top of page
News Articles
Sathyapatha News Plus


ಕೊಲ್ಲಮೊಗ್ರು : ಶೇಂದಿ ಇಳಿಸಲು ತೆಂಗಿನ ಮರವೇರಿದ್ದ ವ್ಯಕ್ತಿ ಮರದಲ್ಲೇ ಮೃತ
ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಕೊಲ್ಲಮೊಗ್ರ ಗ್ರಾಮದಲ್ಲಿ ತೆಂಗಿನ ಮರವೇರಿ ಶೇಂದಿ ಇಳಿಸುತ್ತಿದ್ದ ಕೇರಳ ಮೂಲದ ವ್ಯಕ್ತಿಯೋರ್ವರು ಮರದಲ್ಲೇ ಮೃತಪಟ್ಟ ದಾರುಣ ಘಟನೆ ಸೋಮವಾರ ನಡೆದಿದೆ. ಕೊಲ್ಲಮೊಗ್ರು ಸಮೀಪದ ಪನ್ನೆಯಲ್ಲಿ ವ್ಯಕ್ತಿಯೊಬ್ಬರ ಜಾಗದಲ್ಲಿ ಕೇರಳ ಮೂಲದ ಈ ವ್ಯಕ್ತಿಯು ಶೇಂದಿ ಮೂರ್ತೆ (ಶೇಂದಿ ಇಳಿಸುವ ಕಾಯಕ) ನಡೆಸುತ್ತಿದ್ದರು. ಎಂದಿನಂತೆ, ಸೋಮವಾರದಂದು ಕೂಡಾ ಶೇಂದಿ ಇಳಿಸುವ ಸಲುವಾಗಿ ಅವರು ತೆಂಗಿನ ಮರವನ್ನು ಏರಿದ್ದರು. ಆದರೆ, ಮರದ ಮೇಲೆ ಇರುವಾಗಲೇ ಅವರು ತೀವ್ರ ಅಸ್ವಸ್ಥಗೊಂಡಿದ್ದು, ಸಹಾಯಕ್ಕಾಗಿ ಕೂಗಿಕೊಂಡಿದ್ದರೆಂದು ಸ್ಥಳೀಯರು ತಿಳಿಸಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳೀಯ
Nov 25, 20251 min read


ಕುಕ್ಕೆ ಸುಬ್ರಹ್ಮಣ್ಯ: ಚಂಪಾಷಷ್ಟಿ ಮಹೋತ್ಸವ ಹಿನ್ನಲೆ ಮದ್ಯದಂಗಡಿ ಮುಚ್ಚಲು ಡಿಸಿ ಆದೇಶ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಪ್ರಸಿದ್ಧ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಡಿಸೆಂಬರ್ 2 ರವರೆಗೆ ನಡೆಯಲಿದ್ದು, ಜಾತ್ರೆಯ ಮುಖ್ಯ ಕಾರ್ಯಕ್ರಮಗಳ ಅಂಗವಾಗಿ ನವೆಂಬರ್ 25 ರಂದು ಪಂಚಮಿ ರಥೋತ್ಸವ ಹಾಗೂ ತೈಲಾಭ್ಯಂಜನ, 26 ರಂದು ಚಂಪಾಷಷ್ಠಿ ಮಹಾರಥೋತ್ಸವ ಆಯೋಜಿಸಲಾಗಿದೆ. ಈ ಎರಡು ದಿನಗಳಲ್ಲಿ ಸುಮಾರು 50 ರಿಂದ 60 ಸಾವಿರ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆಯಿದೆ. ಭಕ್ತರ ಭದ್ರತೆ, ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ನವೆಂಬರ್ 25 ಬೆಳಿಗ್ಗೆ 6 ಗಂಟೆಯಿಂದ 26ರ ರಾತ್ರಿ 12 ಗಂಟೆಯವರೆಗೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ
Nov 25, 20251 min read


