top of page
News Articles
Sathyapatha News Plus


ಹಾಸ್ಟೆಲ್–ಪಿಜಿಗಳ ಕಳಪೆ ಆಹಾರಕ್ಕೆ ಬ್ರೇಕ್: ಕಠಿಣ ಕ್ರಮಕ್ಕೆ ಯು.ಟಿ. ಖಾದರ್ ಖಡಕ್ ವಾರ್ನಿಂಗ್!
ಬೆಂಗಳೂರು, ಆ.13: ಹೋಟೆಲ್ಗಳಲ್ಲಿ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆ ಪರಿಶೀಲನೆ ನಡೆಯುತ್ತಿರುವ ಬೆನ್ನಲ್ಲೇ, ರಾಜ್ಯದ ಹಾಸ್ಟೆಲ್ಗಳು, ಪಿಜಿಗಳು ಹಾಗೂ ಕ್ಯಾಂಟೀನ್ಗಳಲ್ಲಿನ ಆಹಾರ ವ್ಯವಸ್ಥೆಯ ಮೇಲೂ ಆರೋಗ್ಯ ಇಲಾಖೆ ನಿಗಾ ವಹಿಸಲು ಮುಂದಾಗಿದೆ. ರಾಜ್ಯದ ವಿವಿಧೆಡೆ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ, ಖಾಸಗಿ ಹಾಗೂ ಸಹಕಾರಿ ಹಾಸ್ಟೆಲ್ಗಳಲ್ಲಿ ಆಹಾರ ತಯಾರಿಕೆ ಮತ್ತು ಪೂರೈಕೆ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಹಾರದ ಗುಣಮಟ್ಟ, ಅಡುಗೆಮನೆಯ ಸ್ವಚ್ಛತೆ ಹಾಗೂ ಆಹಾರ ಪದಾರ್ಥಗಳ ಸಂಗ್ರಹಣೆ ಸೇರಿದಂತೆ ಹಲವು ಅಂಶಗಳನ್ನು ತಪಾಸಣೆ ಮಾಡಲಾಗುತ್ತದೆ. ಪಿಜಿಗಳಲ್ಲಿಯೂ
Aug 131 min read


ಕಾಸರಗೋಡು: ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ; ಆಘಾತ ತಾಳಲಾರದೆ ಭಾವಿ ಪತಿಯೂ ಆತ್ಮಹತ್ಯೆ
ಕಾಸರಗೋಡು: ಮದುವೆಯ ಸಂಭ್ರಮಕ್ಕೆ ಸಿದ್ಧವಾಗಬೇಕಿದ್ದ ಯುವ ಜೋಡಿಯ ಬದುಕು ದುರಂತದಲ್ಲಿ ಅಂತ್ಯಗೊಂಡಿದೆ. ಎಸ್ಬಿಐ ಉದ್ಯೋಗಿಯಾಗಿದ್ದ ಯುವತಿ ಅನುಶ್ರೀ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ, ಆಕೆಯ ಭಾವಿ ಪತಿ ಅಮಲ್ ಕೂಡ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಅನುಶ್ರೀ ಹುಣಸೂರಿನ ಎಸ್ಬಿಐ ಶಾಖೆಯಲ್ಲಿ, ಅಮಲ್ ಎರ್ನಾಕುಳಂನ ಎಸ್ಬಿಐ ಶಾಖೆಯಲ್ಲಿ ಉದ್ಯೋಗಿಯಾಗಿದ್ದರು. ಕುಟುಂಬಸ್ಥರ ಒಪ್ಪಿಗೆಯೊಂದಿಗೆ ಮುಂದಿನ ವರ್ಷ ಡಿಸೆಂಬರ್ 26ರಂದು ಇವರ ವಿವಾಹ ನಿಗದಿಯಾಗಿತ್ತು. ಮಂಗಳವಾರ ಹುಣಸೂರಿನಲ್ಲಿದ್ದ ಅನುಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸುದ್ದಿ ತಿಳಿದ ಬಳಿಕ ತೀವ್ರ ಮನನೊಂದ
Aug 131 min read


