ಚಾರಣಿಗರಿಗೆ ರಾಜ್ಯ ಸರ್ಕಾರದ ಹೊಸ ಕಟ್ಟುನಿಟ್ಟಿನ ನಿಯಮ ಜಾರಿ
- 1 day ago
- 1 min read

ರಾಜ್ಯದಲ್ಲಿ ಚಾರಣದ ವೇಳೆ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೊಸ ಕಾರ್ಯವಿಧಾನವನ್ನು (SOP) ಬಿಡುಗಡೆ ಮಾಡಿದ್ದಾರೆ. ಇನ್ಮುಂದೆ ಚಾರಣಕ್ಕೆ ಹೋಗುವವರು ಆನ್‌ಲೈನ್ ಮೂಲಕವೇ ಮುಂಗಡ ಬುಕ್ಕಿಂಗ್ ಮಾಡುವುದು ಕಡ್ಡಾಯವಾಗಿದೆ. ಪ್ರತಿ ಹತ್ತು ಮಂದಿ ಚಾರಣಿಗರ ತಂಡಕ್ಕೆ ಒಬ್ಬ ಅನುಭವಿ ಗೈಡ್ ಇರಲೇಬೇಕು, ಗೈಡ್ ಇಲ್ಲದೆ ಚಾರಣಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಸುರಕ್ಷತೆಯ ದೃಷ್ಟಿಯಿಂದ ಚಾರಣಿಗರ ಮೊಬೈಲ್‌ಗಳಲ್ಲಿ ಕಡ್ಡಾಯವಾಗಿ ಟ್ರ್ಯಾಕಿಂಗ್ ಆ್ಯಪ್ ಅಳವಡಿಸಲಾಗುತ್ತದೆ. ಇದರಿಂದ ತುರ್ತು ಸಂದರ್ಭಗಳಲ್ಲಿ ಚಾರಣಿಗರ ಸ್ಥಳವನ್ನು ಪತ್ತೆಹಚ್ಚಲು ಸುಲಭವಾಗಲಿದೆ. ಪರಿಸರ ಸಂರಕ್ಷಣೆ ಮತ್ತು ಪ್ರವಾಸಿಗರ ರಕ್ಷಣೆಯ ಉದ್ದೇಶದಿಂದ ಈ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿದೆ.







Comments