top of page
News Articles
Sathyapatha News Plus


ಕೊಂಚ ಇಳಿಕೆ ಕಂಡ ಚಿನ್ನದ ದರ
ಇಂದಿನ (ಡಿಸೆಂಬರ್ 29, 2025) ಬೆಂಗಳೂರು ಚಿನ್ನದ ದರಗಳ ಪ್ರಕಾರ, 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ₹14,171 ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ₹12,990 ಇದೆ, ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ, ಆದರೆ ಬೆಳ್ಳಿ ಬೆಲೆ ಏರಿಕೆ ಕಂಡಿದೆ. 24 ಕ್ಯಾರೆಟ್ ಚಿನ್ನ (1 ಗ್ರಾಂ): ₹14,171 22 ಕ್ಯಾರೆಟ್ ಚಿನ್ನ (1 ಗ್ರಾಂ): ₹12,990 ಬೆಳ್ಳಿ (1 ಗ್ರಾಂ): ₹258
Dec 29, 20251 min read


ಕುಂದಾಪುರ: ರಥಬೀದಿಯಲ್ಲಿ ಭೀಕರ ಅಗ್ನಿ ದುರಂತ; ಪಟಾಕಿ ಸೇರಿ ಆರು ಅಂಗಡಿಗಳು ಸುಟ್ಟು ಭಸ್ಮ
ಉಡುಪಿ: ಕುಂದಾಪುರದ ಐತಿಹಾಸಿಕ ರಥಬೀದಿಯಲ್ಲಿರುವ ಕಟ್ಟಡವೊಂದರಲ್ಲಿ ಸೋಮವಾರ ಬೆಳಗಿನ ಜಾವ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಹಲವು ಅಂಗಡಿಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ. ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಈ ದುರಂತ ಸಂಭವಿಸಿದ್ದು, ಮೊದಲು ಪಟಾಕಿ ಅಂಗಡಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಪಟಾಕಿಗಳು ಸಿಡಿದ ಪರಿಣಾಮ ಬೆಂಕಿಯ ಕೆನ್ನಾಲಗೆ ಪಕ್ಕದಲ್ಲಿದ್ದ ಪುಸ್ತಕದಂಗಡಿ ಸೇರಿದಂತೆ ಆರು ಅಧಿಕ ಮಳಿಗೆಗಳಿಗೆ ವೇಗವಾಗಿ ವ್ಯಾಪಿಸಿ ಇಡೀ ಕಟ್ಟಡವೇ ಹೊತ್ತಿ ಉರಿದಿದೆ. ವೆಂಕಟರಮಣ ದೇವಸ್ಥಾನದ ಎದುರಿನ ಜನನಿಬಿಡ ಪ್ರದೇಶದಲ್ಲೇ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿ
Dec 29, 20251 min read


ಸಿಗರೇಟಿನ ಬೆಲೆ ಭಾರೀ ಏರಿಕೆ ಸಾಧ್ಯತೆ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ Central Excise (Amendment) Bill–2025 ದೇಶಾದ್ಯಂತ ತಂಬಾಕು ಬಳಕೆದಾರರಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಹೊಸ ತಿದ್ದುಪಡಿ ಕಾಯ್ದೆಯ ಪರಿಣಾಮವಾಗಿ ಸಿಗರೇಟುಗಳ ಮೇಲಿನ ಉತ್ಪನ್ನ ಶುಲ್ಕ (Excise Duty) ಗಣನೀಯವಾಗಿ ಹೆಚ್ಚಳವಾಗಿದ್ದು, ಇದರ ಪರಿಣಾಮವಾಗಿ ಈಗ ಸುಮಾರು ₹18ಕ್ಕೆ ಲಭ್ಯವಿರುವ ಕೆಲವು ಸಿಗರೇಟುಗಳ ಬೆಲೆ ಮುಂದಿನ ದಿನಗಳಲ್ಲಿ ₹72ರ ತನಕ ಏರಬಹುದು ಎಂಬ ಅಂದಾಜುಗಳು ವ್ಯಕ್ತವಾಗಿವೆ. ಸರ್ಕಾರದ ನಿರ್ಧಾರವು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ತಂಬಾಕು ಸೇವನೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಹೊಸ ಕಾಯ್ದೆಯಂತೆ, ಸಿಗರೇಟುಗಳ ಮೇಲೆ ವಿಧಿಸಲಾಗುತ
Dec 29, 20251 min read


