ತೊಕ್ಕೊಟ್ಟು: ರೌಡಿಶೀಟರ್ ಟ್ಯಾಬ್ಲೆಟ್ ಆರೀಫ್ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ
- Mar 27
- 1 min read

ಮಂಗಳೂರಿನ ತೊಕ್ಕೊಟ್ಟು ಫ್ಲೈ ಓವರ್ ಮೇಲೆ ಇಂದು ನಸುಕಿನ ಜಾವ ಭೀಕರ ಕೊಲೆಯೊಂದು ನಡೆದಿದೆ. ಬಂದರು ಪೊಲೀಸ್ ಠಾಣೆಯ ರೌಡಿಶೀಟರ್ ಆರೀಫ್ ಹುಸೇನ್ (42) ಯಾನೆ 'ಟ್ಯಾಬ್ಲೆಟ್ ಆರೀಫ್' ಎಂಬಾತನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಬಲಿ ಪಡೆದಿದ್ದಾರೆ. ಬೆಳಗ್ಗೆ 3:30ರ ಸುಮಾರಿಗೆ ಈ ಘಟನೆ ನಡೆದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮೃತ ಆರೀಫ್ ಮೀನು ವ್ಯಾಪಾರಿಯಾಗಿದ್ದು, ಇಂದು ಮುಂಜಾನೆ ಬುಲೆಟ್ ಬೈಕಿನಲ್ಲಿ ಧಕ್ಕೆಯ ಕಡೆಗೆ ತೆರಳುತ್ತಿದ್ದಾಗ ಈ ದಾಳಿ ನಡೆದಿದೆ. ಫ್ಲೈ ಓವರ್ ಮೇಲೇರುತ್ತಿದ್ದಂತೆ ಅಡ್ಡಗಟ್ಟಿದ ಹಂತಕರು ಆತನ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಳೆಯ ಹಗೆತನ ಈ ಕೊಲೆಗೆ ಕಾರಣವಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.







Comments