ಡಿಗ್ರಿ ಪಾಸಾದವರಿಗೆ ಸುವರ್ಣಾವಕಾಶ: ಕರ್ನಾಟಕ ಹೈಕೋರ್ಟ್ನಲ್ಲಿ SDA ಹುದ್ದೆಗಳ ನೇಮಕಾತಿ
ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಪದವೀಧರರಿಗೆ ಕರ್ನಾಟಕ ಹೈಕೋರ್ಟ್ ಸಿಹಿಸುದ್ದಿ ನೀಡಿದೆ. ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಖಾಲಿ ಇರುವ 20 ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ಭರ್ತಿಗೆ ಆನ್ಲೈನ್ ಅರ್ಜಿ ಆಹ್ವಾನಿಸಲಾಗಿದೆ. ಆಗಸ್ಟ್ 13, 2026ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಸೆಪ್ಟೆಂಬರ್ 11, 2026 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ ₹25,500ರಿಂದ ₹81,100ರವರೆಗೆ ವೇತನ ದೊರೆಯಲಿದೆ. ಹುದ್ದೆಗಳ ವಿವರ ಇಲಾಖೆ: ಕರ್ನಾಟಕ ಉಚ್ಚ ನ್ಯಾಯಾಲಯ ಹುದ್ದೆ: ದ್ವಿತೀಯ ದರ್ಜೆ ಸಹಾಯಕರು (SDA) ಒಟ್ಟು ಹುದ್ದೆಗಳು: 20 ಉಳ
Aug 132 min read


ಕರ್ನಾಟಕದಲ್ಲಿ 15,000 ಶಿಕ್ಷಕರ ನೇಮಕಾತಿ: ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ
ಬೆಂಗಳೂರು: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಶಿಕ್ಷಣ ಇಲಾಖೆ ಭರ್ಜರಿ ಅವಕಾಶ ನೀಡಿದೆ. ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಲಿ ಇರುವ 15,000 ಶಿಕ್ಷಕರ ಹುದ್ದೆಗಳ ಭರ್ತಿಗೆ ನೇಮಕಾತಿ ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆಗಸ್ಟ್ 18, 2026ರಿಂದ ಸೆಪ್ಟೆಂಬರ್ 7, 2026ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ ಕಲ್ಯಾಣ ಕರ್ನಾಟಕ – 6,967 ಹುದ್ದೆಗಳು ಪದವೀಧರ ಪ್ರಾಥಮಿಕ ಶಿಕ್ಷಕರು (GPT): 3,228 ಪ್ರೌಢಶಾಲಾ ಸಹ ಶಿಕ್ಷಕರು (HSTR): 2,214 ಪ್ರಾಥಮಿಕ ಶಾಲಾ ಶಿಕ್ಷಕರು (PST): 800 ದೈಹಿಕ ಶಿಕ್ಷಣ ಶಿಕ್ಷಕರು: 425 ಗಣಕಯಂತ್ರ ವಿಜ
Aug 131 min read


K-SET 2026: ಪ್ರಾಧ್ಯಾಪಕರಾಗುವ ಕನಸು ಕಂಡವರಿಗೆ ಗುಡ್ ನ್ಯೂಸ್; ಅರ್ಜಿ ಆಹ್ವಾನಿಸಿದ KEA
ಬೆಂಗಳೂರು: ಸರ್ಕಾರಿ ಹಾಗೂ ಅನುದಾನಿತ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗುವ ಕನಸು ಕಾಣುತ್ತಿರುವ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಗುಡ್ ನ್ಯೂಸ್ ನೀಡಿದೆ. ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (K-SET) 2026ಕ್ಕೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 5ರೊಳಗೆ ಅರ್ಜಿ ಸಲ್ಲಿಸಬಹುದು. ಪ್ರಮುಖ ದಿನಾಂಕಗಳು ಅರ್ಜಿ ಸಲ್ಲಿಕೆ ಆರಂಭ: ಆಗಸ್ಟ್ 10, 2026 ಅರ್ಜಿ ಸಲ್ಲಿಸಲು ಕೊನೆಯ ದಿನ: ಸೆಪ್ಟೆಂಬರ್ 5, 2026 ಶುಲ್ಕ ಪಾವತಿಗೆ ಕೊನೆಯ ದಿನ: ಸೆಪ್ಟೆಂಬರ್ 6, 2026 ಪ್ರವೇಶ ಪತ್ರ ಬಿಡುಗಡೆ: ಅಕ್ಟೋಬರ್ 1, 2026ರಿಂದ K-SET ಪರ
Aug 121 min read


