top of page
News Articles
Sathyapatha News Plus


ಇಂದಿನ ಚಿನ್ನದ ದರ ಎಷ್ಟಿದೆ ಚೆಕ್ ಮಾಡಿ
ಡಿಸೆಂಬರ್ 22, 2025 ರಂದು ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ ₹13,418 ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ₹12,300 ಆಗಿದೆ, ಬೆಳ್ಳಿ ಬೆಲೆ ಗರಿಷ್ಠ ಮಟ್ಟ ತಲುಪಿದ್ದು ₹214 per gram ಆಗಿದೆ, ಒಟ್ಟಾರೆ ಚಿನ್ನದ ಬೆಲೆಯಲ್ಲಿ ಸಣ್ಣ ಇಳಿಕೆಯಾಗಿದೆ. ಇಂದಿನ ಚಿನ್ನದ ಬೆಲೆ (ಡಿಸೆಂಬರ್ 22, 2025): 24 ಕ್ಯಾರೆಟ್ (1 ಗ್ರಾಂ): ₹13,418 22 ಕ್ಯಾರೆಟ್ (1 ಗ್ರಾಂ): ₹12,300 ಬೆಳ್ಳಿ (1 ಗ್ರಾಂ): ₹214
Dec 22, 20251 min read


ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ: ಆರೋಗ್ಯ ಇಲಾಖೆಯಿಂದ ಹೊಸ ಮಾರ್ಗಸೂಚಿ ಪ್ರಕಟ
ಕರ್ನಾಟಕದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಸೀಸನಲ್ ಫ್ಲೂ (Seasonal Flu) ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಡಿಸೆಂಬರ್ನಿಂದ ಮಾರ್ಚ್ ಅವಧಿಯಲ್ಲಿ ಈ ಸೋಂಕು ಉಲ್ಬಣಿಸುವ ಸಾಧ್ಯತೆ ಇರುವುದರಿಂದ ರಾಜ್ಯ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮವಾಗಿ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳು ಅಲರ್ಟ್ ಆಗಿರುವಂತೆ ಸೂಚಿಸಲಾಗಿದ್ದು, ಪ್ರಯೋಗಾಲಯಗಳಲ್ಲಿ ಅಗತ್ಯ ಟೆಸ್ಟಿಂಗ್ ಕಿಟ್ಗಳನ್ನು ಸಿದ್ಧವಾಗಿಟ್ಟುಕೊಳ್ಳಲು ಹಾಗೂ ನಿರಂತರ ಮಾನಿಟರಿಂಗ್ ನಡೆಸಲು ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ. ಈ ಸೋಂಕ
Dec 22, 20251 min read


ಭಾರತೀಯ ರೈಲ್ವೆ ದರ ಹೆಚ್ಚಳ: ದೀರ್ಘ ಪ್ರಯಾಣಿಕರಿಗೆ ದರ ಏರಿಕೆ ಬಿಸಿ, ಸಾಮಾನ್ಯ ಜನರಿಗೆ ಸಮಾಧಾನ
ಹೊಸದಿಲ್ಲಿ: ಭಾರತೀಯ ರೈಲ್ವೆಯು ಡಿಸೆಂಬರ್ 26ರಿಂದ ಜಾರಿಗೆ ಬರುವಂತೆ ತನ್ನ ಪ್ರಯಾಣ ದರಗಳಲ್ಲಿ ಮಹತ್ವದ ಬದಲಾವಣೆ ಮಾಡಿದೆ. ದೀರ್ಘಾವಧಿಯ ಪ್ರಯಾಣದ ಮೇಲೆ ಕನಿಷ್ಠ ದರವನ್ನು ಹೆಚ್ಚಿಸಲು ನಿರ್ಧರಿಸಲಾಗಿದ್ದು, ನಾನ್ ಎಸಿ ಕೋಚ್ಗಳಲ್ಲಿ ಪ್ರತಿ 500 ಕಿ.ಮೀ ಪ್ರಯಾಣಕ್ಕೆ 10 ರೂ. ಹೆಚ್ಚುವರಿ ಹೊರೆ ಬೀಳಲಿದೆ. ಸಾಮಾನ್ಯ ದರ್ಜೆಯ ಪ್ರಯಾಣಿಕರಿಗೆ ಪ್ರತಿ ಕಿಲೋಮೀಟರ್ಗೆ 1 ಪೈಸೆ ಹಾಗೂ ಮೇಲ್ ಮತ್ತು ಎಕ್ಸ್ಪ್ರೆಸ್ ರೈಲುಗಳ ಎಸಿ ಮತ್ತು ನಾನ್-ಎಸಿ ಎರಡೂ ವರ್ಗಗಳಲ್ಲಿ ಪ್ರತಿ ಕಿಲೋಮೀಟರ್ಗೆ 2 ಪೈಸೆಯಷ್ಟು ದರ ಏರಿಕೆಯಾಗಲಿದೆ. ಆದರೆ, 215 ಕಿ.ಮೀ ವರೆಗಿನ ಸಾಮಾನ್ಯ ಪ್ರಯಾಣಿಕರಿಗೆ ಹಾಗೂ ಉಪನಗರ ರೈಲು
Dec 21, 20251 min read


