top of page
News Articles
Sathyapatha News Plus


ಕೋಮು ದ್ವೇಷದ ಹಿನ್ನೆಲೆ: ಸಹಪಾಠಿಗಳೊಂದಿಗೆ ತೆರಳುತ್ತಿದ್ದ ವಿದ್ಯಾರ್ಥಿಯ ಮೇಲೆ ಹಲ್ಲೆ
ಸಹಪಾಠಿಗಳೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಕಾಲೇಜು ವಿದ್ಯಾರ್ಥಿಯ ಮೇಲೆ ಇಬ್ಬರು ವ್ಯಕ್ತಿಗಳು ಕೋಮು ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದ ವಿವಾದದ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಕುರಿತು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ನವೆಂಬರ್ 6 ರಂದು ಬೆಳಿಗ್ಗೆ, ಪದವಿ ಪಡೆಯುತ್ತಿರುವ ದೂರುದಾರ ವಿದ್ಯಾರ್ಥಿಯು ತಮ್ಮ ಒಂಬತ್ತು ಮಂದಿ ಸಹಪಾಠಿಗಳೊಂದಿಗೆ ಪೆರಿಯಡ್ಕದಲ್ಲಿರುವ ತನ್ನ ಅನಾರೋಗ್ಯ ಪೀಡಿತ ಸಹಪಾಠಿಯನ್ನು ಭೇಟಿ ಮಾಡಲು ಹೋಗಿದ್ದರು. ಈ ವೇಳೆ ಪೆರಿಯಡ್ಕ ಪ್ರದೇಶದಲ್ಲಿ
Nov 71 min read


ಮಂಗಳೂರಿನಲ್ಲಿ ವರ್ಷದ ಅತಿದೊಡ್ಡ ಸಂಗೀತ ಮತ್ತು ಖಾದ್ಯೋತ್ಸವ – 'ಆಮ್ಚೆಂ ಫೆಸ್ಟ್ 2025' ಗೆ ಸಿದ್ಧತೆ!
ಮಂಗಳೂರು ನಗರವು ಈ ವರ್ಷದ ಅತ್ಯಂತ ಸ್ಮರಣೀಯ ಸಂಜೆಗೆ ಸಾಕ್ಷಿಯಾಗಲು ಸಿದ್ಧವಾಗಿದೆ. ಪರಿವರ್ತನೆ ಫೌಂಡೇಶನ್ ಮತ್ತು ಕ್ಯಾಥೋಲಿಕ್ ಸಿಟಿ ಫ್ರೆಂಡ್ಸ್ ಸಹಯೋಗದೊಂದಿಗೆ ಸಂಗೀತ, ರುಚಿಕರ ಆಹಾರ ಮತ್ತು ಒಂದು ಉದಾತ್ತ ಉದ್ದೇಶವನ್ನು ಒಗ್ಗೂಡಿಸುವ 'ಆಮ್ಚೆಂ ಫೆಸ್ಟ್ 2025' ಅನ್ನು ಪ್ರಸ್ತುತಪಡಿಸುತ್ತಿವೆ. ಈ ಅದ್ಧೂರಿ ಕಾರ್ಯಕ್ರಮವು ನವೆಂಬರ್ 16 ರಂದು ಸಂಜೆ 4:00 ಗಂಟೆಯಿಂದ, ಬೋಂದೆಲ್ ಕೆ.ಇ.ಬಿ.ಎ ಗಾರ್ಡನ್ನಲ್ಲಿ ನಡೆಯಲಿದ್ದು, ಇದು ವರ್ಷದ ಪ್ರಮುಖ ಆಕರ್ಷಣೆಯಾಗಲಿದೆ. 🌟 ಗೋವಾದ ಟಾಪ್ ಬ್ಯಾಂಡ್ನೊಂದಿಗೆ ಸ್ಥಳೀಯ ಕಲಾವಿದರ ಅಬ್ಬರ! ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ, ಗೋವಾದ ಗಾಯನ ಸಂವೇದನೆ ಮಾರ
Nov 71 min read