ಹೈಕಮಾಂಡ್ ತೀರ್ಮಾನಕ್ಕೆ ನಾವು ಬದ್ಧ: ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೋ ಅದನ್ನು ನಾನು ಹಾಗೂ ಡಿ.ಕೆ.ಶಿವಕುಮಾರ್ ಕಡ್ಡಾಯವಾಗಿ ಒಪ್ಪಿಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಶಿಡ್ಲಘಟ್ಟದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐದು ತಿಂಗಳ ಹಿಂದೆ ಹೈಕಮಾಂಡ್ ಭೇಟಿಯಾದ ವೇಳೆ ಸಚಿವ ಸಂಪುಟ ಪುನಾರಚನೆ ಕುರಿತು ಚರ್ಚೆ ನಡೆದಿತ್ತು. ಆದರೆ, “ನಾನು 2.5 ವರ್ಷ ಮುಗಿದ ನಂತರ ಅದನ್ನು ಮಾಡೋಣ ಎಂದು ತಿಳಿಸಿದ್ದೇನೆ. ಈಗ ಹೈಕಮಾಂಡ್ ಏನು ಸೂಚನೆ ನೀಡುತ್ತಾರೋ ಅದರಂತೆ ನಡೆದುಕೊಳ್ಳುತ್ತೇವೆ” ಎಂದು ಹೇಳಿದರು. ಹಣದ ಬಗ್ಗೆ ಬಿಜೆಪಿ ಅಪಪ್ರಚಾರ ಸರ್ಕಾರದ ಬಳಿ ಹಣವಿಲ್ಲ ಎಂಬ ಬಿಜೆಪಿಯ ಆರೋಪವನ್ನು ತಳ್ಳಿಹ
Nov 24, 20251 min read


ಮುಂಡಗೋಡು: ಪೊಲೀಸರ ಭರ್ಜರಿ ಕಾರ್ಯಾಚರಣೆ; 8 ಲಕ್ಷ ಮೌಲ್ಯದ ಚರಸ್ ಸಹಿತ ಇಂಜಿನಿಯರ್ ಬಂಧನ
ಮುಂಡಗೋಡು: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪೊಲೀಸರು ಮಾದಕ ದ್ರವ್ಯ ಮಾರಾಟ ಜಾಲದ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ 781 ಗ್ರಾಂ ನಿಷೇಧಿತ ಮಾದಕ ವಸ್ತು 'ಚರಸ್' ಅನ್ನು ವಶಪಡಿಸಿಕೊಂಡು, ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಯನ್ನು ಮುಂಡಗೋಡಿನ ಸುಭಾಷ್ ನಗರದ ನಿವಾಸಿ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಸಚಿನ್ ಟೇಕಬಹುದ್ದೂರ್ ಗೋರ್ಖಾ (26) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆಗಿಳಿದ ಮುಂಡಗೋಡು ಠಾಣೆಯ ಸಿ.ಪಿ.ಐ ರಂಗನಾಥ್ ನೀಲಮ್ಮನವರ್ ಹಾ
Nov 23, 20251 min read


ದೆಹಲಿ ವಾಯು ಮಾಲಿನ್ಯ: ನವೆಂಬರ್, ಡಿಸೆಂಬರ್ನಲ್ಲಿ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೆ ಸುಪ್ರೀಂ ಕೋರ್ಟ್ ನಿಷೇಧ!
ದೆಹಲಿಯಲ್ಲಿ ಪ್ರತಿ ವರ್ಷ ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ವಾಯು ಮಾಲಿನ್ಯದ ಮಟ್ಟವು ಅತ್ಯಂತ ಅಪಾಯಕಾರಿ ಸ್ಥಿತಿಗೆ ತಲುಪುವ ಹಿನ್ನೆಲೆಯಲ್ಲಿ, ಮಕ್ಕಳ ಆರೋಗ್ಯವನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಈ ಎರಡು ತಿಂಗಳುಗಳ ಅವಧಿಯಲ್ಲಿ ರಾಷ್ಟ್ರ ರಾಜಧಾನಿಯಾದ್ಯಂತ ಶಾಲಾ-ಕಾಲೇಜುಗಳಲ್ಲಿ ಅಥವಾ ಯಾವುದೇ ಮೈದಾನಗಳಲ್ಲಿ ಮಕ್ಕಳ ಕ್ರೀಡಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಾಲಿನ್ಯ ಸುರಕ್ಷಿತವಾಗಿರುವ ತಿಂಗಳುಗಳಿಗೆ ಈ ಕ್ರೀಡಾ ಚಟುವಟಿಕೆಗಳನ್ನು ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್, 'ಕಮಿಷನ್ ಫಾರ್ ಏರ್ ಕ್ವಾಲಿಟಿ ಮ್ಯಾನೇಜ್ಮೆಂಟ್ಗೆ (CAQM)'
Nov 19, 20251 min read


