top of page
News Articles
Sathyapatha News Plus


ಮಂಜೇಶ್ವರ: ತಂದೆಯ ಅಟ್ಟಹಾಸಕ್ಕೆ ಬಲಿಯಾದ ಮಗಳು; ಚಿಕಿತ್ಸೆ ಫಲಿಸದೆ ದೊಡ್ಡಪ್ಪನೂ ಸಾವು
ಮಂಜೇಶ್ವರ: ಕುಂಜತ್ತೂರು ತೂಮಿನಾಡಿನಲ್ಲಿ ನಡೆದ ಕೌಟುಂಬಿಕ ಕಲಹದ ಭೀಕರ ಘಟನೆಯಲ್ಲಿ, ತಂದೆಯ ಕೃತ್ಯಕ್ಕೆ ಮಗಳು ಬಲಿಯಾದ ಬೆನ್ನಲ್ಲೇ ಗಂಭೀರವಾಗಿ ಗಾಯಗೊಂಡಿದ್ದ ದೊಡ್ಡಪ್ಪ ಶೇಕುಂಞ(50) ಅವರು ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಸಾವಿನ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ. ಸೋಮವಾರ ಸಂಜೆ ನಡೆದ ಜಗಳದ ವೇಳೆ ಆರೋಪಿ ಉಮರ್ ತನ್ನ ಸಂಬಂಧಿಕರ ಮೇಲೆ ಕತ್ತಿಯಿಂದ ಹಲ್ಲೆ ಮಾಡಲು ಮುಂದಾಗಿದ್ದನು. ಈ ಸಂದರ್ಭದಲ್ಲಿ ಗಲಾಟೆ ತಡೆಯಲು ಅಡ್ಡಬಂದ ಪುತ್ರಿ ಜುಮೈರಾ (18) ತಂದೆಯ ಕೃತ್ಯಕ್ಕೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಳು. ಹಲ್ಲೆ ತಡೆಯಲು ಬಂದ ಉಮರ್ನ ಅಣ್ಣ ಶೇಕು
Feb 31 min read


ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: ಲಂಡನ್-ಬೆಂಗಳೂರು ಹಾರಾಟ ರದ್ದು
ಬೆಂಗಳೂರು: ಲಂಡನ್ನಿಂದ ಬೆಂಗಳೂರಿಗೆ ಬರಬೇಕಿದ್ದ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನದ ಇಂಧನ ನಿಯಂತ್ರಣ ಸ್ವಿಚ್ನಲ್ಲಿ (Fuel Control Switch) ದೋಷ ಕಂಡುಬಂದ ಹಿನ್ನೆಲೆಯಲ್ಲಿ ಸೋಮವಾರ ವಿಮಾನದ ಹಾರಾಟವನ್ನು ರದ್ದುಗೊಳಿಸಲಾಗಿದೆ. ಪೈಲಟ್ ನೀಡಿದ ದೋಷದ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಏರ್ ಇಂಡಿಯಾ ಸಂಸ್ಥೆಯು, ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದೆ. ಕಳೆದ ವರ್ಷ ಅಹಮದಾಬಾದ್ನಲ್ಲಿ ನಡೆದ ವಿಮಾನ ಅಪಘಾತದ ತನಿಖೆ ಚಾಲ್ತಿಯಲ್ಲಿರುವಾಗಲೇ ಈ ಘಟನೆ ನಡೆದಿರುವುದು ಆತಂಕ ಮೂಡಿಸಿದೆ. ಈ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೆ (DGCA) ಮಾಹಿತಿ ನೀಡಲಾಗಿದ್ದು, ಅವರ ನಿರ
Feb 31 min read


