top of page
News Articles
Sathyapatha News Plus


ಬೆಂಗಳೂರು: ಇಸ್ರೋ ಐಸೈಟ್ ಕ್ಯಾಂಪಸ್ ಮೇಲೆ ಅನುಮತಿಯಿಲ್ಲದೆ ಡ್ರೋನ್ ಹಾರಾಟ: ಭದ್ರತಾ ವಲಯದಲ್ಲಿ ಆತಂಕ
ಬೆಂಗಳೂರಿನ ಇಸ್ರೋ ಐಸೈಟ್ ಕ್ಯಾಂಪಸ್ ಮೇಲೆ ಅನುಮತಿಯಿಲ್ಲದೆ ಡ್ರೋನ್ ಹಾರಾಟ ನಡೆಸಿರುವುದು ಭದ್ರತಾ ದೃಷ್ಟಿಯಿಂದ ತೀವ್ರ ಆತಂಕಕ್ಕೆ ಕಾರಣವಾಗಿದೆ. ಮೇ 2ರಂದು ಬೆಳಿಗ್ಗೆ ಸುಮಾರು 80-100 ಅಡಿ ಎತ್ತರದಲ್ಲಿ 12 ಸೆಕೆಂಡುಗಳ ಕಾಲ ಡ್ರೋನ್ ಕಾಣಿಸಿಕೊಂಡಿದೆ. ಇದು ನಿಷೇಧಿತ 'ನೋ ಡ್ರೋನ್ ಝೋನ್' ಪ್ರದೇಶವಾಗಿದ್ದು, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವಂತಹ ಗಂಭೀರ ಕೃತ್ಯವಾಗಿದೆ ಎಂದು ಭದ್ರತಾ ಅಧಿಕಾರಿಗಳು ಎಚ್ಚರಿಸಿದ್ದಾರೆ. ಈ ಘಟನೆಯ ಕುರಿತು ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಡ್ರೋನ್ ಹಾರಿಸಿದವರ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು..
May 61 min read


ಖ್ಯಾತ ಮಲಯಾಳಂ ನಟ ಸಂತೋಷ್ ಕೆ. ನಾಯರ್ ರಸ್ತೆ ಅಪಘಾತದಲ್ಲಿ ನಿಧನ
ಮಲಯಾಳಂ ಚಿತ್ರರಂಗದ ಹಿರಿಯ ನಟ ಸಂತೋಷ್ ಕೆ ನಾಯರ್ ಅವರು ಮಂಗಳವಾರ ಬೆಳಿಗ್ಗೆ ಕೇರಳದ ಪತ್ತನಂತಿಟ್ಟದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದುರದೃಷ್ಟವಶಾತ್ ಮೃತಪಟ್ಟಿದ್ದಾರೆ. ಅವರು ಪ್ರಯಾಣಿಸುತ್ತಿದ್ದ ಕಾರು ಎದುರಿನಿಂದ ಬಂದ ವ್ಯಾನ್ಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಂತೋಷ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಅವರ ಪತ್ನಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 1982ರಲ್ಲಿ ‘ಇದ್ ಞಂಙಳುಡೆ ಕಥ
May 51 min read


ಸವಣೂರಿನಲ್ಲಿ ಭೀಕರ ಅಪಘಾತ: ಲಾರಿಗೆ ಡಿಕ್ಕಿ ಹೊಡೆದ ಬೈಕ್ – ಯುವಕ ಸಾವು, ಮತ್ತೋರ್ವ ಗಂಭೀರ ಗಾಯ
ಸವಣೂರಿನ ಕಾಣಿಯೂರು–ಮಂಜೇಶ್ವರ ಅಂತಾರಾಜ್ಯ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ದ್ವಿಚಕ್ರ ವಾಹನ ಮತ್ತು ಲಾರಿ ನಡುವೆ ಡಿಕ್ಕಿ ಹೊಡೆದ ಪರಿಣಾಮ ಯುವಕನೊಬ್ಬ ಮೃತಪಟ್ಟಿದ್ದಾನೆ. ಸವಣೂರಿನಿಂದ ಸ್ವಲ್ಪ ಮುಂದಿನ ತಿರುವಿನಲ್ಲಿ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಯಿಂದ ದ್ವಿಚಕ್ರ ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. ಮೃತ ಯುವಕ ಮಿತ್ತೂರು ಮೂಲದವನು ಎಂದು ಹೇಳಲಾಗುತ್ತಿದ್ದು, ಬೈಕ್ನಲ್ಲಿ ಇದ್ದ ಮತ್ತೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಸಮೀಪದ ಆಸ್ಪತ್ರೆಗೆ
May 51 min read


ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಜಯ:ಮನೆ ಕೆಲಸದಾಕೆ ಈಗ ಪಶ್ಚಿಮ ಬಂಗಾಳದ ಶಾಸಕಿ!
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದ ತೃಣಮೂಲ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಗೊಳಿಸಿ ಬಿಜೆಪಿ ಭರ್ಜರಿ ಜಯ ದಾಖಲಿಸಿದೆ. ಒಟ್ಟು 294 ಕ್ಷೇತ್ರಗಳ ಪೈಕಿ ಬಿಜೆಪಿ 206 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಮೊದಲ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಚುನಾವಣೆಯಲ್ಲಿ ಸಾಮಾನ್ಯ ಜನಸಾಮಾನ್ಯರ ಗೆಲುವು ದೇಶದ ಗಮನ ಸೆಳೆದಿದೆ. ಆಸ್ಗ್ರಾಮ ಕ್ಷೇತ್ರದಿಂದ ಸ್ಫರ್ಧಿಸಿದ್ದ ಮನೆ ಕೆಲಸ ಮಾಡುವ ಮಹಿಳೆ ಕಲಿತಾ ಮಾಝಿ ಅವರು ಭಾರಿ ಮತಗಳ ಅಂತರದಿಂದ ಗೆದ್ದು ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಇವರ ಸರಳತೆ ಮತ್ತು ಸ್ಥಳ
May 51 min read


ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ದಳಪತಿ - ಯಾರ ಜೊತೆ ಮೈತ್ರಿ?
ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತಕ್ಕೆ 10 ಸ್ಥಾನಗಳ ಕೊರತೆಯನ್ನು ಎದುರಿಸುತ್ತಿದೆ. ಆದರೂ, ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವುದು ಸಂಚಲನ ಮೂಡಿಸಿದೆ. ಟಿವಿಕೆ ಮುಖ್ಯಸ್ಥ ವಿಜಯ್ ಅವರು ರಾಜ್ಯಪಾಲರಿಗೆ ಪತ್ರ ಬರೆದು, ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಮುಂದಿನ ಎರಡು ವಾರಗಳಲ್ಲಿ ಸದನದಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸುವುದಾಗಿ ಭರವಸೆ ನೀಡಿದ್ದಾರೆ. ಈ ನಿರ್ಣಾಯಕ ಹಂತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ವಿಜಯ್ ಅವರು ತಮ್ಮ ಪಕ್ಷದ ಎಲ್ಲಾ ವಿಜೇತ ಅಭ್
May 51 min read


ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ದಳಪತಿ - ಯಾರ ಜೊತೆ ಮೈತ್ರಿ?
ತಮಿಳುನಾಡು ರಾಜಕೀಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿರುವ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತಕ್ಕೆ 10 ಸ್ಥಾನಗಳ ಕೊರತೆಯನ್ನು ಎದುರಿಸುತ್ತಿದೆ. ಆದರೂ, ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವುದು ಸಂಚಲನ ಮೂಡಿಸಿದೆ. ಟಿವಿಕೆ ಮುಖ್ಯಸ್ಥ ವಿಜಯ್ ಅವರು ರಾಜ್ಯಪಾಲರಿಗೆ ಪತ್ರ ಬರೆದು, ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ, ಮುಂದಿನ ಎರಡು ವಾರಗಳಲ್ಲಿ ಸದನದಲ್ಲಿ ತಮ್ಮ ಬಹುಮತವನ್ನು ಸಾಬೀತುಪಡಿಸುವುದಾಗಿ ಭರವಸೆ ನೀಡಿದ್ದಾರೆ. ಈ ನಿರ್ಣಾಯಕ ಹಂತದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ವಿಜಯ್ ಅವರು ತಮ್ಮ ಪಕ್ಷದ ಎಲ್ಲಾ ವಿಜೇತ ಅಭ್
May 51 min read