ಮೊಟ್ಟೆಯಲ್ಲಿ ಕ್ಯಾನ್ಸರ್ಕಾರಕ ರಾಸಾಯನಿಕ ವದಂತಿ: ಆತಂಕ ಬೇಡ ಎಂದು ಎಫ್ಎಸ್ಎಸ್ಎಐ (FSSAI) ಸ್ಪಷ್ಟನೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ಕಾರಕ ರಾಸಾಯನಿಕಗಳಿವೆ ಎಂಬ ವದಂತಿಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದವು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಉಂಟಾಗಿದ್ದ ಆತಂಕವನ್ನು ದೂರ ಮಾಡಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI), ಮೊಟ್ಟೆಗಳ ಸೇವನೆಯ ಬಗ್ಗೆ ಭಯಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ಯೂಟ್ಯೂಬ್ ಚಾನಲ್ಗಳಲ್ಲಿ ಹರಿದಾಡುತ್ತಿದ್ದ ವರದಿಗಳು ಕೇವಲ ದಾರಿತಪ್ಪಿಸುವ ಮಾಹಿತಿಯಾಗಿದ್ದು, ಇವುಗಳಿಗೆ ಯಾವುದೇ ವೈಜ್ಞಾನಿಕ ಸಾಕ್ಷ್ಯಗಳಿಲ್ಲ ಎಂದು ಪ್ರಾಧಿಕಾರವು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ನಿರ್ದಿಷ್ಟ ಬ್ರ್ಯಾಂಡ್ನ ಮೊಟ್ಟೆಗ
Dec 21, 20251 min read


ರಾಜ್ಯದ ಗೃಹಲಕ್ಷ್ಮಿಯರಿಗೆ ಸಿಹಿ ಸುದ್ದಿ: ನಾಳೆಯಿಂದಲೇ ಖಾತೆಗೆ ಬರಲಿದೆ 24ನೇ ಕಂತಿನ ಹಣ
ಬೆಂಗಳೂರು: ರಾಜ್ಯದ ಕೋಟ್ಯಂತರ ಮಹಿಳೆಯರು ಕಾತರದಿಂದ ಕಾಯುತ್ತಿದ್ದ 'ಗೃಹಲಕ್ಷ್ಮಿ' ಯೋಜನೆಯ ಹಣ ಬಿಡುಗಡೆಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಮಾಹಿತಿ ನೀಡಿದ್ದಾರೆ. ಸೋಮವಾರದಿಂದಲೇ (ಡಿಸೆಂಬರ್ 22) ಅರ್ಹ ಫಲಾನುಭವಿಗಳ ಖಾತೆಗಳಿಗೆ ಯೋಜನೆಯ ಒಂದು ಕಂತಿನ ಹಣ ಜಮೆಯಾಗಲು ಆರಂಭವಾಗಲಿದೆ ಎಂದು ಅವರು ತಿಳಿಸಿದ್ದಾರೆ. ಇದು ಯೋಜನೆಯ 24ನೇ ಕಂತಿನ ಹಣವಾಗಿದ್ದು, ಹೊಸ ವರ್ಷದ ಮುನ್ನವೇ ಗೃಹಲಕ್ಷ್ಮಿಯರಿಗೆ ಸರ್ಕಾರದಿಂದ ಉಡುಗೊರೆ ಸಿಕ್ಕಂತಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, "ನಾನು ಯಾವಾಗಲೂ ಯೋಜನೆಯ ಹಣವನ್ನು ಕಂತುಗಳ ರೂಪದಲ್ಲಿ ಹೇ
Dec 21, 20251 min read


