top of page
News Articles
Sathyapatha News Plus


ಐರ್ಲೆಂಡ್ನಲ್ಲಿ ಕಡಬದ ಯುವಕ ಅನುಮಾನಾಸ್ಪದ ಸಾವು; ಆತ್ಮಹತ್ಯೆ ಶಂಕೆ!
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ವಿಮಲಗಿರಿ ನಿವಾಸಿ ಸಾಂಜೋ ಸುನಿಲ್ (31) ಅವರು ಐರ್ಲೆಂಡ್ನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. Dublin ನಗರದ ಫಿಂಗ್ಲಾಸ್ ಪ್ರದೇಶದ ನಿವಾಸದಲ್ಲಿ ವಾಸವಾಗಿದ್ದ ಅವರು ಬುಧವಾರ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ.
Feb 191 min read


ಕಡಬ ಗುಂಡೇಟು ಪ್ರಕರಣಕ್ಕೆ ಹೊಸ ತಿರುವು - ವೈದ್ಯಕೀಯ ವರದಿ ಅಚ್ಚರಿ ಮಾಹಿತಿ ಬಹಿರಂಗ
ದಕ್ಷಿಣ ಕನ್ನಡ ಜಿಲ್ಲೆಯ ರಾಮಕುಂಜ (ಕಡಬ ತಾಲೂಕು)ದಲ್ಲಿ ಜನವರಿ 24ರಂದು ನಡೆದ 17 ವರ್ಷದ ಬಾಲಕ ಮೋಕ್ಷ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ವೈದ್ಯಕೀಯ ಮಾಹಿತಿ ಹೊರಬಿದ್ದಿದೆ. ಆರಂಭಿಕವಾಗಿ ಮೋಕ್ಷ್ ತನ್ನ ತಂದೆಗೆ ಚಾಕುವಿನಿಂದ ಇರಿದು ಬಳಿಕ ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿತ್ತು. ಆದರೆ ಇದೀಗ ಬಂದ ವೈದ್ಯಕೀಯ ಪರೀಕ್ಷಾ ವರದಿ ಪ್ರಕರಣಕ್ಕೆ ಹೊಸ ಆಯಾಮ ನೀಡಿದೆ. ತಂದೆ ವಸಂತ ಅಮೀನ್ ಅವರ ಹೊಟ್ಟೆ ಭಾಗಕ್ಕೆ ತಗುಲಿರುವುದು ಚಾಕುವಿನ ಗಾಯವಲ್ಲ, ಬದಲಾಗಿ ಬಂದೂಕಿನ ಗುಂಡೇಟು ಎಂದು ದೃಢಪಟ್ಟಿದೆ. ಇದರಿಂದ ಪ್ರಕರಣದ ದಿಕ್ಕೇ ಬದಲಾಗಿದೆ. ಏನಾಗಿದೆ ಘ
Feb 181 min read