ದುಬಾರಿಯಾಗಲಿದೆ ಹೋಟೆಲ್ ಊಟ-ತಿಂಡಿ!
ಬೆಂಗಳೂರಿನಲ್ಲಿ ಹೋಟೆಲ್ ಊಟ ಮತ್ತು ತಿಂಡಿ ದರಗಳು ಮತ್ತೆ ಏರಿಕೆಯಾಗಲಿವೆ. ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 993 ರೂ.ಗಳ ಭಾರಿ ಹೆಚ್ಚಳವಾಗಿದ್ದು, ಪ್ರತಿ ಸಿಲಿಂಡರ್ ದರ 3,154 ರೂ.ಗಳಿಗೆ ತಲುಪಿದೆ. ಈ ದುಬಾರಿ ಇಂಧನ ಬೆಲೆಯಿಂದ ಕಂಗಾಲಾಗಿರುವ ಹೋಟೆಲ್ ಮಾಲೀಕರು, ಅನಿವಾರ್ಯವಾಗಿ ತಿಂಡಿ, ಊಟ ಮತ್ತು ಕಾಫಿ-ಟೀಯ ಬೆಲೆಯನ್ನು ಶೇ. 20ರಷ್ಟು ಹೆಚ್ಚಿಸಲು ನಿರ್ಧರಿಸಿದ್ದಾರೆ. ಇದರಿಂದ ಸಾಮಾನ್ಯ ಗ್ರಾಹಕರಿಗೆ ಆರ್ಥಿಕ ಹೊರೆಯಾಗುವುದು ಖಚಿತವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಂಗಳೂರು ನಗರ ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, ಬೆಲೆ ಏರಿಕೆ ಮಾಡುವ ನಿರ್ಧ
May 51 min read


ಪಂಚರಾಜ್ಯ ಚುನಾವಣೆ: ಘಟಾನುಘಟಿ ನಾಯಕರ ಸೋಲು, ರಾಜಕೀಯ ಚಿತ್ರಣ ಬದಲಿಸಿದ ಫಲಿತಾಂಶ!
ಪಂಚರಾಜ್ಯ ಚುನಾವಣಾ ಫಲಿತಾಂಶಗಳು ಅಚ್ಚರಿಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿವೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿದರೆ, ಪುದುಚೇರಿಯಲ್ಲಿ ಎನ್ಡಿಎ ಮೈತ್ರಿಕೂಟ ಅಧಿಕಾರ ಹಿಡಿದಿದೆ. ಕೇರಳದಲ್ಲಿ ಯುಡಿಎಫ್ ಗೆಲುವು ಸಾಧಿಸಿದೆ. ತಮಿಳುನಾಡಿನಲ್ಲಿ ವಿಜಯ್ ನೇತೃತ್ವದ ಟಿವಿಕೆ ಅದ್ಭುತ ಸಾಧನೆ ಮಾಡಿದ್ದು, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಡಿಎಂಕೆ ಪಾಲಿಗೆ ಈ ಚುನಾವಣೆ ಆಘಾತ ನೀಡಿದೆ. ಘಟಾನುಘಟಿ ನಾಯಕರು ಸೋಲಿನ ರುಚಿ ಕಂಡಿದ್ದಾರೆ. ಸಿಎಂ ಎಂಕೆ ಸ್ಟಾಲಿನ್, ಮಮತಾ ಬ್ಯಾನರ್ಜಿ ಮತ್ತು ಗೌರವ್ ಗೊಗೊಯ್ ಸೇರಿದಂತೆ ಹಲವು ಪ್ರಭಾವಿ ನಾಯಕರು ಸೋಲನುಭವಿಸಿರುವುದು ರಾಜಕೀ
May 51 min read