ರಾಜ್ಯಾದ್ಯಂತ ಇಂದಿನಿಂದ ಪಲ್ಸ್ ಪೋಲಿಯೋ ಅಭಿಯಾನ ಆರಂಭ: 62 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ಗುರಿ
ಬೆಂಗಳೂರು: ರಾಜ್ಯಾದ್ಯಂತ ಇಂದು (ಡಿಸೆಂಬರ್ 21) ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದ್ದು, ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲು ರಾಜ್ಯ ಸರ್ಕಾರ ಬೃಹತ್ ಸಿದ್ಧತೆ ಮಾಡಿಕೊಂಡಿದೆ. ಮೊದಲ ದಿನ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 33,258 ಬೂತ್ಗಳಲ್ಲಿ ಲಸಿಕೆ ನೀಡಲಾಗುವುದು. ಇಂದಿನ ಅಭಿಯಾನದ ನಂತರ ಮುಂದಿನ ಮೂರು ದಿನಗಳ ಕಾಲ ಲಸಿಕಾ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ, ಬೂತ್ಗಳಿಗೆ ಬರಲು ಸಾಧ್ಯವಾಗದ ಮಕ್ಕಳಿಗೆ ಲಸಿಕೆ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಈ ಬಾರಿಯ ಅಭಿಯಾನದಲ್ಲಿ ವಿಶೇಷವಾಗಿ ಗ್ರಾಮೀಣ ಭಾಗ, ನಗರ ಪ್ರದೇಶದ ಸ್ಲಂಗಳು ಹಾಗೂ ವಲಸೆ
Dec 21, 20251 min read


ಇಂದಿನ ಚಿನ್ನದ ದರ
ಇಂದು, ಡಿಸೆಂಬರ್ 21, 2025 ರಂದು ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹13,418 ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ₹12,300 ರಷ್ಟಿದೆ. ಭಾರತದಾದ್ಯಂತ ಚಿನ್ನದ ಬೆಲೆಗಳಲ್ಲಿ ಏರಿಕೆ ಮತ್ತು ಇಳಿಕೆ ಸಾಮಾನ್ಯವಾಗಿದ್ದು, ನಿನ್ನೆಗಿಂತ ಇಂದು ಬೆಲೆಗಳಲ್ಲಿ ಬದಲಾವಣೆ ಕಂಡುಬಂದಿದೆ, ಕೆಲವು ಕಡೆ ಏರಿಕೆಯಾದರೆ, ಇನ್ನು ಕೆಲವು ಕಡೆ ಇಳಿಕೆಯಾಗಿದೆ. ಬೆಂಗಳೂರಿನ ಇಂದಿನ ಚಿನ್ನದ ಬೆಲೆ (21 ಡಿಸೆಂಬರ್ 2025): 24 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹13,418. 22 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹12,300. 18 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹10,064.
Dec 21, 20251 min read


ಉಪ್ಪಿನಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ; ಆರೋಪಿ ಅಬ್ದುಲ್ ಗಫೂರ್ ಪೊಲೀಸ್ ವಶಕ್ಕೆ
ಉಪ್ಪಿನಂಗಡಿ: ಜೇನು ಕೃಷಿ ಕಲಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ ಗಂಭೀರ ಘಟನೆ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಬ್ದುಲ್ ಗಫೂರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಮೂಲದ ದೂರುದಾರ ಮಹಿಳೆಯು ತನ್ನ ಪತಿ ಮತ್ತು ಮಗಳೊಂದಿಗೆ ಕೆಲಸದ ನಿಮಿತ್ತ ಉಪ್ಪಿನಂಗಡಿ ಭಾಗದಲ್ಲಿ ವಾಸವಾಗಿದ್ದು, ಇದೀಗ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಘಟನೆಯ ವಿವರದಂತೆ, ಆರೋಪಿ ಅಬ್ದುಲ್ ಗಫೂರ್ ದೂರುದಾರರ ಅಪ್ರಾಪ್ತ ಮಗಳಿಗೆ ಜೇನು ಕೃಷಿ ತರಬೇತಿ ನೀಡುವುದಾಗಿ ನಂಬಿಸಿದ್ದನು. ಈ ಹಿನ್ನೆಲ
Dec 21, 20251 min read


