;
top of page

ಬೆಂಗಳೂರಿನಲ್ಲಿ ಮೊಳಗಿದ ಭಜನಾಮೃತ: ಶ್ರೀ ರಾಮ ಭಜನಾ ಮಂಡಳಿಯ 4ನೇ ವರ್ಷದ ಮಂಗಳೋತ್ಸವ ವೈಭವದ ಸಂಪನ್ನ

  • Mar 28
  • 1 min read


ಕಡಲ ತೀರದ ಯುವಕರು ಉದ್ಯೋಗನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿ ನಮ್ಮ ಸಂಸ್ಕೃತಿ ಯನ್ನು ಉಳಿಸಬೇಕು ಎಂಬ ನಿಟ್ಟಿನಲ್ಲಿ 10/05/2022 ರ ರಾಮನವಮಿಯ ದಿನ ಆರಂಭಿಸಿದ ಭಜನಾ ತಂಡಕ್ಕೆ ಮೊನ್ನೆಯ 2026ರ ರಾಮ ನವಮಿಯ ದಿನವಾದ ಮಾರ್ಚ್ 26ಕ್ಕೆ ನಾಲ್ಕನೇ ವರ್ಷದ ಸಂಭ್ರಮ.

ಆ ಪ್ರಯುಕ್ತ 4ನೇ ವರ್ಷದ ಮಂಗಳೋತ್ಸವವನ್ನು ಶ್ರೀ ಬುಗುಡಿಕುಂಟೆ, ಮುನೇಶ್ವರ ದೇವಸ್ಥಾನ , ರಾಯಸಂದ್ರ - ಚಿಕ್ಕನಾಗಮಂಗಳ ಇಲ್ಲಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಸಹಕಾರ ಮತ್ತು ಶ್ರೀ ರಾಮ ಭಜನಾ ಮಂಡಳಿಯ ಸರ್ವ ಭಜಕರ ಸಹಕಾರ, ಹಾಗೂ ಭಜನಾ ಮಂಡಳಿಗಳ ಹಿತೈಷಿಗಳ ಸಹಕಾರದಿಂದ ಬಹಳ ಸೊಗಸಾಗಿ ಭಜನಾ ಸಂಕೀರ್ತನೆ ಮುಖೇನ ಭಕ್ತಿಯ ಸುಧೆಯನ್ನು ಹರಿಸಿ ಭಜನಾ ಮಂಗಳೋತ್ಸವ ಯಶಸ್ವಿಯಾಗಿ ನಡೆಯಿತು.


ಭವ್ಯವಾದ ರಥದಲ್ಲಿ ಶ್ರೀ ರಾಮ ದೇವರನ್ನು ಅಲಂಕರಿಸಲ್ಪಟ್ಟು, ಶ್ರೀ ರಾಮ ಭಜನಾ ಮಂಡಳಿಯ ಶೋಭಾಯಾತ್ರೆಯೊಂದಿಗಿನ ಕುಣಿತಭಜನಾ ತಂಡ ಮತ್ತು ಮಾತೆಯರ ಪೂರ್ಣಕುಂಭದೊಂದಿನ ಮೆರವಣಿಯ ಜೊತೆ, ಎಲ್ಲಾ ಸದ್ಭಕ್ತರನ್ನು ಒಳಗೊಂಡು ಸಂಜೆ 5-30ಕ್ಕೆ ಶೋಭಾಯಾತ್ರೆ ಪ್ರಾರಂಭ ವಾಯಿತು. ನಂತರ ದೇವಸ್ಥಾನದಲ್ಲಿ ದೀಪ ಪ್ರಜ್ವಲನೆ ಮಾಡಿ, ಶ್ರೀ ರಾಮ ದೇವರಿಗೆ ಸಂಕಲ್ಪವನ್ನು ಮಾಡಿ ಶ್ರೀ ರಾಮ ಭಜನಾ ಮಂಡಳಿಯಿಂದ ಭಜನಾ ಸಂಕೀರ್ತನೆ ಪ್ರಾರಂಭವಾಯಿತು.

ಮುಂದೆ ಆಹ್ವಾನಿತ ಭಜನಾ ತಂಡಗಳಾದ ಸಾದಹಳ್ಳಿ ಶ್ರೀ ವನದುರ್ಗ ಪರಮೇಶ್ವರಿ ದೇವಸ್ಥಾನದ ಭಜನಾ ಮಂಡಳಿ ಹಾಗೂ ಮಕರ ಶ್ರೀ ಭಜನಾ ಮಂಡಳಿ, ಬೆಂಗಳೂರು ಇವರಿಂದ ಭಜನಾ ಸಂಕೀರ್ತನೆ ನಡೆಯಿತು.