ಹೊಸ ವರ್ಷದ ಸಂಭ್ರಮದ ನಡುವೆ ಮೆಸೇಜ್ ಓಪನ್ ಮಾಡೋ ಮುನ್ನ ಎಚ್ಚರ! ಆಕರ್ಷಕ ಆಫರ್ಗಳ ಬಗ್ಗೆ ಪೊಲೀಸರ ಎಚ್ಚರಿಕೆ
ಹಬ್ಬಗಳು ಮತ್ತು ಹೊಸ ವರ್ಷದಂತಹ ವಿಶೇಷ ಸಂದರ್ಭಗಳನ್ನು ಬಂಡವಾಳವಾಗಿಸಿಕೊಂಡು ಸೈಬರ್ ವಂಚಕರು ಸಾರ್ವಜನಿಕರನ್ನು ಲೂಟಿ ಮಾಡಲು ಬಲೆ ಬೀಸುತ್ತಿದ್ದಾರೆ. ವಾಟ್ಸ್ಆಪ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ಗಳ ಮೂಲಕ ಭರ್ಜರಿ ಆಫರ್ಗಳು, ಉಚಿತ ಗಿಫ್ಟ್ಗಳು ಹಾಗೂ ಕ್ಯಾಶ್ಬ್ಯಾಕ್ ಎಂಬ ಆಕರ್ಷಕ ಸಂದೇಶಗಳನ್ನು ಹರಿಬಿಡಲಾಗುತ್ತಿದೆ. ಇಂತಹ ಸಂದೇಶಗಳಲ್ಲಿರುವ ಅನುಮಾನಾಸ್ಪದ ಲಿಂಕ್ಗಳನ್ನು ಅರಿಯದೇ ಒಮ್ಮೆ ಕ್ಲಿಕ್ ಮಾಡಿದರೂ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕ್ಷಣಾರ್ಧದಲ್ಲಿ ಮಾಯವಾಗುವ ಅಪಾಯವಿದೆ ಎಂದು ಸೈಬರ್ ತಜ್ಞರು ಎಚ್ಚರಿಸಿದ್ದಾರೆ. ಈ ವಂಚಕ ಜಾಲದ ಬಗ್ಗೆ ಪೊಲೀಸ್ ಇಲಾಖೆಯು ತೀವ್ರ ಜಾಗೃತ
Dec 29, 20251 min read


ಬೆಂಗಳೂರು: ಮದುವೆಯ ಆಮಿಷವೊಡ್ಡಿ ಇಬ್ಬರು ಸಹೋದರಿಯರಿಗೆ ವಂಚನೆ; ಕಾಮುಕ ಶುಭಾಂಶು ಶುಕ್ಲಾ ಬಂಧನ
ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದ ಅಮಾನವೀಯ 'ಲವ್ ಸೆಕ್ಸ್ ದೋಖಾ' ಪ್ರಕರಣವೊಂದರಲ್ಲಿ ಆರೋಪಿ ಶುಭಾಂಶು ಶುಕ್ಲಾ (27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲು ಅಪ್ರಾಪ್ತ ಬಾಲಕಿಯೊಬ್ಬಳನ್ನು ಪರಿಚಯ ಮಾಡಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಈತ, ಬಳಿಕ ಆಕೆಯ ಮೂಲಕ ಮನೆಯವರ ವಿಶ್ವಾಸ ಗಳಿಸಿದ್ದನು. ನಂತರ ಆಕೆಯ ಸಹೋದರಿಯನ್ನು ಪ್ರೀತಿಯ ಬಲೆಯಲ್ಲಿ ಬೀಳಿಸಿ, ಮುಂಬೈನಲ್ಲಿ ಕೆಲಸ ಸಿಕ್ಕಿದೆ ಎಂದು ನಂಬಿಸಿ ಆಕೆಯನ್ನು ತನ್ನೊಂದಿಗೆ ಕರೆದೊಯ್ದು ಲಿವಿನ್ ರಿಲೇಷನ್ಶಿಪ್ನಲ್ಲಿದ್ದನು. ಸಮಯ ಕಳೆದಂತೆ ಆರೋಪಿಗೆ ಈಗಾಗಲೇ ಮದುವೆಯಾಗಿರುವುದು ಸಂತ್ರಸ್ತೆಗೆ ತಿಳಿದುಬಂದಿದೆ. ಆತನ ಪತ್
Dec 29, 20251 min read


