ಪಜೀರು: ಜಾತ್ರೆಗೆ ಹೋದ ಹತ್ತನೇ ತರಗತಿ ವಿದ್ಯಾರ್ಥಿನಿ ನಾಪತ್ತೆ ಪೊಲೀಸರಿಂದ ಲುಕ್ ಔಟ್ ನೋಟಿಸ್ ಜಾರಿ
- Apr 19
- 1 min read

ಪಜೀರು ಗ್ರಾಮದ ಅಡ್ಕ ನಿವಾಸಿಯಾದ ಹದಿನಾರು ವರ್ಷದ ಚೈತನ್ಯ ಎಂಬ ಬಾಲಕಿ ಪೊಳಲಿ ಜಾತ್ರೆಗೆಂದು ತೆರಳಿ ನಿಗೂಢವಾಗಿ ನಾಪತ್ತೆಯಾಗಿರುವುದು ಇಡೀ ಗ್ರಾಮದಲ್ಲಿ ಆತಂಕ ಮೂಡಿಸಿದೆ. ಹರೇಕಳದ ಶಾಲೆಯಲ್ಲಿ ಹತ್ತನೇ ತರಗತಿ ಪೂರೈಸಿ ರಜೆಯಲ್ಲಿದ್ದ ಈಕೆ, ಗೆಳೆಯರೊಂದಿಗೆ ಸಂಭ್ರಮದಿಂದ ಹೊರಟವಳು ಮರಳಿ ಬಾರದಿರುವುದು ಹೆತ್ತವರ ನೆಮ್ಮದಿ ಕೆಡಿಸಿದೆ.

ಸಂಬಂಧಿಕರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಈಗ ಪೊಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದ ಬಾಲಕಿಯ ಪತ್ತೆಗಾಗಿ ಪೊಲೀಸರು ಈಗಾಗಲೇ ಲುಕ್ ಔಟ್ ನೋಟಿಸ್ ಜಾರಿಗೊಳಿಸಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.







Comments