ತಮಿಳುನಾಡು ಮತ ಎಣಿಕೆಯಲ್ಲಿ ಅಚ್ಚರಿಯ ತಿರುವು: ಡಿಎಂಕೆ ಹಿಂದಿಕ್ಕಿ ಟಿವಿಕೆ ಮುನ್ನಡೆ!
ಇಂದು (ಮೇ 4) ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಜೋರಾಗಿ ಸಾಗುತ್ತಿದ್ದು, ತಮಿಳುನಾಡುದಲ್ಲಿ ರಾಜಕೀಯ ಚಿತ್ರಣ ಅಚ್ಚರಿಯ ತಿರುವು ಪಡೆದುಕೊಂಡಿದೆ. ಆರಂಭಿಕ ಹಂತದಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಇದೀಗ ವೇಗವಾಗಿ ಮುನ್ನಡೆ ಸಾಧಿಸಿದ್ದು, ಬೆಳಗ್ಗೆ ಸುಮಾರು 9.15ರ ವೇಳೆಗೆ 58 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದುಕೊಂಡಿದೆ. ಇದರಿಂದ ರಾಜ್ಯದ ರಾಜಕೀಯದಲ್ಲಿ ಹೊಸ ಸಮೀಕರಣಗಳು ರೂಪುಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಇನ್ನೊಂದೆಡೆ, ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 47 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದ
May 41 min read


ಪಶ್ಚಿಮ ಬಂಗಾಳದಲ್ಲಿ ಬಿಜೆಪಿ 130ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ
ಪಶ್ಚಿಮ ಬಂಗಾಳ ಸೇರಿದಂತೆ ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಪ್ರಸ್ತುತ ಜೋರಾಗಿ ಸಾಗುತ್ತಿದೆ. ಆರಂಭಿಕ ಟ್ರೆಂಡ್ಗಳ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಪೈಪೋಟಿ ತೀವ್ರಗೊಂಡಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ) 130ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಎಂದು ವರದಿಗಳು ತಿಳಿಸಿವೆ. ಆಡಳಿತಾರೂಢ ತ್ರಿಣಮೂಲ ಕಾಂಗ್ರೆಸ್ (ಟಿಎಂಸಿ) ಕೂಡ 100ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಎರಡೂ ಪಕ್ಷಗಳ ನಡುವೆ ಕಠಿಣ ಹಣಾಹಣಿ ಮುಂದುವರಿದಿದೆ. ಇದೇ ವೇಳೆ, ಅಸ್ಸಾಂನಲ್ಲಿ ಬಿಜೆಪ
May 41 min read


BIG NEWS: 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಇಂದು – ರಾಜ್ಯದಲ್ಲೂ ಉಪಚುನಾವಣೆ ಎಣಿಕೆ ಆರಂಭ
ಇಂದು ದೇಶದ ರಾಜಕೀಯದಲ್ಲಿ ಮಹತ್ವದ ದಿನ. ಕರ್ನಾಟಕದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಇಂದು ಸೋಮವಾರ ನಡೆಯುತ್ತಿದೆ. ಇದರೊಂದಿಗೆ ಅಸ್ಸಾಂ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ರಾಜ್ಯಗಳ ವಿಧಾನಸಭೆ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಮಧ್ಯಾಹ್ನದ ವೇಳೆಗೆ ಬಹುತೇಕ ರಾಜ್ಯಗಳಲ್ಲಿ ಸ್ಪಷ್ಟ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ. ವಿವಿಧ ರಾಜ್ಯಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮತ್ತು ಮೈತ್ರಿಕೂಟಗಳ ನಡುವೆ ತೀವ್ರ ಪೈಪೋಟಿ ಕಂಡುಬರುತ್ತಿದೆ. ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್, ತಮಿಳುನ
May 42 min read