ಪ್ಯಾರಾಗ್ಲೈಡಿಂಗ್ ವೇಳೆ ತಾಂತ್ರಿಕ ದೋಷ - ಪ್ರವಾಸಿಯ ಪ್ರಾಣ ಉಳಿಸಿ ಪೈಲಟ್ ಸಾವು
ಹಿಮಾಚಲ ಪ್ರದೇಶದ ವಿಶ್ವವಿಖ್ಯಾತ ಬೀರ್ ಬಿಲ್ಲಿಂಗ್ ಪ್ಯಾರಾಗ್ಲೈಡಿಂಗ್ ತಾಣದಲ್ಲಿ ನಡೆದ ಭೀಕರ ಅಪಘಾತದಲ್ಲಿ ಅನುಭವಿ ಪೈಲಟ್ ಒಬ್ಬರು ಮೃತಪಟ್ಟಿದ್ದಾರೆ. ಮಂಡಿ ಜಿಲ್ಲೆಯ ಬಾರ್ಶನ್ ಗ್ರಾಮದ ನಿವಾಸಿ ಮೋಹನ್ ಸಿಂಗ್ (35) ಮೃತ ದುರ್ದೈವಿ. ಶುಕ್ರವಾರ ಮಧ್ಯಾಹ್ನ ಪ್ರವಾಸಿಯೊಬ್ಬರ ಜೊತೆ ಟಂಡೆಮ್ ಹಾರಾಟ ನಡೆಸುತ್ತಿದ್ದಾಗ, ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಪ್ಯಾರಾಗ್ಲೈಡರ್ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಈ ದುರಂತ ಸಂಭವಿಸಿದೆ. ಹಾರಾಟದ ವೇಳೆ ಹಠಾತ್ ಗಾಳಿಯ ದಿಕ್ಕು ಬದಲಾದ ಕಾರಣ ಗ್ಲೈಡರ್ ನಿಯಂತ್ರಣ ಕಳೆದುಕೊಂಡಿತು. ಈ ಸಂದರ್ಭದಲ್ಲಿ ಪೈಲಟ್ ಮೋಹನ್ ಸಿಂಗ್ ಅವರು ತಮ್ಮ ಪ್ರಾಣದ ಹಂಗು ತೊರ
Dec 28, 20251 min read


ರಾಜ್ಯ ರಾಜಕೀಯದಲ್ಲಿ ಸಂಚಲನ: 'ಸಿದ್ದರಾಮಯ್ಯ ಬಿಡುವವರೆಗೂ ಸಿಎಂ ಕುರ್ಚಿ ಸಿಗಲ್ಲ' - ಕೋಡಿಶ್ರೀ ಭವಿಷ್ಯ
ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಭಾರೀ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಸ್ಫೋಟಕ ಭವಿಷ್ಯವೊಂದನ್ನು ನುಡಿದಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರ ನಾಯಕತ್ವದ ಕುರಿತು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಶ್ರೀಗಳು, "ಹಾಲುಮತ ಸಮಾಜದವರಿಂದ ಅಧಿಕಾರ ಕಿತ್ತುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ, ಅದು ಅಸಾಧ್ಯವಾದ ಕಷ್ಟದ ಕೆಲಸ.
Dec 28, 20251 min read


ಇಂದಿನ ಚಿನ್ನದ ದರ
ಇಂದು (ಡಿಸೆಂಬರ್ 28, 2025), ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂ ಸುಮಾರು ₹1,41,220 ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ ₹12,945 (ಪ್ರತಿ ಗ್ರಾಂಗೆ) ಇದೆ, ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದ್ದು, ಇಂದಿನ ಚಿನ್ನದ ಬೆಲೆ (ಬೆಂಗಳೂರು): 24 ಕ್ಯಾರೆಟ್ (10 ಗ್ರಾಂ): ~₹1,41,220 22 ಕ್ಯಾರೆಟ್ (10 ಗ್ರಾಂ): ~₹1,29,450 (ಪ್ರತಿ ಗ್ರಾಂಗೆ ₹12,945)
Dec 28, 20251 min read