ಅಮೆರಿಕದಿಂದ ಭಾರತದ ಸರಕುಗಳ ಮೇಲಿನ ಸುಂಕ ಭಾರಿ ಕಡಿತ: ಮೋದಿಯವರಿಂದ ಟ್ರಂಪ್ಗೆ ಧನ್ಯವಾದ
ವಾಷಿಂಗ್ಟನ್/ನವದೆಹಲಿ: ಯುರೋಪಿಯನ್ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲಿನ ಆಮದು ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಿದ್ದಾರೆ. ರಷ್ಯಾದಿಂದ ಕಚ್ಚಾತೈಲ ಆಮದು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ವಿಧಿಸಲಾಗಿದ್ದ ದಂಡವೂ ಸೇರಿ ಒಟ್ಟು 50% ರಷ್ಟಿದ್ದ ಸುಂಕವನ್ನು ಈಗ ಕೇವಲ 18% ಕ್ಕೆ ಇಳಿಸಲಾಗಿದೆ. ಈ ಐತಿಹಾಸಿಕ ತೀರ್ಮಾನದಿಂದಾಗಿ ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಅಮೆರಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಆದ್ಯತೆ ಲಭಿಸಿದಂತಾಗಿದೆ. ಈ ನಿರ್ಧಾರವನ್ನು ಸ
Feb 31 min read


ಗೃಹಲಕ್ಷ್ಮಿ ಫಲಾನುಭವಿಗಳಿಗೆ ಸಿಹಿಸುದ್ದಿ: ಶೀಘ್ರವೇ ಎರಡು ಕಂತಿನ ಹಣ ಬಿಡುಗಡೆ!
ರಾಜ್ಯದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಸುದ್ದಿಯೊಂದನ್ನು ನೀಡಿದ್ದಾರೆ. ಈಗಾಗಲೇ 24 ಕಂತುಗಳನ್ನು ಯಶಸ್ವಿಯಾಗಿ ವಿತರಿಸಲಾಗಿದ್ದು, ಈಗ ಬಾಕಿ ಇರುವ ಎರಡು ಕಂತುಗಳ ಹಣವನ್ನು ಒಟ್ಟಾಗಿ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ. ಇದರಿಂದ ಪ್ರತಿ ಮಹಿಳೆಗೆ ಒಟ್ಟು 52 ಸಾವಿರ ರೂಪಾಯಿ ತಲುಪಿದಂತಾಗುತ್ತದೆ. ಒಂದು ವೇಳೆ ನಿಮಗೆ ಹಣ ಬಾರದೆ ಇದ್ದಲ್ಲಿ, ಇನ್ನು ಮುಂದೆ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿ ಇಲಾಖೆಯು '181' ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಿದೆ. ಇ-ಕೆವೈಸಿ ಸಮಸ್ಯೆ ಅಥವಾ ತಾಂತ್ರಿಕ ದೋಷಗಳಿಂದ
Feb 21 min read


ಮಹಿಳೆಯರಿಗೆ ಬಂಪರ್ ಕೊಡುಗೆ: ಉಚಿತ ಹೊಲಿಗೆ ಯಂತ್ರ ಹಾಗೂ ₹15,000 ಸಹಾಯಧನ!
ಬೆಂಗಳೂರು: ಮನೆಯಲ್ಲೇ ಕುಳಿತು ಸ್ವಂತ ಉದ್ಯೋಗ ಆರಂಭಿಸಲು ಬಯಸುವ ಮಹಿಳೆಯರಿಗೆ ಕೇಂದ್ರ ಸರ್ಕಾರವು 'ಪಿಎಂ ವಿಶ್ವಕರ್ಮ ಯೋಜನೆ'ಯಡಿ ಸುವರ್ಣಾವಕಾಶ ಕಲ್ಪಿಸಿದೆ. ಈ ಯೋಜನೆಯಡಿ ದರ್ಜಿ ವೃತ್ತಿ ಮಾಡುವ ಮಹಿಳೆಯರಿಗೆ ಆಧುನಿಕ ಹೊಲಿಗೆ ಯಂತ್ರ ಖರೀದಿಸಲು ₹15,000 ಪ್ರೋತ್ಸಾಹಧನ ನೀಡಲಾಗುತ್ತಿದೆ. ಇದರೊಂದಿಗೆ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿಯನ್ನೂ ನೀಡಲಾಗುತ್ತಿದ್ದು, ತರಬೇತಿ ಅವಧಿಯಲ್ಲಿ ಪ್ರತಿದಿನ ಭತ್ಯೆಯೂ ದೊರೆಯಲಿದೆ. ಅರ್ಹತೆ ಮತ್ತು ಸೌಲಭ್ಯಗಳು: ಅರ್ಜಿ ಸಲ್ಲಿಸುವ ಮಹಿಳೆಯರು ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಕುಟುಂಬದಲ್ಲಿ ಯಾರೂ ಸರ್ಕಾರಿ ನೌಕರರಿರಬಾರದು ಅಥವಾ ಆದಾಯ ತೆರಿಗೆ
Feb 21 min read


