top of page
News Articles
Sathyapatha News Plus
ಅಶೌಚ ಅವಧಿ ಕಡಿತ: ಕಟೀಲು ನಿರ್ಣಯಕ್ಕೆ ವಿದ್ವಾಂಸರ ಸಮ್ಮತಿ
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಭ್ರಾಮರೀವನದಲ್ಲಿ ಭಾನುವಾರ ನಡೆದ ಅಶೌಚ ನಿರ್ಣಯ ಗೋಷ್ಠಿಯಲ್ಲಿ, ಜನನ ಮತ್ತು ಮರಣದ ಸಂದರ್ಭದಲ್ಲಿ ಅನುಸರಿಸಲಾಗುವ 10 ದಿನಗಳ ಅಶೌಚ (ಸೂತಕ) ಅವಧಿಯನ್ನು ಮೂರು ದಿನಗಳಿಗೆ ಮಿತಿಗೊಳಿಸಲು ನಿರ್ಣಯಿಸಲಾಯಿತು. ಈ ನಿರ್ಣಯವು ನಾಲ್ಕರಿಂದ ಏಳು ತಲೆಮಾರುವರೆಗಿನ ಸೂತಕವನ್ನು ಸ್ಮೃತಿ ನಿರ್ದೇಶನದಂತೆ ಈ ಕಾಲಮಾನಕ್ಕೆ ಅನುಗುಣವಾಗಿ ಶಾಸ್ತ್ರದ ಚೌಕಟ್ಟಿನಲ್ಲಿ ಮಾರ್ಪಡಿಸಿದೆ. ದೇಶಾಂತರ ನಿರ್ಣಯ ಮತ್ತು ಸಪಿಂಡಾದಿ ವಿಚಾರಗಳ ಕುರಿತು ಗೋಷ್ಠಿಯಲ್ಲಿ ಚರ್ಚೆ ನಡೆಸಲಾಯಿತು. ಈ ಮಹತ್ವದ ನಿರ್ಧಾರದ ಬಗ್ಗೆ ವಿಮರ್ಶೆ ನಡೆಸಲು 15 ದಿನಗಳ ಕಾಲಾವಕಾಶ ನೀಡಲಾಗಿದೆ. ವಿದ್ವದ
Nov 131 min read


ದೆಹಲಿಯಲ್ಲಿ ಮತ್ತೊಂದು ಸ್ಫೋಟ: ಹೆಚ್ಚಿದ ಆತಂಕ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭದ್ರತಾ ಆತಂಕ ಮತ್ತಷ್ಟು ಹೆಚ್ಚಿದೆ. ಕೆಂಪುಕೋಟೆ ಮೆಟ್ರೋ ನಿಲ್ದಾಣದ ಬಳಿ ನಡೆದ ಕಾರು ಬಾಂಬ್ ಸ್ಫೋಟದ ಘಟನೆ ಮಾಸುವ ಮುನ್ನವೇ ನಗರದ ಮತ್ತೊಂದು ಭಾಗದಲ್ಲಿ ಭಾರೀ ಸ್ಫೋಟ ಸಂಭವಿಸಿದೆ. ಈ ಸರಣಿ ಘಟನೆಗಳು ದೆಹಲಿಯ ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಸಿವೆ ಮತ್ತು ಭದ್ರತಾ ಸಂಸ್ಥೆಗಳು ಮತ್ತಷ್ಟು ಕಟ್ಟೆಚ್ಚರ ವಹಿಸುವಂತೆ ಮಾಡಿವೆ. ಈ ಎರಡೂ ಸ್ಫೋಟಗಳ ಹಿಂದೆ ಯಾರ ಕೈವಾಡವಿದೆ ಮತ್ತು ಇದರ ಉದ್ದೇಶವೇನು ಎಂಬ ಬಗ್ಗೆ ತನಿಖೆ ತೀವ್ರಗೊಂಡಿದೆ. ದೆಹಲಿಯ ಪ್ರಮುಖ ಪ್ರದೇಶಗಳಲ್ಲಿ ಒಂದಾದ ಮಹಿಪಾಲ್ಪುರದಲ್ಲಿರುವ ರ್ಯಾಡಿಸನ್ ಹೋಟೆಲ್ ಬಳಿ ಎರಡನೇ ಸ್ಫೋಟ ಸಂಭವಿಸಿದೆ. ಇಂದು
Nov 131 min read