ಶಿರಾಡಿಘಾಟ್ ಮಾರ್ಗದಲ್ಲಿ ವಂದೇ ಭಾರತ್ ರೈಲಿನ ಯಶಸ್ವಿ ಪ್ರಾಯೋಗಿಕ ಸಂಚಾರ
ಬೆಂಗಳೂರು–ಮಂಗಳೂರು ಸಂಪರ್ಕಕ್ಕೆ ಹೊಸ ನಿರೀಕ್ಷೆ; ಸಕಲೇಶಪುರ–ಕುಕ್ಕೆ ಸುಬ್ರಹ್ಮಣ್ಯ ನಡುವೆ ಟ್ರಯಲ್ ರನ್ ಸಕಲೇಶಪುರ: ಬೆಂಗಳೂರು ಮತ್ತು ಮಂಗಳೂರು ನಡುವಿನ ವೇಗದ ರೈಲು ಸಂಪರ್ಕದ ನಿರೀಕ್ಷೆಯಲ್ಲಿದ್ದ ಪ್ರಯಾಣಿಕರಿಗೆ ಮಹತ್ವದ ಬೆಳವಣಿಗೆ ನಡೆದಿದೆ. ಅತ್ಯಾಧುನಿಕ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಪ್ರಾಯೋಗಿಕ ಸಂಚಾರವು ಸಕಲೇಶಪುರದಿಂದ ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯವರೆಗೆ ಯಶಸ್ವಿಯಾಗಿ ನಡೆದಿದೆ. ಅತ್ಯಂತ ಕಠಿಣ ಹಾಗೂ ತಿರುವುಗಳಿಂದ ಕೂಡಿರುವ ಶಿರಾಡಿಘಾಟ್ ರೈಲು ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚರಿಸಿರುವುದು ಈ ಭಾಗದ ರೈಲು ಸಂಪರ್ಕದ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ. ಟ್
Aug 121 min read


ಕರ್ನಾಟಕದಲ್ಲಿ ಗುಟ್ಕಾ, ತಂಬಾಕು–ನಿಕೋಟಿನ್ ಪಾನ್ ಮಸಾಲಾ ಒಂದು ವರ್ಷ ಬ್ಯಾನ್
ಬೆಂಗಳೂರು: ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ತಂಬಾಕು ಮತ್ತು/ಅಥವಾ ನಿಕೋಟಿನ್ ಹೊಂದಿರುವ ಗುಟ್ಕಾ ಹಾಗೂ ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಒಂದು ವರ್ಷದ ಅವಧಿಗೆ ನಿಷೇಧ ಹೇರಿದೆ. ಕರ್ನಾಟಕ ಆಹಾರ ಸುರಕ್ಷತಾ ಆಯುಕ್ತರು ಜೂನ್ 15, 2026ರಂದು ಹೊರಡಿಸಿರುವ ಅಧಿಸೂಚನೆಯಂತೆ, ತಂಬಾಕು ಅಥವಾ ನಿಕೋಟಿನ್ ಒಳಗೊಂಡಿರುವ ಗುಟ್ಕಾ ಹಾಗೂ ಪಾನ್ ಮಸಾಲಾಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಸಾಗಣೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಉತ್ಪನ್ನದ ಹೆಸರು ಅಥವಾ ಬ್ರ್ಯಾಂಡ್ ಯಾವುದೇ ಆಗಿದ್ದರೂ, ಅದರಲ್ಲಿ ತಂಬಾಕು ಅಥವಾ ನಿಕೋಟಿನ್ ಇದ್ದರೆ ಈ ನಿಷೇಧ ಅನ್ವಯವಾಗಲಿದೆ
Aug 121 min read