ಕಡಬ: ನೇಣಿಗೆ ಕೊರಳೊಡ್ಡಿದ 14ರ ಬಾಲಕ
ಶಾಲಾ ಬಾಲಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದಲ್ಲಿ ನ.6 ರಂದು ನಡೆದಿದೆ. ನೂಜಿಬಾಳ್ತಿಲ ಗ್ರಾಮದ ಖಂಡಿಗದ ಲೋಕೇಶ್ ಎಂಬವರ ಪುತ್ರ ಗಗನ್(14) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ಗಗನ್ ಗುರುವಾರ ದಿನ ಎಂದಿನಂತೆ ಶಾಲೆಗೆ ತೆರಳಿದ್ದ . ಸಂಜೆ ಮನೆಗೆ ಬಂದು ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ
Nov 61 min read


ಕಡಬದಲ್ಲಿ ಕಾರು-ಆಟೋ ಅಪಘಾತ: ಇಬ್ಬರಿಗೆ ಗಾಯ, ಸಿಸಿಟಿವಿಯಲ್ಲಿ ಸೆರೆ
ಕಡಬ: ಇಲ್ಲಿನ ಅನುಗ್ರಹ ಸಭಾ ಭವನದ ಬಳಿ ಮಂಗಳವಾರ, ನವೆಂಬರ್ 5 ರ ಸಂಜೆ ಸಂಭವಿಸಿದ ಕಾರು ಮತ್ತು ಆಟೋ ರಿಕ್ಷಾ ನಡುವಿನ ಭೀಕರ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಆಟೋ ಚಾಲಕರಾದ ಆದಂ ಮತ್ತು ಸಾಮಾಜಿಕ ಕಾರ್ಯಕರ್ತ ರಾಘವ ಕಳಾರ ಅವರು ಗಾಯಗೊಂಡಿದ್ದು, ಅವರನ್ನು ಕೂಡಲೇ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಸಿಟಿವಿಯಲ್ಲಿ ಅಪಘಾತ ದೃಶ್ಯ: ಕಾರಣವೇನು? ಮುಖ್ಯ ರಸ್ತೆಯಲ್ಲಿ ಕಳಾರ ಕಡೆಯಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ, ಅನುಗ್ರಹ ಸಭಾ ಭವನದ ಬಳಿ ಇರುವ ಗೂಡಂಗಡಿಯ ಸಮೀಪ ನಿಂತಿದ್ದ ಕಾರು ಏಕಾಏಕಿ ರಸ್ತೆಗೆ ಬ
Nov 51 min read


ವಿಡಿಯೋ ಮಾಡಿ ಸಮುದ್ರಕ್ಕೆ ಹಾರಲು ಹೋಗಿದ್ದ ತಂದೆ-ಮಗಳ ರಕ್ಷಣೆ; ಪೊಲೀಸರ ಸಮಯಪ್ರಜ್ಞೆಗೆ ಸಾರ್ವಜನಿಕರ ಮೆಚ್ಚುಗೆ
ಪತ್ನಿಯೊಂದಿಗೆ ಉಂಟಾಗಿದ್ದ ಮನಸ್ತಾಪದಿಂದ ಬೇಸತ್ತ ಪತಿಯೊಬ್ಬರು ತನ್ನ ನಾಲ್ಕು ವರ್ಷದ ಪುತ್ರಿಯೊಂದಿಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ, ಬಳಿಕ ಮನೆಗೆ ಬಂದು ನೇಣು ಹಾಕಿಕೊಳ್ಳಲು ಸಿದ್ಧವಾಗಿದ್ದ ಘಟನೆ ಮಂಗಳೂರಿನ ಕಾವೂರಿನಲ್ಲಿ ನಡೆದಿದೆ. ಸಾವಿಗೆ ಮುನ್ನ ವಿಡಿಯೋ ಮಾಡಿ ಅದನ್ನು ವಾಟ್ಸಪ್ ಗ್ರೂಪ್ಗಳಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಪಣಂಬೂರು ಪೊಲೀಸರಿಗೆ ತಲುಪಿದ ಕೂಡಲೇ ಅವರು ಸಮಯ ಪ್ರಜ್ಞೆ ಮೆರೆದು ತಂದೆ-ಮಗಳನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ರಕ್ಷಿಸಲ್ಪಟ್ಟ ವ್ಯಕ್ತಿಯು ಕಾವೂರು ಶಾಂತಿನಗರ ನಿವಾಸಿ ರಾಜೇಶ್ ಎಂದು ಗುರುತಿಸಲಾಗಿದೆ. ಏಳು ವರ್ಷಗಳ ಹಿಂದೆ
Nov 51 min read


ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಸಮರ್ಪಣೆಯಾಗಲಿರುವ ಬೆಳ್ಳಿರಥಕ್ಕೆ ಭವ್ಯ ಸ್ವಾಗತ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆಯಾಗಲಿರುವ ಭವ್ಯ ಬೆಳ್ಳಿರಥವು ಇಂದು (ನ. 5) ಕುಕ್ಕೆ ಕ್ಷೇತ್ರಕ್ಕೆ ಪುರಪ್ರವೇಶ ಮಾಡಲಿದೆ. ಕುರುಂಜಿಯ ಡಾ. ಕೆ.ವಿ. ರೇಣುಕಾಪ್ರಸಾದ್ ಮತ್ತು ಕುಟುಂಬದವರಿಂದ ಸಮರ್ಪಣೆಯಾಗಲಿರುವ ಈ ರಥವು ಕೋಟೇಶ್ವರದಿಂದ ಹೊರಟು ಮಂಗಳವಾರ ರಾತ್ರಿ ಸುಳ್ಯ ತಲುಪಿದ್ದು, ಅಲ್ಲಿ ರಥಕ್ಕೆ ಭಕ್ತರು ಅದ್ದೂರಿ ಸ್ವಾಗತ ನೀಡಿದ್ದಾರೆ. ಸುಳ್ಯದಲ್ಲಿ ರಾತ್ರಿ ವಾಸ್ತವ್ಯ ಹೂಡಿದ ರಥವು ಇಂದು ಬೆಳಗ್ಗೆ ಸುಳ್ಯದಿಂದ ಸುಬ್ರಹ್ಮಣ್ಯದತ್ತ ಪ್ರಯಾಣ ಮುಂದುವರಿಸಲಿದೆ. ಬೆಳ್ಳಿರಥವು ಇಂದು ಸುಳ್ಯದ ಕಾಂತಮಂಗಲದಿಂದ ಹೊರಟು ಸುಳ್ಯ, ಪೈಚಾರು, ಸೋಣಂಗೇರಿ, ದುಗ್ಗಲಡ್ಕ, ಎಲ
Nov 51 min read


ಮಂಗಳೂರಿನ ಕದ್ರಿ ಪಾರ್ಕ್ ರಸ್ತೆಗೆ 'ಟೋಲ್' ಬಿಸಿ: ಸ್ಮಾರ್ಟ್ ಸಿಟಿ ನಿರ್ಧಾರಕ್ಕೆ ಸಾರ್ವಜನಿಕ ಆಕ್ರೋಶ
ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಂಡು ಕಂಗೊಳಿಸುತ್ತಿರುವ ಮಂಗಳೂರಿನ ಕದ್ರಿ ಪಾರ್ಕ್ ರಸ್ತೆಗೆ ಇನ್ಮುಂದೆ 'ಟೋಲ್' ಮಾದರಿಯ ಪಾರ್ಕಿಂಗ್ ಶುಲ್ಕ ವಿಧಿಸಲು ಸ್ಮಾರ್ಟ್ ಸಿಟಿ ನಿರ್ಧರಿಸಿದೆ. ಸಾವಿರಾರು ಮಂದಿ ಪ್ರತಿದಿನ ವಾಯು ವಿಹಾರ ಹಾಗೂ ವಿಶ್ರಾಂತಿಗಾಗಿ ಭೇಟಿ ನೀಡುವ ಕಡಲ ತಡಿಯ ಈ ಫೇವರೇಟ್ ಸ್ಪಾಟ್ಗೆ ಜನವರಿಯಿಂದ ಶುಲ್ಕದ ಬಿಸಿ ತಟ್ಟಲಿದೆ. ಪಾರ್ಕ್ನ ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ಟೋಲ್ ಮಾದರಿಯ ವ್ಯವಸ್ಥೆ ಜಾರಿಗೆ ತರಲು ತೀರ್ಮಾನಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಕದ್ರಿ ಪಾರ್ಕ್ ರಸ್ತೆಯಲ್ಲಿ ನೂತ
Nov 51 min read