ಭಾರತದ ಹೆಮ್ಮೆಯ 'ದೃಷ್ಟಿ' ಉಪಗ್ರಹ ಯಶಸ್ವಿ ಉಡಾವಣೆ
ಬೆಂಗಳೂರು ಮೂಲದ ಸ್ಟಾರ್ಟ್ಅಪ್ 'ಗ್ಯಾಲಕ್ಸ್ ಐ' ಅಭಿವೃದ್ಧಿಪಡಿಸಿದ 'ಮಿಷನ್ ದೃಷ್ಟಿ' ಉಪಗ್ರಹವನ್ನು ಅಮೆರಿಕದ ಕ್ಯಾಲಿಫೋರ್ನಿಯಾದಿಂದ ಸ್ಪೇಸ್ಎಕ್ಸ್ ಫಾಲ್ಕನ್ 9 ರಾಕೆಟ್ ಮೂಲಕ ಭಾನುವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಇದು ಭಾರತದ ಖಾಸಗಿ ವಲಯದಲ್ಲಿ ನಿರ್ಮಿಸಲಾದ ಅತಿ ದೊಡ್ಡ (190 ಕೆಜಿ) ಉಪಗ್ರಹವಾಗಿದೆ. ಐಐಟಿ ಮದ್ರಾಸ್ನ ಹಳೆಯ ವಿದ್ಯಾರ್ಥಿಗಳು ಸ್ಥಾಪಿಸಿದ ಈ ಕಂಪನಿ, ದೇಶೀಯವಾಗಿ ಈ ಉಪಗ್ರಹವನ್ನು ನಿರ್ಮಿಸಿದೆ. ಇದು ಸಿಂಥೆಟಿಕ್ ಅಪರ್ಚರ್ ರಾಡಾರ್ ಮತ್ತು ಮಲ್ಟಿಸ್ಪೆಕ್ಟ್ರಲ್ ಇಮೇಜಿಂಗ್ ಎರಡನ್ನೂ ಹೊಂದಿರುವ ವಿಶ್ವದ ಮೊದಲ ಆಪ್ಟೋಸಾರ್ ಉಪಗ್ರಹವಾಗಿದೆ. ಭೂಮಿಯಿಂದ 500 ಕಿ.ಮೀ ಎತ್ತರ
May 31 min read


ಕರ್ನಾಟಕದಲ್ಲಿ ಸಾರಿಗೆ ಮುಷ್ಕರದ ಬಿಸಿ: ಮೇ 20ರಿಂದ ಬಸ್ ಸಂಚಾರ ಸ್ಥಗಿತ?
ವೇತನ ಹೆಚ್ಚಳದ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಜಂಟಿ ಕ್ರಿಯಾ ಸಮಿತಿ (JAC) ಮೇ 20ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದೆ. ಸಾರಿಗೆ ಸಚಿವರೊಂದಿಗಿನ ಮಾತುಕತೆ ವಿಫಲವಾಗಿದ್ದು, ಅಂದು ಬೆಳಿಗ್ಗೆ 6 ಗಂಟೆಯಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ಬಸ್ ಸೇವೆಗಳು ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಕಾರ್ಮಿಕರು ಶೇ.25ರಷ್ಟು ವೇತನ ಹೆಚ್ಚಳಕ್ಕೆ ಆಗ್ರಹಿಸುತ್ತಿದ್ದರೆ, ಸರ್ಕಾರ ಶೇ.7ರಷ್ಟು ಹೆಚ್ಚಳಕ್ಕೆ ಸೀಮಿತವಾಗಿದೆ. ಇದು ನೌಕರರ ಪಾಲಿಗೆ ಸ್ವೀಕಾರಾರ್ಹವಲ್ಲ ಎಂದು ಒಕ್ಕ
May 31 min read


