top of page
News Articles
Sathyapatha News Plus


ಪಾಕಿಸ್ತಾನದ ಗಣರಾಜ್ಯೋತ್ಸವ ಆಚರಣೆ ರದ್ದು
ವಿಶ್ವದಾದ್ಯಂತ ಉಂಟಾಗಿರುವ ಇಂಧನ ಮತ್ತು ಅನಿಲ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಪಾಕಿಸ್ತಾನ, ಈ ಬಾರಿ ಮಾರ್ಚ್ 23ರಂದು ನಡೆಯಬೇಕಿದ್ದ ತನ್ನ 'ಗಣರಾಜ್ಯೋತ್ಸವ' ಆಚರಣೆಯನ್ನು ರದ್ದುಗೊಳಿಸಿದೆ. ತೀವ್ರ ಹಣಕಾಸಿನ ಮುಗ್ಗಟ್ಟು ಮತ್ತು ಇಂಧನ ಕೊರತೆಯಿಂದಾಗಿ ಸಂಭ್ರಮಾಚರಣೆಗೆ ಬ್ರೇಕ್ ಹಾಕಲಾಗಿದ್ದು, ಸರ್ಕಾರದ ಈ ನಿರ್ಧಾರ ನೆರೆಹೊರೆಯ ರಾಷ್ಟ್ರಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ದೊಡ್ಡ ಮಟ್ಟದ ಕಾರ್ಯಕ್ರಮಗಳ ಬದಲಿಗೆ ಸರಳವಾಗಿ ಆಚರಿಸುವಂತೆ ಸರ್ಕಾರ ಜನರಿಗೆ ಸೂಚಿಸಿದೆ. "ಆಹಾರ ಮತ್ತು ಪಾನೀಯಗಳನ್ನು ಸೇವಿಸಿ ಅದ್ಧೂರಿಯಾಗಿ ಸಂಭ್ರಮಿಸಬೇಡಿ, ಕೇವಲ ಕೇಕ್ ಕತ್ತರಿಸಿ ಮನೆಗೆ ತೆರಳಿ" ಎಂದು ಜನರಲ್ಲಿ ವಿನಂ
Mar 191 min read


ಗೃಹಲಕ್ಷ್ಮಿ ಯೋಜನೆಯ 27ನೇ ಕಂತು ಬಿಡುಗಡೆ
ಯುಗಾದಿ ಮತ್ತು ರಂಜಾನ್ ಹಬ್ಬಗಳ ಸಂಭ್ರಮದಲ್ಲಿರುವ ರಾಜ್ಯದ ಮಹಿಳೆಯರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ತಾಂತ್ರಿಕ ಕಾರಣಗಳಿಂದ ವಿಳಂಬವಾಗಿದ್ದ ಗೃಹಲಕ್ಷ್ಮಿ ಯೋಜನೆಯ 27ನೇ ಕಂತಿನ ಹಣವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಿದೆ. ಹಬ್ಬದ ಖರ್ಚುಗಳ ನಡುವೆ ಈ ಹಣ ಬಂದಿರುವುದು ಬಡ ಮತ್ತು ಮಧ್ಯಮ ವರ್ಗದ ಮಹಿಳೆಯರಿಗೆ ದೊಡ್ಡ ಆಸರೆಯಾಗಿದೆ. ಆದರೆ, ಕಳೆದ ಎರಡು ತಿಂಗಳ ಬಾಕಿ ಹಣದ ಬಗ್ಗೆ ಇಲಾಖೆಯು ಇನ್ನೂ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಬಾಕಿ ಮೊತ್ತವು ಶೀಘ್ರವೇ ಬಿಡುಗಡೆಯಾಗಲಿದೆ ಎಂಬ ನಿರೀಕ್ಷೆಯಲ್ಲಿ ಮಹಿಳೆಯರಿದ್ದಾರೆ. ಪ್ರಸ್ತುತ ಬಂದಿರುವ ಕಂತಿ
Mar 191 min read


