top of page
News Articles
Sathyapatha News Plus


ಬೆಂಗಳೂರಿನಲ್ಲಿ ಮೊಳಗಿದ ಭಜನಾಮೃತ: ಶ್ರೀ ರಾಮ ಭಜನಾ ಮಂಡಳಿಯ 4ನೇ ವರ್ಷದ ಮಂಗಳೋತ್ಸವ ವೈಭವದ ಸಂಪನ್ನ
ಕಡಲ ತೀರದ ಯುವಕರು ಉದ್ಯೋಗನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿ ನಮ್ಮ ಸಂಸ್ಕೃತಿ ಯನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ 10/05/2022 ರ ರಾಮನವಮಿಯ ದಿನ ಆರಂಭಿಸಿದ ಭಜನಾ ತಂಡಕ್ಕೆ ಮೊನ್ನೆಯ 2026ರ ರಾಮ ನವಮಿಯ ದಿನವಾದ ಮಾರ್ಚ್ 26ಕ್ಕೆ ನಾಲ್ಕನೇ ವರ್ಷದ ಸಂಭ್ರಮ. ಆ ಪ್ರಯುಕ್ತ 4ನೇ ವರ್ಷದ ಮಂಗಳೋತ್ಸವವನ್ನು ಶ್ರೀ ಬುಗುಡಿಕುಂಟೆ, ಮುನೇಶ್ವರ ದೇವಸ್ಥಾನ , ರಾಯಸಂದ್ರ - ಚಿಕ್ಕನಾಗಮಂಗಳ ಇಲ್ಲಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಸಹಕಾರ ಮತ್ತು ಶ್ರೀ ರಾಮ ಭಜನಾ ಮಂಡಳಿಯ ಸರ್ವ ಭಜಕರ ಸಹಕಾರ, ಹಾಗೂ ಭಜನಾ ಮಂಡಳಿಗಳ ಹಿತೈಷಿಗಳ ಸಹಕಾರದಿಂದ ಬಹಳ ಸೊಗಸಾಗಿ ಭಜನಾ ಸಂಕೀರ್ತನೆ ಮುಖೇನ ಭಕ್ತಿಯ ಸುಧೆಯ
Mar 281 min read


ಹರೇಕಳ ಹಾಜಬ್ಬ, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಪ್ರದಾನ
ಮಂಗಳೂರು ವಿಶ್ವವಿದ್ಯಾನಿಲಯದ ಆವರಣದ ಮಂಗಳ ಸಭಾಂಗಣದಲ್ಲಿ ಶನಿವಾರ 44ನೇ ವಾರ್ಷಿಕ ಘಟಿಕೋತ್ಸವವು ಅತ್ಯಂತ ವೈಭವದಿಂದ ಜರುಗಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕದ ರಾಜ್ಯಪಾಲ ಹಾಗೂ ಕುಲಾಧಿಪತಿ ಥಾವರ್ ಚಂದ್ ಗೆಹೋಟ್ ಅವರು, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ ಹಾಗೂ ಕಲಾ ಸೇವೆಯಲ್ಲಿ ತೊಡಗಿರುವ ದೈವ ನರ್ತಕ ರವೀಶ್ ಪಡುಮಲೆ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು. ಸಾಧಕರ ಅನುಪಮ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದ್ದು, ಸಭಿಕರ ಮೆಚ್ಚುಗೆಗೆ ಪಾತ್ರವಾಯಿತು. ಇದೇ ವೇಳೆ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಸೂರಿಕು
Mar 281 min read


ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಬಂಧನ
ನೇಪಾಳದಲ್ಲಿ ಕಳೆದ ವರ್ಷ ನಡೆದ ಭೀಕರ ಹಿಂಸಾಚಾರ ಹಾಗೂ ಆಡಳಿತ ವೈಫಲ್ಯದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಬಂಧಿಸಲಾಗಿದೆ. 2025ರ ಸೆಪ್ಟೆಂಬರ್ನಲ್ಲಿ ಭ್ರಷ್ಟಾಚಾರ ಮತ್ತು ನಿರುದ್ಯೋಗದ ವಿರುದ್ಧ ಯುವ ಸಮುದಾಯ ನಡೆಸಿದ 'Gen Z' ಪ್ರತಿಭಟನೆಯಲ್ಲಿ 77 ಜನರು ಪ್ರಾಣ ಕಳೆದುಕೊಂಡಿದ್ದರು. ಈ ಸಾವುಗಳಿಗೆ ಮತ್ತು ಹಿಂಸಾಚಾರಕ್ಕೆ ಓಲಿ ಅವರೇ ಕಾರಣ ಎಂಬ ಗಂಭೀರ ಆರೋಪದಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಬಾಲೆನ್ ಶಾ ಅವರು ನೇಪಾಳದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಈ ಮಹತ್ವದ ಬೆಳವಣಿಗೆ ನಡೆದಿದೆ. ದೇಶದ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಜನಸಾ
Mar 281 min read


