;
top of page

ಬಿಎಸ್ಸಿ ಕ್ರಿಮಿನಾಲಜಿ ಓದುತ್ತಿದ್ದ ಕಾಸರಗೋಡಿನ ಹಿಂದೂ ಯುವತಿ ವಯನಾಡಿನ ಮುಸ್ಲಿಂ ಯುವಕನೊಂದಿಗೆ ಪರಾರಿ......!

  • Writer: sathyapathanewsplu
    sathyapathanewsplu
  • 18 hours ago
  • 1 min read

ಮಂಗಳೂರು, ಫೆ.11: ಮುಕ್ಕ ಶ್ರೀನಿವಾಸ್ ಕಾಲೇಜಿನಲ್ಲಿ ಬಿಎಸ್ಸಿ ಕ್ರಿಮಿನಾಲಜಿ ಓದುತ್ತಿದ್ದ ಕಾಸರಗೋಡು ಮೂಲದ 22 ವರ್ಷದ ಯುವತಿ ಕೇರಳದ ವಯನಾಡು ಮೂಲದ ಯುವಕನೊಂದಿಗೆ ತೆರಳಿದ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿ ಜೋಡಿಯನ್ನು ವಯನಾಡಿನಲ್ಲಿ ಪತ್ತೆಹಚ್ಚಿದ್ದಾರೆ.

ಕಾಸರಗೋಡು ಜಿಲ್ಲೆಯ ಮಧೂರು ಸಮೀಪದ ಮೀಪುಗುರಿ ನಿವಾಸಿಯಾದ ಯುವತಿ ಕಳೆದ ಮೂರು ವರ್ಷಗಳಿಂದ ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಈ ಬಾರಿ ಬಿಎಸ್ಸಿ ಪದವಿ ಪೂರ್ಣಗೊಳಿಸಿದ್ದರೂ, ಸುರತ್ಕಲ್ ಬಳಿಯ ಪೇಯಿಂಗ್ ಗೇಸ್ಟ್ (ಪಿಜಿ) ವಸತಿಯಲ್ಲಿ ತನ್ನ ಸಹಪಾಠಿಗಳೊಂದಿಗೆ ವಾಸವಾಗಿದ್ದರು.

ಈ ಅವಧಿಯಲ್ಲಿ ವಯನಾಡು ಮೂಲದ ಮೊಹಮ್ಮದ್ ಮಿಫ್ಲಾಜ್ ಎಂಬ ಯುವಕನೊಂದಿಗೆ ಪರಿಚಯ ಬೆಳೆದಿರುವುದು ತಿಳಿದುಬಂದಿದೆ. ಆತ ಸುರತ್ಕಲ್‌ನ ಅಟ್ಲಾಸ್ ಜುವೆಲ್ಲರಿಯಲ್ಲಿ ಉದ್ಯೋಗದಲ್ಲಿದ್ದ ಎಂದು ಮೂಲಗಳು ತಿಳಿಸಿವೆ. ಜನವರಿ 31ರಂದು ವಯನಾಡಿನಲ್ಲಿ ಇಬ್ಬರೂ ರಿಜಿಸ್ಟರ್ ಮದುವೆಗೆ ನೋಂದಣಿ ಮಾಡಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ಈ ಸಂಬಂಧದ ಫೋಟೋ ವಯನಾಡಿನ ರಿಜಿಸ್ಟರ್ ಕಚೇರಿಯಲ್ಲಿ ಅಂಟಿಸಲಾಗಿದ್ದು, ಅದರ ಚಿತ್ರ ಜಾಲತಾಣದ ಮೂಲಕ ಫೆಬ್ರವರಿ 8ರಂದು ಯುವತಿಯ ಕುಟುಂಬಸ್ಥರಿಗೆ ತಿಳಿದುಬಂದಿದೆ.

ಈ ಮಾಹಿತಿ ತಿಳಿದ ಕೂಡಲೇ ಕತಾರ್‌ನಲ್ಲಿ ಉದ್ಯೋಗದಲ್ಲಿದ್ದ ತಂದೆ ತಕ್ಷಣ ಊರಿಗೆ ಬಂದು, ಪತ್ನಿಯೊಂದಿಗೆ ಸುರತ್ಕಲ್‌ನ ಪಿಜಿಗೆ ಭೇಟಿ ನೀಡಿದ್ದಾರೆ. ಪಿಜಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಫೆಬ್ರವರಿ 8ರಂದು ಬೆಳಗ್ಗೆ ಯುವತಿ ವ್ಯಾನಿಟಿ ಬ್ಯಾಗ್‌ ಜೊತೆ ಪಿಜಿಯಿಂದ ತೆರಳಿರುವುದು ಕಂಡುಬಂದಿದೆ. ಅದಕ್ಕೂ ಮೊದಲು ತಾಯಿ ಮಗಳೊಂದಿಗೆ ಫೋನ್‌ನಲ್ಲಿ ಮಾತನಾಡಿದ್ದರೆಂದು ಹೇಳಲಾಗಿದೆ. ಬಳಿಕ ಯುವತಿಯ ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ಆತಂಕಗೊಂಡ ಹೆತ್ತವರು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ಆಧರಿಸಿ ತಕ್ಷಣ ಕ್ರಮ ಕೈಗೊಂಡ ಸುರತ್ಕಲ್ ಪೊಲೀಸರು ಕೇರಳದ ವಯನಾಡಿಗೆ ತೆರಳಿ ಜೋಡಿಯನ್ನು ಪತ್ತೆಹಚ್ಚಿದ್ದಾರೆ. ಇಬ್ಬರನ್ನೂ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿದೆ. ಯುವತಿಯ ಹೇಳಿಕೆಯನ್ನು ದಾಖಲಿಸಿಕೊಂಡ ವೇಳೆ, ತಾನು ಸ್ವಇಚ್ಛೆಯಿಂದ ಯುವಕನೊಂದಿಗೆ ತೆರಳಿರುವುದಾಗಿ ಆಕೆ ತಿಳಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page