;
top of page

ಇಸ್ರೇಲ್ ದಾಳಿಗೆ ಇರಾನ್ ನಾಯಕ ಅಲಿ ಲಾರಿಜಾನಿ ಬಲಿ

  • Mar 18
  • 1 min read

ಇಸ್ರೇಲ್ ಮಂಗಳವಾರ ಮುಂಜಾನೆ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್‌ನ ಹಿರಿಯ ಭದ್ರತಾ ನಾಯಕ ಅಲಿ ಲಾರಿಜಾನಿ ಮೃತಪಟ್ಟಿದ್ದಾರೆ ಎಂದು ಇರಾನ್ ಸರ್ಕಾರ ಅಧಿಕೃತವಾಗಿ ದೃಢಪಡಿಸಿದೆ. ಇಸ್ರೇಲ್ ಈ ಹತ್ಯೆಯ ಜವಾಬ್ದಾರಿಯನ್ನು ಹೊತ್ತುಕೊಂಡ ಬೆನ್ನಲ್ಲೇ, ಇರಾನ್‌ನ ರಾಷ್ಟ್ರೀಯ ಭದ್ರತಾ ಮಂಡಳಿಯು ಲಾರಿಜಾನಿ ಅವರ ಸಾವಿನ ಸುದ್ದಿಯನ್ನು ಪ್ರಕಟಿಸಿ ಅವರಿಗೆ ಗೌರವ ಸಲ್ಲಿಸಿದೆ.

ದೇಶದ ಅಭಿವೃದ್ಧಿ ಮತ್ತು ಇಸ್ಲಾಮಿಕ್ ಕ್ರಾಂತಿಗಾಗಿ ಲಾರಿಜಾನಿ ಸಲ್ಲಿಸಿದ ಸೇವೆ ಅಪಾರವೆಂದು ಬಣ್ಣಿಸಿರುವ ಇರಾನ್ ಸರ್ಕಾರ, ಅವರನ್ನು 'ಹುತಾತ್ಮ' ಎಂದು ಕರೆದಿದೆ. ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಲಾರಿಜಾನಿಯವರನ್ನು ಒಬ್ಬ ವಿಶಿಷ್ಟ ಚಿಂತಕ ಮತ್ತು ಕ್ರಾಂತಿಕಾರಿ ಹೋರಾಟಗಾರ ಎಂದು ಸ್ಮರಿಸಿದೆ.

ಈ ಘಟನೆಯು ಮಧ್ಯಪ್ರಾಚ್ಯದಲ್ಲಿ ತೀವ್ರ ಉದ್ವಿಗ್ನತೆ ಉಂಟುಮಾಡಿದೆ. ಲಾರಿಜಾನಿ ಅವರ ರಕ್ತವು ದೇಶದಲ್ಲಿ ಹೊಸ ಜಾಗೃತಿ ಮೂಡಿಸಲಿದೆ ಎಂದು ಐಆರ್‌ಜಿಸಿ ಎಚ್ಚರಿಸಿದ್ದು, ಈ ದಾಳಿಗೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಇಸ್ರೇಲ್‌ಗೆ ಕಡಕ್ ಸಂದೇಶ ರವಾನಿಸಿದೆ.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page