ಯುದ್ಧ ಭೀತಿ ನಡುವೆ ನೆಮ್ಮದಿ ಸುದ್ದಿ: ಅಡುಗೆ ಅನಿಲ ಹೊತ್ತ 'ಶಿವಾಲಿಕ್' ಹಡಗು ಸುರಕ್ಷಿತವಾಗಿ ಭಾರತಕ್ಕೆ ಆಗಮನ!

ಮಧ್ಯಪ್ರಾಚ್ಯದ ಯುದ್ಧ ಭೀತಿಯ ನಡುವೆಯೂ ಅಡುಗೆ ಅನಿಲ ಪೂರೈಕೆಯ ಆತಂಕ ದೂರವಾಗಿದೆ. ಎಲ್‌ಪಿಜಿ ಹೊತ್ತ ‘ಶಿವಾಲಿಕ್’ ಹಡಗು ಹೊರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ದಾಟಿ ಗುಜರಾತ್‌ನ ಮುಂದ್ರಾ ಬಂದರನ್ನು ತಲುಪಿದೆ. ಇದು ದೇಶದ ಇಂಧನ ಭದ್ರತೆಗೆ ನೆಮ್ಮದಿ ತಂದಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL) ಉದ್ದೇಶಿತ 46 ಸಾವಿರ ಮೆಟ್ರಿಕ್ ಟನ್ ಅನಿಲದಲ್ಲಿ, ಮೊದಲ ಹಂತವಾಗಿ ಮುಂದ್ರಾ ಬಂದರಿನಲ್ಲಿ 20 ಸಾವಿರ ಟನ್ ಇಳಿಸಲಾಗುವುದು. ಅಲ್ಲಿನ ಪ್ರಕ್ರಿಯೆ ಮುಗಿದ ನಂತರ ಹಡಗು ಮಂಗಳೂರಿನತ್ತ ಪಯಣ ಬೆಳೆಸಲಿದೆ.

ಉಳಿದ 26 ಸಾವಿರ ಟನ್ ಎಲ್‌ಪಿಜಿಯೊಂದಿಗೆ ಶಿವಾಲಿಕ್ ಹಡಗು ಮೂರ್ನಾಲ್ಕು ದಿನಗಳಲ್ಲಿ ನವಮಂಗಳೂರು ಬಂದರು ತಲುಪಲಿದೆ. ತುರ್ತು ಕ್ರಮಗಳ ಮೂಲಕ ಅನಿಲ ವಿಲೇವಾರಿಗೆ ಸಚಿವಾಲಯವು ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.







Comments