ಬೇರೆ ಜಾತಿ–ಧರ್ಮದ ವಿವಾಹ: ಮಗಳಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ – ಸುಪ್ರೀಂ ಕೋರ್ಟ್ ಸ್ಪಷ್ಟ ತೀರ್ಪು
ಪ್ರೀತಿವಿವಾಹ ಅಥವಾ ಬೇರೆ ಜಾತಿ–ಧರ್ಮದ ವಿವಾಹ ಮಾಡಿದ ಮಗಳಿಗೆ ತಂದೆಯ ಆಸ್ತಿಯಲ್ಲಿ ಹಕ್ಕಿಲ್ಲ – ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಸುಪ್ರೀಂ ಕೋರ್ಟ್ ಮಗಳು ತಂದೆಯ ಇಚ್ಛೆಗೆ ವಿರುದ್ಧವಾಗಿ ಪ್ರೀತಿವಿವಾಹ ಮಾಡಿದ್ದರೆ ಅಥವಾ ಬೇರೆ ಜಾತಿ/ಧರ್ಮದವನನ್ನು ಮದುವೆಯಾದರೆ, ತಂದೆ ತನ್ನ ಆಸ್ತಿಯ ವಿಲ್ನಿಂದ ಮಗಳನ್ನು ಹೊರಗಿಡುವ ಹಕ್ಕು ಹೊಂದಿದ್ದಾನೆ ಎಂದು ಮಹತ್ವದ ತೀರ್ಪು ನೀಡಿದೆ. ಇಂತಹ ನಿರ್ಧಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ನ್ಯಾಯಮೂರ್ತಿಗಳಾದ ಅಶಾನುದ್ದೀನ್ ಅಮಾನುಲ್ಲಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ನ್ಯಾಯಪೀಠ,
Dec 20, 20251 min read


ಕುದ್ಮಾರು: ಅಯ್ಯಪ್ಪ ಸ್ವಾಮಿ ಮಾಲಾದಾರಿಗಳ ಸ್ವಚ್ಛ ಸೇತುವೆ ಕಾರ್ಯಕ್ಕೆ ಸ್ಥಳೀಯರ ಪ್ರಶಂಸೆ
ಕುದ್ಮಾರು: ಸಮಾಜದಲ್ಲಿ ಎಲ್ಲವೂ ಸರಕಾರವೇ ಮಾಡಬೇಕು ಎಂದು ಕಾಯುವವರ ನಡುವೆ, ತಮ್ಮೂರಿನ ಆಸ್ತಿಯನ್ನು ಉಳಿಸಿಕೊಳ್ಳಲು ಇಬ್ಬರು ಅಯ್ಯಪ್ಪ ಮಾಲಾದಾರಿಗಳು ಕೈಜೋಡಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕಡಬ ತಾಲೂಕು ಕುದ್ಮಾರು ಗ್ರಾಮದ ಶಾಂತಿಮೊಗರು ಕುಮಾರಧಾರ ಸೇತುವೆ ಮೇಲೆ ಸತೀಶ್ ಮತ್ತು ವಿಷ್ಣು ಎಂಬ ಅಯ್ಯಪ್ಪ ಮಾಲಾದಾರಿಗಳು ಸ್ವಯಂಪ್ರೇರಿತರಾಗಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ. ಸ್ವಚ್ಛ ಸೇತುವೆ ಕಾರ್ಯಕ್ರಮ: ಸೇತುವೆಯ ಬದಿಗಳಲ್ಲಿ ಕಸ ಕಡ್ಡಿಗಳು ಶೇಖರಣೆಯಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಡಚಣೆಯಾಗುತ್ತಿತ್ತು. ಇದನ್ನು ಗಮನಿಸಿದ ಸತೀಶ್ ಮತ್ತು ವಿಷ್ಣು ಅವರು 'ಸ್ವಚ್ಛ ಸೇತುವೆ' ಕಾ
Dec 20, 20251 min read