ನಂತರ ಶ್ರೀ ರಾಮ ಭಜನಾ ಮಂಡಳಿ ಭಜಕರಿಂದ ಭಜನಾ ಸಂಕೀರ್ತನೆ ಮಾಡಿ ಮಹಾಮಂಗಳಾರತಿಯನ್ನು ಮಾಡಿ ಪ್ರಸಾದ ವಿತರಿಸಲಾಯಿತು.

ಆಹ್ವಾನಿಸಿದ ತಂಡಗಳಿಗೆ ಮತ್ತು ಎಲ್ಲಾ ಗಣ್ಯರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಮಂಗಳೋತ್ಸವದಲ್ಲಿ ಹಿಂದೂ ಧಾರ್ಮಿಕ ಮುಖಂಡರಾದ ಶ್ರೀ ಕಿರಣ್ ಚಂದ್ರ ಪುಷ್ಪಗಿರಿ, ಜೈ ತುಲುನಾಡ್ (ರಿ) ಬೆಂಗಳೂರು ಇದರ ಅಧ್ಯಕ್ಷರಾದ ನಿಧೀಶ್ ಶೆಟ್ಟಿ ಹಾಗೂ ಭಜನಾ ಮಂಡಳಿಗೆ ಸಹಕರಿಸುವ ಬೆಂಗಳೂರಿನ ವಿವಿಧ ಸಂಘಟನೆಗಳು ಮತ್ತು ಗಣ್ಯವ್ಯಕ್ತಿಗಳು ಭಜನಾ ಮಂಗಳೋತ್ಸವದಲ್ಲಿ ಪಾಲ್ಗೊಂಡಿದ್ದರು. ಶ್ರೀ ರಾಮ ಭಜನಾ ಮಂಡಳಿ, ಬೆಂಗಳೂರು ಇದರ ಎಲ್ಲಾ ಭಜಕರಿಂದ ಮತ್ತು ದೇವಸ್ಥಾನದ ವ್ಯವಸ್ಥಾಪಕರಾದ ಲೋಕೇಶ್ ಮತ್ತು ವ್ಯವಸ್ಥಾಪಕ ಸಮಿತಿಯ ಸದಸ್ಯರಿಂದ ರಾಮ ನವಮಿಯ ದಿನ ಮಾಡಿದ ಭಜನಾ ಮಂಗಳೋತ್ಸವೂ ಯಶಸ್ವಿಯಾಗಿ ಸಂಪನ್ನಗೊಂಡಿತು.ಮಂಗಳೋತ್ಸವದಲ್ಲಿ ಪಾಲ್ಗೊಂಡ ಎಲ್ಲರಿಗೂ ಅನ್ನಪ್ರಸಾದವನ್ನು ನೀಡಿ ಯಶಸ್ವಿ ಕಾರ್ಯಕ್ರಮವೆಂದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Comments


ಜಾಹೀರಾತಿಗಾಗಿ ಸಂಪರ್ಕಿಸಿ:

ನಮ್ಮ ವೆಬ್‌ಸೈಟ್‌ನಲ್ಲಿ ನಿಮ್ಮ ವ್ಯವಹಾರ, ಸೇವೆ ಅಥವಾ ಉತ್ಪನ್ನವನ್ನು ಪ್ರಚಾರ ಮಾಡಲು ಬಯಸುವಿರಾ?

 ದಯವಿಟ್ಟು ಜಾಹೀರಾತಿಗಾಗಿ ಸಂಪರ್ಕಿಸಿ: 9880834166 / WhatsApp

Categories

Sathyapatha News Plus

Logo

"ಸತ್ಯಪಥ ನ್ಯೂಸ್ ಪ್ಲಸ್" – ರಾಜಕೀಯ ಸುದ್ದಿ, ಕ್ರೀಡೆಗಳ ತಾಜಾ ಅಪ್ಡೇಟ್‌ಗಳು, ಸ್ಥಳೀಯ ವರದಿಗಳು, ಮಾರುಕಟ್ಟೆ ಚಲನವಲನ, ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ – ಎಲ್ಲವನ್ನು ನಿಖರವಾಗಿ, ಸಮಯೋಚಿತವಾಗಿ, ನಿಮ್ಮ ಕೈಗೆ ತಲುಪಿಸುವ ವಿಶ್ವಾಸಾರ್ಹ ತಾಣ.

Popular Tags

Follow Us

  • Facebook
  • X
  • Youtube
  • Instagram
bottom of page