ದ್ವೇಷ ಭಾಷಣ ತಡೆ ವಿಧೇಯಕ: ರಾಜ್ಯಪಾಲರಿಂದ ರಾಷ್ಟ್ರಪತಿಗಳ ಪರಿಶೀಲನೆಗೆ ರವಾನೆ
ಬೆಂಗಳೂರು: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಗದ್ದಲದ ನಡುವೆ ಅಂಗೀಕಾರವಾಗಿದ್ದ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ) ವಿಧೇಯಕ’ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಲು ನಿರಾಕರಿಸಿದ್ದಾರೆ. ಬದಲಿಗೆ, ಈ ವಿಧೇಯಕವನ್ನು ರಾಷ್ಟ್ರಪತಿಗಳ ಪರಿಶೀಲನೆಗೆ ರವಾನಿಸುವ ಮೂಲಕ ಸರ್ಕಾರಕ್ಕೆ ಹಿನ್ನಡೆ ನೀಡಿದ್ದಾರೆ. ಈ ವಿಧೇಯಕದಲ್ಲಿ ದ್ವೇಷ ಭಾಷಣದ ವ್ಯಾಖ್ಯಾನ ಅಸ್ಪಷ್ಟವಾಗಿದೆ ಮತ್ತು ಇದರಿಂದ ಧರ್ಮ ಅಥವಾ ವ್ಯಕ್ತಿಗಳ ಮೇಲೆ ಪೂರ್ವಾಗ್ರಹ ಪೀಡಿತ ಕ್ರಮಗಳು ಜರುಗುವ ಸಾಧ್ಯತೆಯಿದೆ ಎಂದು ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಟ್ಟು 29 ಪ್ರಮುಖ ಕಾರಣಗಳನ್ನು ಉಲ್ಲೇ
Feb 21 min read


ಸಿಗರೇಟ್ ಬೆಲೆ ಏರಿಕೆ ಬಿಸಿ
ಬೆಂಗಳೂರು: ಧೂಮಪಾನಿಗಳಿಗೆ ಬೆಲೆ ಏರಿಕೆಯ ಶಾಕ್ ಎದುರಾಗಿದೆ. ಕೇಂದ್ರ ಸರ್ಕಾರವು ಹೆಚ್ಚುವರಿ ಅಬಕಾರಿ ಸುಂಕವನ್ನು ಜಾರಿಗೆ ತಂದ ಬೆನ್ನಲ್ಲೇ, ಮಾರುಕಟ್ಟೆಯಲ್ಲಿ ಸಿಗರೇಟ್ ಬೆಲೆ ಗಣನೀಯವಾಗಿ ಏರಿಕೆಯಾಗಿದೆ. ವಿವಿಧ ಬ್ರ್ಯಾಂಡ್ಗಳ ಸಿಗರೇಟ್ ಪ್ಯಾಕ್ಗಳ ಮೇಲೆ ಕನಿಷ್ಠ 22 ರೂ.ನಿಂದ ಗರಿಷ್ಠ 55 ರೂ.ವರೆಗೆ ಬೆಲೆ ಏರಿಕೆ ಮಾಡಲಾಗಿದೆ. ಸರ್ಕಾರದ ಆದೇಶ ಹೊರಬಿದ್ದ ತಕ್ಷಣವೇ ವಿತರಕರು ಹಳೆಯ ಸ್ಟಾಕ್ಗಳಿಗೂ ಹೊಸ ದರವನ್ನು ನಿಗದಿಪಡಿಸಿ ಮಾರಾಟ ಆರಂಭಿಸಿದ್ದಾರೆ. ಇಂದಿನಿಂದ ತಯಾರಿಕಾ ಕಂಪನಿಗಳು ಹೊಸ MRP (ಗರಿಷ್ಠ ಮಾರಾಟ ಬೆಲೆ) ಹೊಂದಿರುವ ಪ್ಯಾಕ್ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ. ದೇಶ
Feb 21 min read