ಹೊಸ ವರ್ಷದ ರಾಶಿ ಭವಿಷ್ಯ
: 🐏 ಮೇಷ ಇಂದು ನಿಮ್ಮಲ್ಲಿ ಉತ್ಸಾಹ ಹೆಚ್ಚು. ಹೊಸ ಕೆಲಸಗಳನ್ನು ಪ್ರಾರಂಭಿಸಲು ಒಳ್ಳೆಯ ದಿನ. ಆದರೆ ಆತುರದ ನಿರ್ಧಾರಗಳನ್ನು ತಪ್ಪಿಸಿ. 🐂 ವೃಷಭ ಆರ್ಥಿಕವಾಗಿ ಲಾಭ ಸಾಧ್ಯ. ಕುಟುಂಬದವರೊಂದಿಗೆ ಸಮಯ ಕಳೆಯಲು ಅವಕಾಶ ಸಿಗಬಹುದು. ಆರೋಗ್ಯದ ಕಡೆ ಸ್ವಲ್ಪ ಗಮನ ಕೊಡಿ. 👬 ಮಿಥುನ ಸಂವಹನದಲ್ಲಿ ಯಶಸ್ಸು. ಕೆಲಸದ ಸ್ಥಳದಲ್ಲಿ ಮೆಚ್ಚುಗೆ ಸಿಗಬಹುದು. ಹೊಸ ಪರಿಚಯಗಳು ಉಪಯುಕ್ತವಾಗುತ್ತವೆ. 🦀 ಕಟಕ ಭಾವನಾತ್ಮಕ ದಿನ. ಕುಟುಂಬದ ವಿಷಯಗಳಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ. ಶಾಂತ ಮನಸ್ಸು ಉಳಿಸಿಕೊಳ್ಳಿ. 🦁 ಸಿಂಹ ನಾಯಕತ್ವ ಗುಣ ತೋರುತ್ತೀರಿ. ಕೆಲಸದಲ್ಲಿ ಸಾಧನೆ ಸಾಧ್ಯ. ಹಣಕಾಸು ವಿಚಾರಗಳಲ್ಲಿ ಎಚ್ಚರಿಕೆ
Mar 191 min read


ರಷ್ಯಾ ತೈಲ ಹೊತ್ತ ಹಡಗು ಚೀನಾ ಬಿಟ್ಟು ಮಂಗಳೂರಿನತ್ತ: ಭಾರತಕ್ಕೆ ಬಂತು 30 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ!
ಚೀನಾದತ್ತ ಸಾಗುತ್ತಿದ್ದ ರಷ್ಯಾದ 'ಅಕ್ವಾ ಟೈಟಾನ್' ತೈಲ ಟ್ಯಾಂಕರ್ ದಿಢೀರ್ ಗಮ್ಯಸ್ಥಾನ ಬದಲಿಸಿ ಮಂಗಳೂರಿನತ್ತ ಬರುತ್ತಿದೆ. ಜನವರಿಯಲ್ಲಿ ಬಾಲ್ಟಿಕ್ ಬಂದರಿನಿಂದ ಹೊರಟಿದ್ದ ಈ ಹಡಗು, ಮಾರ್ಚ್ 21 ರಂದು ನವಮಂಗಳೂರು ಬಂದರು ತಲುಪುವ ನಿರೀಕ್ಷೆಯಿದೆ. ಮಧ್ಯಪ್ರಾಚ್ಯದ ಬಿಕ್ಕಟ್ಟಿನಿಂದಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಈ ವಾರ ಭಾರತವು ರಷ್ಯಾದಿಂದ 30 ಮಿಲಿಯನ್ ಬ್ಯಾರೆಲ್ ಕಚ್ಚಾ ತೈಲ ಖರೀದಿಸಿದೆ. ಇದರಿಂದಾಗಿ ಚೀನಾಕ್ಕೆ ಹೋಗಬೇಕಿದ್ದ ಏಳು ಟ್ಯಾಂಕರ್ಗಳು ಭಾರತದತ್ತ ಮುಖ ಮಾಡಿವೆ. ಈ ಬೆಳವಣಿಗೆಯು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಭಾರತದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದೆ. ವೋ
Mar 181 min read


ಚಿನ್ನ, ಬೆಳ್ಳಿ ದರ ಭಾರಿ ಇಳಿಕೆ!
ದೇಶೀಯ ಮತ್ತು MCX ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. MCX ನಲ್ಲಿ ಗೋಲ್ಡ್ ಫ್ಯೂಚರ್ಸ್ ಬೆಲೆ ₹500 ರಷ್ಟು ಕಡಿಮೆಯಾಗಿದ್ದು, ಹೂಡಿಕೆದಾರರಲ್ಲಿ ಸಂತಸ ಮೂಡಿಸಿದೆ. ಇದು ಆಭರಣ ಪ್ರಿಯರಿಗೆ ಮತ್ತು ದೀರ್ಘಕಾಲೀನ ಹೂಡಿಕೆದಾರರಿಗೆ ಖರೀದಿಸಲು ಉತ್ತಮ ಸಮಯವಾಗಿದೆ. ಬೆಳ್ಳಿ ಬೆಲೆ ಕೂಡ ಇಳಿಕೆ: ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಭಾರಿ ಕುಸಿತ ಕಂಡುಬಂದಿದೆ. MCX ನಲ್ಲಿ ಬೆಳ್ಳಿ ದರ ₹2,300 ರಷ್ಟು ಇಳಿಕೆಯಾಗಿದ್ದು, ಹೂಡಿಕೆದಾರರಿಗೆ ಇದು ಸಿಹಿ ಸುದ್ದಿಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಕಿಲೋ ಬೆಳ್ಳಿ ದರ ₹2,650 ಕ್ಕೆ ತಲುಪಿದೆ.
Mar 181 min read