ದತ್ತ ಜಯಂತಿ ಹಿನ್ನೆಲೆ ಚಿಕ್ಕಮಗಳೂರು ಪ್ರವಾಸಕ್ಕೆ ನಿರ್ಬಂಧ: ಪ್ರವಾಸಿಗರಿಗೆ ಹೊಸ ಆದೇಶ
ದತ್ತ ಜಯಂತಿ ಮಹೋತ್ಸವದ ಹಿನ್ನೆಲೆಯಲ್ಲಿ ಕಾಫಿನಾಡು ಚಿಕ್ಕಮಗಳೂರು ಪ್ರವಾಸಕ್ಕೆ ಯೋಜಿಸಿರುವ ಪ್ರವಾಸಿಗರಿಗೆ ಪ್ರಮುಖ ಸುದ್ದಿ ಹೊರಬಿದ್ದಿದೆ. ಜಿಲ್ಲಾಡಳಿತವು ಡಿಸೆಂಬರ್ 1 ರಿಂದ 4 ರವರೆಗೆ ಚಿಕ್ಕಮಗಳೂರು ತಾಲೂಕಿನ ಪ್ರಮುಖ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ ಭಾಗಕ್ಕೆ ಸಾರ್ವಜನಿಕರ ಹಾಗೂ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಈ ಸಂಬಂಧ ಆದೇಶ ಹೊರಡಿಸಿದ್ದು, ಡಿಸೆಂಬರ್ 5 ರ ಬೆಳಗ್ಗೆ 10 ಗಂಟೆಯ ನಂತರವಷ್ಟೇ ಈ ಭಾಗವನ್ನು ಪ್ರವಾಸಿಗರಿಗೆ ಪುನಃ ತೆರೆಯಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಈ ದಿನಾಂಕಗಳಲ್ಲಿ ಪ್ರವಾಸ ಕೈ
Nov 19, 20251 min read


ಇಂದಿನ ಚಿನ್ನದ ದರ
ಇಂದು, ನವೆಂಬರ್ 19, 2025 ರಂದು ಪ್ರಮುಖ ಲೋಹಗಳಾದ ಚಿನ್ನ (Gold), ಬೆಳ್ಳಿ (Silver), ಮತ್ತು ಪ್ಲಾಟಿನಂ (Platinum) ದರಗಳಲ್ಲಿನ ಏರಿಳಿತದ ಕುರಿತು ಪ್ರಮುಖ ವರದಿ ಇಲ್ಲಿದೆ. | ಚಿನ್ನ 24 ಕ್ಯಾರೆಟ್ (99.9% ಶುದ್ಧ) | 12,485/- | | ಚಿನ್ನ 22 ಕ್ಯಾರೆಟ್ (ಆಭರಣ ತಯಾರಿಕೆಗೆ) | 11,445/- | | ಚಿನ್ನ 18 ಕ್ಯಾರೆಟ್ | 9,364/- | | ಚಿನ್ನ 14 ಕ್ಯಾರೆಟ್ | 7,282/- | | ಬೆಳ್ಳಿ (ಪ್ರತಿ ಗ್ರಾಂಗೆ) | 159/- | | ಪ್ಲಾಟಿನಂ (Platinum) | 5,925/- |
Nov 19, 20251 min read