ಸುಳ್ಯ: ಇಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು
ಸುಳ್ಯ: (ಅಕ್ಟೋಬರ್ 28) ಸುಳ್ಯ ತಾಲೂಕಿನ ದುಗಲಡ್ಕದ ಕೇಶವ ಪೂಜಾರಿ ಅವರ ಪುತ್ರ, ಇಂಜಿನಿಯರಿಂಗ್ ವಿದ್ಯಾರ್ಥಿ ವೀಕ್ಷಿತ್ (19) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಜಟ್ಟಿಪಳ್ಳದ ಕಾನತ್ತಿಲ ಬಳಿಯಿರುವ ಬಾಡಿಗೆ ಮನೆಯಲ್ಲಿ ಈ ದುರ್ಘಟನೆ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ವೀಕ್ಷಿತ್ ಅವರು ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಕಾಲೇಜಿನಲ್ಲಿ ಕ್ಲಾಸ್ ಟೆಸ್ಟ್ ಅಟೆಂಡ್ ಮಾಡಿದ್ದ ವೀಕ್ಷಿತ್, ಸಂಜೆ ಎಂದಿನಂತೆ ಕೆಲಸದ ಸ್ಥಳದಿಂದ ತಾಯಿಯನ್ನು ಕರೆದುಕೊಂಡು ಬರಲು ಹೋಗಿಲ್ಲ. ಮಗನ ಫೋನ್ ಸ್ವೀಕರಿಸದ ಕಾರಣ, ತಾಯಿ ಪದ್ಮನಿಯವರು
Oct 281 min read


ಹೊಸ ಕಾರಿನ ಪಬ್ಲಿಸಿಟಿಗೆ ದೈವದ ವೇಷ - ಎತ್ತ ಸಾಗುತ್ತಿದೆ ನಮ್ಮ ಕರಾವಳಿ ಸಂಸ್ಕೃತಿ?
ಹೊಸ ಕಾರಿನ ಪಬ್ಲಿಸಿಟಿಗೆ ದೈವದ ವೇಷ - ಎತ್ತ ಸಾಗುತ್ತಿದೆ ನಮ್ಮ ಕರಾವಳಿ ಸಂಸ್ಕೃತಿ? ಕರಾವಳಿ ಸಂಸ್ಕೃತಿಯ ಜೀವಾಳವಾದ ದೈವಾರಾಧನೆಯನ್ನು ಕೆಲವರು ಮನರಂಜನೆಗಾಗಿ ದುರುಪಯೋಗ ಪಡಿಸುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕಾಂತಾರ ಚಿತ್ರ ಬಿಡುಗಡೆಯಾದ ಬಳಿಕ ದೈವದ ವೇಷಭೂಷಣ, ಕೂಗು-ಅರಚಾಟ ಹಾಗೂ ನೃತ್ಯ ಶೈಲಿಯನ್ನು ಅನುಕರಿಸುತ್ತಾ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋಗಳನ್ನು ಹಾಕುತ್ತಿರುವುದು ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತಾಗಿ ಅನೇಕ ದೈವ ನರ್ತಕರು ಹಾಗೂ ದೈವಾರಾಧಕರು ಈಗಾಗಲೇ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂತಾರ ಚಿತ್ರದ ಕುರಿತು ಕೂಡ ಕ
Oct 171 min read
Archive
bottom of page