ಹಾಸನ : ಲಾರಿಗೆ ಖಾಸಗಿ ಬಸ್ ಡಿಕ್ಕಿ - 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ
ಚನ್ನರಾಯಪಟ್ಟಣ: ತಾಲೂಕಿನ ಬೈಪಾಸ್ ರಸ್ತೆಯಲ್ಲಿ ಶನಿವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಹಾಸನದ ಕಡೆಗೆ ಚಲಿಸುತ್ತಿದ್ದ ಖಾಸಗಿ ಬಸ್, ಮುಂಭಾಗದಲ್ಲಿ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಬಲವಾಗಿ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಬಸ್ ಚಾಲಕನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎಂದು ವರದಿಯಾಗಿದೆ. ಅಪಘಾತದ ಸಮಯದಲ್ಲಿ ಬಸ್ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಹಲವು ಪ್ರಯಾಣಿಕರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಗಾಯಾಳುಗಳ ಪೈಕಿ 13 ಜನರನ್ನು ಹೆಚ
Dec 28, 20251 min read


ನವವಿವಾಹಿತೆ ಆತ್ಮಹತ್ಯೆ ಕೇಸ್ಗೆ ಸ್ಫೋಟಕ ಟ್ವಿಸ್ಟ್: ಪತ್ನಿಯ ಸಾವಿನ ಬೆನ್ನಲ್ಲೇ ಪತಿಯೂ ಆತ್ಮಹತ್ಯೆ, ಕುಸಿದುಬಿದ್ದ ಇಡೀ ಕುಟುಂಬ!
ಹೊಸ ಬದುಕಿನ ಕನಸುಗಳನ್ನು ಹೊತ್ತು ಸಪ್ತಪದಿ ತುಳಿದು, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಯ ಭವಿಷ್ಯ ಉಜ್ವಲವಾಗಿರಬೇಕು. ಆದರೆ, ಬೆಂಗಳೂರಿನ ನವವಿವಾಹಿತೆ ಗಾನವಿಯ ಬಾಳಿನಲ್ಲಿ ವಿಧಿ ಬರೆದದ್ದು ಮಾತ್ರ ಕರಾಳ ದುರಂತ. ಮದುವೆಯಾಗಿ ಕೇವಲ ಎರಡು ತಿಂಗಳಾಗುವಷ್ಟರಲ್ಲಿ ಗಾನವಿ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬ್ರೈನ್ ಡೆಡ್ ಆಗಿ ಕೊನೆಯುಸಿರೆಳೆದಿದ್ದರು. ಈ ಘಟನೆ ಇಡೀ ಕುಟುಂಬಕ್ಕೆ ತೀವ್ರ ಆಘಾತವನ್ನುಂಟು ಮಾಡಿತ್ತು. ಆದರೆ, ಇದು ಕೇವಲ ಅಂತ್ಯವಾಗಿರಲಿಲ್ಲ; ಬದಲಿಗೆ, ಒಂದು ಕುಟುಂಬವನ್ನೇ ನುಂಗಿಹಾಕಿದ ಸರಣಿ ದುರಂತಗಳ ಮುನ್ನುಡಿಯಾಗಿತ್ತು. ಗಾನವಿಯ ಸಾವಿನ ಬೆ
Dec 27, 20252 min read