ಪಡೀಲ್-ಕಣ್ಣೂರು ಮುಖ್ಯ ಪೈಪ್ಲೈನ್ ಹಾನಿ: ಮಂಗಳೂರು ನಗರಕ್ಕೆ ಎರಡು ದಿನದಿಂದ ನೀರು ಪೂರೈಕೆ ಸ್ಥಗಿತ
ಮಂಗಳೂರು: ನಗರದ ವಿವಿಧ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ಲೈನ್ ಪಡೀಲ್-ಕಣ್ಣೂರು ಬಳಿ ಕಾಮಗಾರಿಯ ವೇಳೆ ಹಾನಿಗೊಳಗಾದ ಕಾರಣ ಸೋಮವಾರ ಮತ್ತು ಮಂಗಳವಾರ ನಗರದಲ್ಲಿ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಈ ಅನಿರೀಕ್ಷಿತ ಅಡಚಣೆಯಿಂದಾಗಿ ಮಂಗಳೂರು ನಗರದಾದ್ಯಂತ ತೀವ್ರ ನೀರಿನ ಸಮಸ್ಯೆ ತಲೆದೋರಿದ್ದು, ಜನಜೀವನ ಅಸ್ತವ್ಯಸ್ತಗೊಂಡು ಜನರು ಪರದಾಡುವಂತಾಗಿದೆ. ತುಂಬೆ ಡ್ಯಾಂನಿಂದ ಪಡೀಲ್ ಟ್ಯಾಂಕ್ಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್ಲೈನ್ 18 ಅಡಿ ಆಳದಲ್ಲಿ ಹಾದುಹೋಗಿದ್ದು, ಈ ಪೈಪ್ಲೈನ್ಗೆ ಹಾನಿಯಾಗಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಪಡೀಲ್ ಪಂಪೌಸ್ನಿಂದ ನೀರು ಪಡೆಯ
Nov 19, 20251 min read


ಶಬರಿಮಲೆ ಯಾತ್ರೆ: ಎರಡೇ ದಿನದಲ್ಲಿ 2 ಲಕ್ಷ ಭಕ್ತರ ಆಗಮನ, ಭಾರಿ ನೂಕುನುಗ್ಗಲು, ಓರ್ವ ಭಕ್ತ ಮಹಿಳೆ ಸಾವು
ಪ್ರಸಿದ್ಧ ವಾರ್ಷಿಕ ಶಬರಿಮಲೆ ಅಯ್ಯಪ್ಪನ 'ಮಂಡಲ ಮಕರವಿಳಕ್ಕು' ಯಾತ್ರೆ ಆರಂಭವಾದ ಎರಡನೇ ದಿನದಲ್ಲಿ ಭಾರಿ ಅವ್ಯವಸ್ಥೆ ಉಂಟಾಗಿದ್ದು, ಕರ್ನಾಟಕದ ಭಕ್ತರು ಸೇರಿದಂತೆ ಕೇವಲ 48 ಗಂಟೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದಾರೆ. ನಿರೀಕ್ಷೆಗೂ ಮೀರಿದ ಭಕ್ತರ ದಂಡು ಆಗಮಿಸಿದ ಕಾರಣ ಅಯ್ಯಪ್ಪನ ಸನ್ನಿಧಿಯ 18 ಮೆಟ್ಟಿಲುಗಳ ಬಳಿ ಭಾರೀ ನೂಕುನುಗ್ಗಲು ವಾತಾವರಣ ಸೃಷ್ಟಿಯಾಗಿದೆ. ಈ ಅವ್ಯವಸ್ಥೆಗಳ ನಡುವೆ, ದರ್ಶನಕ್ಕಾಗಿ ಸರದಿಯಲ್ಲಿ ನಿಂತಿದ್ದ ಕಲ್ಲಿಕೋಟೆ ಮೂಲದ 58 ವರ್ಷದ ಮಹಿಳಾ ಭಕ್ತರೊಬ್ಬರು ಕುಸಿದು ಸಾವನ್ನಪ್ಪಿರುವ ದುರಂತ ಸಂಭವಿಸಿದೆ. ದೇವಸ್ಥಾನದ ಬಾಗಿಲು ತೆರೆದ ಎರಡೇ ದಿನದಲ್ಲಿ ಇಷ್
Nov 19, 20251 min read


