ಲೋಕಸಭೆ ಸದಸ್ಯರ ಸಂಖ್ಯೆ 815ಕ್ಕೆ ಏರಿಕೆ: ಮಹಿಳೆಯರಿಗೆ 272 ಸ್ಥಾನ ಮೀಸಲು ಅನ್ವಯ!

ಲೋಕಸಭೆಯ ಒಟ್ಟು ಸದಸ್ಯರ ಸಂಖ್ಯೆಯನ್ನು 543ರಿಂದ 815ಕ್ಕೆ ಏರಿಸುವ ಪ್ರಸ್ತಾವನೆಯನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಸದನದಲ್ಲಿ ಮಂಡಿಸಿದ್ದಾರೆ. ನಾರಿ ಶಕ್ತಿ ಮಸೂದೆಯ ಜಾರಿಯಿಂದಾಗಿ ಈ ಮಹತ್ವದ ಬದಲಾವಣೆ ಸಾಧ್ಯವಾಗಲಿದ್ದು, ದೇಶದ ಸಂಸದೀಯ ಇತಿಹಾಸದಲ್ಲಿ ಇದು ಹೊಸ ಮೈಲಿಗಲ್ಲಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸೀಟುಗಳ ಸಂಖ್ಯೆ ಹೆಚ್ಚಳವಾಗುವುದರಿಂದ ಮಹಿಳೆಯರಿಗೆ ಒಟ್ಟು 272 ಸ್ಥಾನಗಳು ಮೀಸಲಾಗಲಿವೆ. ಕ್ಷೇತ್ರ ಮರು ವಿಂಗಡನೆಯ ಪ್ರಕ್ರಿಯೆಯಿಂದ ಯಾವುದೇ ರಾಜ್ಯಗಳಿಗೆ ಅನ್ಯಾಯವಾಗದಂತೆ ಕ್ರಮವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದು, ಪ್ರತಿಪಕ್ಷಗಳು ಈ ವಿಷಯದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಬಾರದೆಂದು ಮನವಿ ಮಾಡಿದ್ದಾರೆ.







Comments