ಕುಕ್ಕೆ ಸುಬ್ರಹ್ಮಣ್ಯ ಪ್ರಾಧಿಕಾರ ರಚನೆಗೆ ವಿರೋಧ: ಜನಾಂದೋಲನಕ್ಕೆ ಸಿದ್ಧತೆ
ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಪ್ರಾಧಿಕಾರ ರಚಿಸುವ ಸರ್ಕಾರದ ನಿರ್ಧಾರಕ್ಕೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಹೋರಾಟ ತೀವ್ರಗೊಂಡಿದೆ. ಮಾರ್ಚ್ 17ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಶಿವರಾಮ ಮತ್ತು ಇತರ ಪ್ರಮುಖರು ಭಾಗವಹಿಸಿ, ಈ ನಿರ್ಧಾರವು ದೇವಾಲಯದ ಸ್ವಾಯತ್ತತೆ ಹಾಗೂ ಸ್ಥಳೀಯರ ಹಿತಾಸಕ್ತಿಗೆ ಮಾರಕ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಾಧಿಕಾರ ರಚನೆಯ ವಿರುದ್ಧ ಸಂಘಟಿತ ಹೋರಾಟ ರೂಪಿಸಲು ನಿರ್ಧರಿಸಲಾಗಿದ್ದು, ಮಾರ್ಚ್ 19ರಂದು ಬೃಹತ್ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗಿದೆ. ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾ
Mar 181 min read


ಬಿಸಿಯೂಟ ಯೋಜನೆಗೆ ಅಡುಗೆ ಅನಿಲ ಸಂಕಷ್ಟ: ತತ್ತರಿಸಿದ ಸರ್ಕಾರಿ ಶಾಲೆಗಳು
ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮವಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಇದೀಗ ಜಿಲ್ಲೆಯ 1961 ಸರ್ಕಾರಿ ಶಾಲೆಗಳ ಬಿಸಿಯೂಟ ಯೋಜನೆಗೆ ಸಿಲಿಂಡರ್ ಕೊರತೆ ಎದುರಾಗಿದೆ. ಸುಮಾರು 3 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಒದಗಿಸುವುದು ಶಿಕ್ಷಕರಿಗೆ ದೊಡ್ಡ ಸವಾಲಾಗಿದೆ. ಜಿಲ್ಲೆಗೆ ತಿಂಗಳಿಗೆ ಸುಮಾರು 5900 ಸಿಲಿಂಡರ್ಗಳ ಅವಶ್ಯಕತೆಯಿದ್ದು, ಕಳೆದ ನಾಲ್ಕು ದಿನಗಳಿಂದ ಅನೇಕ ಶಾಲೆಗಳಿಗೆ ಪೂರೈಕೆಯಾಗದ ಕಾರಣ ಬಿಸಿಯೂಟದ ವ್ಯವಸ್ಥೆ ಹದಗೆಟ್ಟಿದೆ. ಏಜೆನ್ಸಿಗಳು ಕರೆ ಸ್ವೀಕರಿಸದ ಕಾರಣ ಶಿಕ್ಷಕರು ಅಸಹಾಯಕರಾಗಿದ್ದಾರೆ. ಗ್ಯಾಸ್ ಏಜೆನ್ಸಿಗಳಿಗೆ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ
Mar 181 min read


ಮೂಡುಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಸಸ್ಪೆಂಡ್ : ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆ ಕ್ರಮ
ಮೂಡುಬಿದಿರೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ಕೇಳಿಬಂದ ಲೈಂಗಿಕ ಕಿರುಕುಳ ಮತ್ತು ಭ್ರಷ್ಟಾಚಾರದ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ, ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಮತ್ತು ವಿಡಿಯೋ ತುಣುಕುಗಳು ಇಲಾಖೆಯ ಘನತೆಗೆ ಧಕ್ಕೆ ತಂದಿವೆ ಎಂದು ಪ್ರಾಥಮಿಕ ತನಿಖೆಯಲ್ಲಿ ಗುರುತಿಸಲಾಗಿದೆ. ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಮೇಲ್ನೋಟಕ್ಕೆ ದೃಢಪಟ್ಟ ಹಿನ್ನೆಲೆಯಲ್ಲಿ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಎಸಿಪಿ ಮಟ್ಟ
Mar 181 min read


