top of page
News Articles
Sathyapatha News Plus


ಅಮೆರಿಕದಿಂದ ಭಾರತದ ಸರಕುಗಳ ಮೇಲಿನ ಸುಂಕ ಭಾರಿ ಕಡಿತ: ಮೋದಿಯವರಿಂದ ಟ್ರಂಪ್ಗೆ ಧನ್ಯವಾದ
ವಾಷಿಂಗ್ಟನ್/ನವದೆಹಲಿ: ಯುರೋಪಿಯನ್ ಒಕ್ಕೂಟದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಸಹಿ ಹಾಕಿದ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ಸರಕುಗಳ ಮೇಲಿನ ಆಮದು ಸುಂಕವನ್ನು ಗಣನೀಯವಾಗಿ ಕಡಿತಗೊಳಿಸಿದ್ದಾರೆ. ರಷ್ಯಾದಿಂದ ಕಚ್ಚಾತೈಲ ಆಮದು ಮಾಡುತ್ತಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ವಿಧಿಸಲಾಗಿದ್ದ ದಂಡವೂ ಸೇರಿ ಒಟ್ಟು 50% ರಷ್ಟಿದ್ದ ಸುಂಕವನ್ನು ಈಗ ಕೇವಲ 18% ಕ್ಕೆ ಇಳಿಸಲಾಗಿದೆ. ಈ ಐತಿಹಾಸಿಕ ತೀರ್ಮಾನದಿಂದಾಗಿ ಚೀನಾ, ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಅಮೆರಿಕ ಮಾರುಕಟ್ಟೆಯಲ್ಲಿ ಹೆಚ್ಚಿನ ಆದ್ಯತೆ ಲಭಿಸಿದಂತಾಗಿದೆ. ಈ ನಿರ್ಧಾರವನ್ನು ಸ
Feb 31 min read


ದ್ವೇಷ ಭಾಷಣ ತಡೆ ವಿಧೇಯಕ: ರಾಜ್ಯಪಾಲರಿಂದ ರಾಷ್ಟ್ರಪತಿಗಳ ಪರಿಶೀಲನೆಗೆ ರವಾನೆ
ಬೆಂಗಳೂರು: ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಗದ್ದಲದ ನಡುವೆ ಅಂಗೀಕಾರವಾಗಿದ್ದ ‘ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ತಡೆ) ವಿಧೇಯಕ’ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಂಕಿತ ಹಾಕಲು ನಿರಾಕರಿಸಿದ್ದಾರೆ. ಬದಲಿಗೆ, ಈ ವಿಧೇಯಕವನ್ನು ರಾಷ್ಟ್ರಪತಿಗಳ ಪರಿಶೀಲನೆಗೆ ರವಾನಿಸುವ ಮೂಲಕ ಸರ್ಕಾರಕ್ಕೆ ಹಿನ್ನಡೆ ನೀಡಿದ್ದಾರೆ. ಈ ವಿಧೇಯಕದಲ್ಲಿ ದ್ವೇಷ ಭಾಷಣದ ವ್ಯಾಖ್ಯಾನ ಅಸ್ಪಷ್ಟವಾಗಿದೆ ಮತ್ತು ಇದರಿಂದ ಧರ್ಮ ಅಥವಾ ವ್ಯಕ್ತಿಗಳ ಮೇಲೆ ಪೂರ್ವಾಗ್ರಹ ಪೀಡಿತ ಕ್ರಮಗಳು ಜರುಗುವ ಸಾಧ್ಯತೆಯಿದೆ ಎಂದು ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಟ್ಟು 29 ಪ್ರಮುಖ ಕಾರಣಗಳನ್ನು ಉಲ್ಲೇ
Feb 21 min read


'ಅಭಿವೃದ್ಧಿ ಎಕ್ಸ್ಪ್ರೆಸ್'ಗೆ ವೇಗ; ಫಾಸ್ಟ್ಟ್ಯಾಗ್ ಸವಾರರಿಗೆ ಬಿಗ್ ರಿಲೀಫ್!
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2026-27ನೇ ಸಾಲಿನ ಬಜೆಟ್ ಮಂಡಿಸಿದ್ದು, ಭಾರತದ ಆರ್ಥಿಕತೆಯನ್ನು ಮೂರನೇ ಅತಿದೊಡ್ಡ ಸ್ಥಾನಕ್ಕೆ ಏರಿಸುವ ದಿಕ್ಸೂಚಿ ನೀಡಿದ್ದಾರೆ. ಒಟ್ಟು 53.47 ಲಕ್ಷ ಕೋಟಿ ರೂಪಾಯಿ ಗಾತ್ರದ ಈ ಬಜೆಟ್ನಲ್ಲಿ ಸಾರಿಗೆ ಮತ್ತು ರಕ್ಷಣಾ ಕ್ಷೇತ್ರಕ್ಕೆ ಬಂಪರ್ ಅನುದಾನ ಹಂಚಿಕೆ ಮಾಡಲಾಗಿದೆ. ಬಜೆಟ್ ಬೆನ್ನಲ್ಲೇ ವಾಹನ ಸವಾರರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ದೊಡ್ಡ ಸಿಹಿಸುದ್ದಿ ನೀಡಿದೆ. ಫೆಬ್ರವರಿ 1 ರಿಂದ ಜಾರಿಗೆ ಬರುವಂತೆ ಫಾಸ್ಟ್ಟ್ಯಾಗ್ ಕೆವೈಸಿ (KYC) ಪ್ರಕ್ರಿಯೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಇನ
Feb 11 min read