ಉಪ್ಪಿನಂಗಡಿ: ಕೀಟನಾಶಕ ಸೇವಿಸಿ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ
ಪ್ರೌಢ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ಉಪ್ಪಿನಂಗಡಿ ಸಮೀಪದ ಇಳಂತಿಲ ಗ್ರಾಮದಲ್ಲಿ ನಡೆದಿದೆ. ಈ ಸಾವಿನ ಹಿಂದೆ ಕಿರುಕುಳದ ಶಂಕೆ ವ್ಯಕ್ತವಾಗಿದ್ದು, ಮೃತಳ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಬಾಲಕಿಯನ್ನು ಇಳಂತಿಲ ಗ್ರಾಮದ ಪಾರಡ್ಕ ಮನೆಯ ನಿವಾಸಿ ಹರ್ಷಿತಾ (15 ವರ್ಷ) ಎಂದು ಗುರುತಿಸಲಾಗಿದೆ. ಈಕೆ ಉಪ್ಪಿನಂಗಡಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದಳು. ಘಟನೆಯ ವಿವರ ದಿನಾಂಕ ನವೆಂಬರ್ 4, 2025 ರಂದು ಹರ್ಷಿತಾ ತಲೆನೋವು ಎಂದು ಶಾಲೆಗೆ ಹೋಗದೆ ಮನೆಯಲ್ಲಿ ಉಳಿದಿದ್ದಳು.
Nov 121 min read


ಮಂಗಳೂರು: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ; ಇಬ್ಬರು ಆರೋಪಿಗಳ ಬಂಧನ
ಕಂಕನಾಡಿ ನಗರದಲ್ಲಿ ಎನ್ಡಿಪಿಎಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಂಗಳೂರು: ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಕಂಕನಾಡಿ ನಗರ ಪೊಲೀಸರು, ನಗರ ವ್ಯಾಪ್ತಿಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಸಾರ್ವಜನಿಕವಾಗಿ ಗಾಂಜಾ ಸೇವನೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಕಂಕನಾಡಿ ನಗರ ಠಾಣೆಯ ಪೊಲೀಸರು ಮೊದಲು ಎಕ್ಕೂರು ಮೈದಾನದ ಬಳಿ ದಾಳಿ ನಡೆಸಿದ್ದು, ಅಲ್ಲಿ ಹರಿಪ್ರಸಾದ್ ಎಂಬಾತನನ್ನು ಬಂಧಿಸಿದ್ದಾರೆ. ಇದಾದ ನಂತರ ಪಡೀಲ್ ಬ್ರಿಡ್ಜ್ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಮುಹಮ್ಮದ್ ಶಾರೂಕ್ ಎಂಬ ಇನ್ನೊಬ್ಬ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. > ಬಂಧಿತರನ್
Nov 121 min read


ದೆಹಲಿ ಕೆಂಪು ಕೋಟೆ ಸ್ಫೋಟ ಪ್ರಕರಣ: ಸ್ಫೋಟಕ್ಕೂ ಮುನ್ನ ಶಂಕಿತನಿದ್ದ ಕಾರಿನ ವಿಡಿಯೋ ಬಿಡುಗಡೆ
ದೆಹಲಿಯ ಐತಿಹಾಸಿಕ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹತ್ವದ ಬೆಳವಣಿಗೆಯಾಗಿದ್ದು, ಸ್ಫೋಟಕ್ಕೆ ಒಳಗಾದ ಕಾರಿನೊಳಗೆ ಶಂಕಿತ ವ್ಯಕ್ತಿ ಇರುವ ವಿಡಿಯೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಸೋಮವಾರ ಸಂಜೆ ನಡೆದ ಈ ಪ್ರಬಲ ಸ್ಫೋಟದಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಇದೀಗ ಪ್ರಕರಣದ ತನಿಖೆ ತೀವ್ರಗೊಂಡಿರುವ ಬೆನ್ನಲ್ಲೇ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಹೊಸ ಫೋಟೋಗಳು ಮತ್ತು ವೀಡಿಯೊವೊಂದು ಹೊರಬಂದಿದೆ. ಈ ಘಟನೆಯು ದೇಶಾದ್ಯಂತ ಆತಂಕ ಮೂಡಿಸಿದ್ದು, ದೆಹಲಿ ಪೊಲೀಸರು ಹಾಗೂ ಭದ್ರತಾ ಏಜೆನ್ಸಿಗಳು ಪ್ರಕರಣವನ್ನು ಗಂ
Nov 111 min read


