ್ಯಾ. ಬ್ರಿಜೇಶ್ ಚೌಟ ಚರ್ಚೆ
ನವದೆಹಲಿ/ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಇಂದು ನವದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಭೇಟಿಯಾದ ಸಂಸದರು, ಜಿಲ್ಲೆಯ ಹೆದ್ದಾರಿ ಕಾಮಗಾರಿಗಳ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಸವಿಸ್ತಾರವಾಗಿ ಚರ್ಚಿಸಿದರು. ಯಾವುದೇ ಕಾರಣಕ್ಕೂ ಕಾಮಗಾರಿಗಳು ವಿಳಂಬವಾಗದಂತೆ ಎಚ್ಚರವಹಿಸಿ, ನಿಗದಿತ ಕಾಲಮಿತಿಯೊಳಗೆ ಯೋಜನೆಗಳನ್ನು ಲೋಕಾರ್ಪಣೆಗೊಳಿಸಬೇಕೆಂದು ಅವರ
Feb 61 min read


WPL 2026 ಫೈನಲ್: ಡೆಲ್ಲಿ ಕ್ಯಾಪಿಟಲ್ಸ್ನ್ನು 6 ವಿಕೆಟ್ಗಳಿಂದ ಮಣಿಸಿದ RCB – ಎರಡನೇ ಬಾರಿ ಚಾಂಪಿಯನ್!
ಬೆಂಗಳೂರು: ಮಹಿಳಾ ಪ್ರೀಮಿಯರ್ ಲೀಗ್ (WPL) 2026ರ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಡೆಲ್ಲಿ ಕ್ಯಾಪಿಟಲ್ಸ್ (DC) ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಎರಡನೇ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಮೂಲಕ RCB, ಮುಂಬೈ ಇಂಡಿಯನ್ಸ್ಗಳೊಂದಿಗೆ ಗರಿಷ್ಠ WPL ಪ್ರಶಸ್ತಿಗಳ ಸಂಖ್ಯೆಯಲ್ಲಿ ಸಮಬಲ ಸಾಧಿಸಿದೆ. RCB ನಾಯಕಿ ಸ್ಮೃತಿ ಮಂದಾನಾ ಅವರ ಚತುರ ನಾಯಕತ್ವದಲ್ಲಿ ತಂಡ ಸಂಪೂರ್ಣ ಟೂರ್ನಿಯಲ್ಲಿ ಶಿಸ್ತುಬದ್ಧ ಹಾಗೂ ಸಮತೋಲನ ಪ್ರದರ್ಶನ ನೀಡಿತು. ಲೀಗ್ ಹಂತದಲ್ಲೇ ಐದು ಜಯಗಳಿಸಿ WPL ಇತಿಹಾಸದಲ್ಲೇ ಮೊದಲ ತಂಡ ಎಂಬ ಗೌರವ ಪಡೆದ RCB, ಫೈನಲ್ನಲ್ಲೂ ಅದೇ ಆತ್ಮವಿಶ
Feb 51 min read
Archive
bottom of page