ಕರ್ನಾಟಕ ಈಗ ‘ಬುಲ್ಡೋಜರ್ ರಾಜ್ಯ’: ಕೋಗಿಲು ಬಡಾವಣೆ ತೆರವು ಕಾರ್ಯಾಚರಣೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಆಕ್ರೋಶ
ಬೆಂಗಳೂರಿನ ಯಲಹಂಕ ಸಮೀಪದ ಕೋಗಿಲು ಬಡಾವಣೆಯಲ್ಲಿ ನಡೆದ ಮನೆಗಳ ಧ್ವಂಸ ಪ್ರಕರಣದ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತೀವ್ರವಾಗಿ ಆಕ್ಷೇಪಿಸಿದ್ದಾರೆ. ಈ ಕುರಿತು ಎಕ್ಸ್ (ಟ್ವಿಟರ್) ಮೂಲಕ ಪ್ರತಿಕ್ರಿಯಿಸಿರುವ ಅವರು, ಕರ್ನಾಟಕವನ್ನು ‘ಬುಲ್ಡೋಜರ್ ರಾಜ್ಯ’ ಎಂದು ಬಣ್ಣಿಸಿದ್ದಾರೆ. ಉತ್ತರ ಭಾರತದಲ್ಲಿ ಸಂಘ ಪರಿವಾರವು ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಸುವ ದಮನಕಾರಿ ರಾಜಕೀಯವನ್ನು ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಜಾರಿಗೆ ತರುತ್ತಿರುವುದು ದುರದೃಷ್ಟಕರ ಎಂದು ಅವರು ಟೀಕಿಸಿದ್ದಾರೆ. ಬೆಂಗಳೂರಿನ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್ನಲ್ಲಿ ದಶಕಗಳಿಂದ ವಾಸಿಸುತ್ತ
Dec 27, 20251 min read


ದೇಶಾದ್ಯಂತ ರೈಲು ಪ್ರಯಾಣ ದರ ಏರಿಕೆ: ಇಂದಿನಿಂದ ಹೊಸ ದರ ಜಾರಿ
ಬೆಂಗಳೂರು: ದೇಶದ ರೈಲ್ವೆ ಪ್ರಯಾಣಿಕರಿಗೆ ಇಂದಿನಿಂದ ದರ ಏರಿಕೆಯ ಬಿಸಿ ತಟ್ಟಲಿದೆ. ರೈಲ್ವೆ ಇಲಾಖೆಯ ಆದಾಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ರೈಲ್ವೆ ಸಚಿವಾಲಯವು ಪ್ರಯಾಣ ದರವನ್ನು ಪರಿಷ್ಕರಿಸಿದ್ದು, ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. ಕಳೆದ ಆರು ತಿಂಗಳ ಅವಧಿಯಲ್ಲಿ ಇದು ಎರಡನೇ ಬಾರಿಯ ದರ ಹೆಚ್ಚಳವಾಗಿದೆ. ವಿಶೇಷವೆಂದರೆ, ಸಾಮಾನ್ಯ ವರ್ಗದ ಪ್ರಯಾಣಿಕರಿಗೆ 215 ಕಿ.ಮೀ ಗಿಂತ ಹೆಚ್ಚಿನ ಪ್ರಯಾಣಕ್ಕೆ ಮಾತ್ರ ಈ ದರ ಏರಿಕೆ ಅನ್ವಯವಾಗಲಿದ್ದು, ಪ್ರತಿ ಕಿ.ಮೀಗೆ 1 ಪೈಸೆ ಹೆಚ್ಚಿಸಲಾಗಿದೆ. ಎಕ್ಸ್ಪ್ರೆಸ್ ರೈಲುಗಳ ನಾನ್-ಎಸಿ ಮತ್ತು ಎಲ್ಲಾ ಎಸಿ ಕ್ಲಾಸ್ ದರಗಳನ್ನು ಪ್ರತಿ ಕಿ.ಮೀಗ
Dec 27, 20251 min read


ನೆಟ್ಟಣ: ಬಾರ್ ಮಾಲೀಕರಿಗೆ ಲಕ್ಷಾಂತರ ರೂಪಾಯಿ ವಂಚಿಸಿ ಕೆಲಸಗಾರ ಪರಾರಿ
ಕಡಬ: ಕಳೆದ ಏಳು ವರ್ಷಗಳಿಂದ ನಂಬಿಕಸ್ತನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನೇ ಬಾರ್ ಮಾಲೀಕರಿಗೆ ಸುಮಾರು 6.57 ಲಕ್ಷ ರೂಪಾಯಿ ವಂಚಿಸಿ ಪರಾರಿಯಾಗಿರುವ ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ನೆಟ್ಟಣದಲ್ಲಿ ನಡೆದಿದೆ. ಬಿಳಿನೆಲೆ ಗ್ರಾಮದ ವಿಶಾಲ್ ಸ್ಟೀಫನ್ ಅವರ ತಾಯಿಯ ಹೆಸರಿನಲ್ಲಿ ನಡೆಯುತ್ತಿರುವ ಬಾರ್ ಅಂಡ್ ರೆಸ್ಟೋರೆಂಟ್ನಲ್ಲಿ ಹರ್ಷಿತ್ ಬಿ.ಕೆ. ಎಂಬಾತ ದೀರ್ಘಕಾಲದಿಂದ ಮ್ಯಾನೇಜರ್ ಮಾದರಿಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದನು. ಹಣಕಾಸಿನ ವ್ಯವಹಾರ ಹಾಗೂ ಸ್ಟಾಕ್ ನಿರ್ವಹಣೆಯ ಸಂಪೂರ್ಣ ಹೊಣೆ ಹೊತ್ತಿದ್ದ ಈತ, ಮಾಲೀಕರ ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಈ ಕೃತ್ಯ ಎಸಗಿದ್ದಾನ
Dec 26, 20251 min read