ಭಾರತ ವಿರುದ್ಧದ ಪಂದ್ಯಕ್ಕೆ ಪಾಕ್ ಬಹಿಷ್ಕಾರ: ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ, ಪಿಸಿಬಿಗೆ 4,500 ಕೋಟಿ ನಷ್ಟದ ಭೀತಿ!
ದುಬೈ: ಕ್ರಿಕೆಟ್ ಲೋಕದ ಹೈವೋಲ್ಟೇಜ್ ಕದನ ಎಂದೇ ಖ್ಯಾತಿಯಾಗಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕೆ ಈಗ ಗ್ರಹಣ ಹಿಡಿದಿದೆ. ಬಾಂಗ್ಲಾದೇಶದ ಪಂದ್ಯಗಳನ್ನು ಸ್ಥಳಾಂತರಿಸಲು ಐಸಿಸಿ ನಿರಾಕರಿಸಿದ್ದನ್ನು ವಿರೋಧಿಸಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಅಧಿಕೃತವಾಗಿ ಘೋಷಿಸಿದೆ. ಈ ಹಠಮಾರಿ ನಿರ್ಧಾರದಿಂದ ಪಾಕಿಸ್ತಾನಕ್ಕೆ ಅಂಕಗಳ ನಷ್ಟ ಮಾತ್ರವಲ್ಲದೆ, ಐಸಿಸಿಯಿಂದ ಅಮಾನತುಗೊಳ್ಳುವ ಮತ್ತು ಅಂತಾರಾಷ್ಟ್ರೀಯ ಮಾನ್ಯತೆ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈ ರಾಜಕೀಯ ಪ್ರೇರಿತ ನಿರ್ಧಾರವು ಕ್ರೀಡಾ ಜಗತ್ತಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿ
Feb 21 min read


ಉದಯಪುರದಲ್ಲಿ ರಶ್ಮಿಕಾ-ವಿಜಯ್ ಅದ್ಧೂರಿ ವಿವಾಹ? ಹೋಟೆಲ್ ಸಿದ್ಧತೆಯ ವೀಡಿಯೋ ಲೀಕ್!
ಹೈದರಾಬಾದ್: ಟಾಲಿವುಡ್ನ ಬಹುನಿರೀಕ್ಷಿತ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಂತಿಮವಾಗಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಸಿನಿಕ್ರಿಯೆ ಪಡೆದಿದೆ. ರಾಜಸ್ಥಾನದ ಉದಯಪುರದಲ್ಲಿರುವ ಐತಿಹಾಸಿಕ 'ಸಿಟಿ ಪ್ಯಾಲೇಸ್' ಹೋಟೆಲ್ನಲ್ಲಿ ಇವರ ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳೆದ ಐದಾರು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ, ಕಳೆದ ವರ್ಷವೇ ವಿಜಯ್ ನಿವಾಸದಲ್ಲಿ ಅತ್ಯಂತ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬ ಮಾತುಗಳು ಈಗ ದಟ್ಟವಾಗಿವೆ. ಮದುವೆಯ ವಿಚಾರವ
Feb 21 min read


ಸುಳ್ಯಕ್ಕೆ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ನೇಮಕ: ಇಂದು ಅಧಿಕಾರ ಸ್ವೀಕಾರ
ಸುಳ್ಯ: ಕಳೆದ ಒಂದು ವರ್ಷದಿಂದ ಖಾಯಂ ಕ್ಷೇತ್ರ ಶಿಕ್ಷಣಾಧಿಕಾರಿಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದ ಸುಳ್ಯ ತಾಲೂಕಿಗೆ ಕೊನೆಗೂ ನೂತನ ಬಿಇಒ (BEO) ನೇಮಕವಾಗಿದೆ. ಯಾದಗಿರಿ ಜಿಲ್ಲೆಯ ಶಹಪೂರ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಯಮನೂರಪ್ಪ ಸಿದ್ದಪ್ಪ ಹರಗಿ (ವೈ.ಎಸ್. ಹರಗಿ) ಅವರನ್ನು ಸುಳ್ಯಕ್ಕೆ ವರ್ಗಾವಣೆಗೊಳಿಸಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ನೂತನ ಅಧಿಕಾರಿ ವೈ.ಎಸ್. ಹರಗಿ ಅವರು ಫೆಬ್ರವರಿ 2ರಂದು (ಇಂದು) ಸುಳ್ಯಕ್ಕೆ ಆಗಮಿಸಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ. ಸುಳ್ಯ ತಾಲೂಕಿನಲ್ಲಿ ದೀರ್ಘಕಾಲದಿಂದ ಶೈಕ್ಷಣಿಕ ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿದ್ದ
Feb 21 min read