ಬಾಂಗ್ಲಾದೇಶದಲ್ಲಿ ಭಾರತೀಯ ವೀಸಾ ಕೇಂದ್ರಗಳು ತಾತ್ಕಾಲಿಕವಾಗಿ ಬಂದ್
ಢಾಕಾ: ಭದ್ರತಾ ಹಿತದೃಷ್ಟಿಯಿಂದ ಬಾಂಗ್ಲಾದೇಶದಲ್ಲಿರುವ ಭಾರತೀಯ ವೀಸಾ ಅರ್ಜಿ ಕೇಂದ್ರಗಳನ್ನು (IVAC) ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಬಾಂಗ್ಲಾದೇಶದ ಢಾಕಾ, ಖುಲ್ನಾ ಹಾಗೂ ರಾಜಶಾಹಿ ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತೀಯ ವೀಸಾ ಅರ್ಜಿ ಕೇಂದ್ರಗಳು ಈ ಕ್ರಮಕ್ಕೆ ಒಳಪಟ್ಟಿವೆ. ಇತ್ತೀಚೆಗೆ ಈ ಪ್ರದೇಶಗಳಲ್ಲಿ ತೀವ್ರ ಪ್ರತಿಭಟನೆಗಳು ನಡೆದಿದ್ದು, ಭಾರತೀಯ ಅಧಿಕಾರಿಗಳಿಗೆ ಬೆದರಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಾರ್ವಜನಿಕ ಸುರಕ್ಷತೆ ಹಾಗೂ ಸಿಬ್ಬಂದಿಯ ರಕ್ಷಣೆಯನ್ನು
Dec 20, 20251 min read


ಟಿ20 ವಿಶ್ವಕಪ್ 2026: ಭಾರತ ತಂಡ ಪ್ರಕಟ
ನವದೆಹಲಿ: 2026ರ ಟಿ20 ವಿಶ್ವಕಪ್ಗಾಗಿ ಭಾರತ ಕ್ರಿಕೆಟ್ ತಂಡವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. BCCI ಆಯ್ಕೆ ಸಮಿತಿ ಪ್ರಕಟಿಸಿದ ತಂಡಕ್ಕೆ ಸೂರ್ಯಕುಮಾರ್ ಯಾದವ್ ನಾಯಕನಾಗಿ ನೇಮಕಗೊಂಡಿದ್ದು, ಅಕ್ಷರ್ ಪಟೇಲ್ ಉಪನಾಯಕತ್ವ ವಹಿಸಿದ್ದಾರೆ. ಅನುಭವ ಹಾಗೂ ಯುವ ಪ್ರತಿಭೆಯ ಸಮತೋಲನ ಹೊಂದಿರುವ ಈ ತಂಡವು ವಿಶ್ವಕಪ್ ಕಿರೀಟವನ್ನು ಉಳಿಸಿಕೊಳ್ಳುವ ಗುರಿ ಹೊಂದಿದೆ. ಬ್ಯಾಟಿಂಗ್, ಆಲ್ರೌಂಡರ್ ಮತ್ತು ಬೌಲಿಂಗ್ ವಿಭಾಗಗಳಲ್ಲಿ ಬಲಿಷ್ಠ ಸಂಯೋಜನೆ ಮಾಡಲಾಗಿದೆ. 🏏 ಭಾರತ ಟಿ20 ವಿಶ್ವಕಪ್ 2026 ತಂಡ ಸೂರ್ಯಕುಮಾರ್ ಯಾದವ್ (ನಾಯಕ) ಅಭಿಷೇಕ್ ಶರ್ಮಾ ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್) ತಿಲಕ್ ವರ್ಮಾ ಹಾರ
Dec 20, 20251 min read


ದ್ವೇಷ ಭಾಷಣ ಮಸೂದೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ – ಶೋಭಾ ಕರಂದ್ಲಾಜೆ
ಬೆಂಗಳೂರು | ವಿಶೇಷ ವರದಿ ಕರ್ನಾಟಕ ವಿಧಾನಸಭೆಯಲ್ಲಿ ಇತ್ತೀಚೆಗೆ ಅಂಗೀಕೃತಗೊಂಡ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆಗಟ್ಟುವಿಕೆ) ಮಸೂದೆ–2025 ಸಾಂವಿಧಾನಿಕವಾಗಿ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ ಎಂದು ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಈ ಮಸೂದೆ ಸರ್ಕಾರಿ ಅಧಿಕಾರಿಗಳಿಗೆ ಜನರು ಯಾವ ಮಾತುಗಳನ್ನು ಮಾತನಾಡಬಹುದು ಎಂಬುದನ್ನು ನಿರ್ಧರಿಸುವ ವ್ಯಾಪಕ ಅಧಿಕಾರ ನೀಡುತ್ತದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ಸ್ಪಷ್ಟ ಹಾಗೂ ತಕ್ಷಣದ ಅಪಾಯ ಉಂಟುಮಾಡುವ ಮಾತುಗಳನ್ನು ಮಾತ್ರ ಗುರಿಯಾಗಿಸದೆ, ಸರ್ಕಾರವಿರೋಧಿ ಧ್ವನಿಗಳನ್ನು ಮುಚ್ಚಿಹಾಕುವ ಸಾಧನವಾ
Dec 20, 20251 min read