ನಟ ಧರ್ಮೇಂದ್ರ ಆರೋಗ್ಯ ಸ್ಥಿರ: ವದಂತಿಗಳಿಗೆ ತೆರೆ ಎಳೆದ ಇಶಾ ಡಿಯೋಲ್
ಇತ್ತೀಚೆಗೆ ಬಾಲಿವುಡ್ನ ಹಿರಿಯ ನಟ ಧರ್ಮೇಂದ್ರ ಅವರ ಆರೋಗ್ಯದ ಕುರಿತು ಹಬ್ಬಿದ್ದ ವದಂತಿಗಳಿಗೆ ಅವರ ಪುತ್ರಿ, ನಟಿ ಇಶಾ ಡಿಯೋಲ್ ತೆರೆ ಎಳೆದಿದ್ದಾರೆ. ನಟ ನಿಧನರಾಗಿದ್ದಾರೆ ಎಂಬ ಸುಳ್ಳು ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲು ಪ್ರಾರಂಭಿಸಿದ ನಂತರ, ಇಶಾ ಡಿಯೋಲ್ ತಕ್ಷಣವೇ ಮಧ್ಯಪ್ರವೇಶಿಸಿ, ತಮ್ಮ ತಂದೆ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ದೃಢಪಡಿಸಿದ್ದಾರೆ. ಈ ರೀತಿಯ ತಪ್ಪು ಮಾಹಿತಿಯನ್ನು ಹರಡದಂತೆ ಅವರು ಜನರಲ್ಲಿ ಹಾಗೂ ಮಾಧ್ಯಮಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ನಟಿ ಇಶಾ ಡಿಯೋಲ್ ಅವರು ಮಂಗಳವಾರ ಬೆಳಿಗ್ಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್
Nov 111 min read


ದೆಹಲಿಯ ಕೆಂಪು ಕೋಟೆ ಬಳಿ ಭೀಕರ ಕಾರು ಸ್ಫೋಟ: ಐವರ ಸಾವು, 14 ಜನರಿಗೆ ಗಾಯ
ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿ ಇಂದು (ಸೋಮವಾರ) ಸಂಜೆ ಭಾರಿ ಕಾರು ಸ್ಫೋಟ ಸಂಭವಿಸಿದ್ದು, ಇಡೀ ಪ್ರದೇಶದಲ್ಲಿ ವ್ಯಾಪಕ ಭೀತಿ ಉಂಟಾಗಿದೆ. ಈ ಭೀಕರ ಸ್ಫೋಟದಿಂದಾಗಿ ಸ್ಥಳದಲ್ಲೇ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 14 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸ್ಫೋಟ ಸಂಭವಿಸಿದ ಕೂಡಲೇ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅದರ ಪಕ್ಕದಲ್ಲಿದ್ದ ಇತರೆ ಮೂರು ವಾಹನಗಳು ಸಹ ಸುಟ್ಟು ಭಸ್ಮವಾಗಿವೆ. ಗಾಯಗೊಂಡವರನ್ನು ತಕ್ಷಣವೇ ಚಿಕಿತ್ಸೆಗಾಗಿ ಎಲ್ಎನ್ಜಿಪಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಸ್ಫೋಟದ ಬಗ್ಗೆ ಮಾ
Nov 101 min read


ವಿಟ್ಲದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ: ಪೊಲೀಸರಿಂದ ತನಿಖೆ ಆರಂಭ
ವಿಟ್ಲ: ವಿಟ್ಲ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದ ಮೋರಿಯೊಂದರಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಮೃತಪಟ್ಟ ವ್ಯಕ್ತಿಯನ್ನು ಸಮೀಪದ ಕೋಟಿಕೆರೆ ನಿವಾಸಿ ಮಂಜುನಾಥ್ (55) ಎಂದು ಗುರುತಿಸಲಾಗಿದೆ. ಅಡಿಕೆ ಗಾರ್ಬಲಿನಲ್ಲಿ ಕೆಲಸ ಮಾಡುತ್ತಿದ್ದ ಇವರು, ಭಾನುವಾರ ರಾತ್ರಿ 9.30ರ ನಂತರ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ. ಸೋಮವಾರ ಬೆಳಿಗ್ಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರಿಗೆ ಮೋರಿಯಲ್ಲಿದ್ದ ಸ್ವಲ್ಪ ನೀರಿನಲ್ಲಿ ಶವ ತೇಲುತ್ತಿರುವುದು ಕಂಡುಬಂದಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರ
Nov 101 min read


