ರಾಜ್ಯದಲ್ಲಿ ಮದ್ಯದ ದರ ಏರಿಕೆ?

ರಾಜ್ಯ ಸರ್ಕಾರವು ಮದ್ಯದ ಮೇಲಿನ ತೆರಿಗೆ ಪದ್ಧತಿಯಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದ್ದು, ಇನ್ಮುಂದೆ ಮದ್ಯದಲ್ಲಿರುವ ಆಲ್ಕೋಹಾಲ್ ಪ್ರಮಾಣವನ್ನು ಆಧರಿಸಿ ತೆರಿಗೆ ವಿಧಿಸಲು ಕರಡು ಅಧಿಸೂಚನೆ ಹೊರಡಿಸಿದೆ. ಈ ಹೊಸ 'ಆಲ್ಕೋಹಾಲ್-ಇನ್-ಬ್ರೇವರೇಜ್' (AIB) ನೀತಿಯಿಂದಾಗಿ ವಿಸ್ಕಿ, ರಮ್, ಜಿನ್ ಮತ್ತು ಬ್ರಾಂದಿಗಳ ಎಂಆರ್‌ಪಿ ಬೆಲೆಯಲ್ಲಿ ಕನಿಷ್ಠ ಶೇ. 20 ರಷ್ಟು ಹೆಚ್ಚಳವಾಗುವ ಸಾಧ್ಯತೆಯಿದೆ. ಇದು ಮದ್ಯಪ್ರಿಯರ ಜೇಬಿಗೆ ಭಾರಿ ಹೊರೆಯಾಗಲಿದೆ.

ಪ್ರಸ್ತುತ ಮದ್ಯದ ಬಾಟಲಿಯ ಬೆಲೆ ಅಥವಾ ಸ್ಲ್ಯಾಬ್‌ಗಳ ಆಧಾರದ ಮೇಲೆ ತೆರಿಗೆ ಸಂಗ್ರಹಿಸಲಾಗುತ್ತಿತ್ತು. ಆದರೆ, ಅಬಕಾರಿ ಇಲಾಖೆಯ ಹೊಸ ತಿದ್ದುಪಡಿಯ ಅನ್ವಯ, ಪಾನೀಯದಲ್ಲಿನ ಆಲ್ಕೋಹಾಲ್ ತೀವ್ರತೆಗೆ ತಕ್ಕಂತೆ ದರ ನಿಗದಿಯಾಗಲಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ಮದ್ಯದ ದರಗಳು ಗಣನೀಯವಾಗಿ ಏರಿಕೆಯಾಗಲಿದ್ದು, ಜನಸಾಮಾನ್ಯರಿಗೆ ಶಾಕ್ ನೀಡಿದೆ. ಸದ್ಯದಲ್ಲೇ ಈ ನೂತನ ದರಗಳು ಜಾರಿಗೆ ಬರುವ ನಿರೀಕ್ಷೆಯಿದೆ.







Comments