SSLC ಪರೀಕ್ಷೆ ಅಂಕ ಇಳಿಕೆ: 625ರ ಬದಲಿಗೆ ಇನ್ನು 525 ಅಂಕ?
2026ರ SSLC ಪರೀಕ್ಷೆಯಿಂದ ಅನ್ವಯವಾಗುವಂತೆ ಒಟ್ಟು ಅಂಕಗಳನ್ನು 625ರಿಂದ 525ಕ್ಕೆ ಇಳಿಕೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ನೂತನ ನಿಯಮದಂತೆ ಅಂಕಪಟ್ಟಿಯಲ್ಲಿ ಇನ್ನು ಮುಂದೆ ಅಂಕಗಳ ಬದಲಿಗೆ 'ಗ್ರೇಡ್' ವ್ಯವಸ್ಥೆಯನ್ನು ಪ್ರಮುಖವಾಗಿ ನಮೂದಿಸಲಾಗುತ್ತದೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಐತಿಹಾಸಿಕ ಬದಲಾವಣೆಯು ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಲಿದೆ ಎಂದು ಆಶಿಸಿದ್ದಾರೆ. ಈ ಹಿಂದೆ ತೃತೀಯ ಭಾಷೆಯಾದ ಹಿಂದಿ ಸೇರಿದಂತೆ ಒಟ್ಟು 625 ಅಂಕಗಳಿಗೆ ಪರೀಕ್ಷೆ ನಡೆಯುತ್ತಿತ್ತು. ಆದರೆ ಇನ್ನು ಮುಂದೆ ತೃತೀಯ ಭಾಷೆಯ 100 ಅಂಕಗಳನ್ನು ಅಂಕಪಟ್ಟಿಯಲ್ಲಿ ಒಟ್ಟ
Mar 271 min read


ಡಾಲರ್ ಎದುರು ರೂಪಾಯಿ ಭಾರೀ ಕುಸಿತ: 94.15 ತಲುಪಿ ಐತಿಹಾಸಿಕ ಕನಿಷ್ಠ!
ಭಾರತೀಯ ಕರೆನ್ಸಿ ಮಾರುಕಟ್ಟೆಯಲ್ಲಿ ಶುಕ್ರವಾರ ಮಹತ್ವದ ಕುಸಿತ ದಾಖಲಾಗಿದ್ದು, ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯ ₹94.1575 ರಷ್ಟು ಕುಸಿದು ಹೊಸ ಐತಿಹಾಸಿಕ ಕನಿಷ್ಠ ಮಟ್ಟ ತಲುಪಿದೆ. ಈ ಬೆಳವಣಿಗೆ ದೇಶದ ಆರ್ಥಿಕ ಪರಿಸ್ಥಿತಿಯ ಮೇಲೆ ಆತಂಕ ಮೂಡಿಸಿದೆ. ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡ ಯುದ್ಧ ಪರಿಸ್ಥಿತಿ ಜಾಗತಿಕ ಮಾರುಕಟ್ಟೆಗಳಲ್ಲಿ ಅಸ್ಥಿರತೆ ಉಂಟುಮಾಡಿದ್ದು, ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳಾದ ಡಾಲರ್ ಕಡೆ ಮುಖ ಮಾಡಿದ್ದಾರೆ. ಇದರ ಪರಿಣಾಮವಾಗಿ ರೂಪಾಯಿ ಮೌಲ್ಯ ಕುಸಿತ ಕಂಡಿದೆ. ಯುದ್ಧ ಆರಂಭವಾದ ನಂತರ ರೂಪಾಯಿ ಸುಮಾರು 3.5% ರಷ್ಟು ದುರ್ಬಲಗೊಂಡಿದೆ. ಇದೇ ವೇಳೆ, ಅಂತರಾಷ್ಟ್ರೀಯ ಮ
Mar 271 min read