ಬಂಟ್ವಾಳದಲ್ಲಿ ಭಾರೀ ಪ್ರಮಾಣದ ಗಾಂಜಾ ವಶ: ಓರ್ವ ಆರೋಪಿಯ ಬಂಧನ
ಬಂಟ್ವಾಳ ವಲಯ ವ್ಯಾಪ್ತಿಯ ಬಿ.ಸಿ.ರೋಡ್ನಲ್ಲಿರುವ ಸೋಮಯಾಜಿ ಆಸ್ಪತ್ರೆಯ ಸಮೀಪದ ರೈಲ್ವೆ ಹಳಿಯ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಭಾರೀ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಂಡು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತನನ್ನು ಸಂತೋಷ್ ಸೋಂಕರ್ (28) ಎಂದು ಗುರುತಿಸಲಾಗಿದ್ದು, ಈತನ ಬಳಿ 1,173 ಪ್ಲಾಸ್ಟಿಕ್ ಸ್ಯಾಚೆಟ್ಗಳಲ್ಲಿ ತುಂಬಿದ ಗಾಂಜಾ ಅಮಲು ಪದಾರ್ಥ ಪತ್ತೆಯಾಗಿದೆ. ಈ ಅಕ್ರಮ ಮಾದಕವಸ್ತು ಮಾರಾಟ ದಂಧೆಗೆ ಸಂಬಂಧಿಸಿದಂತೆ ಬಂಟ್ವಾಳ ವಲಯ ಅಬಕಾರಿ ಇಲಾಖೆಯು ಪ್ರಕರಣ ದಾಖಲಿಸಿದೆ. ಒಟ್ಟು 6.590 ಕೆ.ಜಿ. ಗಾಂಜಾ ವಶ: ಬುಧವಾರದಂದು ನಡೆಸಿದ ಈ ಕಾರ್ಯಾಚರಣೆಯಲ್ಲ
Nov 91 min read


ಮಾದಕವಸ್ತು ಮಾರಾಟ: ಇಬ್ಬರ ಬಂಧನ, ₹4 ಲಕ್ಷಕ್ಕೂ ಹೆಚ್ಚು ಮೌಲ್ಯದ ಎಂಡಿಎಂಎ ವಶ!
ಮಂಗಳೂರು ನಗರದ ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ (MDMA) ಅನ್ನು ಸರಬರಾಜು ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ (CCB) ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಿಂದ ಒಟ್ಟು 24.57 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತುವಿನ ಜೊತೆಗೆ, ಮಾರಾಟಕ್ಕೆ ಬಳಸುತ್ತಿದ್ದ ವಾಹನಗಳು, ಮೊಬೈಲ್ ಫೋನ್ಗಳು ಮತ್ತು ಇತರೆ ವಸ್ತುಗಳ ಸಹಿತ ಒಟ್ಟು ₹4,35,500/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯು ಮಾದಕವಸ್ತು ಜಾಲಕ್ಕೆ ದೊಡ್ಡ ಹೊಡೆತ ನೀಡಿದ್ದು, ಪ್ರಕರಣಗಳ ಕುರಿತು ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲ
Nov 71 min read


ಕಡಬ: ನೇಣಿಗೆ ಕೊರಳೊಡ್ಡಿದ 14ರ ಬಾಲಕ
ಶಾಲಾ ಬಾಲಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದಲ್ಲಿ ನ.6 ರಂದು ನಡೆದಿದೆ. ನೂಜಿಬಾಳ್ತಿಲ ಗ್ರಾಮದ ಖಂಡಿಗದ ಲೋಕೇಶ್ ಎಂಬವರ ಪುತ್ರ ಗಗನ್(14) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಒಂಭತ್ತನೇ ತರಗತಿಯಲ್ಲಿ ಓದುತ್ತಿದ್ದ ಗಗನ್ ಗುರುವಾರ ದಿನ ಎಂದಿನಂತೆ ಶಾಲೆಗೆ ತೆರಳಿದ್ದ . ಸಂಜೆ ಮನೆಗೆ ಬಂದು ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಇರಿಸಲಾಗಿದೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರ
Nov 61 min read


ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಸಮರ್ಪಣೆಯಾಗಲಿರುವ ಬೆಳ್ಳಿರಥಕ್ಕೆ ಭವ್ಯ ಸ್ವಾಗತ
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಮರ್ಪಣೆಯಾಗಲಿರುವ ಭವ್ಯ ಬೆಳ್ಳಿರಥವು ಇಂದು (ನ. 5) ಕುಕ್ಕೆ ಕ್ಷೇತ್ರಕ್ಕೆ ಪುರಪ್ರವೇಶ ಮಾಡಲಿದೆ. ಕುರುಂಜಿಯ ಡಾ. ಕೆ.ವಿ. ರೇಣುಕಾಪ್ರಸಾದ್ ಮತ್ತು ಕುಟುಂಬದವರಿಂದ ಸಮರ್ಪಣೆಯಾಗಲಿರುವ ಈ ರಥವು ಕೋಟೇಶ್ವರದಿಂದ ಹೊರಟು ಮಂಗಳವಾರ ರಾತ್ರಿ ಸುಳ್ಯ ತಲುಪಿದ್ದು, ಅಲ್ಲಿ ರಥಕ್ಕೆ ಭಕ್ತರು ಅದ್ದೂರಿ ಸ್ವಾಗತ ನೀಡಿದ್ದಾರೆ. ಸುಳ್ಯದಲ್ಲಿ ರಾತ್ರಿ ವಾಸ್ತವ್ಯ ಹೂಡಿದ ರಥವು ಇಂದು ಬೆಳಗ್ಗೆ ಸುಳ್ಯದಿಂದ ಸುಬ್ರಹ್ಮಣ್ಯದತ್ತ ಪ್ರಯಾಣ ಮುಂದುವರಿಸಲಿದೆ. ಬೆಳ್ಳಿರಥವು ಇಂದು ಸುಳ್ಯದ ಕಾಂತಮಂಗಲದಿಂದ ಹೊರಟು ಸುಳ್ಯ, ಪೈಚಾರು, ಸೋಣಂಗೇರಿ, ದುಗ್ಗಲಡ್ಕ, ಎಲ
Nov 51 min read


ಮಂಗಳೂರಿನ ಕದ್ರಿ ಪಾರ್ಕ್ ರಸ್ತೆಗೆ 'ಟೋಲ್' ಬಿಸಿ: ಸ್ಮಾರ್ಟ್ ಸಿಟಿ ನಿರ್ಧಾರಕ್ಕೆ ಸಾರ್ವಜನಿಕ ಆಕ್ರೋಶ
ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಂಡು ಕಂಗೊಳಿಸುತ್ತಿರುವ ಮಂಗಳೂರಿನ ಕದ್ರಿ ಪಾರ್ಕ್ ರಸ್ತೆಗೆ ಇನ್ಮುಂದೆ 'ಟೋಲ್' ಮಾದರಿಯ ಪಾರ್ಕಿಂಗ್ ಶುಲ್ಕ ವಿಧಿಸಲು ಸ್ಮಾರ್ಟ್ ಸಿಟಿ ನಿರ್ಧರಿಸಿದೆ. ಸಾವಿರಾರು ಮಂದಿ ಪ್ರತಿದಿನ ವಾಯು ವಿಹಾರ ಹಾಗೂ ವಿಶ್ರಾಂತಿಗಾಗಿ ಭೇಟಿ ನೀಡುವ ಕಡಲ ತಡಿಯ ಈ ಫೇವರೇಟ್ ಸ್ಪಾಟ್ಗೆ ಜನವರಿಯಿಂದ ಶುಲ್ಕದ ಬಿಸಿ ತಟ್ಟಲಿದೆ. ಪಾರ್ಕ್ನ ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ಟೋಲ್ ಮಾದರಿಯ ವ್ಯವಸ್ಥೆ ಜಾರಿಗೆ ತರಲು ತೀರ್ಮಾನಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಕದ್ರಿ ಪಾರ್ಕ್ ರಸ್ತೆಯಲ್ಲಿ ನೂತ
Nov 51 min read


