ಮಗ ತನ್ನಂತೆ ಇಲ್ಲ ಎಂದಿದ್ದಕ್ಕೆ ನದಿಗೆ ತಳ್ಳಿ ಕೊಂದ ಪಾಪಿ ತಂದೆ!
- Apr 17
- 1 min read

ಮಗ ತನ್ನಂತೆ ಇಲ್ಲ ಎಂದು ಗ್ರಾಮಸ್ಥರು ಚುಡಾಯಿಸಿದ್ದಕ್ಕೆ ತಂದೆಯೇ ಮಗನನ್ನು ಹತ್ಯೆ ಮಾಡಿದ ಭೀಕರ ಘಟನೆ ವಿಜಯಪುರ ಜಿಲ್ಲೆಯ ನಾಗಠಾಣ ಗ್ರಾಮದಲ್ಲಿ ನಡೆದಿದೆ. ಮಾರ್ಚ್ 16ರಂದು ಮಗ ಸಿದ್ದಾರ್ಥನನ್ನು ಶಾಲೆಗೆ ಸೇರಿಸುವುದಾಗಿ ಕರೆದೊಯ್ದ ತಂದೆ ಮಲ್ಲಿಕಾರ್ಜುನ, ಮಹಾರಾಷ್ಟ್ರದ ಕರಾಡ್ ಬಳಿ ಕೃಷ್ಣಾ ನದಿಗೆ ತಳ್ಳಿ ಕೊಲೆ ಮಾಡಿದ್ದಾನೆ.

ಮಗನನ್ನು ಹಾಸ್ಟೆಲ್‌ನಲ್ಲಿ ಇಟ್ಟಿರುವುದಾಗಿ ಸುಳ್ಳು ಹೇಳಿದ್ದ ಮಲ್ಲಿಕಾರ್ಜುನ, ಏಪ್ರಿಲ್ 1ರಂದು ಮಗನ ಹುಟ್ಟುಹಬ್ಬಕ್ಕೆ ತಾಯಿ ಪಟ್ಟು ಹಿಡಿದಾಗ ಪರಾರಿಯಾಗಿದ್ದಾನೆ. ಇದರಿಂದ ಅನುಮಾನಗೊಂಡ ತಾಯಿ ಭಾಗ್ಯಶ್ರೀ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ವೇಳೆ ಪಾಪಿ ತಂದೆಯ ಕೃತ್ಯ ಬಯಲಾಗಿದೆ. ಮಗುವಿನ ಸಾವಿನಿಂದ ತಾಯಿ ಮರುಗುತ್ತಿದ್ದು, ಗ್ರಾಮದಲ್ಲಿ ವಿಷಾದ ವ್ಯಕ್ತವಾಗಿದೆ.







Comments