ಬಜೆಟ್ 2026: 'ವಿಕಸಿತ ಭಾರತ'ದ ಸಂಕಲ್ಪಕ್ಕೆ ಬಲ ತುಂಬುವ ಬಜೆಟ್ - ಪ್ರಧಾನಿ ಮೋದಿ ಶ್ಲಾಘನೆ
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ 2026-27ನೇ ಸಾಲಿನ ಬಜೆಟ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. "ಈ ಬಜೆಟ್ ಭಾರತದ 'ಅಭಿವೃದ್ಧಿ ಎಕ್ಸ್ಪ್ರೆಸ್’ಗೆ ಹೊಸ ಶಕ್ತಿ ಮತ್ತು ವೇಗವನ್ನು ನೀಡಲಿದೆ" ಎಂದು ಅವರು ಬಣ್ಣಿಸಿದ್ದಾರೆ. ಬಜೆಟ್ ಕುರಿತು ಮಾತನಾಡಿದ ಪ್ರಧಾನಿಯವರು, "ನಮ್ಮ ಸರ್ಕಾರವು ಕೇವಲ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಿಂದ ತೃಪ್ತವಾಗಿಲ್ಲ. ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡುವ ಗುರಿಯನ್ನು ಈ ಬಜೆಟ್ ಹೊಂದಿದೆ. ಇದು 140 ಕೋಟಿ ಭಾರತೀಯರ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುವ ಮತ್ತು 2047ರ ವೇಳೆಗೆ 'ವಿ
Feb 11 min read


ಬಜೆಟ್ 2026: ಮದ್ಯಪ್ರಿಯರಿಗೆ ಶಾಕ್; ಕ್ಯಾನ್ಸರ್ ಔಷಧಿ, ಎಲೆಕ್ಟ್ರಾನಿಕ್ಸ್ ಅಗ್ಗ!
ಇಂದಿನ ಬಜೆಟ್ನಲ್ಲಿ ರಾಜ್ಯದ ಜನತೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸರ್ಕಾರವು ಮದ್ಯದ ದರವನ್ನು ಏರಿಕೆ ಮಾಡುವ ಮೂಲಕ ಮದ್ಯಪ್ರಿಯರಿಗೆ ದೊಡ್ಡ ಶಾಕ್ ನೀಡಿದೆ. ಇದರೊಂದಿಗೆ ಬೀಡಿ ದರದಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ. ಆದರೆ, ಸಾಮಾನ್ಯ ಜನರಿಗೆ ಅನುಕೂಲವಾಗುವಂತೆ ಹಲವು ರಿಯಾಯಿತಿಗಳನ್ನು ಘೋಷಿಸಲಾಗಿದೆ. ವಿಶೇಷವಾಗಿ ಕ್ಯಾನ್ಸರ್ ಮತ್ತು ಸಕ್ಕರೆ ಕಾಯಿಲೆಯ ಔಷಧಿಗಳ ಬೆಲೆ ಇಳಿಕೆಯಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿ ನಿರಾಳತೆ ತಂದಿದೆ. ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಮೇಲಿನ TCS ಶೇ. 2ರಷ್ಟು ಕಡಿತಗೊಳಿಸಲಾಗಿದೆ. ಯಾವುದು ಅಗ್ಗ? * ಎಲೆಕ್ಟ್ರಾನಿಕ್ಸ್: ಲೀಥಿಯಂ ಬ್ಯಾಟರಿ, ಮೈಕ್ರೋವೇವ
Feb 11 min read