ಭಾರತದ ಟಾಪ್ 10 ಶ್ರೀಮಂತ ಮಹಿಳಾ ಉದ್ಯಮಿಗಳ ಪಟ್ಟಿ ಪ್ರಕಟ: ಮಂಗಳೂರು ಮೂಲದ ಜಯಶ್ರೀ ಉಳ್ಳಾಲ್ಗೆ ಅಗ್ರಸ್ಥಾನ
ಹ್ಯುರೂನ್ ರೀಸರ್ಚ್ ಬಿಡುಗಡೆ ಮಾಡಿದ 'ಇಂಡಿಯಾ ರಿಚ್ ಲಿಸ್ಟ್ 2025' ರ ಪ್ರಕಾರ ಭಾರತದ ಅತ್ಯಂತ ಶ್ರೀಮಂತ ಮಹಿಳಾ ಉದ್ಯಮಿಗಳ ಪಟ್ಟಿ ಪ್ರಕಟಗೊಂಡಿದೆ. ಈ ಪಟ್ಟಿಯಲ್ಲಿ ಮಂಗಳೂರು ಮೂಲದ ಜಯಶ್ರೀ ಉಳ್ಳಾಲ್ ಅವರು 50,170 ಕೋಟಿ ರೂಪಾಯಿಗಳ ಸಂಪತ್ತಿನೊಂದಿಗೆ ಅಗ್ರಸ್ಥಾನ ಪಡೆದುಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಅವರು 2008 ರಿಂದ ಕಂಪ್ಯೂಟರ್ ನೆಟ್ವರ್ಕಿಂಗ್ ಸಂಸ್ಥೆಯಾದ ಅರಿಸ್ಟಾ ನೆಟ್ವರ್ಕ್ಸ್ನ ಅಧ್ಯಕ್ಷೆ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ $7 ಬಿಲಿಯನ್ ಆದಾಯವನ್ನು ದಾಖಲಿಸಿದ ಅರಿಸ್ಟಾ ನೆಟ್ವರ್ಕ್ಸ್ನಲ್ಲಿ ಉಳ್ಳಾಲ್ ಅವರು ಸುಮಾರು ಶೇ 3ರಷ್ಟು ಷೇರುಗಳನ್
Nov 18, 20251 min read


ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರಿಂದ ಸಂಚಾರ ತಡೆ: BMRCL ನಿಂದ ದೂರು ದಾಖಲು
ಸೋಮವಾರ ಬೆಳಗ್ಗೆ ಬೆಂಗಳೂರಿನ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಗುಂಪೊಂದು ರೈಲು ಹೊರಡುವುದನ್ನು ತಡೆದು ಪ್ರತಿಭಟನೆ ನಡೆಸಿದ ಗಂಭೀರ ಘಟನೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಕಾನೂನು ಕ್ರಮ ಕೈಗೊಳ್ಳುವಂತೆ BMRCL ಅಧಿಕಾರಿಗಳು ಜಯನಗರ ಪೊಲೀಸ್ ಠಾಣೆಗೆ ಅಧಿಕೃತ ದೂರು ಸಲ್ಲಿಸಿದ್ದಾರೆ. ಬೆಳಿಗ್ಗೆ 6 ಗಂಟೆಗೆ ನಿಲ್ದಾಣದಿಂದ ಹೊರಡಬೇಕಿದ್ದ ರೈಲು, ಪ್ರತಿಭಟನಾಕಾರರ ಗಲಾಟೆಯಿಂದಾಗಿ ಸುಮಾರು 35 ನಿಮಿಷಗಳ ಕಾಲ ನಿಲ್ದಾಣದಲ್ಲೇ ನಿಂತುಬಿಟ್ಟಿತ್ತು. ಮೆಟ್ರೋ ನಿರ್ವಾಹಕ ಅಜಿತ್ ಜೆ. ಅವರು ಪ್ರಯಾಣಿಕರನ್ನು ಮನವಿ ಮಾಡಿದರೂ ಸಹ
Nov 18, 20251 min read


