ಚಿನ್ನ, ಬೆಳ್ಳಿ ದರ ಭಾರಿ ಇಳಿಕೆ!
- Mar 18
- 1 min read

ದೇಶೀಯ ಮತ್ತು MCX ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಗಣನೀಯವಾಗಿ ಇಳಿಕೆಯಾಗಿದೆ. MCX ನಲ್ಲಿ ಗೋಲ್ಡ್ ಫ್ಯೂಚರ್ಸ್ ಬೆಲೆ ₹500 ರಷ್ಟು ಕಡಿಮೆಯಾಗಿದ್ದು, ಹೂಡಿಕೆದಾರರಲ್ಲಿ ಸಂತಸ ಮೂಡಿಸಿದೆ. ಇದು ಆಭರಣ ಪ್ರಿಯರಿಗೆ ಮತ್ತು ದೀರ್ಘಕಾಲೀನ ಹೂಡಿಕೆದಾರರಿಗೆ ಖರೀದಿಸಲು ಉತ್ತಮ ಸಮಯವಾಗಿದೆ.

ಬೆಳ್ಳಿ ಬೆಲೆ ಕೂಡ ಇಳಿಕೆ: ಚಿನ್ನದ ಜೊತೆಗೆ ಬೆಳ್ಳಿ ಬೆಲೆಯಲ್ಲೂ ಭಾರಿ ಕುಸಿತ ಕಂಡುಬಂದಿದೆ. MCX ನಲ್ಲಿ ಬೆಳ್ಳಿ ದರ ₹2,300 ರಷ್ಟು ಇಳಿಕೆಯಾಗಿದ್ದು, ಹೂಡಿಕೆದಾರರಿಗೆ ಇದು ಸಿಹಿ ಸುದ್ದಿಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಕಿಲೋ ಬೆಳ್ಳಿ ದರ ₹2,650 ಕ್ಕೆ ತಲುಪಿದೆ.







Comments