ಐಪಿಎಲ್ ಸಂಭ್ರಮ: ನಾಳೆಯಿಂದ ಕ್ರಿಕೆಟ್ ಹಬ್ಬ ಆರಂಭ

19ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಸರಣಿಯು ಮಾರ್ಚ್ 28ರಿಂದ ಆರಂಭವಾಗಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಆರ್‍ಸಿಬಿ ಮತ್ತು ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ. ಎರಡು ತಿಂಗಳ ಕಾಲ ನಡೆಯಲಿರುವ ಈ ಕ್ರೀಡಾಕೂಟದ ಪಂದ್ಯಗಳು ಪ್ರತಿದಿನ ಸಂಜೆ 7:30ಕ್ಕೆ ಶುರುವಾಗಲಿವೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಸಿಸಿಐ ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಿದೆ. ಒಟ್ಟು 70 ಪಂದ್ಯಗಳು ನಡೆಯಲಿದ್ದು, ಮೊದಲ ಹಂತದ 20 ಪಂದ್ಯಗಳ ನಂತರ, ಏಪ್ರಿಲ್ 13ರಿಂದ ಮೇ 24ರವರೆಗೆ ಉಳಿದ 50 ಪಂದ್ಯಗಳು ಜರುಗಲಿವೆ. ಕ್ರಿಕೆಟ್ ಪ್ರೇಮಿಗಳಲ್ಲಿ ಈಗಾಗಲೇ ಐಪಿಎಲ್ ಜ್ವರ ಏರತೊಡಗಿದೆ.







Comments