ಕಡಬದಲ್ಲಿ ಕಂದಾಯ ನಿರೀಕ್ಷಕ ಲಂಚ ಸ್ವೀಕರಿಸುತ್ತಿದ್ದಾಗ ಬಯಲು – 10 ಸೆಂಟ್ಸ್ ಕನ್ವರ್ಷನ್ಗೆ 1000 ರೂ. ಬೇಡಿಕೆ!
ಕಡಬ, ಫೆ.17: ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡಿಸಿಕೊಳ್ಳಲು ಸಾರ್ವಜನಿಕರು ಹೈರಾಣಾಗುತ್ತಿರುವ ನಡುವೆಯೇ, ಕಡಬ ತಾಲೂಕಿನ ಕಂದಾಯ ನಿರೀಕ್ಷಕರೊಬ್ಬರು ಲಂಚ ಸ್ವೀಕರಿಸುತ್ತಿರುವ ಆರೋಪ ಬೆಳಕಿಗೆ ಬಂದಿದೆ. ತಾಲೂಕಿನ 10 ಸೆಂಟ್ಸ್ ಭೂಮಿಯ ಕನ್ವರ್ಷನ್ (ಭೂ ಪರಿವರ್ತನೆ) ಪತ್ರಕ್ಕೆ ಸಹಿ ಹಾಕಲು ಸಂಬಂಧಪಟ್ಟ ಕಂದಾಯ ನಿರೀಕ್ಷಕ ಪೃಥ್ವಿ ಎಂಬ ಅಧಿಕಾರಿ ಪ್ರತಿ ಸೆಂಟ್ಸ್ಗೆ ₹100ರಂತೆ ಲಂಚದ ಬೇಡಿಕೆ ಇಟ್ಟಿದ್ದಾರೆಯೆಂದು ಆರೋಪಿಸಲಾಗಿದೆ. ಒಟ್ಟು 10 ಸೆಂಟ್ಸ್ ಭೂಮಿಗೆ ₹1000 ಲಂಚ ಕೇಳಲಾಗಿದ್ದು, ಫೆಬ್ರವರಿ 4, 2026ರಂದು ಕಚೇರಿಯಲ್ಲೇ ಹಣ ಸ್ವೀಕರಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿರುವುದಾಗಿ
Feb 171 min read


ಕೆಲಂಬೀರಿ ಶ್ರೀ ಬ್ರಹ್ಮಬೈದೇರುಗಳ ನೇಮೋತ್ಸವದ ಅಂಗವಾಗಿ ಕ್ರೀಡಾಕೂಟ
ಕಾಣಿಯೂರು, ಫೆ.15: ಕೆಲಂಬೀರಿ ಶ್ರೀ ಬ್ರಹ್ಮಬೈದೇರುಗಳ ನೇಮೋತ್ಸವದ ಅಂಗವಾಗಿ ನಡೆದ ಕ್ರೀಡಾಕೂಟವು ಭಕ್ತಿ ಮತ್ತು ಉತ್ಸಾಹದ ನಡುವೆ ಸಡಗರದಿಂದ ನಡೆಯಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬೆಳಂದೂರು ಅಶ್ವತ್ಥ ವಿವಾಹ ಮಹೋತ್ಸವ ಸಮಿತಿಯ ಅಧ್ಯಕ್ಷ ಸೀತಾರಾಮ ಗೌಡ ಮುಂಡಾಳ ಅವರು, “ಆಡಂಬರದ ಭಕ್ತಿಗಿಂತ ಪರಿಶುದ್ಧವಾದ ಭಕ್ತಿಯೇ ಶ್ರೇಷ್ಠ. ದೇವರಿಗೆ ಮಾಡುವ ವೈಭವಕ್ಕಿಂತ ಮನಸ್ಸಿನ ನಿಷ್ಕಲ್ಮಶ ಭಕ್ತಿ ಮತ್ತು ಶ್ರದ್ದೆಯೇ ಮುಖ್ಯ” ಎಂದು ತಿಳಿಸಿದರು. ನಿರಂತರ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ವೃದ್ಧಿ ಸಾಧ್ಯವಾಗುತ್ತದೆ. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಹ
Feb 161 min read