ಮೈಸೂರು: ಬಲೂನ್ ತುಂಬಿಸುವ ನೈಟ್ರೋಜನ್ ಗ್ಯಾಸ್ ಸಿಲಿಂಡರ್ ಸ್ಫೋಟ; ಓರ್ವ ಸಾವು, ಮೂವರಿಗೆ ಗಂಭೀರ ಗಾಯ
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆಯ ಮುಂಭಾಗದಲ್ಲಿ ಗುರುವಾರ (ಡಿ.25) ರಾತ್ರಿ ಭೀಕರ ದುರಂತವೊಂದು ಸಂಭವಿಸಿದೆ. ಬಲೂನ್ಗಳಿಗೆ ನೈಟ್ರೋಜನ್ ಗ್ಯಾಸ್ ತುಂಬಿಸುವ ಸಂದರ್ಭದಲ್ಲಿ ಸಿಲಿಂಡರ್ ಸ್ಫೋಟಗೊಂಡು ಬಲೂನ್ ವ್ಯಾಪಾರಿಯೋರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಫೋಟದ ತೀವ್ರತೆಗೆ ಸಿಲಿಂಡರ್ ಛಿದ್ರ ಛಿದ್ರವಾಗಿದ್ದು, ಸುತ್ತಮುತ್ತಲಿದ್ದ ಪ್ರವಾಸಿಗರು ಹಾಗೂ ಸಾರ್ವಜನಿಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಅರಮನೆಯ ಜಯ ಮಾರ್ತಾಂಡ ಗೇಟ್ ಬಳಿ ಈ ಘಟನೆ ನಡೆದಿದ್ದು, ಬಲೂನ್ ಮಾರಾಟಗಾರ ಗ್ಯಾಸ್ ತುಂಬಿಸುತ್ತಿದ್ದಾಗ ಆಕಸ್ಮಿಕವಾಗಿ ಈ ಸ್ಫೋಟ ಸಂಭವಿಸಿದೆ. ಮೃತ ವ್ಯಕ್ತಿಯ ದೇಹವು ಸ್ಫೋಟದ ಭ
Dec 26, 20251 min read


ವಿಮಾನಯಾನ ಮಾರುಕಟ್ಟೆಗೆ ಹೊಸ ಸಂಸ್ಥೆಗಳ ಎಂಟ್ರಿ: ಅಲ್ ಹಿಂದ್ ಮತ್ತು ಫ್ಲೈ ಎಕ್ಸ್ಪ್ರೆಸ್ಗೆ ಕೇಂದ್ರದ ಅನುಮತಿ
ಭಾರತದ ನಾಗರಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಇಂಡಿಗೋ ಮತ್ತು ಏರ್ ಇಂಡಿಯಾ ಸಂಸ್ಥೆಗಳ ಏಕಸ್ವಾಮ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇಟ್ಟಿದೆ. ಈಗಾಗಲೇ ಶಂಖ್ ಏರ್ (Shankh Air) ಸಂಸ್ಥೆಗೆ ಹಾರಾಟದ ಅನುಮತಿ ನೀಡಿದ್ದ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು, ಇದೀಗ ಕೇರಳ ಮೂಲದ 'ಅಲ್ ಹಿಂದ್' (Al Hind) ಮತ್ತು ಹೈದರಾಬಾದ್ ಮೂಲದ 'ಫ್ಲೈ ಎಕ್ಸ್ಪ್ರೆಸ್' (FlyExpress) ಸಂಸ್ಥೆಗಳಿಗೆ ನಿರಾಕ್ಷೇಪಣಾ ಪತ್ರ (NOC) ವಿತರಿಸಿದೆ. ಈ ಮೂಲಕ ದೇಶದ ಆಕಾಶದಲ್ಲಿ ಶೀಘ್ರದಲ್ಲೇ ಮೂರು ಹೊಸ ವಿಮಾನಯಾನ ಸಂಸ್ಥೆಗಳು ಹಾರಾಟ ಆರಂಭಿಸಲು ಸಜ್ಜಾಗಿವೆ. ನಾಗರಿಕ ವಿಮಾನಯಾನ
Dec 25, 20251 min read