ಕೆಬಿಸಿ ಹಾಟ್ ಸೀಟ್ನಲ್ಲಿ ಕಮಾಲ್ ಮಾಡಲಿರುವ ಕಾಮನ್ವೆಲ್ತ್ ಪದಕ ವಿಜೇತರು
ಬೆಂಗಳೂರು: ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಕ್ರೀಡಾಪಟುಗಳಾದ ಶರ್ಮಿಳಾ ಧನ್ಕರ್, ಲವ್ಲೀನಾ ಬೋರ್ಗೊಹೈನ್ ಮತ್ತು ಝಂಡು ಕುಮಾರ್ ಶೀಘ್ರದಲ್ಲೇ ಜನಪ್ರಿಯ ರಸಪ್ರಶ್ನೆ ಕಾರ್ಯಕ್ರಮ ‘ಕೌನ್ ಬನೇಗಾ ಕರೋಡ್ಪತಿ’ (KBC) ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರೊಂದಿಗೆ ಈ ಕ್ರೀಡಾ ತಾರೆಯರು ಹಾಟ್ ಸೀಟ್ ಹಂಚಿಕೊಳ್ಳಲಿದ್ದಾರೆ. ಇತ್ತೀಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಅಭಿನಂದನೆ ಸ್ವೀಕರಿಸಿದ್ದ ಈ ಕ್ರೀಡಾಪಟುಗಳು, ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಪದಕ ಸಾಧನೆಯಲ್ಲಿ ಪ್ರಮುಖ ಪಾತ್ರ ವಹಿ
Aug 121 min read


ಆಟಿ ಅಮಾವಾಸ್ಯೆ 2026: ನಾಳೆ ಕರಾವಳಿಯಲ್ಲಿ ಆಟಿ ಅಮಾವಾಸ್ಯೆ; ‘ಪಾಲೆದ ಕಷಾಯ’ದ ಮಹತ್ವ, ತಯಾರಿಸುವ ವಿಧಾನ ಇಲ್ಲಿದೆ
ಮಂಗಳೂರು: ತುಳುನಾಡಿನ ವಿಶಿಷ್ಟ ಸಂಸ್ಕೃತಿ, ಸಂಪ್ರದಾಯ ಮತ್ತು ಆಚರಣೆಗಳಲ್ಲಿ ಆಟಿ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಆಷಾಢ ಮಾಸದ ಅಮಾವಾಸ್ಯೆಯಂದು ಆಚರಿಸಲಾಗುವ ಈ ಹಬ್ಬವು ಕರಾವಳಿಯ ಜನಜೀವನದೊಂದಿಗೆ ಆಳವಾಗಿ ಬೆಸೆದುಕೊಂಡಿದೆ. ಈ ಬಾರಿ ಆಗಸ್ಟ್ 12ರಂದು ಆಟಿ ಅಮಾವಾಸ್ಯೆ ಆಚರಿಸಲಾಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಸೇರಿದಂತೆ ತುಳುನಾಡಿನ ವಿವಿಧ ಭಾಗಗಳಲ್ಲಿ ಆಟಿ ಅಮಾವಾಸ್ಯೆಯ ದಿನ ಹಲವು ಸಾಂಪ್ರದಾಯಿಕ ಆಚರಣೆಗಳು ನಡೆಯಲಿವೆ. ಅವುಗಳಲ್ಲಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ‘ಪಾಲೆದ ಕಷಾಯ’ ಸೇವಿಸುವ ಸಂಪ್ರದಾಯ ಅತ್ಯಂತ ಪ್ರಮುಖವಾಗಿದೆ. ಆಟಿ ಅಮಾವಾಸ್ಯೆಗೆ ಏಕೆ ವಿಶೇಷ ಮಹತ್ವ?
Aug 112 min read