ಹೋರ್ಮುಝ್ ಜಲಸಂಧಿಯಲ್ಲಿ ಉದ್ವಿಗ್ನತೆ: ಅನುಮತಿ ಇಲ್ಲದೆ ಸಾಗಿದ ತೈಲ ಹಡಗು ಮೇಲೆ ದಾಳಿ
ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯ ನಡುವೆ ಹೋರ್ಮುಝ್ ಜಲಸಂಧಿಯಲ್ಲಿ ಮತ್ತೊಂದು ಆತಂಕಕಾರಿ ಘಟನೆ ನಡೆದಿದೆ. ಅನುಮತಿ ಇಲ್ಲದೆ ಜಲಸಂಧಿ ಮೂಲಕ ಸಾಗಲು ಯತ್ನಿಸಿದ ತೈಲ ಹಡಗು ಮೇಲೆ ದಾಳಿ ನಡೆಸಲಾಗಿದೆ ಎಂದು ವರದಿಗಳು ತಿಳಿಸಿವೆ. ಮಾಹಿತಿಯ ಪ್ರಕಾರ, ಇರಾನ್ ತನ್ನ ಸಮುದ್ರ ಗಡಿ ನಿಯಂತ್ರಣವನ್ನು ಕಠಿಣಗೊಳಿಸಿದ್ದು, ಅನುಮತಿ ಇಲ್ಲದೆ ಪ್ರವೇಶಿಸುವ ಹಡಗುಗಳ ವಿರುದ್ಧ ಕ್ರಮ ಕೈಗೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಲವಾರು ಹಡಗುಗಳು ಪರಿಶೀಲನೆಗೆ ಒಳಗಾಗಿದ್ದು, ಕೆಲವು ಹಡಗುಗಳು ದಾಳಿಗೂ ಗುರಿಯಾಗಿವೆ ಎನ್ನಲಾಗಿದೆ. ಹೋರ್ಮುಝ್ ಜಲಸಂಧಿ ವಿಶ್ವದ ಪ್ರಮುಖ ತೈಲ ಸಾಗಾಟ ಮಾರ್ಗವಾ
Mar 271 min read


ದೇಶದಲ್ಲಿ ಲಾಕ್ಡೌನ್ ವದಂತಿ: ಕೇಂದ್ರ ಸರ್ಕಾರದಿಂದ ಮಹತ್ವದ ಸ್ಪಷ್ಟೀಕರಣ
ಮಧ್ಯಪ್ರಾಚ್ಯದ ಯುದ್ಧದ ಹಿನ್ನೆಲೆಯಲ್ಲಿ ದೇಶಾದ್ಯಂತ ಮತ್ತೆ ಲಾಕ್ಡೌನ್ ಜಾರಿಯಾಗಲಿದೆ ಎಂಬ ವದಂತಿಗಳನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ತಳ್ಳಿಹಾಕಿದೆ. ಪ್ರಧಾನಿ ಮೋದಿ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದ್ದು, ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸ್ಪಷ್ಟಪಡಿಸಿದ್ದಾರೆ. ಜಾಗತಿಕ ಬಿಕ್ಕಟ್ಟಿನಿಂದ ಇಂಧನ ಮತ್ತು ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಸರ್ಕಾರ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ ಎಂದು ಸಚಿವರು ತಿಳಿಸಿದ್ದಾರೆ. ಸಾರ್ವಜನಿಕರು ಇಂತಹ ಸುಳ್ಳು ಸುದ್ದಿಗಳ
Mar 271 min read