ದೆಹಲಿಯಲ್ಲಿ 'ವಿಷಗಾಳಿ' ಅಟ್ಟಹಾಸ: ಹಳೆಯ ವಾಹನಗಳಿಗೆ ನಿರ್ಬಂಧ!
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟ (AQI) 400ರ ಗಡಿ ದಾಟಿ 'ಅಪಾಯಕಾರಿ' ಹಂತ ತಲುಪಿದೆ. ದಟ್ಟ ಮಂಜು ಮತ್ತು ವಿಷಕಾರಿ ಹೊಗೆಯಿಂದಾಗಿ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ, ದೆಹಲಿ ಸರ್ಕಾರ ಇಂದಿನಿಂದ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಮನೆ ಕೆಲಸಕ್ಕೆ (WFH) ಸೂಚನೆ ಮಾಲಿನ್ಯ ನಿಯಂತ್ರಿಸುವ ಭಾಗವಾಗಿ ಸರ್ಕಾರಿ ಮತ್ತು ಖಾಸಗಿ ಕಚೇರಿಗಳ ಶೇ. 50ರಷ್ಟು ಸಿಬ್ಬಂದಿಗೆ 'ವರ್ಕ್ ಫ್ರಂ ಹೋಮ್' (Work From Home) ಮಾಡಲು ಸರ್ಕಾರ ಸೂಚಿಸಿದೆ. ರಸ್ತೆಗಳಲ್ಲಿ ವಾಹನಗಳ ಸಂಚಾರ ಕಡಿಮೆ ಮಾಡುವ ಮೂಲಕ ಹೊಗೆಯ ಪ್ರಮಾಣ ತಗ್ಗಿಸುವುದು
Dec 18, 20251 min read


ಅಲ್ಪ ಏರಿಕೆ ಕಂಡ ಚಿನ್ನದ ದರ
ಡಿಸೆಂಬರ್ 18, 2025 ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ತುಸು ಏರಿಕೆಯಾಗಿದ್ದು, 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹13,484 ಮತ್ತು 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹12,360 ಇದೆ; ಬೆಳ್ಳಿ ದರವೂ ಹೆಚ್ಚಾಗಿದೆ. ದೇಶದಾದ್ಯಂತ ಚಿನ್ನದ ದರದಲ್ಲಿ ಏರಿಕೆ ಕಂಡುಬಂದಿದೆ, ಇದು ಹೂಡಿಕೆದಾರರ ವಿಶ್ವಾಸ ಹೆಚ್ಚಿಸಿದೆ ಎಂದು ವರದಿಗಳು ತಿಳಿಸಿವೆ. ಇಂದಿನ ಚಿನ್ನದ ದರ (ಬೆಂಗಳೂರು - ಡಿಸೆಂಬರ್ 18, 2025): 24 ಕ್ಯಾರಟ್ ಚಿನ್ನ: ₹13,484 / ಗ್ರಾಂ (₹33 ಏರಿಕೆ). 22 ಕ್ಯಾರಟ್ ಚಿನ್ನ: ₹12,360 / ಗ್ರಾಂ (₹30 ಏರಿಕೆ). ಇಂದಿನ ಬೆಳ್ಳಿ ದರ (ಬೆಂಗಳೂರು): ಬೆಳ್ಳಿ: ಪ್ರತಿ ಗ
Dec 18, 20251 min read