ಇಸ್ರೇಲ್ ದಾಳಿಗೆ ಇರಾನ್ ನಾಯಕ ಅಲಿ ಲಾರಿಜಾನಿ ಬಲಿ
ಇಸ್ರೇಲ್ ಮಂಗಳವಾರ ಮುಂಜಾನೆ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್ನ ಹಿರಿಯ ಭದ್ರತಾ ನಾಯಕ ಅಲಿ ಲಾರಿಜಾನಿ ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರ ಅಧಿಕೃತವಾಗಿ ದೃಢಪಡಿಸಿದೆ. ಇಸ್ರೇಲ್ ಈ ಹತ್ಯೆಯ ಜವಾಬ್ದಾರಿಯನ್ನು ಹೊತ್ತುಕೊಂಡ ಬೆನ್ನಲ್ಲೇ, ಇರಾನ್ನ ರಾಷ್ಟ್ರೀಯ ಭದ್ರತಾ ಮಂಡಳಿಯು ಲಾರಿಜಾನಿ ಅವರ ಸಾವಿನ ಸುದ್ದಿಯನ್ನು ಪ್ರಕಟಿಸಿ ಅವರಿಗೆ ಗೌರವ ಸಲ್ಲಿಸಿದೆ. ದೇಶದ ಅಭಿವೃದ್ಧಿ ಮತ್ತು ಇಸ್ಲಾಮಿಕ್ ಕ್ರಾಂತಿಗಾಗಿ ಲಾರಿಜಾನಿ ಸಲ್ಲಿಸಿದ ಸೇವೆ ಅಪಾರವೆಂದು ಬಣ್ಣಿಸಿರುವ ಇರಾನ್ ಸರ್ಕಾರ, ಅವರನ್ನು 'ಹುತಾತ್ಮ' ಎಂದು ಕರೆದಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಲಾರ
Mar 181 min read


ಕಾಬೂಲ್ ಆಸ್ಪತ್ರೆ ಮೇಲೆ ಪಾಕ್ ವಾಯುಪಡೆ ಭೀಕರ ದಾಳಿ: 400 ಮಂದಿ ಸಾವು?
ಅಫ್ಘಾನಿಸ್ತಾನದ ಕಾಬೂಲ್ನಲ್ಲಿರುವ ಪುನರ್ವಸತಿ ಆಸ್ಪತ್ರೆಯ ಮೇಲೆ ಪಾಕಿಸ್ತಾನ ವಾಯುಪಡೆ ದಾಳಿ ನಡೆಸಿದೆ. ನೂರಾರು ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಆಸ್ಪತ್ರೆಯ ಬಹುಭಾಗ ಭಸ್ಮಗೊಂಡಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಪಾಕಿಸ್ತಾನ ವಾಯುಪಡೆ ತನ್ನ ಜೆಎಫ್-17 ಮತ್ತು ಎಫ್-16 ಯುದ್ಧ ವಿಮಾನಗಳನ್ನು ಬಳಸಿ ಕಾಬೂಲ್ನ ಐದು ಸ್ಥಳಗಳ ಮೇಲೆ ದಾಳಿ ಮಾಡಿದೆ. ಅಫ್ಘಾನಿಸ್ತಾನದ ಆರೋಪಗಳನ್ನು ಪಾಕಿಸ್ತಾನ ತಳ್ಳಿ ಹಾಕಿದೆ. ಈ ಬಗ್ಗೆ ಯಾವುದೇ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಹೇಳಿಕೊಂಡಿದೆ.
Mar 171 min read