ಇಂದು ಕೇಂದ್ರ ಬಜೆಟ್: ಸತತ 9ನೇ ಬಾರಿ ಇತಿಹಾಸ ನಿರ್ಮಿಸಲಿರುವ ನಿರ್ಮಲಾ ಸೀತಾರಾಮನ್
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಫೆಬ್ರವರಿ 1) ಬೆಳಗ್ಗೆ 11 ಗಂಟೆಗೆ 2026-27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಇದು ಅವರು ಮಂಡಿಸುತ್ತಿರುವ ಸತತ 9ನೇ ಬಜೆಟ್ ಆಗಿದ್ದು, ಈ ಮೂಲಕ ಹೊಸ ದಾಖಲೆ ಬರೆಯುತ್ತಿದ್ದಾರೆ. ಈ ಬಾರಿಯ ಬಜೆಟ್ ಭಾನುವಾರ ಮಂಡನೆಯಾಗುತ್ತಿರುವುದು ವಿಶೇಷ. ವಿಶ್ವದ ಅತಿ ವೇಗದ ಆರ್ಥಿಕತೆಯ ಗತಿಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರವು ರಕ್ಷಣೆ, ಮೂಲಸೌಕರ್ಯ, ರೈಲ್ವೆ ಮತ್ತು ಇಂಧನ ವಲಯಗಳಿಗೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆಯಿದೆ. ಮಧ್ಯಮ ವರ್ಗದವರು ಆದಾಯ ತೆರಿಗೆ ವಿನಾಯಿತಿ ಮತ್ತು ಅಗ್ಗದ ಮನೆಗಳ ಯೋಜನೆಗಳ ಬಗ್ಗೆ ನಿರೀಕ್ಷ
Feb 11 min read


ಸಂಸತ್ ಬಜೆಟ್ ಅಧಿವೇಶನ ಆರಂಭ: ಫೆಬ್ರವರಿ 1ಕ್ಕೆ ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್ ಮಂಡನೆ
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುವ ಮೂಲಕ ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನಕ್ಕೆ ಅದ್ಧೂರಿ ಚಾಲನೆ ನೀಡಲಿದ್ದಾರೆ. ರಾಷ್ಟ್ರಪತಿಗಳ ಭಾಷಣವು ಸರ್ಕಾರದ ನೀತಿ ನಿರೂಪಣೆ ಮತ್ತು ದೇಶದ ಭವಿಷ್ಯದ ಗುರಿಗಳ ದಿಕ್ಸೂಚಿಯಾಗಿದ್ದು, ಇಂದಿನಿಂದ ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆಗಳು ಗರಿಗೆದರಲಿವೆ. ವೇಳಾಪಟ್ಟಿಯಂತೆ ಜನವರಿ 28 ರಿಂದ ಏಪ್ರಿಲ್ 2 ರವರೆಗೆ ಅಧಿವೇಶನ ನಡೆಯಲಿದ್ದು, ಒಟ್ಟು 30 ದಿನಗಳ ಕಲಾಪಗಳನ್ನು ನಿಗದಿಪಡಿಸಲಾಗಿದೆ. ಮೊದಲ ಹಂತದ ಅಧಿವೇಶನವು ಫೆಬ್ರವರಿ 13 ರವರೆಗೆ ನಡೆಯಲಿದ್ದು, ನಂತರ ಸಣ್ಣ ವಿರಾಮದ ಬಳಿಕ ಮಾರ್ಚ್ 9 ರಿಂ
Jan 281 min read


ಮಹಾರಾಷ್ಟ್ರದಲ್ಲಿ ಭೀಕರ ಹೆಲಿಕಾಪ್ಟರ್ ಅಪಘಾತ: ಡಿಸಿಎಂ ಅಜಿತ್ ಪವಾರ್ ಸೇರಿ ಆರು ಮಂದಿ ದುರ್ಮರಣ
ಮಹಾರಾಷ್ಟ್ರ ರಾಜಕಾರಣದಲ್ಲಿ ಇಂದು ಕರಾಳ ದಿನ ಎದುರಾಗಿದೆ. ರಾಜ್ಯದ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ಖಾಸಗಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಪವಾರ್ ಸೇರಿದಂತೆ ಒಟ್ಟು ಆರು ಮಂದಿ ಸಾವನ್ನಪ್ಪಿದ್ದಾರೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಮುಂಬೈನಿಂದ ಹೊರಟಿದ್ದ ವಿಮಾನವು ಬಾರಾಮತಿ ವಿಮಾನ ನಿಲ್ದಾಣದ ಬಳಿ ಲ್ಯಾಂಡಿಂಗ್ ಆಗುವ ಸಮಯದಲ್ಲಿ ತಾಂತ್ರಿಕ ದೋಷದಿಂದಾಗಿ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳೀಯ ಸಂಸ್ಥೆಗಳ ಚುನಾವಣಾ ಪ್ರಚಾರಕ್ಕಾಗಿ ಅಜಿತ್ ಪವಾರ್ ಅವರು ಬಾರಾಮತಿಗೆ ತೆರಳುತ್ತಿದ್ದರು. ಮುಂಬೈನಿಂದ ಬೆಳಿಗ್ಗೆ 8 ಗಂಟೆಗೆ ಹೆಲಿಕ
Jan 281 min read


