ಸುಳ್ಯ: ಬಾರ್ ಮುಂಭಾಗ ಯುವಕನಿಗೆ ಚೂರಿ ಇರಿತ; ಬೀರಮಂಗಲದ ಹರೀಶ್‌ಗೆ ಗಾಯ
- Mar 15
- 1 min read

ಸುಳ್ಯದ ಶ್ರೀರಾಮ ಪೇಟೆಯಲ್ಲಿರುವ ಬಾರೊಂದರ ಎದುರು ನಿಂತಿದ್ದ ಯುವಕನ ಮೇಲೆ ಚೂರಿಯಿಂದ ಹಲ್ಲೆ ನಡೆಸಿದ ಘಟನೆ ಮಾರ್ಚ್ 14ರ ಶನಿವಾರ ರಾತ್ರಿ ವರದಿಯಾಗಿದೆ. ಚೂರಿ ಇರಿತಕ್ಕೆ ಒಳಗಾದ ಯುವಕನನ್ನು ಬೀರಮಂಗಲ ನಿವಾಸಿ ಹರೀಶ್ ಎಂದು ಗುರುತಿಸಲಾಗಿದೆ. ಈ ದಾಳಿಯ ವೇಳೆ ಹರೀಶ್ ಅವರೊಂದಿಗೆ ಇದ್ದ ಸ್ನೇಹಿತ ನೀತು ಎಂಬುವವರಿಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ತಕ್ಷಣ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಈ ಕೃತ್ಯ ನಡೆದಿದೆಯೇ ಅಥವಾ ಹಳೆಯ ದ್ವೇಷವೇ ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.
ಈ ಘಟನೆಯಿಂದಾಗಿ ಶ್ರೀರಾಮ ಪೇಟೆ ಪರಿಸರದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ. ಹೆಚ್ಚಿನ ವಿವರಗಳು ತನಿಖೆಯ ನಂತರವಷ್ಟೇ ಹೊರಬರಬೇಕಿದೆ.







Comments