ಇಂದೋರ್ನಲ್ಲಿ ಭೀಕರ ಘಟನೆ: ಇನ್ಫೋಸಿಸ್ ಮಹಿಳಾ ಇಂಜಿನಿಯರ್ ಕಾರಿನಿಂದ ಹೊಡೆದು ಕೊಲೆ
ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ಬುಧವಾರ ರಾತ್ರಿ ಸಂಭವಿಸಿದ ಭೀಕರ ಘಟನೆಯಲ್ಲಿ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ಸಾಫ್ಟ್ವೇರ್ ಇಂಜಿನಿಯರ್ ಶಾಂಪಾ ಪಾಠಕ್ ಪಾಂಡೆ (Shampa Pathak Pandey) ಅವರು ಕಾರು ಹರಿದು ಸಾವನ್ನಪ್ಪಿದ್ದಾರೆ. ಲಸೂಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಶಿವ ವಾಟಿಕಾ ಸಮೃದ್ಧಿ ಎಂಕ್ಲೇವ್ ಅಪಾರ್ಟ್ಮೆಂಟ್ನಲ್ಲಿ ರಾತ್ರಿ ಸುಮಾರು 10:30ರ ವೇಳೆ ಈ ಘಟನೆ ನಡೆದಿದೆ. ಅಪಾರ್ಟ್ಮೆಂಟ್ ನಿವಾಸಿಗಳು ಮತ್ತು ಪೆಂಟ್ಹೌಸ್ ಮಾಲೀಕ ಕುಲದೀಪ್ ಚೌಧರಿ ಹಾಗೂ ಅವರ 18 ವರ್ಷದ ಮಗ ಮೋಹಿತ್ ಚೌಧರಿ ನಡುವೆ ಗಲಾಟೆ ನಡೆದಿತ್ತು. ಪೆಂಟ್ಹೌಸ್ ಅನ್ನು Airbnb ಮೂಲಕ ಹೊರಗಿನ
Mar 271 min read


ಐಪಿಎಲ್ ಸಂಭ್ರಮ: ನಾಳೆಯಿಂದ ಕ್ರಿಕೆಟ್ ಹಬ್ಬ ಆರಂಭ
19ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಸರಣಿಯು ಮಾರ್ಚ್ 28ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್ಸಿಬಿ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಎರಡು ತಿಂಗಳ ಕಾಲ ನಡೆಯಲಿರುವ ಈ ಕ್ರೀಡಾಕೂಟದ ಪಂದ್ಯಗಳು ಪ್ರತಿದಿನ ಸಂಜೆ 7:30ಕ್ಕೆ ಶುರುವಾಗಲಿವೆ. ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಸಿಸಿಐ ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಿದೆ. ಒಟ್ಟು 70 ಪಂದ್ಯಗಳು ನಡೆಯಲಿದ್ದು, ಮೊದಲ ಹಂತದ 20 ಪಂದ್ಯಗಳ ನಂತರ, ಏಪ್ರಿಲ್ 13ರಿಂದ ಮೇ 24ರವರೆಗೆ ಉಳಿದ 50 ಪಂದ್ಯಗಳು ಜರುಗಲಿವೆ. ಕ್ರ
Mar 271 min read


ಇಂದಿನ (ಮಾರ್ಚ್ 27) ಚಿನ್ನದ ದರ
ಇಂದು (ಮಾರ್ಚ್ 27, 2026) ಕರ್ನಾಟಕದಲ್ಲಿ 22 ಕ್ಯಾರೆಟ್ ಮತ್ತು 24 ಕ್ಯಾರೆಟ್ ಚಿನ್ನದ ದರಗಳು ಈ ಕೆಳಗಿನಂತಿವೆ: 24 ಕ್ಯಾರೆಟ್ ಚಿನ್ನ (ಶುದ್ಧ ಚಿನ್ನ): 1 ಗ್ರಾಂಗೆ ₹14,471 ರಿಂದ ₹14,621 ವರೆಗೆ. 10 ಗ್ರಾಂ ಬೆಲೆ ಸುಮಾರು ₹1,44,710 ರಿಂದ ₹1,46,210 ಆಗಿದೆ. 22 ಕ್ಯಾರೆಟ್ ಚಿನ್ನ (ಆಭರಣ ಚಿನ್ನ): 1 ಗ್ರಾಂಗೆ ₹13,265 ರಿಂದ ₹13,555 ವರೆಗೆ. 10 ಗ್ರಾಂ ಬೆಲೆ ಸುಮಾರು ₹1,32,650 ರಿಂದ ₹1,35,550 ಆಗಿದೆ. 18 ಕ್ಯಾರೆಟ್ ಚಿನ್ನ: 1 ಗ್ರಾಂಗೆ ಸುಮಾರು ₹10,853 ಆಗಿದೆ.
Mar 271 min read