ಮೇ 3 ರಿಂದ ಕರ್ನಾಟಕದಲ್ಲಿ ಮಳೆ ಅಬ್ಬರ
ರಾಜ್ಯದ ಹಲವು ಭಾಗಗಳಲ್ಲಿ ಮೇ 3 ರಿಂದ ಮೇ 9 ರವರೆಗೆ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕರಾವಳಿ ಭಾಗದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ರೈತರು ಮತ್ತು ಸಾರ್ವಜನಿಕರು ಹವಾಮಾನ ವೈಪರೀತ್ಯದ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ. ಉತ್ತರ ಒಳನಾಡಿನ ಬಾಗಲಕೋಟೆ, ಗದಗ, ಹಾವೇರಿ, ವಿಜಯಪುರ, ಬೆಳಗಾವಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಒಣಹವೆ ಮುಂದುವರಿಯಲಿದೆ. ನಂತರ ಮೇ 5 ರಿಂದ ಕೊಪ್ಪಳ, ಯಾದಗಿರಿ, ರಾಯಚೂರು ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ
May 31 min read


ಅಕ್ರಮ ಬಂಧನ: ಉತ್ತರ ಪ್ರದೇಶ ಸರ್ಕಾರಕ್ಕೆ ಹೈಕೋರ್ಟ್ ಚಾಟಿ, 10 ಲಕ್ಷ ದಂಡ
ಯಾವುದೇ ಕಾರಣ ನೀಡದೆ ವ್ಯಕ್ತಿಯೋರ್ವನನ್ನು ಮೂರು ತಿಂಗಳ ಕಾಲ ಅಕ್ರಮವಾಗಿ ಜೈಲಿನಲ್ಲಿರಿಸಿದ್ದ ಉತ್ತರ ಪ್ರದೇಶ ಸರ್ಕಾರದ ಕ್ರಮವನ್ನು ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು ತೀವ್ರವಾಗಿ ಖಂಡಿಸಿದೆ. ಈ ಪ್ರಕರಣವನ್ನು ಸಂವಿಧಾನಬಾಹಿರ ಎಂದು ಘೋಷಿಸಿದ ನ್ಯಾಯಾಲಯ, ಸಂತ್ರಸ್ತರಿಗೆ 10 ಲಕ್ಷ ರೂಪಾಯಿ ದಂಡ ಪಾವತಿಸುವಂತೆ ಆದೇಶಿಸಿದೆ. ಅಧಿಕಾರಿಗಳ ಈ ವರ್ತನೆಯನ್ನು ನ್ಯಾಯಪೀಠವು ಗಂಭೀರವಾಗಿ ಪರಿಗಣಿಸಿದ್ದು, ದಂಡದ ಮೊತ್ತವನ್ನು ಜವಾಬ್ದಾರಿಯುತ ಅಧಿಕಾರಿಗಳಿಂದಲೇ ವಸೂಲಿ ಮಾಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ. ಮನೋಜ್ ಕುಮಾರ್ ಎಂಬುವವರನ್ನು ಪೊಲೀಸರು ಯಾವುದೇ ಆರೋಪಗಳಿಲ್ಲದೆ ಬಂಧಿಸಿದ್ದರು. ಇದು ನ
May 21 min read


ಇರಾನ್ ವಿರುದ್ಧದ ಯುದ್ಧ ಅಂತ್ಯ: ಟ್ರಂಪ್ ಆಡಳಿತದ ದಿಢೀರ್ ಘೋಷಣೆಗೆ ವಿರೋಧ
ಇರಾನ್ ವಿರುದ್ಧದ ಯುದ್ಧ ಮುಕ್ತಾಯಗೊಂಡಿದೆ ಎಂದು ಟ್ರಂಪ್ ಆಡಳಿತ ದಿಢೀರ್ ಘೋಷಣೆ ಮಾಡಿದೆ. ಕಳೆದ ತಿಂಗಳು ಜಾರಿಗೆ ಬಂದ ಕದನ ವಿರಾಮವನ್ನೇ ಆಧಾರವಾಗಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಆದರೆ, ಕಾಂಗ್ರೆಸ್ನಿಂದ ಪಡೆಯಬೇಕಾದ ಕಡ್ಡಾಯ ಅನುಮೋದನೆಯನ್ನು ತಪ್ಪಿಸಲು ಆಡಳಿತವು ಈ ತಂತ್ರ ಅನುಸರಿಸುತ್ತಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಯುದ್ಧ ನಿಂತಿದೆ ಎಂಬ ಕಾರಣಕ್ಕೆ ಸಂವಿಧಾನಬದ್ಧ 60 ದಿನಗಳ ಕಾಲಮಿತಿ ಅನ್ವಯಿಸುವುದಿಲ್ಲ ಎಂಬ ಶ್ವೇತಭವನದ ವಾದವು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಕ್ರಮವನ್ನು ಡೆಮೋಕ್ರಾಟ್ ನಾಯಕರು ತೀವ್ರವಾಗಿ ವಿರೋಧಿಸಿದ್ದಾರೆ. ಕಾನೂನಿನ ಚೌಕಟ್ಟಿನಲ್ಲಿ
May 21 min read