ಮಂಗಳೂರು: ಚಲಿಸುತ್ತಿದ್ದ ರೈಲಿನಡಿ ಸಿಲುಕುತ್ತಿದ್ದ ವೃದ್ಧನ ರಕ್ಷಣೆ; ಪಾಯಿಂಟ್ಸ್ಮ್ಯಾನ್ ಸಮಯಪ್ರಜ್ಞೆಗೆ ಮೆಚ್ಚುಗೆ
ಮಂಗಳೂರು: ಚಲಿಸುತ್ತಿದ್ದ ರೈಲನ್ನು ಹತ್ತಲು ಮುಂದಾಗಿ ಹಳಿಗೆ ಬಿದ್ದ ವೃದ್ಧ ಪ್ರಯಾಣಿಕರೊಬ್ಬರನ್ನು ರೈಲ್ವೆ ಪಾಯಿಂಟ್ಸ್ಮ್ಯಾನ್ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಸೋಮವಾರ ಸುರತ್ಕಲ್ ರೈಲು ನಿಲ್ದಾಣದಲ್ಲಿ ನಡೆದಿದೆ. ಮುಂಬೈನಿಂದ ಮಂಗಳೂರು ಕಡೆಗೆ ಬರುತ್ತಿದ್ದ ರೈಲು ಸುರತ್ಕಲ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ವೃದ್ಧ ಪ್ರಯಾಣಿಕರೊಬ್ಬರು ಕೆಳಗಿಳಿದು ಅಂಗಡಿಗೆ ತೆರಳಿದ್ದರು. ಅವರು ವಾಪಸ್ ಬರುವಷ್ಟರಲ್ಲಿ ರೈಲು ಚಲಿಸಲು ಆರಂಭಿಸಿತ್ತು. ಅಂಗಡಿಯಲ್ಲಿ ಬಿಟ್ಟು ಬಂದಿದ್ದ ವಸ್ತುವನ್ನು ತರಲು ಅವಸರದಲ್ಲಿ ಚಲಿಸುತ್ತಿದ್ದ ರೈಲನ್ನು ಹತ್ತಲು ಯತ್ನಿಸಿದಾಗ ಆಯತಪ್ಪಿ ಹಳಿಗೆ ಬಿದ್ದಿದ್ದಾರೆ. ಈ ವೇಳ
Aug 111 min read


ವಿಟ್ಲ: ವಿದ್ಯುತ್ ಕಂಬಕ್ಕೆ ಶಾಲಾ ಬಸ್ ಡಿಕ್ಕಿ; 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾರು
ವಿಟ್ಲ: ಚಾಲಕನ ನಿಯಂತ್ರಣ ತಪ್ಪಿದ ಶಾಲಾ ಬಸ್ಸೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ವಿಟ್ಲ ಪಡ್ನೂರು ಗ್ರಾಮದ ಪೂರ್ಲಪ್ಪಾಡಿ ಸಮೀಪದ ಕುಂಟುಕುಡೇಲು ಎಂಬಲ್ಲಿ ನಡೆದಿದೆ. ವಿಟ್ಲದ ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದುಕೊಂಡು ತೆರಳುತ್ತಿದ್ದ ಬಸ್ ಕುಂಟುಕುಡೇಲು ಇಳಿಜಾರು ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ತಾಂತ್ರಿಕ ದೋಷ ಉಂಟಾಗಿ ಚಾಲಕನ ನಿಯಂತ್ರಣ ಕಳೆದುಕೊಂಡಿದೆ ಎನ್ನಲಾಗಿದೆ. ಬಳಿಕ ಬಸ್ ನೇರವಾಗಿ ಕೆಳಗಡೆ ಚಲಿಸಿ, ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಘಟನೆಯ ವೇಳೆ ಬಸ್ಸಿನಲ್ಲಿ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದರು. ಅದೃಷ್ಟವಶಾತ್ ಯ
Aug 111 min read