ಶಬರಿಮಲೆ ಯಾತ್ರೆ ಪ್ರಾರಂಭ ಮೊದಲ ದಿನವೇ 1.36 ಲಕ್ಷ ಭಕ್ತರಿಂದ ಅಯ್ಯಪ್ಪನ ದರ್ಶನ
ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದ ವಾರ್ಷಿಕ ಮಂಡಲ ಯಾತ್ರೆ ಸೋಮವಾರದಿಂದ ವಿಧ್ಯುಕ್ತ ವಾಗಿ ಆರಂಭವಾಯಿತು. ಮೊದಲ ದಿನವೇ 1.36 ಲಕ್ಷ ಭಕ್ತರು ಅಯ್ಯಪ್ಪನ ದರ್ಶನ ಪಡೆದರು. ಸೋಮವಾರ ಶಬರಿಮಲೆ ಋತುವಿನ ಆರಂಭದ ದಿನವಾದ್ದರಿಂದ ಪ್ರಧಾನ ಆರ್ಚಕರ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳು ನೆರವೇ ರಿದವು. ಭಾನುವಾರ ಸಂಜೆಯೇ ದೇಗುಲದ ಬಾಗಿಲು ತೆರೆಯಲಾಗಿದ್ದು, ಸೋಮವಾರದಿಂದ 41 ದಿನಗಳ ಮಂಡಲ ಯಾತ್ರೆಗೆ ಚಾಲನೆ ನೀಡಲಾ ಯಿತು. ಈ ಸಮಯದಲ್ಲಿ ಬೇರೆ ಬೇರೆ ರಾಜ್ಯಗಳ ಲಕ್ಷಾಂತರ ಮಂದಿ ಯಾತ್ರೆ ಕೈಗೊಂಡು “ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಶಬರಿಮಲೆ ದೇಗುಲದ ದ್ವಾರಪಾಲಕ ವಿಗ್ರಹಗಳ ಚಿ
Nov 18, 20251 min read


ಕಡಬ: ಪೊಲೀಸ್ ಉಪನಿರೀಕ್ಷಕರ ವರ್ಗಾವಣೆ
ಕಡಬ: ಮಂಗಳೂರು ಪಶ್ಚಿಮ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ (ಐಜಿಪಿ) ಅಮಿತ್ ಸಿಂಗ್ ಐಪಿಎಸ್ ಅವರು ನವೆಂಬರ್ 14 ರಂದು ಆದೇಶ ಹೊರಡಿಸಿದ್ದು, ಕಡಬ ಪೊಲೀಸ್ ಠಾಣೆಯ ಎಸ್.ಐ. ಅಭಿನಂದನ್ ಎ.ಎಸ್. ಸೇರಿದಂತೆ ಮೂವರು ಪೊಲೀಸ್ ಉಪನಿರೀಕ್ಷಕರನ್ನು (ಪಿಎಸ್ಐ) ವರ್ಗಾವಣೆಗೊಳಿಸಿದ್ದಾರೆ. ಈ ವರ್ಗಾವಣೆಯು ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಕೂಡಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಬಂಟ್ವಾಳ ನಗರ ಠಾಣೆಯ ತನಿಖಾ ವಿಭಾಗದ ಪಿಎಸ್ಐ ಗುಣಪಾಲ ಜೆ. ಅವರನ್ನು ಪುತ್ತೂರು ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದ್ದು, ಪುತ್ತೂರು ಗ್ರಾಮಾಂತರ ಠಾಣೆಯಲ್ಲಿದ್ದ ಎಸ್.ಐ. ಜ
Nov 14, 20251 min read


