ಬೆಂಗಳೂರಿನಲ್ಲೇ ಆರ್‌ಸಿಬಿ ಅಬ್ಬರ? ಚಿನ್ನಸ್ವಾಮಿ ಕ್ರೀಡಾಂಗಣ ಉಳಿಸಿಕೊಳ್ಳಲು ಫ್ರಾಂಚೈಸಿ ಒಲವು!
- sathyapathanewsplu
- 9 hours ago
- 1 min read

ಬೆಂಗಳೂರು: ಐಪಿಎಲ್ ಅಭಿಮಾನಿಗಳಿಗೆ, ವಿಶೇಷವಾಗಿ ಆರ್‌ಸಿಬಿ (RCB) ಬೆಂಬಲಿಗರಿಗೆ ಶುಭ ಸುದ್ದಿಯೊಂದು ಕೇಳಿಬರುತ್ತಿದೆ. ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಪಂದ್ಯಗಳನ್ನು ಎಂದಿನಂತೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಆಡುವ ಇಂಗಿತ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ತಂಡಗಳ ತವರು ಮೈದಾನಗಳನ್ನು ಖಚಿತಪಡಿಸಲು ಬಿಸಿಸಿಐ (BCCI) ನೀಡಿದ್ದ ಜ. 27ರ ಗಡುವು ಮುಕ್ತಾಯಗೊಂಡಿದ್ದು, ಆರ್‌ಸಿಬಿ ತನ್ನ ಪಂದ್ಯಗಳನ್ನು ಬೆಂಗಳೂರಿನಲ್ಲೇ ಆಡುವುದಾಗಿ ತಿಳಿಸಿದೆ ಎನ್ನಲಾಗಿದೆ. ಕ್ರೀಡಾಂಗಣದ ಸುರಕ್ಷತೆ ಮತ್ತು ಇತರೆ ತಾಂತ್ರಿಕ ವಿಷಯಗಳ ಕುರಿತು ಫ್ರಾಂಚೈಸಿ ವ್ಯವಸ್ಥಾಪಕರು ಈಗಾಗಲೇ ರಾಜ್ಯ ಸರ್ಕಾರದೊಂದಿಗೆ ಸತತ ಸಂಪರ್ಕದಲ್ಲಿದ್ದಾರೆ. ಇಂದು ಅಥವಾ ನಾಳೆಯೊಳಗೆ ಸರ್ಕಾರದೊಂದಿಗೆ ಅಂತಿಮ ಸುತ್ತಿನ ಮಾತುಕತೆ ನಡೆಸಿ ಅಧಿಕೃತ ನಿರ್ಧಾರ ಹೊರಬೀಳುವ ನಿರೀಕ್ಷೆಯಿದೆ. ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದರೆ, 'ನಮ್ಮ ಬೆಂಗಳೂರು' ಮೈದಾನದಲ್ಲೇ ಮತ್ತೊಮ್ಮೆ ಆರ್‌ಸಿಬಿ ಆರ್ಭಟವನ್ನು ಕಣ್ತುಂಬಿಕೊಳ್ಳಬಹುದು.






Comments