ಟೆಕ್ಸಾಸ್ನಲ್ಲಿ ಭೀಕರ ವಿಮಾನ ಅಪಘಾತ: ಐವರು ಪಿಕಲ್ಬಾಲ್ ಆಟಗಾರರ ದುರ್ಮರಣ
ಟೆಕ್ಸಾಸ್ನ ವಿಂಬರ್ಲಿ ಬಳಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಐವರು ಪಿಕಲ್ಬಾಲ್ ಆಟಗಾರರು ಮೃತಪಟ್ಟಿದ್ದಾರೆ. ಅಮರಿಲ್ಲೊದಿಂದ ನ್ಯೂ ಬ್ರೌನ್ಫೆಲ್ಸ್ಗೆ ತೆರಳುತ್ತಿದ್ದ ಸೆಸ್ನಾ 421C ವಿಮಾನವು ಗುರುವಾರ ರಾತ್ರಿ ಮರಗಳಿಗೆ ಡಿಕ್ಕಿ ಹೊಡೆದು ಅರಣ್ಯ ಪ್ರದೇಶದಲ್ಲಿ ಪತನಗೊಂಡಿದೆ. ಅಪಘಾತದ ವೇಳೆ ಆ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನವಿತ್ತು ಎಂದು ವರದಿಯಾಗಿದೆ. ಈ ದುರ್ಘಟನೆಯಲ್ಲಿ ಪೈಲಟ್ ಸೇರಿದಂತೆ ವಿಮಾನದಲ್ಲಿದ್ದ ಐವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರೆಲ್ಲರೂ ಪಿಕಲ್ಬಾಲ್ ಪಂದ್ಯಾವಳಿಗಾಗಿ ಪ್ರಯಾಣಿಸುತ್ತಿದ್ದರು. ಈ ದುರಂತದ ಹಿನ್ನೆಲೆಯಲ್ಲಿ ಶುಕ್ರವಾರದ ಪಂದ್ಯಾವಳಿಯನ್ನು ರದ್ದು
May 21 min read


ಮಂಗಳೂರು: ಗುದದ್ವಾರದಲ್ಲಿ ಮೊಬೈಲ್ ಅಡಗಿಸಿ ಜೈಲು ಪ್ರವೇಶಿಸಲು ಯತ್ನಿಸಿದ ಕೈದಿ ಪತ್ತೆ
ಮಂಗಳೂರು, ಮೇ 01: ಆಸ್ಪತ್ರೆಯಿಂದ ಬಿಡುಗಡೆಯಾದ ಕೈದಿಯೊಬ್ಬನು ಗುದದ್ವಾರದಲ್ಲಿ ಮೊಬೈಲ್ ಅಡಗಿಸಿಕೊಂಡು ಜೈಲಿಗೆ ಪ್ರವೇಶಿಸಲು ಯತ್ನಿಸಿದ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮುಹಮ್ಮದ್ ತೋಹಿದ್ ಎಂಬ ಕೈದಿಯನ್ನು ಏಪ್ರಿಲ್ 24ರಂದು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಏಪ್ರಿಲ್ 29ರಂದು ಡಿಸ್ಚಾರ್ಜ್ ಆಗಿದ್ದ ತೋಹಿದ್ ಅವರನ್ನು ಸಂಜೆ ವೇಳೆ ಮಂಗಳೂರು ಕೊಡಿಯಾಲ್ಬೈಲಿನ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಯಿತು. ಜೈಲಿನ ಪ್ರವೇಶದ್ವಾರದಲ್ಲಿ ಕರ್ತವ್ಯದಲ್ಲಿದ್ದ ಕೆಎಸ್ಐಎಸ್ಎಫ್ ಸಿಬ್ಬಂದಿ ಯಂತ್ರದ ಮೂಲಕ ತಪಾಸಣೆ ನಡೆಸಿದಾಗ ಸಂಶಯಾಸ್ಪದ
May 11 min read


ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಅರ್ಜಿ ವಜಾ: ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಲು ಹೈಕೋರ್ಟ್ ಸೂಚನೆ
ದಕ್ಷಿಣ ಕನ್ನಡದಿಂದ ರಾಯಚೂರು ಜಿಲ್ಲೆಯ ಮಾನ್ವಿಗೆ ಗಡೀಪಾರು ಮಾಡಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸಾಮಾಜಿಕ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. 2026ರ ಮಾರ್ಚ್ 13ರಂದು ಪುತ್ತೂರು ವಿಭಾಗಾಧಿಕಾರಿ ಮೂರನೇ ಬಾರಿ ಹೊರಡಿಸಿದ್ದ ಈ ಆದೇಶವನ್ನು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಂ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ನಿಯಮದಂತೆ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದರಿಂದ ಅರ್ಜಿಯನ್ನು ಪುರಸ್ಕರಿಸಲಾಗದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಮೇಲ್ಮನವಿ ಸಲ್ಲಿಕೆಗೆ ಅನುಕೂಲವಾಗುವಂತೆ ಮುಂದಿನ ಎರಡು ವಾರಗಳವರೆಗೆ ಯಾವುದೇ
May 11 min read


ಕರ್ನಾಟಕದಲ್ಲಿ ಹೊರರಾಜ್ಯ ವಾಹನಗಳಿಗೆ ಹೊಸ ತೆರಿಗೆ: ಖಾಯಂ ಬಳಕೆದಾರರಿಗೆ ಕಟ್ಟುನಿಟ್ಟಿನ ನಿಯಮ
ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಹೊರರಾಜ್ಯ ನೋಂದಣಿಯ ವಾಹನಗಳ ಸಂಚಾರಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕರ್ನಾಟಕ ಸರ್ಕಾರ ಮುಂದಾಗಿದೆ. ಹೊರರಾಜ್ಯಗಳಲ್ಲಿ ನೋಂದಾಯಿಸಿಕೊಂಡು ಕರ್ನಾಟಕದಲ್ಲಿ ದೀರ್ಘಕಾಲ ಸಂಚರಿಸುತ್ತಿರುವ ವಾಹನಗಳಿಗೆ ಇದೀಗ ಹೊಸ ತೆರಿಗೆ ವಿಧಿಸಲು ಸುಗ್ರೀವಾಜ್ಞೆ ಹೊರಡಿಸಲಾಗಿದೆ. ಈ ಕ್ರಮದಂತೆ, ಬೇರೆ ರಾಜ್ಯಗಳಲ್ಲಿ ನೋಂದಾಯಿಸಿಕೊಂಡಿದ್ದರೂ ಕರ್ನಾಟಕದಲ್ಲೇ ಖಾಯಂವಾಗಿ ಬಳಸುತ್ತಿರುವ ಕಾರು, ಜೀಪು, ಮಿನಿ ಬಸ್ ಮತ್ತು ದ್ವಿಚಕ್ರ ವಾಹನಗಳ ಮಾಲೀಕರು ರಾಜ್ಯ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಸರ್ಕಾರದ ಪ್ರಕಾರ, ಇದು ತೆರಿಗೆ ವಂಚನೆ ತಡೆಗಟ್ಟುವುದರ ಜೊತೆಗೆ
May 11 min read
Archive
bottom of page



