ಉದಯಪುರದಲ್ಲಿ ರಶ್ಮಿಕಾ-ವಿಜಯ್ ಅದ್ಧೂರಿ ವಿವಾಹ? ಹೋಟೆಲ್ ಸಿದ್ಧತೆಯ ವೀಡಿಯೋ ಲೀಕ್!

ಹೈದರಾಬಾದ್: ಟಾಲಿವುಡ್‌ನ ಬಹುನಿರೀಕ್ಷಿತ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅಂತಿಮವಾಗಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ಸುದ್ದಿ ಸಿನಿಕ್ರಿಯೆ ಪಡೆದಿದೆ. ರಾಜಸ್ಥಾನದ ಉದಯಪುರದಲ್ಲಿರುವ ಐತಿಹಾಸಿಕ 'ಸಿಟಿ ಪ್ಯಾಲೇಸ್' ಹೋಟೆಲ್‌ನಲ್ಲಿ ಇವರ ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಳೆದ ಐದಾರು ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ, ಕಳೆದ ವರ್ಷವೇ ವಿಜಯ್ ನಿವಾಸದಲ್ಲಿ ಅತ್ಯಂತ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂಬ ಮಾತುಗಳು ಈಗ ದಟ್ಟವಾಗಿವೆ.
ಮದುವೆಯ ವಿಚಾರವನ್ನು ಗುಟ್ಟಾಗಿಡಲು ಈ ಜೋಡಿ ಸಾಕಷ್ಟು ಪ್ರಯತ್ನ ನಡೆಸಿದೆಯಾದರೂ, ಲೀಕ್ ಆಗಿರುವ ವೀಡಿಯೋಗಳು ಅದ್ದೂರಿ ಅಲಂಕಾರ ಮತ್ತು ಮದುವೆಯ ಸಿದ್ಧತೆಗಳನ್ನು ಬಹಿರಂಗಪಡಿಸಿವೆ. ಮೊದಲು ಇವರ ವಿವಾಹವು ಫೆಬ್ರವರಿ 26 ರಂದು ನಡೆಯಲಿದೆ ಎಂದು ವರದಿಯಾಗಿತ್ತು. ಆದರೆ, ವೈರಲ್ ಆಗಿರುವ ಲೀಕ್ಡ್ ವೀಡಿಯೋಗಳ ಪ್ರಕಾರ, ಫೆಬ್ರವರಿ 2 ರಂದೇ ಅಂದರೆ ಇಂದೇ ವಿವಾಹ ಮಹೋತ್ಸವ ಜರುಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮಾಧ್ಯಮಗಳ ಕಣ್ತಪ್ಪಿಸಲು ಮತ್ತು ಗೌಪ್ಯತೆ ಕಾಪಾಡಲು ಇವರು ದಿನಾಂಕದ ವಿಚಾರದಲ್ಲಿ ತಂತ್ರ ಹೂಡಿರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಸ್ಟಾರ್ ಜೋಡಿಯ ಮದುವೆಗೆ ಕೇವಲ ಆಪ್ತರು ಮತ್ತು ಕುಟುಂಬದ ಸದಸ್ಯರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಸೆಲೆಬ್ರೆಟಿಗಳ ದಂಡೇ ಉದಯಪುರಕ್ಕೆ ಹರಿದುಬರುವ ನಿರೀಕ್ಷೆಯಿದೆ. ಅಧಿಕೃತವಾಗಿ ಇಬ್ಬರೂ ಯಾವುದೇ ಮಾಹಿತಿ ಹಂಚಿಕೊಳ್ಳದಿದ್ದರೂ, ಅಭಿಮಾನಿಗಳು ಮಾತ್ರ ತಮ್ಮ ನೆಚ್ಚಿನ ಜೋಡಿಯ ಮದುವೆಯ ಸಂಭ್ರಮವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆಚರಿಸುತ್ತಿದ್ದಾರೆ. ಸದ್ಯ ಉದಯಪುರದ ಸಿಟಿ ಪ್ಯಾಲೇಸ್ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಈ 'ಸೀಕ್ರೆಟ್ ವೆಡ್ಡಿಂಗ್' ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.







Comments