ತೊಕ್ಕೊಟ್ಟು: ರೌಡಿಶೀಟರ್ ಟ್ಯಾಬ್ಲೆಟ್ ಆರೀಫ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
ಮಂಗಳೂರಿನ ತೊಕ್ಕೊಟ್ಟು ಫ್ಲೈ ಓವರ್ ಮೇಲೆ ಇಂದು ನಸುಕಿನ ಜಾವ ಭೀಕರ ಕೊಲೆಯೊಂದು ನಡೆದಿದೆ. ಬಂದರು ಪೊಲೀಸ್ ಠಾಣೆಯ ರೌಡಿಶೀಟರ್ ಆರೀಫ್ ಹುಸೇನ್ (42) ಯಾನೆ 'ಟ್ಯಾಬ್ಲೆಟ್ ಆರೀಫ್' ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬಲಿ ಪಡೆದಿದ್ದಾರೆ. ಬೆಳಗ್ಗೆ 3:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಮೃತ ಆರೀಫ್ ಮೀನು ವ್ಯಾಪಾರಿಯಾಗಿದ್ದು, ಇಂದು ಮುಂಜಾನೆ ಬುಲೆಟ್ ಬೈಕಿನಲ್ಲಿ ಧಕ್ಕೆಯ ಕಡೆಗೆ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ. ಫ್ಲೈ ಓವರ್ ಮೇಲೇರುತ್ತಿದ್ದಂತೆ ಅಡ್ಡಗಟ್ಟಿದ ಹಂತಕರು ಆತನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಳ
Mar 271 min read


ಮಂಗಳೂರು ಶಾಕ್: ಫ್ಲೈಓವರ್ ಮೇಲೆ ದಾಳಿ – ‘ಟಾಬ್ಲೆಟ್ ಆರಿಫ್’ ಭೀಕರ ಹತ್ಯೆ!
ಮಂಗಳೂರು ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್ ಮೇಲ್ಬಾಗದಲ್ಲಿ ಶುಕ್ರವಾರ ಬೆಳಿಗ್ಗೆ ವ್ಯಕ್ತಿಯೋರ್ವನನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. Ad ಮೃತರನ್ನು ಮುಳ್ಳುಗುಡ್ಡೆ ಹೌಸ್, ತಲಪಾಡಿ ನಿವಾಸಿ ಆರಿಫ್ (46), ಅಲಿಯಾಸ್ ‘ಟಾಬ್ಲೆಟ್ ಆರಿಫ್’ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಆರಿಫ್ ಅವರು ಬೈಕ್ನಲ್ಲಿ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯಿಂದ ರಸ್ತೆಗೆ ಬಿದ್ದ ಬಳಿಕ, ಆರೋಪಿಗಳು ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದ
Mar 271 min read


ಎಸ್ಎಸ್ಎಲ್ಸಿ ಪರೀಕ್ಷೆ ಮುಂದೂಡಿಕೆ
ಮಾರ್ಚ್ 30ರಂದು ನಡೆಯಬೇಕಿದ್ದ ಎಸ್ಎಸ್ಎಲ್ಸಿ ತೃತೀಯ ಭಾಷೆ (ಹಿಂದಿ) ಪರೀಕ್ಷೆಯನ್ನು ಮಾರ್ಚ್ 31ಕ್ಕೆ ಮುಂದೂಡಲಾಗಿದೆ ಎಂದು ಪರೀಕ್ಷಾ ಮಂಡಳಿ ತಿಳಿಸಿದೆ. ಮಹಾವೀರ ಜಯಂತಿ ರಜೆಯನ್ನು ಸರ್ಕಾರವು ಮಾರ್ಚ್ 31ರ ಬದಲಿಗೆ ಮಾರ್ಚ್ 30ಕ್ಕೆ ಮರುನಿಗದಿಪಡಿಸಿದ ಹಿನ್ನೆಲೆಯಲ್ಲಿ ಈ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಮೊದಲು ರಜೆ ಇದ್ದ ದಿನದಂದೇ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು, ಆದರೆ ಈಗ ರಜಾ ದಿನಾಂಕ ಪರಿಷ್ಕರಣೆಯಾದ ಕಾರಣ ಪರೀಕ್ಷಾ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಿದೆ. ಈ ನಿರ್ಧಾರದಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧತೆ ನಡೆಸಲು ಹೆಚ್ಚುವರಿ ಒಂದು ದಿನ ಕಾಲಾವಕಾಶ ಸಿಕ್ಕಂತಾಗಿದ
Mar 261 min read