400 ಕೋಟಿ ದರೋಡೆ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್
ಕರ್ನಾಟಕ–ಗೋವಾ ಗಡಿಭಾಗದಲ್ಲಿರುವ Chorla Ghat ನಲ್ಲಿ ನಡೆದಿದೆ ಎಂದು ಹೇಳಲಾಗಿದ್ದ 400 ಕೋಟಿ ರೂಪಾಯಿ ದರೋಡೆ ಪ್ರಕರಣಕ್ಕೆ ಭಾರೀ ತಿರುವು ಸಿಕ್ಕಿದೆ. ಮಹಾರಾಷ್ಟ್ರ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡ (Maharashtra State Investigation Team - SIT) ಸಲ್ಲಿಸಿದ ವರದಿಯಲ್ಲಿ, ಚೋರ್ಲಾ ಘಾಟ್ನಲ್ಲಿ ಯಾವುದೇ ದರೋಡೆ ನಡೆದಿರುವುದಕ್ಕೆ ನಂಬಲರ್ಹ ಸಾಕ್ಷ್ಯಗಳು ಲಭ್ಯವಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಪ್ರಕರಣ ಹೇಗೆ ಆರಂಭವಾಯಿತು? ಅಮಾನ್ಯೀಕರಿಸಲ್ಪಟ್ಟ 2000 ರೂ. ನೋಟುಗಳನ್ನು ತುಂಬಿದ್ದ ಕಂಟೈನರ್ ಚೋರ್ಲಾ ಘಾಟ್ ಪ್ರದೇಶದಲ್ಲಿ ದರೋಡೆಗೆ ಒಳಪಟ್ಟಿದೆ ಎಂದು ಸಂದೀಪ್ ಪಾಟೀಲ್ ಎಂಬವರು
Feb 161 min read


ಭಾರತೀಯ ಸೇನೆಯಲ್ಲಿ ಅಗ್ನಿವೀರ್ ನೇಮಕಾತಿ 2026
ಭಾರತೀಯ ಸೇನೆಯು ಅಗ್ನಿವೀರ್ ನೇಮಕಾತಿ 2026ರ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ದೇಶಸೇವೆಗೆ ತೊಡಗಿಸಿಕೊಳ್ಳಲು ಆಸಕ್ತ ಯುವಕರಿಗೆ ಇದು ಮಹತ್ವದ ಅವಕಾಶವಾಗಿದೆ. ಫೆಬ್ರವರಿ 13ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಏಪ್ರಿಲ್ 1ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ joinindianarmy.nic.in ಮೂಲಕ ಅರ್ಜಿ ಸಲ್ಲಿಸಬಹುದು. ಪರೀಕ್ಷೆ ಮತ್ತು ಆಯ್ಕೆ ಪ್ರಕ್ರಿಯೆ ಅಗ್ನಿವೀರ್ ನೇಮಕಾತಿಗಾಗಿ ಸಾಮಾನ್ಯ ಪ್ರವೇಶ ಪರೀಕ್ಷೆ (CEE) ಜೂನ್ 1ರಿಂದ ಜೂನ್ 15ರವರೆಗೆ ನಡೆಯಲಿದೆ. ಆನ್ಲೈನ್ ಪರೀಕ್ಷೆಯಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ
Feb 161 min read


Karnataka State Road Transport Corporationಯಲ್ಲಿ ಲಗೇಜ್ ದರ ಏರಿಕೆ
ನಾಳೆಯಿಂದ ಪರಿಷ್ಕೃತ ದರ ಜಾರಿ; ಪ್ರಯಾಣಿಕರಿಗೆ ಹೆಚ್ಚುವರಿ ಭಾರ ಬೆಂಗಳೂರು, ಫೆ.15: ರಾಜ್ಯ ರಸ್ತೆ ಸಾರಿಗೆ ನಿಗಮವಾದ Karnataka State Road Transport Corporation (ಕೆಎಸ್ಆರ್ಟಿಸಿ) ಲಗೇಜ್ ಸಾಗಣೆ ದರವನ್ನು ಪರಿಷ್ಕರಿಸಿ ನಾಳೆಯಿಂದ ಜಾರಿಗೆ ತರಲು ಆದೇಶ ಹೊರಡಿಸಿದೆ. ಡೀಸೆಲ್ ಬೆಲೆ ಏರಿಕೆ, ಸಿಬ್ಬಂದಿ ವೆಚ್ಚ ಹಾಗೂ ಇತರೆ ಕಾರ್ಯಾಚರಣಾ ಖರ್ಚುಗಳನ್ನು ಉಲ್ಲೇಖಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷಾ ತಿಳಿಸಿದ್ದಾರೆ. ಶಕ್ತಿ ಯೋಜನೆ ಜಾರಿಗೆ ಬಂದ ನಂತರ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದರಿಂದ ಲಗೇಜ್ ಸಾಗಾಟದ ಮೇ
Feb 151 min read