ಬೆಳ್ತಂಗಡಿ: ಅಪ್ರಾಪ್ತ ಬಾಲಕರ ಮೇಲೆ ಹಲ್ಲೆ ಆರೋಪ - ಜುವೆಲ್ಲರಿ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು
ಬೆಳ್ತಂಗಡಿ: ಪಟ್ಟಣದ ಜುವೆಲ್ಲರಿಯೊಂದರ ಹಿಂಭಾಗದಲ್ಲಿ ಬಹಿರ್ದೆಸೆಗೆ ತೆರಳಿದ್ದ ಅಪ್ರಾಪ್ತ ಬಾಲಕರ ಮೇಲೆ ಹಲ್ಲೆ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಸೆಂಬರ್ 15, 2025 ರಂದು ಸಂಜೆ ಈ ಘಟನೆ ಸಂಭವಿಸಿದೆ. ದೂರಿನ ಪ್ರಕಾರ, ಅಪ್ರಾಪ್ತ ವಯಸ್ಸಿನ ಪಿರ್ಯಾದಿದಾರರು ತಮ್ಮ ಇಬ್ಬರು ಸ್ನೇಹಿತರೊಂದಿಗೆ ಬೆಳ್ತಂಗಡಿ ಪಟ್ಟಣದ ಜುವೆಲ್ಲರಿಯೊಂದರ ಹಿಂಭಾಗದ ಪ್ರದೇಶಕ್ಕೆ ತೆರಳಿದ್ದರು. ಈ ವೇಳೆ ಅಲ್ಲಿಗೆ ಬಂದ ಜುವೆಲ್ಲರಿ ಸಿಬ್ಬಂದಿ, "ನೀವು ವಿಡಿಯೋ ಮಾಡುತ್ತಿದ್ದೀರಿ" ಎಂದು ಆರೋಪಿಸಿ ಮೂವರು ಬಾಲಕರನ್ನು ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ ಎಂ
Dec 18, 20251 min read


ಪ್ರಧಾನಿ ನರೇಂದ್ರ ಮೋದಿಯವರಿಗೆ ಇಥಿಯೋಪಿಯಾದ ಅತ್ಯುನ್ನತ ನಾಗರಿಕ ಗೌರವ ಸಮರ್ಪಣೆ
ಮೂರು ದೇಶಗಳ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಥಿಯೋಪಿಯಾ ಸರ್ಕಾರವು ತನ್ನ ದೇಶದ ಅತ್ಯುನ್ನತ ನಾಗರಿಕ ಗೌರವವಾದ 'ದಿ ಗ್ರೇಟ್ ಆನರ್ ನಿಶಾನ್ ಆಫ್ ಇಥಿಯೋಪಿಯಾ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅಡಿಸ್ ಅಂತಾರಾಷ್ಟ್ರೀಯ ಸಮಾವೇಶ ಕೇಂದ್ರದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ, ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರು ಪ್ರಧಾನಿ ಮೋದಿಯವರಿಗೆ ಈ ಪದಕವನ್ನು ಪ್ರದಾನ ಮಾಡಿದರು. ಭಾರತ ಮತ್ತು ಇಥಿಯೋಪಿಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಮೋದಿಯವರ ಶ್ರಮವನ್ನು ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು. ನವದೆಹಲಿಯ ವಿದೇಶಾಂಗ ವ್ಯವಹಾರಗಳ ಸಚಿವಾ
Dec 17, 20251 min read


ದೇಶದಲ್ಲೇ ಕರ್ನಾಟಕಕ್ಕೆ 2ನೇ ಸ್ಥಾನ: ಶೇ. 2.8ಕ್ಕೆ ಕುಸಿದ ನಿರುದ್ಯೋಗ ದರ!
ಬೆಂಗಳೂರು: ಉದ್ಯೋಗ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಅತ್ಯುತ್ತಮ ಸಾಧನೆ ಮಾಡಿದ್ದು, ಅತಿ ಕಡಿಮೆ ನಿರುದ್ಯೋಗ ದರ ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನವನ್ನು ಅಲಂಕರಿಸಿದೆ. ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಇತ್ತೀಚೆಗೆ ಬಿಡುಗಡೆ ಮಾಡಿರುವ ‘ಆವರ್ತಕ ಕಾರ್ಮಿಕ ಬಲ ಸಮೀಕ್ಷೆ’ (PLFS - ಜುಲೈ-ಸೆಪ್ಟೆಂಬರ್ 2025) ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ವರದಿಯನ್ನು ಮಂಡಿಸಲಾಗಿದ್ದು, ರಾಜ್ಯದ ಆರ್ಥಿಕ ಪ್ರಗತಿ ಮತ್ತು ಉದ್ಯೋಗ ಸೃಷ್ಟಿಯ ಬಲವಾದ ಚಿತ್ರಣವನ್ನು ಇದು ಬಿಂಬಿಸಿದೆ. ವರದಿಯ ಅನ್ವಯ, ರಾಷ್ಟ್ರಮಟ
Dec 17, 20251 min read
Archive
bottom of page