ಕುದ್ಮಾರು ಗ್ರಾಮದ ಶಾಂತಿಮೊಗೇರು ಅಣೆಕಟ್ಟಿನ ಹಲಗೆಗಳ ನಿರ್ವಹಣೆಗೆ ಸ್ಥಳೀಯರ ಆಕ್ರೋಶ
ಕುದ್ಮಾರು ಗ್ರಾಮದ ಶಾಂತಿಮೊಗೇರು ಹೊಳೆಗೆ ಅಡ್ಡಲಾಗಿ ನಿರ್ಮಿಸಲಾದ ಅಣೆಕಟ್ಟಿನ ನಿರ್ವಹಣೆಯ ಬಗ್ಗೆ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಣೆಕಟ್ಟಿನ ಪ್ರಮುಖ ಭಾಗವಾಗಿರುವ, ನೀರನ್ನು ನಿಯಂತ್ರಿಸಲು ಬಳಸುವ ಮರದ ಅಡ್ಡ ಹಲಗೆಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುತ್ತಿಲ್ಲ ಮತ್ತು ಅವುಗಳ ಜೋಪಾನದ ವ್ಯವಸ್ಥೆಯು ಸಮರ್ಪಕವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಲಗೆಗಳು ತುಕ್ಕು ಹಿಡಿದು ಹಾಳಾಗುತ್ತಿದ್ದು, ಇದರಿಂದ ಅಣೆಕಟ್ಟಿನ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ ಎಂಬುದು ಗ್ರಾಮಸ್ಥರ ಪ್ರಮುಖ ಅಳಲಾಗಿದೆ. ಅಣೆಕಟ್ಟಿಗೆ ಅಳವಡಿಸಬೇಕಾದ ಹಲಗೆಗಳ ಪೈಕಿ ಬಹುತೇಕ ಹಲಗೆಗ
Nov 14, 20251 min read
ವೈಭವ ಸೂರ್ಯವಂಶಿ ಸಿಡಿಲು ಶತಕ! ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ನಲ್ಲಿ ಇಂಡಿಯಾ ‘ಎ’ ಅಬ್ಬರ
ದುಬೈ: ಏಷ್ಯಾ ಕಪ್ ರೈಸಿಂಗ್ ಸ್ಟಾರ್ಸ್ 2025ರಲ್ಲಿ ನಡೆದ ಇಂಡಿಯಾ ‘ಎ’ ಮತ್ತು ಯುಎಇ ನಡುವಿನ ಪಂದ್ಯದಲ್ಲಿ ಭಾರತೀಯ ಯುವ ಕ್ರಿಕೆಟಿಗ ವೈಭವ ಸೂರ್ಯವಂಶಿ ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ ಅಖಾಡವನ್ನು ರಂಗೇರಿಸಿದರು. ಕೇವಲ 32 ಎಸೆತಗಳಲ್ಲಿ ಸ್ಫೋಟಕ ಶತಕ ಬಾರಿಸಿದ ಸೂರ್ಯವಂಶಿ ಸ್ಟೇಡಿಯಂನಲ್ಲಿ ರನ್ಗಳ ಹೊಳೆ ಹರಿಸಿದರು. ಪರಿಪೂರ್ಣ ಆಕ್ರಮಣಕಾರಿ ಶೈಲಿಯಲ್ಲಿ ಆಡಿದ ಸೂರ್ಯವಂಶಿ ಫೋರ್, ಸಿಕ್ಸರ್ಗಳ ಮಳೆ ಸುರಿಸಿ ಯುಎಇ ಬೌಲರ್ಗಳನ್ನು ಸಂಪೂರ್ಣ ಗಾಬರಿಗೊಳಿಸಿದರು. ಅವರ ಬ್ಯಾಟಿಂಗ್ಗಳಿಂದಾಗಿ ಇಂಡಿಯಾ ‘ಎ’ ತಂಡ ದೊಡ್ಡ ಮೊತ್ತದ ದಿಸೆಯಲ್ಲಿ ಭರ್ಜರಿಯಾಗಿ ಸಾಗಿದೆ. ಪಂದ್ಯದ ಆರಂಭದಿಂದಲೇ ಆಕ್ರಾಮಕ
Nov 14, 20251 min read


ಮಂಗಳೂರು ನಂತೂರ್ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ; ಅಪಾಯ ತಪ್ಪಿಸಿದ ಸ್ಥಳೀಯರು
ಮಂಗಳೂರು ನಗರದ ನಂತೂರ್ ಜಂಕ್ಷನ್ ಸಮೀಪ ಚಲಿಸುತ್ತಿದ್ದ ಬೆಂಗಳೂರು ಆರ್ಟಿಒ ನೋಂದಣಿಯ ಬಿಳಿ ಬಣ್ಣದ ಹುಂಡೈ ವೆರ್ನಾ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಇಂದು (ಶುಕ್ರವಾರ) ಮಧ್ಯಾಹ್ನ ಸಂಭವಿಸಿದೆ. ಕಾರು ರಸ್ತೆಯಲ್ಲಿ ಸಾಗುತ್ತಿದ್ದಾಗ ಅದರ ಎಂಜಿನ್ನಿಂದ ದಟ್ಟವಾದ ಹೊಗೆ ಆವರಿಸಲು ಪ್ರಾರಂಭಿಸಿದ್ದು, ಕೆಲವೇ ಕ್ಷಣಗಳಲ್ಲಿ ಬೆಂಕಿ ಧಗಧಗನೆ ಹೊತ್ತಿಕೊಂಡಿದೆ. ತಕ್ಷಣವೇ ಕಾರಿನಲ್ಲಿದ್ದ ಮೂವರು ವಿದ್ಯಾರ್ಥಿಗಳು ಸಮಯಪ್ರಜ್ಞೆ ಮೆರೆದು ವಾಹನದಿಂದ ಹೊರಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಈ ದಿಢೀರ್ ಬೆಂಕಿ ಅವಘಡದಿಂದ ರಸ್
Nov 14, 20251 min read


