SSLC ಪರೀಕ್ಷೆ ಅಂಕ ಇಳಿಕೆ: 625ರ ಬದಲಿಗೆ ಇನ್ನು 525 ಅಂಕ?

2026ರ SSLC ಪರೀಕ್ಷೆಯಿಂದ ಅನ್ವಯವಾಗುವಂತೆ ಒಟ್ಟು ಅಂಕಗಳನ್ನು 625ರಿಂದ 525ಕ್ಕೆ ಇಳಿಕೆ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ನೂತನ ನಿಯಮದಂತೆ ಅಂಕಪಟ್ಟಿಯಲ್ಲಿ ಇನ್ನು ಮುಂದೆ ಅಂಕಗಳ ಬದಲಿಗೆ 'ಗ್ರೇಡ್' ವ್ಯವಸ್ಥೆಯನ್ನು ಪ್ರಮುಖವಾಗಿ ನಮೂದಿಸಲಾಗುತ್ತದೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಐತಿಹಾಸಿಕ ಬದಲಾವಣೆಯು ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆ ಮಾಡಲಿದೆ ಎಂದು ಆಶಿಸಿದ್ದಾರೆ.

ಈ ಹಿಂದೆ ತೃತೀಯ ಭಾಷೆಯಾದ ಹಿಂದಿ ಸೇರಿದಂತೆ ಒಟ್ಟು 625 ಅಂಕಗಳಿಗೆ ಪರೀಕ್ಷೆ ನಡೆಯುತ್ತಿತ್ತು. ಆದರೆ ಇನ್ನು ಮುಂದೆ ತೃತೀಯ ಭಾಷೆಯ 100 ಅಂಕಗಳನ್ನು ಅಂಕಪಟ್ಟಿಯಲ್ಲಿ ಒಟ್ಟು ಮೊತ್ತಕ್ಕೆ ಪರಿಗಣಿಸುವುದಿಲ್ಲ. ಕೇವಲ 525 ಅಂಕಗಳಿಗೆ ವಿದ್ಯಾರ್ಥಿಗಳು ಗಳಿಸಿದ ಸಾಧನೆಯನ್ನು ಆಧರಿಸಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಇದು ಪ್ರಸಕ್ತ ಸಾಲಿನ ಪರೀಕ್ಷಾರ್ಥಿಗಳಿಗೆ ಅನ್ವಯವಾಗಲಿದೆ.







Comments