ಯುದ್ಧ ಭೀತಿ ನಡುವೆ ನೆಮ್ಮದಿ ಸುದ್ದಿ: ಅಡುಗೆ ಅನಿಲ ಹೊತ್ತ 'ಶಿವಾಲಿಕ್' ಹಡಗು ಸುರಕ್ಷಿತವಾಗಿ ಭಾರತಕ್ಕೆ ಆಗಮನ!
ಮಧ್ಯಪ್ರಾಚ್ಯದ ಯುದ್ಧ ಭೀತಿಯ ನಡುವೆಯೂ ಅಡುಗೆ ಅನಿಲ ಪೂರೈಕೆಯ ಆತಂಕ ದೂರವಾಗಿದೆ. ಎಲ್ಪಿಜಿ ಹೊತ್ತ ‘ಶಿವಾಲಿಕ್’ ಹಡಗು ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಗುಜರಾತ್ನ ಮುಂದ್ರಾ ಬಂದರನ್ನು ತಲುಪಿದೆ. ಇದು ದೇಶದ ಇಂಧನ ಭದ್ರತೆಗೆ ನೆಮ್ಮದಿ ತಂದಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಉದ್ದೇಶಿತ 46 ಸಾವಿರ ಮೆಟ್ರಿಕ್ ಟನ್ ಅನಿಲದಲ್ಲಿ, ಮೊದಲ ಹಂತವಾಗಿ ಮುಂದ್ರಾ ಬಂದರಿನಲ್ಲಿ 20 ಸಾವಿರ ಟನ್ ಇಳಿಸಲಾಗುವುದು. ಅಲ್ಲಿನ ಪ್ರಕ್ರಿಯೆ ಮುಗಿದ ನಂತರ ಹಡಗು ಮಂಗಳೂರಿನತ್ತ ಪಯಣ ಬೆಳೆಸಲಿದೆ. ಉಳಿದ 26 ಸಾವಿರ ಟನ್ ಎಲ್ಪಿಜಿಯೊಂದಿಗೆ ಶಿವಾಲಿಕ್ ಹಡಗು ಮೂರ್ನಾಲ್ಕು ದಿನಗಳಲ್ಲಿ ನವಮಂ
Mar 171 min read


ಖಾಕಿ ಪಡೆಗೆ ಕಪ್ಪುಚುಕ್ಕೆ: ಮೂಡುಬಿದಿರೆ ಇನ್ಸ್ಪೆಕ್ಟರ್ನಿಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ, ಹಣಕ್ಕಾಗಿ ಸುಲಿಗೆ!
ಖಾಕಿ ಪಡೆಗೆ ಮತ್ತೊಂದು ಕಪ್ಪು ಚುಕ್ಕೆ ಬಂದಿದೆ. ಮೂಡುಬಿದಿರೆ ಠಾಣೆಯ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ಸಾಲು ಸಾಲು ಲೈಂಗಿಕ ಕಿರುಕುಳ ಹಾಗೂ ಸುಲಿಗೆಯ ಗಂಭೀರ ಆರೋಪಗಳು ಕೇಳಿಬಂದಿವೆ. ಗಂಡನನ್ನು ಬಂಧಿಸಿದ ನೆಪದಲ್ಲಿ ಮಹಿಳೆಯರಿಗೆ ಲೈಂಗಿಕ ಟಾರ್ಚರ್ ನೀಡುತ್ತಿದ್ದ ಎನ್ನಲಾಗಿದೆ. ಪೋಸ್ಟಿಂಗ್ಗಾಗಿ ತಾವು 50 ಲಕ್ಷ ರೂ. ಲಂಚ ನೀಡಿರುವುದಾಗಿ ಹೇಳಿಕೊಳ್ಳುತ್ತಿದ್ದ ಇನ್ಸ್ಪೆಕ್ಟರ್, ಸಾರ್ವಜನಿಕರಿಂದ ಹಣಕ್ಕಾಗಿ ಸುಲಿಗೆ ಮಾಡುತ್ತಿದ್ದರು. ಹಣ ನೀಡದಿದ್ದರೆ ರೌಡಿಶೀಟ್ ತೆರೆಯುವ ಬೆದರಿಕೆ ಹಾಕುತ್ತಿದ್ದರು ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಸ್ಥಳೀಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗ
Mar 171 min read


ಸುಳ್ಯ: ಬಾರ್ ಮುಂಭಾಗ ಯುವಕನಿಗೆ ಚೂರಿ ಇರಿತ; ಬೀರಮಂಗಲದ ಹರೀಶ್ಗೆ ಗಾಯ
ಸುಳ್ಯದ ಶ್ರೀರಾಮ ಪೇಟೆಯಲ್ಲಿರುವ ಬಾರೊಂದರ ಎದುರು ನಿಂತಿದ್ದ ಯುವಕನ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಮಾರ್ಚ್ 14ರ ಶನಿವಾರ ರಾತ್ರಿ ವರದಿಯಾಗಿದೆ. ಚೂರಿ ಇರಿತಕ್ಕೆ ಒಳಗಾದ ಯುವಕನನ್ನು ಬೀರಮಂಗಲ ನಿವಾಸಿ ಹರೀಶ್ ಎಂದು ಗುರುತಿಸಲಾಗಿದೆ. ಈ ದಾಳಿಯ ವೇಳೆ ಹರೀಶ್ ಅವರೊಂದಿಗೆ ಇದ್ದ ಸ್ನೇಹಿತ ನೀತು ಎಂಬುವವರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ತಕ್ಷಣ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಈ ಕೃತ್ಯ ನಡೆದಿದೆಯೇ ಅಥವಾ ಹಳೆಯ ದ್ವೇಷವೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿ
Mar 151 min read