'ಅಭಿವೃದ್ಧಿ ಎಕ್ಸ್ಪ್ರೆಸ್'ಗೆ ವೇಗ; ಫಾಸ್ಟ್ಟ್ಯಾಗ್ ಸವಾರರಿಗೆ ಬಿಗ್ ರಿಲೀಫ್!
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2026-27ನೇ ಸಾಲಿನ ಬಜೆಟ್ ಮಂಡಿಸಿದ್ದು, ಭಾರತದ ಆರ್ಥಿಕತೆಯನ್ನು ಮೂರನೇ ಅತಿದೊಡ್ಡ ಸ್ಥಾನಕ್ಕೆ ಏರಿಸುವ ದಿಕ್ಸೂಚಿ ನೀಡಿದ್ದಾರೆ. ಒಟ್ಟು 53.47 ಲಕ್ಷ ಕೋಟಿ ರೂಪಾಯಿ ಗಾತ್ರದ ಈ ಬಜೆಟ್ನಲ್ಲಿ ಸಾರಿಗೆ ಮತ್ತು ರಕ್ಷಣಾ ಕ್ಷೇತ್ರಕ್ಕೆ ಬಂಪರ್ ಅನುದಾನ ಹಂಚಿಕೆ ಮಾಡಲಾಗಿದೆ. ಬಜೆಟ್ ಬೆನ್ನಲ್ಲೇ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೊಡ್ಡ ಸಿಹಿಸುದ್ದಿ ನೀಡಿದೆ. ಫೆಬ್ರವರಿ 1 ರಿಂದ ಜಾರಿಗೆ ಬರುವಂತೆ ಫಾಸ್ಟ್ಟ್ಯಾಗ್ ಕೆವೈಸಿ (KYC) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಇನ
Feb 11 min read


ಬಜೆಟ್ 2026: 'ವಿಕಸಿತ ಭಾರತ'ದ ಸಂಕಲ್ಪಕ್ಕೆ ಬಲ ತುಂಬುವ ಬಜೆಟ್ - ಪ್ರಧಾನಿ ಮೋದಿ ಶ್ಲಾಘನೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026-27ನೇ ಸಾಲಿನ ಬಜೆಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ಈ ಬಜೆಟ್ ಭಾರತದ 'ಅಭಿವೃದ್ಧಿ ಎಕ್ಸ್ಪ್ರೆಸ್’ಗೆ ಹೊಸ ಶಕ್ತಿ ಮತ್ತು ವೇಗವನ್ನು ನೀಡಲಿದೆ" ಎಂದು ಅವರು ಬಣ್ಣಿಸಿದ್ದಾರೆ. ಬಜೆಟ್ ಕುರಿತು ಮಾತನಾಡಿದ ಪ್ರಧಾನಿಯವರು, "ನಮ್ಮ ಸರ್ಕಾರವು ಕೇವಲ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಿಂದ ತೃಪ್ತವಾಗಿಲ್ಲ. ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಗುರಿಯನ್ನು ಈ ಬಜೆಟ್ ಹೊಂದಿದೆ. ಇದು 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಮತ್ತು 2047ರ ವೇಳೆಗೆ 'ವಿ
Feb 11 min read