ಪುತ್ತೂರು : ಕ್ರೀಡಾಕೂಟದ ವೇಳೆ ಹೃದಯಾಘಾತ – ರವಿ ಕುಮಾರ್ ಕಲ್ಕಾರ್ ನಿಧನ
ಪುತ್ತೂರು: ಹೃದಯಾಘಾತದಿಂದ ವ್ಯಕ್ತಿಯೊಬ್ಬರು ಮೃತಪಟ್ಟ ದುರ್ಘಟನೆ ಪುತ್ತೂರಿನ ಶಾಂತಿಗೋಡಿನಲ್ಲಿ ನಡೆದಿದೆ. ಮೃತರನ್ನು 48 ವರ್ಷದ ರವಿ ಕುಮಾರ್ ಕಲ್ಕಾರ್ ಎಂದು ಗುರುತಿಸಲಾಗಿದೆ. ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ವೇಳೆ ರವಿ ಅಕಸ್ಮಾತ್ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆಂದು ತಿಳಿದು ಬಂದಿದೆ. ರವಿ ಕಲ್ಕಾರ್ ಹಲವು ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗ ನಿರ್ವಹಿಸಿ ಬಳಿಕ ಸ್ವಗ್ರಾಮ ಶಾಂತಿಗೋಡು ಕಲ್ಕಾರ್ ಪ್ರದೇಶದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದರು. ಸಾಮಾಜಿಕ ಹಾಗೂ ಸಂಘಟನೆ ಚಟುವಟಿಕೆಗಳಲ್ಲಿ ಸಕ್ರಿ
Feb 151 min read


ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ 141 ಸ್ಥಾನ ಗೆಲ್ಲುತ್ತದೆ: ಡಿಕೆ ಶಿವಕುಮಾರ್ ವಿಶ್ವಾಸ
ಹಾವೇರಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 141 ಸ್ಥಾನಗಳನ್ನು ಗೆಲ್ಲಲಿದೆ ಎಂದು ಉಪ ಮುಖ್ಯಮಂತ್ರಿ D. K. Shivakumar ವಿಶ್ವಾಸ ವ್ಯಕ್ತಪಡಿಸಿದರು. ಹಾವೇರಿಯಲ್ಲಿ ಕಾಂಗ್ರೆಸ್ ಸರ್ಕಾರ 1000 ದಿನ ಪೂರೈಸಿದ ಹಿನ್ನೆಲೆ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಿವೆ ಎಂದು ಹೇಳಿದರು. “ನಮ್ಮ ಸರ್ಕಾರಕ್ಕೆ ಸಾವಿರ ದಿನಗಳು ಪೂರ್ಣಗೊಂಡಿವೆ. ಐದು ಗ್ಯಾರಂಟಿ ಯೋಜನೆಗಳು ಕೇವಲ ಕಾಂಗ್ರೆಸ್ ಪಕ್ಷದ ಭರವಸೆಗಳಾಗಿರದೆ, ಜನರ ಜೀವನದಲ್ಲಿ ಬದಲಾವಣೆ ತಂದಿವೆ. ಇದು ಈಗ ದೇಶದ ಗ್ಯಾರಂಟಿಯಾಗಿದೆ,” ಎಂದು ಅವರು ಹೇಳ
Feb 141 min read


ಅಬುಧಾಬಿಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ವಿಟ್ಲದ ಶ್ರೀಲಕ್ಷ್ಮಿ
ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಚಿನ್ನ, ಎರಡು ಬೆಳ್ಳಿ, ಒಂದು ಕಂಚು ಪದಕ ಜಯ ಅಬುಧಾಬಿ: ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತೀಯ ಕ್ರೀಡಾಪಟುಗಳು ಮಿಂಚುತ್ತಿರುವಾಗ, ಪ್ರತಿಭಾವಂತ ಈಜುಗಾರ್ತಿ ಶ್ರೀಲಕ್ಷ್ಮಿ ಅವರು ವಿಶಿಷ್ಟ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ. International Masters Games Association ವತಿಯಿಂದ ಆಯೋಜಿಸಲ್ಪಟ್ಟ ಕ್ರೀಡಾಕೂಟವು Mohammed Bin Zayed City Swimming Pool ನಲ್ಲಿ ನಡೆಯಿತು. ವಿಶ್ವದ ವಿವಿಧ ದೇಶಗಳಿಂದ ಭಾಗವಹಿಸಿದ್ದ ಪ್ರತಿಭಾವಂತ ಈಜುಗಾರರ ನಡುವೆ ಶ್ರೀಲಕ್ಷ್ಮಿ ಅವರು ಅತ್ಯುತ್ತಮ ಪ್ರದರ್ಶನ ನೀಡಿ ನಾಲ್ಕು ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. 200 ಮೀ
Feb 141 min read


T20WC: ಜಿಂಬಾಬೈ ಎದುರು ಹೀನಾಯವಾಗಿ ಸೋತ ಆಸಿಸ್
ಟಿ20 ವಿಶ್ವಕಪ್ನ ಗ್ರೂಪ್ ಬಿ ಪಂದ್ಯದಲ್ಲಿ ಜಿಂಬಾಬೈ ತಂಡ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿದೆ. 169 ರನ್ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 19.3 ಓವರ್ಗಳಲ್ಲಿ 146 ರನ್ಗಳಿಗೆ ಆಲೌಟ್ ಆಗಿ 23 ರನ್ಗಳ ಸೋಲು ಕಂಡಿತು. ಜಿಂಬಾಬೈ ನೀಡಿದ ಸವಾಲಿನ ಗುರಿಯನ್ನು ಬೆನ್ನಟ್ಟಲು ಇಳಿದ ಆಸ್ಟ್ರೇಲಿಯಾ ಆರಂಭದಿಂದಲೇ ಒತ್ತಡಕ್ಕೆ ಒಳಗಾಯಿತು. ಮಧ್ಯ ಕ್ರಮಾಂಕದಲ್ಲಿ ಮ್ಯಾಟ್ (65) ಮತ್ತು ಮ್ಯಾಕ್ಸ್ವೆಲ್ (31) ಹೋರಾಟ ನೀಡಿದರೂ, ಇತರ ಬ್ಯಾಟ್ಸ್ಮನ್ಗಳು ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಜಿಂಬಾಬೈ ಪರ ಬೌಲಿಂಗ್ ದಾಳಿಯಲ್ಲಿ ಮುಝರಬಾನಿ 4 ವಿಕೆಟ್ಗಳು ಪಡೆದು ಆಸಿಸ್ ಬ
Feb 131 min read


ಪುತ್ತೂರು: ಆನ್ ಲೈನ್ ಮೂಲಕ ವಂಚಿಸುತ್ತಿದ್ದಾತ ಅರೆಸ್ಟ್
ಪುತ್ತೂರು: ಆನ್ಲೈನ್ ಮೂಲಕ 2.37 ಲಕ್ಷ ರೂಪಾಯಿಗೂ ಅಧಿಕ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಸೈಬರ್ ಅಪರಾಧ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಮೂಲತಃ ಮಹಾರಾಷ್ಟ್ರದವನಾಗಿದ್ದು, ಸದ್ಯ ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆಯಲ್ಲಿ ವಾಸವಿರುವ ಅವಿನಾಶ್ ರಮೇಶ್ ಗೌಡ (24) ಎಂದು ಗುರುತಿಸಲಾಗಿದೆ. ಪುತ್ತೂರಿನ ಯಶೋಧರ ಎಂಬವರು ನೀಡಿದ ದೂರಿನ ಪ್ರಕಾರ, ಅಪರಿಚಿತ ವ್ಯಕ್ತಿಯೊಬ್ಬನು ವಿಮಾ ಕಂಪನಿಯ ಪ್ರತಿನಿಧಿ ಎಂದು ಹೇಳಿಕೊಂಡು ವಿವಿಧ ಮೊಬೈಲ್ ಸಂಖ್ಯೆಗಳಿಂದ ಕರೆ ಮಾಡಿ ಹೊಸ ವಿಮಾ ಪಾಲಿಸಿ ಖರೀದಿಸಲು ಹಾಗೂ ಪ್ರೀಮಿಯಂ ಪಾವತಿಸಲು ಒತ್ತಾಯಿಸಿದ್ದ.
Feb 131 min read