ಮಂಗಳೂರು: ದೈವಾರಾಧನೆ ಸಂಪ್ರದಾಯಕ್ಕೆ ಅಪಚಾರ; ದೈವ ನರ್ತನದ ಬಗ್ಗೆ ಹೊಸ ವಿವಾದ!
ಮಂಗಳೂರಿನ ಪ್ರಸಿದ್ಧ ದೈವಸ್ಥಾನದಲ್ಲಿ ಇತ್ತೀಚೆಗೆ ನಡೆದ ನೇಮೋತ್ಸವದ ವೇಳೆ ಸಂಪ್ರದಾಯ ಉಲ್ಲಂಘನೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಜಾರಂದಾಯ ಮತ್ತು ಬಂಟ ದೈವಕ್ಕೆ ನಡೆದ ನೇಮೋತ್ಸವದಲ್ಲಿ ಬಂಟ ದೈವದ ನರ್ತನವನ್ನು ಕ್ರೈಸ್ತ ಧರ್ಮದ ಯುವಕನೊಬ್ಬನಿಂದ ಮಾಡಿಸಲಾಗಿದೆ ಎಂದು ಪಂಬದ ಸಮುದಾಯದ ಸಂಶೋಧಕಿ ಡಾ. ರತಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತುಳುನಾಡಿನ ದೈವಾರಾಧನೆಯ ಪದ್ಧತಿಯಂತೆ ಕೇವಲ ನಲಿಕೆ, ಪರವ ಹಾಗೂ ಪಂಬದ ಸಮುದಾಯದವರು ಮಾತ್ರ ಈ ಪವಿತ್ರ ಸೇವೆಯನ್ನು ಸಲ್ಲಿಸಬೇಕೆಂಬ ಕಟ್ಟುನಿಟ್ಟಿನ ನಿಯಮವಿದೆ. ನರ್ತನ ಮಾಡಿದ ಯುವಕನ ತಂದೆ ಪಂಬದ ಸಮುದಾಯದವರಾಗಿದ್ದರೂ, ತಾಯಿ ಕ್ರೈಸ್ತ ಧರ್ಮದವರಾಗಿರು
Mar 151 min read


ಪಿಯುಸಿ ವಿದ್ಯಾರ್ಥಿಗಳಿಗೆ ಬಿಗ್ ಶಾಕ್: ಮರುಪರೀಕ್ಷೆ ಬರೆಯಲು ಇನ್ನು ಎರಡೇ ವರ್ಷ ಅವಕಾಶ!
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಅಥವಾ ಫಲಿತಾಂಶ ಸುಧಾರಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ಶಿಕ್ಷಣ ಇಲಾಖೆ ಹೊಸ ನಿಯಮ ಜಾರಿಗೊಳಿಸಿದೆ. ಇನ್ಮುಂದೆ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡ ವರ್ಷ ಮತ್ತು ಅದರ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಾತ್ರ ಮರುಪರೀಕ್ಷೆ ಬರೆಯಲು ಅವಕಾಶವಿರುತ್ತದೆ. ಈ ಎರಡು ವರ್ಷಗಳ ಕಾಲಮಿತಿಯ ನಂತರ ಪರೀಕ್ಷೆ ಬರೆಯುವ ಹಕ್ಕನ್ನು ವಿದ್ಯಾರ್ಥಿಗಳು ಕಳೆದುಕೊಳ್ಳಲಿದ್ದಾರೆ. ಪ್ರಸ್ತುತ ವರ್ಷಕ್ಕೆ ಮೂರು ಪರೀಕ್ಷೆಗಳಂತೆ (Exam 1, 2, 3) ಎರಡು ವರ್ಷಗಳಲ್ಲಿ ಒಟ್ಟು ಆರು ಅವಕಾಶಗಳು ಸಿಗಲಿವೆ. ಈ ಹಿಂದೆ ಆರು ಬಾರಿ ಪರೀಕ್ಷೆ ಬರೆಯಲು ಯಾ
Mar 151 min read