ನೀಟ್ ವಿಚಾರಕ್ಕೆ ತಂಗಿ ಆತ್ಮಹತ್ಯೆ: ಮಂಗಳೂರಿನಲ್ಲಿ ಸಹೋದರ ಶವವಾಗಿ ಪತ್ತೆ
ಮಂಗಳೂರು, ಆ.11: ನೀಟ್ ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಕೇರಳದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆನ್ನಲ್ಲೇ, ಆಕೆಯ ಸಹೋದರ ಮಂಗಳೂರಿನ ಲಾಡ್ಜ್ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ನಡೆದಿದೆ. ಕೇರಳದ ಬೇಕಲ್ನ ಪಳ್ಳಿಕ್ಕರ ಮುಕೂಡ್ ನಿವಾಸಿ ಮಹೇಶ್ ಅವರ ಪುತ್ರ ಅರ್ಜುನ್ ಮಹೇಶ್ (24) ಮೃತಪಟ್ಟವರು. ಕಳೆದ ಜೂನ್ನಲ್ಲಿ ಅರ್ಜುನ್ ಅವರ ಸಹೋದರಿ ಐಜಾ ಆರ್. ಮಹೇಶ್ ಅವರು ತರಬೇತಿ ಕೇಂದ್ರದ ಹಾಸ್ಟೆಲ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಮರು ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಐಜಾ ಮಾನ
Aug 111 min read


ಇಂಡಿಯನ್ ಓವರ್ಸೀಸ್ ಬ್ಯಾಂಕ್ನಲ್ಲಿ 250 ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ನೇಮಕಾತಿ
ಆಗಸ್ಟ್ 24ರೊಳಗೆ ಆನ್ಲೈನ್ ಅರ್ಜಿ ಸಲ್ಲಿಸಲು ಅವಕಾಶ ನವದೆಹಲಿ: ಇಂಡಿಯನ್ ಓವರ್ಸೀಸ್ ಬ್ಯಾಂಕ್ (IOB) ಜೆಎಂಜಿಎಸ್-I (JMGS-I – Scale I) ಕೇಡರ್ನಲ್ಲಿರುವ ಸ್ಥಳೀಯ ಬ್ಯಾಂಕ್ ಅಧಿಕಾರಿ (Local Bank Officer – LBO) ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಒಟ್ಟು 250 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಆಗಸ್ಟ್ 24, 2026ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿಯಲ್ಲಿ ತಮಿಳುನಾಡಿನಲ್ಲಿ 100 ಹುದ್ದೆಗಳು, ಕರ್ನಾಟಕ, ಮಹಾರಾಷ್ಟ್ರ ಹಾಗೂ ಗುಜರಾತ್ನಲ್ಲಿ ತಲಾ 50 ಹುದ್ದೆಗಳು ಲಭ್ಯವಿವೆ. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ
Aug 102 min read