ಬಜೆಟ್ 2026: ಮದ್ಯಪ್ರಿಯರಿಗೆ ಶಾಕ್; ಕ್ಯಾನ್ಸರ್ ಔಷಧಿ, ಎಲೆಕ್ಟ್ರಾನಿಕ್ಸ್ ಅಗ್ಗ!
ಇಂದಿನ ಬಜೆಟ್ನಲ್ಲಿ ರಾಜ್ಯದ ಜನತೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರವು ಮದ್ಯದ ದರವನ್ನು ಏರಿಕೆ ಮಾಡುವ ಮೂಲಕ ಮದ್ಯಪ್ರಿಯರಿಗೆ ದೊಡ್ಡ ಶಾಕ್ ನೀಡಿದೆ. ಇದರೊಂದಿಗೆ ಬೀಡಿ ದರದಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ. ಆದರೆ, ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಹಲವು ರಿಯಾಯಿತಿಗಳನ್ನು ಘೋಷಿಸಲಾಗಿದೆ. ವಿಶೇಷವಾಗಿ ಕ್ಯಾನ್ಸರ್ ಮತ್ತು ಸಕ್ಕರೆ ಕಾಯಿಲೆಯ ಔಷಧಿಗಳ ಬೆಲೆ ಇಳಿಕೆಯಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ನಿರಾಳತೆ ತಂದಿದೆ. ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಮೇಲಿನ TCS ಶೇ. 2ರಷ್ಟು ಕಡಿತಗೊಳಿಸಲಾಗಿದೆ. ಯಾವುದು ಅಗ್ಗ? * ಎಲೆಕ್ಟ್ರಾನಿಕ್ಸ್: ಲೀಥಿಯಂ ಬ್ಯಾಟರಿ, ಮೈಕ್ರೋವೇವ
Feb 11 min read


ಕೇಂದ್ರ ಬಜೆಟ್ 2026 ಪ್ರಮುಖ ಪಟ್ಟಿ
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು ಮಂಡಿಸಿದ 2026ರ ಕೇಂದ್ರ ಬಜೆಟ್ನಲ್ಲಿ ದೇಶದ ಮೂಲಸೌಕರ್ಯ ಮತ್ತು ತಂತ್ರಜ್ಞಾನ ವಲಯಕ್ಕೆ ಕ್ರಾಂತಿಕಾರಿ ವೇಗ ನೀಡಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಕರ್ನಾಟಕಕ್ಕೆ ಭರ್ಜರಿ ಕೊಡುಗೆ ಸಿಕ್ಕಿದ್ದು, ಒಟ್ಟು 7 ಹೈಸ್ಪೀಡ್ ಬುಲೆಟ್ ರೈಲು ಕಾರಿಡಾರ್ಗಳ ಪೈಕಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೈದರಾಬಾದ್-ಬೆಂಗಳೂರು ಮತ್ತು ಚೆನ್ನೈ-ಬೆಂಗಳೂರು ಮಾರ್ಗಗಳನ್ನು ಘೋಷಿಸಲಾಗಿದೆ. ಇದು ದಕ್ಷಿಣ ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಸಂಚಲನ ಮೂಡಿಸಲಿದೆ. ತಾಂತ್ರಿಕವಾಗಿ ಭಾರತವನ್ನು ಬಲಿಷ್ಠಗೊಳಿಸಲು ಸೆಮಿಕಂಡಕ್ಟರ್ 2.0 ಮಿಷನ್ ಹಾಗೂ ಔಷಧೀಯ ಕ್
Feb 11 min read


ಬಂಗಾರ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ: ಸತತ ಮೂರನೇ ದಿನವೂ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ!
ಹಳದಿ ಲೋಹದ ಖರೀದಿಗೆ ಕಾಯುತ್ತಿದ್ದ ಗ್ರಾಹಕರಿಗೆ ಮಾರುಕಟ್ಟೆ ದೊಡ್ಡ ಉಡುಗೊರೆ ನೀಡಿದೆ. ಕಳೆದ ಎರಡು ದಿನಗಳಿಂದ ಇಳಿಕೆ ಹಾದಿಯಲ್ಲಿದ್ದ ಚಿನ್ನದ ದರ ಇಂದು ಕೂಡ ಗಣನೀಯವಾಗಿ ಇಳಿಕೆಯಾಗಿದ್ದು, ಬಂಗಾರ ಪ್ರಿಯರಲ್ಲಿ ಹರ್ಷ ತಂದಿದೆ. ಬೆಲೆ ಇಳಿಕೆಯಾಗುತ್ತಿದ್ದಂತೆ ಜುವೆಲ್ಲರಿ ಮಳಿಗೆಗಳತ್ತ ಜನಸಾಗರವೇ ಹರಿಯುತ್ತಿದೆ. ಇಂದು 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆಯಲ್ಲಿ 790 ರೂಪಾಯಿ ಇಳಿಕೆಯಾಗಿದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 862 ರೂಪಾಯಿಗಳಷ್ಟು ಕುಸಿದಿದೆ. ಅಚ್ಚರಿಯ ಬೆಳವಣಿಗೆ ಎಂಬಂತೆ, ಬೆಳ್ಳಿಯ ದರದಲ್ಲಿ ಏಕಾಏಕಿ 45,000 ರೂಪಾಯಿಗಳಷ್ಟು ಬೃಹತ್ ಕುಸಿತ ಕಂಡುಬಂದಿದೆ. ಜನವರಿ 30 ಮತ್
Feb 11 min read