ಏರ್ ಇಂಡಿಯಾ ವಿಮಾನ ಅಪಘಾತ ಉದ್ದೇಶಪೂರ್ವಕ ಕೃತ್ಯ? ಏನಿದು ವರದಿ!
ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತವು ತಾಂತ್ರಿಕ ದೋಷದಿಂದ ಸಂಭವಿಸಿಲ್ಲ, ಬದಲಾಗಿ ಎಂಜಿನ್ಗಳ ಇಂಧನ ನಿಯಂತ್ರಣ ಸ್ವಿಚ್ಗಳನ್ನು ಕೈಯಾರೆ ಆಫ್ ಮಾಡಿರುವ ಉದ್ದೇಶಪೂರ್ವಕ ಕೃತ್ಯವೇ ಕಾರಣವೆಂದು ಹೊಸ ವರದಿ ಹೇಳಿದೆ. ಇಟಾಲಿಯನ್ ದಿನಪತ್ರಿಕೆ Corriere della Sera ಪ್ರಕಟಿಸಿದ ವರದಿಯ ಪ್ರಕಾರ, ಕಳೆದ ವರ್ಷ ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ 171ರ ದುರಂತವು ತಾಂತ್ರಿಕ ವೈಫಲ್ಯದಿಂದ ಅಲ್ಲ, ಆದರೆ “ಉದ್ದೇಶಪೂರ್ವಕ ಕೃತ್ಯ”ದಿಂದ ಸಂಭವಿಸಿದೆ ಎಂದು ತನಿಖಾಧಿಕಾರಿಗಳು ಪ್ರಾಥಮಿಕವಾಗಿ ನಿರ್ಧರಿಸಿದ್ದಾರೆ. ಈ ಮಾಹಿತಿ ನವದೆಹಲಿ ಮತ್ತು ವಾಷಿಂಗ್ಟನ್ ನಡುವೆ ನಡೆದ ಇತ್
Feb 121 min read


GATE ಉತ್ತೀರ್ಣರಿಗೆ ಕೇಂದ್ರದಲ್ಲಿ ಉದ್ಯೋಗಾವಕಾಶ: NIC ನಲ್ಲಿ 376 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ: ಕೇಂದ್ರ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಮಾಹಿತಿ ಕೇಂದ್ರ (NIC) 376 ವೈಜ್ಞಾನಿಕ ಮತ್ತು ತಾಂತ್ರಿಕ ಸಹಾಯಕ ‘A’ (Scientific & Technical Assistant ‘A’) ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ತಾಂತ್ರಿಕ ಹಾಗೂ ಐಟಿ ಕ್ಷೇತ್ರದಲ್ಲಿ ಸರ್ಕಾರಿ ಸೇವೆಗೆ ಸೇರಲು ಬಯಸುವವರಿಗೆ ಇದು ಮಹತ್ವದ ಅವಕಾಶವಾಗಿದೆ. ಈ ಹುದ್ದೆಗಳು ಗುಂಪು–ಬಿ, ನಾನ್-ಗೆಜೆಟೆಡ್ ಎಸ್ & ಟಿ ವರ್ಗಕ್ಕೆ ಸೇರಿದ್ದು, ದೇಶದ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ನಿಯೋಜಿಸಲಾಗುತ್ತದೆ. ಒಟ್ಟು 376 ಹುದ
Feb 121 min read