ಕಡಬ : ಮರ್ದಾಳದಲ್ಲಿ ಅವಘಡ: ಚರಂಡಿಗೆ ಉರುಳಿದ ಸಿಮೆಂಟ್ ಇಟ್ಟಿಗೆ ತುಂಬಿದ ಲಾರಿ
ಕಡಬ, ಆ.10: ಮೆಲ್ಕಾರ್ನಿಂದ ಸುಬ್ರಹ್ಮಣ್ಯಕ್ಕೆ ಸಿಮೆಂಟ್ ಇಟ್ಟಿಗೆಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಬಿದ್ದ ಘಟನೆ ರವಿವಾರ ಕಡಬ ಸಮೀಪದ ಮರ್ದಾಳದಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ಲಾರಿ ರಸ್ತೆ ಬದಿಗೆ ಚಲಿಸಿ ಚರಂಡಿಗೆ ಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ. ಘಟನೆಯ ಬಳಿಕ ಲಾರಿಯಲ್ಲಿದ್ದ ಸಿಮೆಂಟ್ ಇಟ್ಟಿಗೆಗಳನ್ನು ಮತ್ತೊಂದು ಲಾರಿಗೆ ಸ್ಥಳಾಂತರಿಸಿ ಸುಬ್ರಹ್ಮಣ್ಯಕ್ಕೆ ಕಳುಹಿಸಲಾಯಿತು. ಬಳಿಕ ಕ್ರೇನ್ನ್ನು ಸ್ಥಳಕ್ಕೆ ಕರೆಸಿ ಚರಂಡಿಗೆ ಬಿದ್ದಿದ್ದ ಲಾರಿಯನ್ನು ಮೇಲಕ್ಕೆತ್ತ
Aug 101 min read


ರಸ್ತೆ ಗುಂಡಿಯಲ್ಲೇ ‘ಕೆರೆ-ದಂಡೆ’ ಆಟ: ಆಡಳಿತದ ಗಮನ ಸೆಳೆಯಲು ಯುವಕರ ವಿನೂತನ ಪ್ರತಿಭಟನೆ
ಮಂಗಳೂರು–ಕೇರಳ ರಸ್ತೆ: ರಸ್ತೆಯಲ್ಲಿ ಬಿದ್ದಿರುವ ಬೃಹತ್ ಗುಂಡಿ ಹಾಗೂ ಅದರಲ್ಲಿ ನಿಂತಿರುವ ಕೆಸರು ನೀರಿಗೆ ಆಡಳಿತದ ಗಮನ ಸೆಳೆಯಲು ಸ್ಥಳೀಯ ಯುವಕರ ಗುಂಪೊಂದು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಮಳೆಯಿಂದಾಗಿ ರಸ್ತೆ ಗುಂಡಿಗಳಲ್ಲಿ ನೀರು ನಿಂತು ಕೆರೆಯಂತಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಹಲವು ದಿನಗಳಿಂದ ರಸ್ತೆ ದುರಸ್ತಿ ಮಾಡದಿರುವುದನ್ನು ಖಂಡಿಸಿದ ಯುವಕರು, ಇದೇ ಗುಂಡಿಯನ್ನು ಅಂಗಳವನ್ನಾಗಿ ಮಾಡಿಕೊಂಡು ‘ಕೆರೆ-ದಂಡೆ’ ಆಟ ಆಡುವ ಮೂಲಕ ಆಡಳಿತದ ವಿರುದ್ಧ ವಿನೂತನವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಸರು ನೀರಿನ
Aug 101 min read


ಉಳ್ಳಾಲದಲ್ಲಿ ಕತ್ತಿ ಹಿಡಿದು ಸಾರ್ವಜನಿಕರಿಗೆ ಬೆದರಿಕೆ: ಇಬ್ಬರ ಬಂಧನ
ಉಳ್ಳಾಲ: ಮಧ್ಯರಾತ್ರಿ ಮದ್ಯಪಾನದ ಮತ್ತಿನಲ್ಲಿ ಕತ್ತಿ ಹಿಡಿದು ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ರೌಡಿಶೀಟರ್ ಸೇರಿ ಇಬ್ಬರನ್ನು ಮಂಗಳೂರು ಪೊಲೀಸರು ಶನಿವಾರ ತಡರಾತ್ರಿ ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಾರ್ಗತಲೆ ಉಳ್ಳಾಲ ನಿವಾಸಿ ಹಾಗೂ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ಮಹಮ್ಮದ್ ಶಕೀರ್ (31) ಮತ್ತು ಮಂಚಿಲ ಉಳ್ಳಾಲ ನಿವಾಸಿ, ಆಟೋ ಚಾಲಕ ಅಶ್ಫಾಕ್ (28) ಎಂದು ಗುರುತಿಸಲಾಗಿದೆ. ಶನಿವಾರ ತಡರಾತ್ರಿ ಸುಮಾರು 12ರಿಂದ 12.20ರ ನಡುವೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಮ್ಮದ್ ಶಕೀರ್ ಮದ್ಯ ಸೇವಿಸಿ ಕತ್ತಿ ಹಿಡಿದು ಸಾರ್ವಜನಿಕರ ಮೇ
Aug 101 min read


