ನೌಕಾಪಡೆ ಬೆಂಗಾವಲಿನಲ್ಲಿ ಭಾರತದ ಎಲ್‌ಪಿಜಿ ಹಡಗುಗಳ ಸುರಕ್ಷಿತ ಸಂಚಾರ

ಮದ್ಯಪ್ರಾಚ್ಯದ ಪ್ರಕ್ಷುಬ್ಧತೆಯ ನಡುವೆ, ಭಾರತೀಯ ನೌಕಾಪಡೆಯ ಬೆಂಗಾವಲಿನೊಂದಿಗೆ 40,000 ಮೆಟ್ರಿಕ್ ಟನ್‌ಗೂ ಹೆಚ್ಚು ಎಲ್‌ಪಿಜಿ ಹೊತ್ತ 'ಶಿವಾಲಿಕ್' ಹಡಗು ಹಾರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ. ಇರಾನ್ ಈ ಜಲಸಂಧಿಯನ್ನು ಬಂದ್ ಮಾಡಿದ್ದರೂ, ಭಾರತದ ಮನವಿಗೆ ಸ್ಪಂದಿಸಿ ನಮ್ಮ ಹಡಗುಗಳ ಸಂಚಾರಕ್ಕೆ ವಿಶೇಷ ಅನುಮತಿ ನೀಡಿದೆ.

ಶಿವಾಲಿಕ್ ಜೊತೆಗೆ 'ನಂದಾದೇವಿ' ಎಂಬ ಮತ್ತೊಂದು ಅನಿಲ ಹೊತ್ತ ಹಡಗು ಕೂಡ ಸುರಕ್ಷಿತವಾಗಿ ಜಲಸಂಧಿ ದಾಟಿದ್ದು, ಮುಂದಿನ ಎರಡು ದಿನಗಳಲ್ಲಿ ಮುಂಬೈ ಅಥವಾ ಕಾಂಡ್ಲಾ ಬಂದರು ತಲುಪುವ ಸಾಧ್ಯತೆಯಿದೆ. ಭಾರತೀಯ ಹಡಗುಗಳು ಅಪಾಯದ ವಲಯದಿಂದ ಹೊರಬರುವವರೆಗೆ ನೌಕಾಪಡೆಯು ರಕ್ಷಣೆ ನೀಡುತ್ತಲೇ ಇರಲಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಪ್ರಸ್ತುತ ಇರಾನ್ ತನ್ನ ಮಿತ್ರ ರಾಷ್ಟ್ರಗಳಾದ ಭಾರತ, ರಷ್ಯಾ ಮತ್ತು ಚೀನಾದ ಹಡಗುಗಳಿಗೆ ಮಾತ್ರ ಈ ಮಾರ್ಗದಲ್ಲಿ ಸಂಚರಿಸಲು ಅವಕಾಶ ನೀಡಿದೆ. ಅಮೆರಿಕ ಮತ್ತು ಇಸ್ರೇಲ್ ಬೆಂಬಲಿತ ಹಡಗುಗಳ ವಿರುದ್ಧ ಕಠಿಣ ಎಚ್ಚರಿಕೆ ನೀಡಿರುವ ಇರಾನ್, ಜಾಗತಿಕ ಇಂಧನ ಪೂರೈಕೆಯ ಪ್ರಮುಖ ಕೇಂದ್ರವಾದ ಹಾರ್ಮುಜ್ ಜಲಸಂಧಿಯ ಮೇಲೆ ಬಿಗಿ ಹಿಡಿತ ಸಾಧಿಸಿದೆ.







Comments