ಕಲಬುರಗಿ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆ – ಚೂರಿಯಿಂದ ಪತ್ನಿ ಕೊಲೆ
ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲ್ಲೂಕಿನ ಬಾಳೂರಗಿ ಗ್ರಾಮದ ಸಮೀಪ ಗುರುವಾರ ಭೀಕರ ಘಟನೆ ನಡೆದಿದೆ. ಪತ್ನಿಯನ್ನು ಪತಿ ಚೂರಿಯಿಂದ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಆರೋಪಿಯನ್ನು ಅಕ್ಷಯ್ ಜಾಧವ್ ಎಂದು ಗುರುತಿಸಲಾಗಿದ್ದು, ಅವನನ್ನು ಪೋಷಕರೊಂದಿಗೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತಪಟ್ಟ ಮಹಿಳೆಯನ್ನು ಶೈಲಾ (28) ಎಂದು ಗುರುತಿಸಲಾಗಿದ್ದು, ಆಕೆ ಮಹಾರಾಷ್ಟ್ರದ ಬಾರಾಮತಿ ಮೂಲದವರು. ಪೊಲೀಸರ ಮಾಹಿತಿಯ ಪ್ರಕಾರ, ದಂಪತಿ ಗಣಗಾಪುರಕ್ಕೆ ಹೋಗುವ ನೆಪದಲ್ಲಿ ಕಲಬುರಗಿಗೆ ಬಂದಿದ್ದರು. ಮಾರ್ಗಮಧ್ಯೆ ಹೊಲದ ಬಳಿ ಕಾರನ್ನು ನಿಲ್ಲಿಸಿದ ಆರೋಪಿಯು ಪತ್ನಿಯ ಮೇಲೆ ಚೂರಿಯಿಂದ ದಾಳಿ ನಡೆಸಿದ್ದಾನೆ. ದಾಳಿ
Mar 261 min read


1ನೇ ತರಗತಿ ಪ್ರವೇಶಕ್ಕೆ ವಯಸ್ಸಿನ ಸಡಿಲಿಕೆ: ಪೋಷಕರ ಗೊಂದಲಕ್ಕೆ ತೆರೆ ಎಳೆದ ಸರ್ಕಾರ
ರಾಜ್ಯದಲ್ಲಿ ಒಂದನೇ ತರಗತಿ ದಾಖಲಾತಿಗೆ ಆರು ವರ್ಷ ತುಂಬಿರಬೇಕೆಂಬ ಕಡ್ಡಾಯ ನಿಯಮದಲ್ಲಿ ಸರ್ಕಾರ ಈ ವರ್ಷವೂ 60 ದಿನಗಳ ವಿನಾಯಿತಿ ನೀಡುವ ಮಹತ್ವದ ತೀರ್ಮಾನ ಕೈಗೊಂಡಿದೆ. ವಿಧಾನಸಭೆಯಲ್ಲಿ ಈ ಕುರಿತು ಘೋಷಣೆ ಮಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ, 2026-27ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ ವಯಸ್ಸಿನ ಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ ಎಂದು ತಿಳಿಸಿದರು. ಈ ನಿರ್ಧಾರದಿಂದಾಗಿ ದಾಖಲಾತಿ ಸಮಯದಲ್ಲಿ ಮಕ್ಕಳ ವಯಸ್ಸಿನ ಬಗ್ಗೆ ಇದ್ದ ಗೊಂದಲಗಳಿಗೆ ಸದ್ಯ ಮುಕ್ತಿ ಸಿಕ್ಕಂತಾಗಿದೆ. ಈ ನೂತನ ನಿಯಮದ ಅನ್ವಯ, 5 ವರ್ಷ 10 ತಿಂಗಳು ಪೂರೈಸಿರುವ ಮಕ್ಕಳು ಕೂಡ ಈ ಬಾರಿ ಒಂದನೇ ತರಗತಿಗೆ ಅಧಿಕೃತವಾಗಿ ಪ್ರ
Mar 261 min read