ಆಗಸ್ಟ್ 16ರೊಳಗೆ LPG ಇ-ಕೆವೈಸಿ ಕಡ್ಡಾಯ: ಸಬ್ಸಿಡಿ ಪಡೆಯಲು ಗ್ರಾಹಕರಿಗೆ ಸೂಚನೆ
ನವದೆಹಲಿ: ದೇಶದ ತೈಲ ಮಾರುಕಟ್ಟೆ ಕಂಪೆನಿಗಳು (OMCs) ಗೃಹ ಬಳಕೆಯ LPG ಗ್ರಾಹಕರಿಗೆ ಮಹತ್ವದ ಸೂಚನೆ ನೀಡಿದ್ದು, ಆಗಸ್ಟ್ 16ರೊಳಗೆ ಇ-ಕೆವೈಸಿ (E-KYC) ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪೂರ್ಣಗೊಳಿಸುವಂತೆ ತಿಳಿಸಿವೆ. ಕೇಂದ್ರ ಸರ್ಕಾರದಿಂದ ಸಿಗುವ LPG ಸಬ್ಸಿಡಿಯನ್ನು ಮುಂದುವರಿಸಿಕೊಂಡು ಹೋಗಲು ಈ ಪ್ರಕ್ರಿಯೆ ಅವಶ್ಯಕ ಎಂದು ತಿಳಿಸಲಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOCL), ಭಾರತ್ ಗ್ಯಾಸ್ ಹಾಗೂ ಹಿಂದೂಸ್ಥಾನ್ ಪೆಟ್ರೋಲಿಯಂ ಸಂಸ್ಥೆಗಳು ಈಗಾಗಲೇ ತಮ್ಮ ಗ್ರಾಹಕರಿಗೆ SMS ಹಾಗೂ ಇತರೆ ಮಾಧ್ಯಮಗಳ ಮೂಲಕ ಮಾಹಿತಿ ನೀಡಿವೆ. ನಿಗದಿತ ದಿನಾಂಕದೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದಲ್ಲಿ LPG
Aug 101 min read


ಎಸ್ಬಿಐ ಕ್ಲರ್ಕ್ ನೇಮಕಾತಿ 2026: 1,538 ಹುದ್ದೆಗಳಿಗಾಗಿ ಅಧಿಸೂಚನೆ ಪ್ರಕಟ – ಆಗಸ್ಟ್ 27ರವರೆಗೆ ಅರ್ಜಿ ಅವಕಾಶ
ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) 2026ನೇ ಸಾಲಿನ ಕ್ಲರ್ಕ್ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಒಟ್ಟು 1,538 ಜೂನಿಯರ್ ಅಸೋಸಿಯೇಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ನೇಮಕಾತಿ ವಿಶೇಷವಾಗಿ SC, ST ಮತ್ತು OBC ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗಾಗಿ ಮೀಸಲಾಗಿದ್ದು, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ. ಅರ್ಹ ಅಭ್ಯರ್ಥಿಗಳು ಆಗಸ್ಟ್ 7ರಿಂದ ಆಗಸ್ಟ್ 27, 2026ರವರೆಗೆ SBI ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಕೇವಲ ಒಂದು ರಾಜ್ಯ ಅಥವ
Aug 91 min read
Archive
bottom of page