ಸುಳ್ಯ: ಚಹಾ ಇಡಲು ಹೋದಾಗ ಸೀರೆಗೆ ತಗುಲಿದ ಬೆಂಕಿ: ತಾಯಿಯನ್ನು ರಕ್ಷಿಸಲು ಹೋದ ಮಗನಿಗೂ ಗಾಯ, ಆಸ್ಪತ್ರೆಗೆ ದಾಖಲು
ಕೊಲ್ಲಮೊಗ್ರು ಗ್ರಾಮದ ಶಿರೂರು ಬಳಿ ಮಾರ್ಚ್ 10ರಂದು ನಡೆದ ದುರ್ಘಟನೆಯಲ್ಲಿ ಸುಬ್ರಹ್ಮಣ್ಯ ಬೊಳಿಯಾನ ಎಂಬುವವರ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಮನೆಯ ಅಡುಗೆ ಕೋಣೆಯಲ್ಲಿ ಸುಬ್ರಹ್ಮಣ್ಯ ಅವರ ತಾಯಿ ತಿಲಕ ಅವರು ಚಹಾ ಮಾಡುತ್ತಿದ್ದಾಗ, ಅನಿರೀಕ್ಷಿತವಾಗಿ ಅವರ ಸೀರೆಗೆ ಬೆಂಕಿ ತಗುಲಿದೆ. ಕ್ಷಣಾರ್ಧದಲ್ಲಿ ಬೆಂಕಿ ಮೈತುಂಬಾ ವ್ಯಾಪಿಸಿದ್ದು, ಮಹಿಳೆಯು ತೀವ್ರವಾಗಿ ಕಿರುಚಾಡಿದ್ದಾರೆ. ತಾಯಿಯ ಕಿರುಚಾಟ ಕೇಳಿ ತಕ್ಷಣ ಸ್ಥಳಕ್ಕೆ ಧಾವಿಸಿದ ಮಗ ಸುಬ್ರಹ್ಮಣ್ಯ, ಪ್ರಾಣಾಪಾಯದಿಂದ ರಕ್ಷಿಸಲು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟಿದ್ದಾರೆ. ಈ ಭೀಕರ ಪ್ರಯತ್ನದಲ್ಲಿ ಸುಬ್ರಹ್ಮಣ್ಯ ಅವರ ಕೈಗ
Mar 151 min read


ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ
ಮಂಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ ಎಲ್ಪಿಜಿ ಗ್ಯಾಸ್ ತುಂಬಿದ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಸೋಲೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ಮಾಗಡಿಯ ಅಗ್ನಿಶಾಮಕ ದಳ, ಕುದೂರು ಪೊಲೀಸರು ಹಾಗೂ ಟೋಲ್ ಸಿಬ್ಬಂದಿ ಕೂಡಲೇ ಧಾವಿಸಿದರು. ಎರಡು ಬೃಹತ್ ಕ್ರೇನ್ಗಳ ಸಹಾಯದಿಂದ ಪಲ್ಟಿಯಾದ ಟ್ಯಾಂಕರ್ ಅನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಟ್ಯಾಂಕರ್ನಿಂದ ಗ್ಯಾಸ್ ಸೋರಿಕೆಯಾಗಿದ್ದರೆ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಆದರೆ, ಅಧಿಕಾರಿಗಳ ಸಮಯಪ್ರಜ್ಞೆ ಮತ್ತು ಜಾಗರೂಕತೆಯಿಂದ ಯಾವುದೇ ಅಪಾಯ
Mar 151 min read


ನೌಕಾಪಡೆ ಬೆಂಗಾವಲಿನಲ್ಲಿ ಭಾರತದ ಎಲ್ಪಿಜಿ ಹಡಗುಗಳ ಸುರಕ್ಷಿತ ಸಂಚಾರ
ಮದ್ಯಪ್ರಾಚ್ಯದ ಪ್ರಕ್ಷುಬ್ಧತೆಯ ನಡುವೆ, ಭಾರತೀಯ ನೌಕಾಪಡೆಯ ಬೆಂಗಾವಲಿನೊಂದಿಗೆ 40,000 ಮೆಟ್ರಿಕ್ ಟನ್ಗೂ ಹೆಚ್ಚು ಎಲ್ಪಿಜಿ ಹೊತ್ತ 'ಶಿವಾಲಿಕ್' ಹಡಗು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ. ಇರಾನ್ ಈ ಜಲಸಂಧಿಯನ್ನು ಬಂದ್ ಮಾಡಿದ್ದರೂ, ಭಾರತದ ಮನವಿಗೆ ಸ್ಪಂದಿಸಿ ನಮ್ಮ ಹಡಗುಗಳ ಸಂಚಾರಕ್ಕೆ ವಿಶೇಷ ಅನುಮತಿ ನೀಡಿದೆ. ಶಿವಾಲಿಕ್ ಜೊತೆಗೆ 'ನಂದಾದೇವಿ' ಎಂಬ ಮತ್ತೊಂದು ಅನಿಲ ಹೊತ್ತ ಹಡಗು ಕೂಡ ಸುರಕ್ಷಿತವಾಗಿ ಜಲಸಂಧಿ ದಾಟಿದ್ದು, ಮುಂದಿನ ಎರಡು ದಿನಗಳಲ್ಲಿ ಮುಂಬೈ ಅಥವಾ ಕಾಂಡ್ಲಾ ಬಂದರು ತಲುಪುವ ಸಾಧ್ಯತೆಯಿದೆ. ಭಾರತೀಯ ಹಡಗುಗಳು ಅಪಾಯದ ವಲಯದಿಂದ ಹೊರಬರುವವರೆಗೆ ನೌಕಾಪಡೆಯು ರಕ್
Mar 141 min read