ಬೆಟ್ಟಂಪಾಡಿ: ಓವರ್ಲೋಡ್ನಿಂದ ರಸ್ತೆ ಮಧ್ಯೆ ನಿಂತ KSRTC ಬಸ್; ವಿದ್ಯಾರ್ಥಿಗಳ ಪರದಾಟ
ಬೆಟ್ಟಂಪಾಡಿ: (ಅ .28) ಬೆಟ್ಟಂಪಾಡಿ-ಕೌಡಿಚ್ಚಾರು ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಕೆಎಸ್ಆರ್ಟಿಸಿ (KSRTC) ಬಸ್ಸು ಸಾಮರ್ಥ್ಯ ಮೀರಿ ಪ್ರಯಾಣಿಕರನ್ನು ತುಂಬಿದ್ದರಿಂದಾಗಿ ರಸ್ತೆಯ ಮಧ್ಯಭಾಗದ ಏರು ದಾರಿಯಲ್ಲಿ ನಿಂತು ಹೋದ ಘಟನೆ ವರದಿಯಾಗಿದೆ. ಬೆಟ್ಟಂಪಾಡಿ-ಕೌಡಿಚ್ಚಾರು ಮಾರ್ಗದಲ್ಲಿ ಸಾಗುತ್ತಿದ್ದ ಈ ಬಸ್ನ ಸಾಮರ್ಥ್ಯಕ್ಕೆ ಮೀರಿದ ಜನರ ಸಾಗಾಟ ಇತ್ತು. ಇದರಿಂದ ಬಸ್ ಮುಂದಕ್ಕೆ ಚಲಿಸಲು ಸಾಧ್ಯವಾಗದೆ ದಾರಿಯ ಮಧ್ಯೆ ನಿಂತಿತು. ಬಸ್ ಮಧ್ಯೆ ನಿಂತ ಕಾರಣ, ಪ್ರತಿದಿನ ಈ ಮಾರ್ಗದಲ್ಲಿ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಇತರ ಪ್ರಯಾಣಿಕರು ತೀವ್ರವಾಗಿ ಪರದಾಡಬೇಕಾಯಿತು. ಈ ಪ್ರದೇಶಕ್ಕೆ
Oct 281 min read


ಹೊಸ ಕಾರಿನ ಪಬ್ಲಿಸಿಟಿಗೆ ದೈವದ ವೇಷ - ಎತ್ತ ಸಾಗುತ್ತಿದೆ ನಮ್ಮ ಕರಾವಳಿ ಸಂಸ್ಕೃತಿ?
ಹೊಸ ಕಾರಿನ ಪಬ್ಲಿಸಿಟಿಗೆ ದೈವದ ವೇಷ - ಎತ್ತ ಸಾಗುತ್ತಿದೆ ನಮ್ಮ ಕರಾವಳಿ ಸಂಸ್ಕೃತಿ? ಕರಾವಳಿ ಸಂಸ್ಕೃತಿಯ ಜೀವಾಳವಾದ ದೈವಾರಾಧನೆಯನ್ನು ಕೆಲವರು ಮನರಂಜನೆಗಾಗಿ ದುರುಪಯೋಗ ಪಡಿಸುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕಾಂತಾರ ಚಿತ್ರ ಬಿಡುಗಡೆಯಾದ ಬಳಿಕ ದೈವದ ವೇಷಭೂಷಣ, ಕೂಗು-ಅರಚಾಟ ಹಾಗೂ ನೃತ್ಯ ಶೈಲಿಯನ್ನು ಅನುಕರಿಸುತ್ತಾ ಅನೇಕರು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋಗಳನ್ನು ಹಾಕುತ್ತಿರುವುದು ಕರಾವಳಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತಾಗಿ ಅನೇಕ ದೈವ ನರ್ತಕರು ಹಾಗೂ ದೈವಾರಾಧಕರು ಈಗಾಗಲೇ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂತಾರ ಚಿತ್ರದ ಕುರಿತು ಕೂಡ ಕ
Oct 171 min read
Archive
bottom of page