ಫಿಲಂ ಚೇಂಬರ್ ನೂತನ ಅಧ್ಯಕ್ಷರಾಗಿ ಹಿರಿಯ ನಟಿ ಜಯಮಾಲಾ ಆಯ್ಕೆ: ಭರ್ಜರಿ ಗೆಲುವು
ಬೆಂಗಳೂರು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (ಫಿಲಂ ಚೇಂಬರ್) ಪ್ರತಿಷ್ಠಿತ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ನಟಿ ಜಯಮಾಲಾ ಅವರು ಭರ್ಜರಿ ಜಯ ಸಾಧಿಸಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಈ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಭಾ.ಮಾ ಹರೀಶ್ ಅವರ ವಿರುದ್ಧ 170 ಮತಗಳ ಬೃಹತ್ ಅಂತರದಿಂದ ಗೆಲುವು ದಾಖಲಿಸುವ ಮೂಲಕ ಸ್ಯಾಂಡಲ್ವುಡ್ನ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಚಲಾವಣೆಯಾದ ಒಟ್ಟು 813 ಮತಗಳ ಪೈಕಿ ಜಯಮಾಲಾ ಅವರು 512 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾದರು. ಇನ್ನು ಎದುರಾಳಿ ಅಭ್ಯರ್ಥಿ ಭಾ.ಮಾ ಹರೀಶ್ ಅವರು ಕೇವಲ 334 ಮತಗಳನ್ನು ಪಡ
Feb 11 min read


ಇಂದು ಕೇಂದ್ರ ಬಜೆಟ್: ಸತತ 9ನೇ ಬಾರಿ ಇತಿಹಾಸ ನಿರ್ಮಿಸಲಿರುವ ನಿರ್ಮಲಾ ಸೀತಾರಾಮನ್
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆಬ್ರವರಿ 1) ಬೆಳಗ್ಗೆ 11 ಗಂಟೆಗೆ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಇದು ಅವರು ಮಂಡಿಸುತ್ತಿರುವ ಸತತ 9ನೇ ಬಜೆಟ್ ಆಗಿದ್ದು, ಈ ಮೂಲಕ ಹೊಸ ದಾಖಲೆ ಬರೆಯುತ್ತಿದ್ದಾರೆ. ಈ ಬಾರಿಯ ಬಜೆಟ್ ಭಾನುವಾರ ಮಂಡನೆಯಾಗುತ್ತಿರುವುದು ವಿಶೇಷ. ವಿಶ್ವದ ಅತಿ ವೇಗದ ಆರ್ಥಿಕತೆಯ ಗತಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ರಕ್ಷಣೆ, ಮೂಲಸೌಕರ್ಯ, ರೈಲ್ವೆ ಮತ್ತು ಇಂಧನ ವಲಯಗಳಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಯಿದೆ. ಮಧ್ಯಮ ವರ್ಗದವರು ಆದಾಯ ತೆರಿಗೆ ವಿನಾಯಿತಿ ಮತ್ತು ಅಗ್ಗದ ಮನೆಗಳ ಯೋಜನೆಗಳ ಬಗ್ಗೆ ನಿರೀಕ್ಷ
Feb 11 min read
Archive
bottom of page