ಬಿಹಾರ ಚುನಾವಣೆ: ಎನ್ಡಿಎಗೆ ಭರ್ಜರಿ ಮುನ್ನಡೆ, ಕಾಂಗ್ರೆಸ್ಗೆ ತೀವ್ರ ಹಿನ್ನಡೆ
ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿರುವಂತೆ, ಎನ್ಡಿಎ ಮೈತ್ರಿಕೂಟವು 190ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸಿ ಸ್ಪಷ್ಟ ಬಹುಮತದತ್ತ ಸಾಗುತ್ತಿದೆ. ಮತ್ತೊಂದೆಡೆ, ವಿರೋಧ ಪಕ್ಷದ ಪ್ರಮುಖ ಅಂಗವಾದ ಕಾಂಗ್ರೆಸ್ ಪಕ್ಷವು ಡಬಲ್ ಡಿಜಿಟ್ ಸಂಖ್ಯೆಯನ್ನು ದಾಟಲು ಸಹ ಸವಾಲುಗಳನ್ನು ಎದುರಿಸುತ್ತಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಜಂಟಿ ನಾಯಕತ್ವದಲ್ಲಿ ನಡೆಸಿದ ಸುಶಾಸನ (ಉತ್ತಮ ಆಡಳಿತ) ಮತ್ತು ಅಭಿವೃದ್ಧಿ ಆಧಾರಿತ ಪ್ರಚಾರಗಳು ಮತದಾರರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ವಿಶೇಷವಾಗಿ, ಮಹಿಳಾ ಮತದಾರರ ವಿಶ್ವಾಸವನ್ನು ಗಳಿಸ
Nov 14, 20251 min read


ಪರಿಸರ ಮಾತೆ ಸಾಲುಮರದ ತಿಮ್ಮಕ್ಕ ನಿಧನ
ಬೆಂಗಳೂರು: ಪದ್ಮಶ್ರೀ ಪುರಸ್ಕೃತೆ, 'ಪರಿಸರ ಮಾತೆ' ಎಂದೇ ಜಗದ್ವಿಖ್ಯಾತರಾಗಿದ್ದ ಸಾಲುಮರದ ತಿಮ್ಮಕ್ಕ (114) ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ಇಂದು ಜಯನಗರದ ಅಪೋಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. 1911ರ ಜೂನ್ 30 ರಂದು (ಕೃಷ್ಣಾಪ್ರಭು ಮೈಸೂರಿನ ಕಾಲದಲ್ಲಿ) ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ ಜನಿಸಿದ ತಿಮ್ಮಕ್ಕನವರು, ಯಾವುದೇ ಔಪಚಾರಿಕ ಶಿಕ್ಷಣವನ್ನು ಪಡೆದವರಲ್ಲ. ಬಡತನದಲ್ಲಿ ಬೆಳೆದ ಇವರು ಕುಟುಂಬದ ಪರಿಸ್ಥಿತಿಯಿಂದಾಗಿ ಕಲ್ಲು ಗಣಿಯಲ್ಲಿ ದಿನಗೂಲಿ ಕಾರ್ಮಿಕರಾಗಿ ದುಡಿದು ಜೀವನ ನಡೆಸುತ್ತಿದ್ದರು. ಜೀವನದುದ್ದಕ್ಕೂ ಶ್ರಮಪೂರ್
Nov 14, 20251 min read
Archive
bottom of page