2023-25 ಉತ್ತೀರ್ಣರಿಗೆ ಗುಡ್ ನ್ಯೂಸ್: ಯುವನಿಧಿ ಯೋಜನೆ ಅರ್ಜಿ ಸಲ್ಲಿಕೆ ಶುರು
ಬೆಂಗಳೂರು: 2023, 2024 ಹಾಗೂ 2025ನೇ ಸಾಲಿನಲ್ಲಿ ಪದವಿ, ಡಿಪ್ಲೋಮಾ ಮತ್ತು ಸ್ನಾತಕೋತ್ತರ ಪದವಿ ಉತ್ತೀರ್ಣರಾದ ನಿರುದ್ಯೋಗಿ ಯುವಕರಿಗಾಗಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯುವನಿಧಿ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಪದವಿ ಪಡೆದಿದ್ದು 6 ತಿಂಗಳಾದರೂ ಸರ್ಕಾರಿ, ಖಾಸಗಿ ಅಥವಾ ಸ್ವಯಂ ಉದ್ಯೋಗ ಹೊಂದಿಲ್ಲದವರು ಹಾಗೂ ಉನ್ನತ ವಿದ್ಯಾಭ್ಯಾಸ ಮುಂದುವರೆಸದೇ ಇರುವ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಆಸಕ್ತರು ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಅಥವಾ ಸೇವಾ ಸಿಂಧು ಪೋರ್ಟಲ್ http://sevasindhugs.karnataka.gov.in� ಮೂಲಕ ಉಚಿತವಾ
Feb 121 min read


ಪ್ಯಾನ್ ನಿಯಮಗಳಲ್ಲಿ ಬದಲಾವಣೆ: 2026ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿ
ನವದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಹೊಸ ಆದಾಯ ತೆರಿಗೆ ಕಾಯ್ದೆ 2026ರ ಏಪ್ರಿಲ್ 1ರಿಂದ ಜಾರಿಗೆ ಬರಲಿದ್ದು, ಪ್ಯಾನ್ ಬಳಕೆ ಸಂಬಂಧಿತ ಹಲವು ಮಹತ್ವದ ಬದಲಾವಣೆಗಳನ್ನು ಕರಡು ನಿಯಮಗಳಲ್ಲಿ ಪ್ರಸ್ತಾಪಿಸಲಾಗಿದೆ. ಇವು ಸಾರ್ವಜನಿಕ ಪರಾಮರ್ಶೆಗೆ ಒಳಪಟ್ಟಿದ್ದು, ಅಂತಿಮ ನಿಯಮಗಳು ಪ್ರಕಟವಾದ ಬಳಿಕ ಜಾರಿಗೆ ಬರಲಿವೆ. ಹೊಸ ನಿಯಮಗಳು ಸಾಮಾನ್ಯ ನಾಗರಿಕರ ಹಣಕಾಸು ವ್ಯವಹಾರಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಕ್ಯಾಷ್ ಡೆಪಾಸಿಟ್, ವಾಹನ ಖರೀದಿ, ಹೋಟೆಲ್ ಪಾವತಿ, ರಿಯಲ್ ಎಸ್ಟೇಟ್ ಹಾಗೂ ಇನ್ಷೂರೆನ್ಸ್ ಕ್ಷೇತ್ರಗಳಲ್ಲಿ ಪ್ಯಾನ್ ಕಡ್ಡಾಯತೆಗೆ ಸಂಬಂಧಿಸಿದ ಮಿತಿಗಳನ್ನು ಪರಿಷ್ಕರಿಸಲಾಗಿದೆ. ಕ್
Feb 111 min read