ಬಸ್ ಮತ್ತು ಟಿಪ್ಪರ್ ಢಿಕ್ಕಿ, 10 ಮಂದಿ ಸಜೀವ ದಹನ
ಮಾರ್ಕಪುರಂ ಸಮೀಪದ ರಾಯವರಂ ಬಳಿ ಹರಿಕೃಷ್ಣ ಟ್ರಾವೆಲ್ಸ್ಗೆ ಸೇರಿದ ಬಸ್ ಮತ್ತು ಟಿಪ್ಪರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಭೀಕರ ದುರಂತ ನಡೆದಿದೆ. ಅಪಘಾತದ ತೀವ್ರತೆಗೆ ಎರಡೂ ವಾಹನಗಳಲ್ಲಿ ತಕ್ಷಣವೇ ಬೆಂಕಿ ಕಾಣಿಸಿಕೊಂಡಿದ್ದು, ಬಸ್ನಲ್ಲಿದ್ದ ಸುಮಾರು 10 ಪ್ರಯಾಣಿಕರು ಹೊರಬರಲಾಗದೆ ಸಜೀವವಾಗಿ ದಹನವಾಗಿದ್ದಾರೆ. ಬೆಳಿಗ್ಗೆ 6 ರಿಂದ 6:30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಜಗಿತಿಯಾಲ್ನಿಂದ ವಿಂಜಾಮುರಿಗೆ ತೆರಳುತ್ತಿದ್ದ ಬಸ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಮತ್ತು ಪೊಲೀಸರು ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ. ಅಪಘಾತದ
Mar 261 min read


ಇಂದಿನ ಚಿನ್ನದ ದರ
ಮಾರ್ಚ್ 26, 2026 ರಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ಚಿನ್ನದ ದರಗಳು ಈ ಕೆಳಗಿನಂತಿವೆ: ಬೆಂಗಳೂರು (Bangalore): 22 ಕ್ಯಾರೆಟ್ ಚಿನ್ನ (1 ಗ್ರಾಂ): ₹13,465 (+₹20 ಏರಿಕೆ). 24 ಕ್ಯಾರೆಟ್ ಚಿನ್ನ (1 ಗ್ರಾಂ): ₹14,689 (+₹22 ಏರಿಕೆ). 18 ಕ್ಯಾರೆಟ್ ಚಿನ್ನ (1 ಗ್ರಾಂ): ₹11,017. ಮಂಗಳೂರು (Mangalore): 22 ಕ್ಯಾರೆಟ್ ಚಿನ್ನ (1 ಗ್ರಾಂ): ₹13,465. 24 ಕ್ಯಾರೆಟ್ ಚಿನ್ನ (1 ಗ್ರಾಂ): ₹14,689. ಬೆಳ್ಳಿ ದರ (Silver Rate): ಬೆಂಗಳೂರಿನಲ್ಲಿ ಇಂದು 1 ಕೆಜಿ ಬೆಳ್ಳಿಯ ಬೆಲೆ ಸುಮಾರು ₹2,44,900 ಆಗಿದೆ.
Mar 261 min read


ಭಾರತಕ್ಕೆ ಬಿಗ್ ರಿಲೀಫ್: ಹಾರ್ಮುಜ್ ಜಲಸಂಧಿ ಮುಕ್ತಗೊಳಿಸಿದ ಇರಾನ್
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದಿಂದಾಗಿ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವ ಬೆನ್ನಲ್ಲೇ, ಭಾರತಕ್ಕೆ ಶುಭಸುದ್ದಿಯೊಂದು ಲಭಿಸಿದೆ. ಆಯಕಟ್ಟಿನ ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ವಿಧಿಸುವುದಿಲ್ಲ ಎಂದು ಇರಾನ್ ಘೋಷಿಸಿದೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಫ್ಟಿ ಈ ಮಹತ್ವದ ನಿರ್ಧಾರ ಪ್ರಕಟಿಸಿದ್ದು, ಭಾರತದ ಜೊತೆಗೆ ರಷ್ಯಾ, ಚೀನಾ, ಇರಾನ್ ಮತ್ತು ಪಾಕಿಸ್ತಾನದ ಹಡಗುಗಳಿಗೂ ಮುಕ್ತ ಅವಕಾಶ ನೀಡಲಾಗಿದೆ. ಅಮೆರಿಕ ಮತ್ತು ಇಸ್ರೇಲ್ ವಿರೋಧಿ ನಿಲುವಿನ ನಡುವೆ ಇರಾನ್ ಈ ಐದು ಮಿತ್ರ ರಾಷ್ಟ್ರಗಳಿಗೆ ಮಾತ್ರ ವಿಶೇಷ ರಿಯಾಯಿತಿ ನೀಡಿದೆ. ಈ
Mar 261 min read
Archive
bottom of page