ಉಡುಪಿ ಅಬಕಾರಿ ಡಿಸಿ ನಿವಾಸದ ಮೇಲೆ ಲೋಕಾಯುಕ್ತ ದಾಳಿ: ಕೋಟ್ಯಂತರ ಮೌಲ್ಯದ ಆಸ್ತಿ ಪತ್ತೆ
ಉಡುಪಿ ಜಿಲ್ಲಾ ಅಬಕಾರಿ ಡಿಸಿ ಶ್ರೀನಿವಾಸ್ ಟಿ.ಎಂ. ಅವರ ನಿವಾಸ ಸೇರಿದಂತೆ ರಾಜ್ಯದ 15 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಮಂಗಳೂರು ವಿಭಾಗದ ಎಸ್ಪಿ ದಿನೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ, ಅಕ್ರಮವಾಗಿ ಗಳಿಸಿದ ಎನ್ನಲಾದ ಬರೋಬ್ಬರಿ 6.90 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಪತ್ತೆಹಚ್ಚಲಾಗಿದೆ. ಇದರಲ್ಲಿ 11 ನಿವೇಶನಗಳು ಮತ್ತು 31 ಎಕರೆ ಕೃಷಿ ಭೂಮಿ ಸೇರಿವೆ. ಕೇವಲ ಸ್ಥಿರಾಸ್ತಿಯಷ್ಟೇ ಅಲ್ಲದೆ, 2.66 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿಗಳೂ ಲೋಕಾಯುಕ್ತರ ಕೈಗೆ ಸಿಕ್ಕಿವೆ. ದಾಳಿಯ ವೇಳೆ ಒಂದೂವರೆ ಕೋಟಿಗೂ ಅಧಿಕ ನಗದು ಹಾಗೂ ಚಿನ್ನಾ
Mar 141 min read


ಆನ್ಲೈನ್ ಗ್ಯಾಸ್ ಬುಕ್ಕಿಂಗ್: ಸೈಬರ್ ವಂಚಕರ ಜಾಲದ ಬಗ್ಗೆ ಎಚ್ಚರ
ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ ಉಂಟಾಗಿರುವ ಗ್ಯಾಸ್ ಅಭಾವವನ್ನು ಸೈಬರ್ ವಂಚಕರು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಗ್ಯಾಸ್ ಏಜೆನ್ಸಿಗಳ ಹೆಸರಿನಲ್ಲಿ ನಕಲಿ ಲಿಂಕ್ಗಳನ್ನು ಸೃಷ್ಟಿಸಿ, ತುರ್ತು ಬುಕ್ಕಿಂಗ್ ಆಮಿಷವೊಡ್ಡಿ ಸಾರ್ವಜನಿಕರ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಗ್ಯಾಸ್ಗಾಗಿ ಪರದಾಡುತ್ತಿರುವ ಜನರನ್ನು ಗುರಿಯಾಗಿಸಿಕೊಂಡು ಈ ಜಾಲ ಸಕ್ರಿಯವಾಗಿದೆ. ಅಧಿಕೃತ ಆ್ಯಪ್ ಅಥವಾ ವೆಬ್ಸೈಟ್ಗಳನ್ನು ಹೊರತುಪಡಿಸಿ ಅಪರಿಚಿತರು ಕಳುಹಿಸುವ ಲಿಂಕ್ಗಳ ಮೂಲಕ ಹಣ ಪಾವತಿಸದಂತೆ ಪೊಲೀಸ್ ಇಲಾಖೆ ಎಚ್ಚರಿಸಿದೆ. ಗ್ಯಾಸ್ ಏಜೆನ್ಸಿಗಳ ನಕಲಿ ಪ್ರತಿ
Mar 141 min read
Archive
bottom of page