ಅರವಳ್ಳಿ ಉಳಿಸಿ ಅಭಿಯಾನ ತೀವ್ರ: ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ
ಭಾರತದ ಅತ್ಯಂತ ಪ್ರಾಚೀನ ಪರ್ವತ ಶ್ರೇಣಿಯಾದ ಅರವಳ್ಳಿ ಬೆಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಇತ್ತೀಚಿನ ತೀರ್ಪು ದೇಶಾದ್ಯಂತ ದೊಡ್ಡ ಮಟ್ಟದ ಸಂಚಲನ ಮೂಡಿಸಿದೆ. ನ್ಯಾಯಾಲಯವು 100 ಮೀಟರ್ಗಿಂತ ಹೆಚ್ಚು ಎತ್ತರವಿರುವ ಪ್ರದೇಶಗಳನ್ನು ಮಾತ್ರ 'ಬೆಟ್ಟ' ಎಂದು ಪರಿಗಣಿಸುವ ಹೊಸ ಮಾರ್ಗಸೂಚಿಯನ್ನು ಎತ್ತಿಹಿಡಿದಿರುವುದು ವಿವಾದಕ್ಕೆ ಕಾರಣವಾಗಿದೆ. ಈ ತೀರ್ಪಿನ ಬೆನ್ನಲ್ಲೇ ರಾಜಸ್ಥಾನ ಮತ್ತು ಹರಿಯಾಣ ಸೇರಿದಂತೆ ಹಲವೆಡೆ 'ಅರವಳ್ಳಿ ಉಳಿಸಿ' (Save Aravalli) ಅಭಿಯಾನವು ಜನಾಂದೋಲನದ ರೂಪ ಪಡೆದುಕೊಂಡಿದ್ದು, ಪರಿಸರ ಪ್ರೇಮಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ
Dec 24, 20251 min read


ಬಜಪೆ ಪಟ್ಟಣ ಪಂಚಾಯತ್ ಚುನಾವಣೆ: ಬಿಜೆಪಿಗೆ ಭರ್ಜರಿ ಬಹುಮತ, ಕಾಂಗ್ರೆಸ್ಗೆ ಹಿನ್ನಡೆ
ಮಂಗಳೂರು: ಮಂಗಳೂರು ತಾಲೂಕಿನ ಬಜಪೆ ಪಟ್ಟಣ ಪಂಚಾಯತ್ಗೆ ನಡೆದ ಚೊಚ್ಚಲ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಒಟ್ಟು 19 ಸ್ಥಾನಗಳಿಗೆ ನಡೆದ ಈ ಹಣಾಹಣಿಯಲ್ಲಿ ಬಿಜೆಪಿ 11 ವಾರ್ಡ್ಗಳಲ್ಲಿ ಗೆಲುವು ಸಾಧಿಸುವ ಮೂಲಕ ಪಂಚಾಯತ್ ಮೇಲೆ ಬಿಜೆಪಿ ಧ್ವಜ ಹಾರಿಸಿದೆ. ಬುಧವಾರ ಮಂಗಳೂರಿನ ಮಿನಿ ವಿಧಾನಸೌಧದಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ನಿರಂತರ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಚುನಾವಣಾ ಫಲಿತಾಂಶದ ಅಂಕಿಅಂಶಗಳ ಪ್ರಕಾರ, ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ಕೇವಲ 4 ಸ್
Dec 24, 20252 min read