ಬಿಎಸ್ಸಿ ಕ್ರಿಮಿನಾಲಜಿ ಓದುತ್ತಿದ್ದ ಕಾಸರಗೋಡಿನ ಹಿಂದೂ ಯುವತಿ ವಯನಾಡಿನ ಮುಸ್ಲಿಂ ಯುವಕನೊಂದಿಗೆ ಪರಾರಿ......!
ಮಂಗಳೂರು, ಫೆ.11: ಮುಕ್ಕ ಶ್ರೀನಿವಾಸ್ ಕಾಲೇಜಿನಲ್ಲಿ ಬಿಎಸ್ಸಿ ಕ್ರಿಮಿನಾಲಜಿ ಓದುತ್ತಿದ್ದ ಕಾಸರಗೋಡು ಮೂಲದ 22 ವರ್ಷದ ಯುವತಿ ಕೇರಳದ ವಯನಾಡು ಮೂಲದ ಯುವಕನೊಂದಿಗೆ ತೆರಳಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಜೋಡಿಯನ್ನು ವಯನಾಡಿನಲ್ಲಿ ಪತ್ತೆಹಚ್ಚಿದ್ದಾರೆ. ಕಾಸರಗೋಡು ಜಿಲ್ಲೆಯ ಮಧೂರು ಸಮೀಪದ ಮೀಪುಗುರಿ ನಿವಾಸಿಯಾದ ಯುವತಿ ಕಳೆದ ಮೂರು ವರ್ಷಗಳಿಂದ ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ಬಾರಿ ಬಿಎಸ್ಸಿ ಪದವಿ ಪೂರ್ಣಗೊಳಿಸಿದ್ದರೂ, ಸುರತ್ಕಲ್ ಬಳಿಯ ಪೇಯಿಂಗ್ ಗೇಸ್ಟ್ (ಪಿಜಿ) ವಸತಿಯಲ್ಲಿ ತನ್ನ ಸಹ
Feb 111 min read


ಮಂಗಳೂರಿಗರಿಗೆ ಡಬಲ್ ಶಾಕ್: ವಂದೇ ಭಾರತ್ ಮಂಗಳೂರು ನಗರಕ್ಕೆ ಇಲ್ಲ, ಗೊಮ್ಮಟೇಶ್ವರ ಎಕ್ಸ್ಪ್ರೆಸ್ ವೇಳಾಪಟ್ಟಿ ಬದಲಾವಣೆ?
ಮಂಗಳೂರು, ಫೆ.11: ಬೆಂಗಳೂರು–ಮಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ ಎಂಬ ನಿರೀಕ್ಷೆಯ ನಡುವೆ ಕರಾವಳಿಗರಿಗೆ ಡಬಲ್ ಶಾಕ್ ಎದುರಾಗುವ ಸಾಧ್ಯತೆ ಮೂಡಿದೆ. ಮಂಗಳೂರು ನಗರಕ್ಕೆ ವಂದೇ ಭಾರತ್ ಪ್ರವೇಶಿಸದಿರುವ ಪ್ರಸ್ತಾವನೆ ಜೊತೆಗೆ, ಹಗಲಿನ ಜನಪ್ರಿಯ 16575/16576 ಗೊಮ್ಮಟೇಶ್ವರ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿಯನ್ನು ಬದಲಾಯಿಸುವ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಾಹಿತಿಯ ಪ್ರಕಾರ, ಬೆಂಗಳೂರು–ಗೋವಾ ವಂದೇ ಭಾರತ್ ಎಕ್ಸ್ಪ್ರೆಸ್ ಪಡೀಲ್ ಬೈಪಾಸ್ ಮೂಲಕವೇ ಸಂಚರಿಸಲಿದೆ. ಇದರಿಂದ ಮಂಗಳೂರು ಜಂಕ್ಷನ್ಗೆ ರೈಲು ಬಾರದಿರುವ ಸಾಧ್ಯತೆ ಇದೆ. ಇದೇ ವೇಳೆ, ಹೊಸ ರೈಲಿನ ವ
Feb 111 min read
Archive
bottom of page



