ಮಂಜೇಶ್ವರ: ತಂದೆಯ ಅಟ್ಟಹಾಸಕ್ಕೆ ಬಲಿಯಾದ ಮಗಳು; ಚಿಕಿತ್ಸೆ ಫಲಿಸದೆ ದೊಡ್ಡಪ್ಪನೂ ಸಾವು
- Feb 3
- 1 min read

ಮಂಜೇಶ್ವರ: ಕುಂಜತ್ತೂರು ತೂಮಿನಾಡಿನಲ್ಲಿ ನಡೆದ ಕೌಟುಂಬಿಕ ಕಲಹದ ಭೀಕರ ಘಟನೆಯಲ್ಲಿ, ತಂದೆಯ ಕೃತ್ಯಕ್ಕೆ ಮಗಳು ಬಲಿಯಾದ ಬೆನ್ನಲ್ಲೇ ಗಂಭೀರವಾಗಿ ಗಾಯಗೊಂಡಿದ್ದ ದೊಡ್ಡಪ್ಪ ಶೇಕುಂಞ(50) ಅವರು ಮಂಗಳವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದರೊಂದಿಗೆ ಈ ಪ್ರಕರಣದಲ್ಲಿ ಸಾವಿನ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
ಸೋಮವಾರ ಸಂಜೆ ನಡೆದ ಜಗಳದ ವೇಳೆ ಆರೋಪಿ ಉಮರ್ ತನ್ನ ಸಂಬಂಧಿಕರ ಮೇಲೆ ಕತ್ತಿಯಿಂದ ಹಲ್ಲೆ ಮಾಡಲು ಮುಂದಾಗಿದ್ದನು. ಈ ಸಂದರ್ಭದಲ್ಲಿ ಗಲಾಟೆ ತಡೆಯಲು ಅಡ್ಡಬಂದ ಪುತ್ರಿ ಜುಮೈರಾ (18) ತಂದೆಯ ಕೃತ್ಯಕ್ಕೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಳು. ಹಲ್ಲೆ ತಡೆಯಲು ಬಂದ ಉಮರ್‌ನ ಅಣ್ಣ ಶೇಕುಂಞ ಅವರಿಗೂ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ಉಮರ್‌ನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.







Comments