ನೆಲ್ಯಾಡಿ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಕಾಡುಹಂದಿ ದಾಳಿ- ಮಹಿಳೆಗೆ ತೀವ್ರ ಗಾಯ
ಕಡಬ: ತಾಲೂಕಿನ ಕೌಕ್ರಾಡಿ ಗ್ರಾಮದ ಪೊಟ್ಟುಕೆರೆ ಎಂಬಲ್ಲಿ ಶನಿವಾರ (ಡಿ. 20) ಬೆಳಗ್ಗೆ ಕಾಡುಹಂದಿಯೊಂದು ಮಹಿಳೆಯ ಮೇಲೆ ಭೀಕರ ದಾಳಿ ನಡೆಸಿದೆ. ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದ ನಿವಾಸಿ ಉಮೇಶ್ ಗೌಡರ ಪತ್ನಿ ಲೀಲಾವತಿ (36) ಅವರು ಈ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಅರಣ್ಯ ಪ್ರದೇಶದಿಂದ ಏಕಾಏಕಿ ನುಗ್ಗಿ ಬಂದ ಕಾಡುಹಂದಿಯು ಮಹಿಳೆಯ ಮೇಲೆ ಎರಗಿದ್ದು, ದಾಳಿಯ ರಭಸಕ್ಕೆ ಅವರ ಎರಡು ಕೈಗಳಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ಕೂಡಲೇ ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಸದ್ಯ ಲೀಲಾವತಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗ
Dec 24, 20251 min read


ರಾಜ್ಯ ಸಾರಿಗೆ ನಿಗಮದ ಮಹಿಳಾ ನೌಕರರಿಗೆ ಹೊಸ ವರ್ಷದ ಉಡುಗೊರೆ: ಜನವರಿ 1ರಿಂದ 'ಋತುಚಕ್ರ ರಜೆ' ಜಾರಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳಲ್ಲಿ (KSRTC, BMTC, NWKRTC, ಮತ್ತು KKRTC) ಕಾರ್ಯನಿರ್ವಹಿಸುತ್ತಿರುವ ಮಹಿಳಾ ಚಾಲಕರು, ನಿರ್ವಾಹಕರು ಹಾಗೂ ಸಿಬ್ಬಂದಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಮಹಿಳಾ ನೌಕರರ ಆರೋಗ್ಯ ಮತ್ತು ಕಾರ್ಯದಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಪ್ರತಿ ತಿಂಗಳು ಒಂದು ದಿನದ 'ಋತುಚಕ್ರ ರಜೆ' (Menstrual Leave) ನೀಡುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಅವರು ಈ ಕುರಿತು ಮಂಗಳವಾರ ಅಧಿಕೃತ ಆದೇಶ ಹೊರಡಿಸಿದ್ದು, ಇದು ಜನವರಿ 1, 2026ರಿಂದ ಜಾರಿಗೆ ಬರಲಿದೆ. ಈ ಸೌಲಭ್ಯವನ್ನು ಪಡೆಯ
Dec 24, 20251 min read


ಬೆಂಗಳೂರು-ಕರಾವಳಿ ನಡುವೆ 'ವಂದೇ ಭಾರತ್' ರೈಲು: ರೈಲ್ವೆ ಸಚಿವರಿಗೆ ಹೆಚ್.ಡಿ. ಕುಮಾರಸ್ವಾಮಿ ಪತ್ರ
ಬೆಂಗಳೂರು ಹಾಗೂ ಕರಾವಳಿ ಜಿಲ್ಲೆಗಳ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಬೆಂಗಳೂರಿನಿಂದ ಹಾಸನ, ಮಂಗಳೂರು ಜಂಕ್ಷನ್ ಹಾಗೂ ಉಡುಪಿ ಮತ್ತು ಕಾರವಾರ ಮಾರ್ಗವಾಗಿ ಗೋವಾದ ಮಡಗಾಂವ್ವರೆಗೆ ಅತಿವೇಗದ 'ವಂದೇ ಭಾರತ್' ಎಕ್ಸ್ಪ್ರೆಸ್ ರೈಲು ಸೇವೆಯನ್ನು ಆರಂಭಿಸುವಂತೆ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಅಧಿಕೃತವಾಗಿ ಮನವಿ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಈ ಯೋಜನೆಯು ಕರಾವಳಿ ಭಾಗದ ಅಭಿವೃದ
Dec 23, 20251 min read
Archive
bottom of page