ಗಾಯಕ ಅರಿಜಿತ್ ಸಿಂಗ್ ನಿವೃತ್ತಿ ಘೋಷಣೆ: ಸಂಗೀತ ಲೋಕಕ್ಕೆ ದಿಢೀರ್ ಶಾಕ್!
ಭಾರತೀಯ ಸಂಗೀತ ಲೋಕದ ಧ್ರುವತಾರೆ, ಸುಮಧುರ ಧ್ವನಿಯ ಗಾಯಕ ಅರಿಜಿತ್ ಸಿಂಗ್ ಅವರು ಹಿನ್ನೆಲೆ ಗಾಯನಕ್ಕೆ ವಿದಾಯ ಹೇಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಭಾರಿ ಅಚ್ಚರಿ ನೀಡಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, "ಇನ್ನು ಮುಂದೆ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಅವಕಾಶಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ನಾನು ಈ ವೃತ್ತಿಜೀವನವನ್ನು ಇಲ್ಲಿಗೆ ಅಂತ್ಯಗೊಳಿಸುತ್ತಿದ್ದೇನೆ. ಇದೊಂದು ಅದ್ಭುತ ಪ್ರಯಾಣವಾಗಿತ್ತು" ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ. ಅರಿಜಿತ್ ಸಿಂಗ್ ಇಂದು ಭಾರತೀಯ ಸಂಗೀತ ಚಿತ್ರೋದ್
Jan 281 min read


ಬಜೆಟ್ಗೆ ಮುನ್ನ ‘ಹಲ್ವಾ ಸಂಪ್ರದಾಯ’: ದಶಕಗಳ ಹಳೆಯ ರಹಸ್ಯತಾ ಆಚರಣೆ
ನವದೆಹಲಿ: ಕೇಂದ್ರ ಬಜೆಟ್ ಮಂಡನೆಗೂ ಮುನ್ನ ನಡೆಯುವ ‘ಹಲ್ವಾ ಸಮಾರಂಭ’ವು ದಶಕಗಳಷ್ಟು ಹಳೆಯದಾದ ವಿಶಿಷ್ಟ ಸಂಪ್ರದಾಯವಾಗಿದೆ. ಸ್ವಾತಂತ್ರ್ಯ ನಂತರದಿಂದಲೇ ಬಜೆಟ್ ತಯಾರಿಕಾ ಪ್ರಕ್ರಿಯೆಯ ಅವಿಭಾಜ್ಯ ಅಂಗವಾಗಿ ಈ ಆಚರಣೆ ನಡೆದು ಬರುತ್ತಿದೆ. ಭಾರತೀಯ ಸಂಪ್ರದಾಯದಂತೆ ಯಾವುದೇ ಮಹತ್ವದ ಕಾರ್ಯ ಆರಂಭಕ್ಕೂ ಮೊದಲು ಸಿಹಿ ತಿನ್ನುವುದು ಶುಭವೆಂದು ಪರಿಗಣಿಸಲಾಗುತ್ತದೆ. ಅದೇ ನಂಬಿಕೆಯ ಹಿನ್ನೆಲೆಯಲ್ಲಿ, ಹಣಕಾಸು ಸಚಿವರು ನಾರ್ತ್ ಬ್ಲಾಕ್ನಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಹಲ್ವಾ ವಿತರಿಸುವ ಮೂಲಕ ಬಜೆಟ್ ಮುದ್ರಣ ಪ್ರಕ್ರಿಯೆಗೆ ಅಧಿಕೃತ ಚಾಲನೆ ನೀಡುತ್ತಾರೆ. ಈ ಸಮಾರಂಭದ ನಂತರ ಬಜೆಟ್ಗೆ ಸಂಬಂಧಿಸ
Jan 271 min read


ಸತತ ಮೂರು ದಿನ ಬ್ಯಾಂಕ್ ಬಂದ್: ಯಾವೆಲ್ಲ ಬ್ಯಾಂಕುಗಳ ಸೇವೆ ಸ್ಥಗಿತ?
ನಾಳೆ (ಜನವರಿ 27) ಬ್ಯಾಂಕ್ ಮುಷ್ಕರ ನಡೆಯಲಿದೆ. ಹೀಗಾಗಿ, ದೇಶಾದ್ಯಂತ ಈ ಬ್ಯಾಂಕುಗಳು ಮಂಗಳವಾರವೂ ಮುಚ್ಚಿರುತ್ತವೆ. ಭಾರತದಾದ್ಯಂತ ಬ್ಯಾಂಕ್ ಉದ್ಯೋಗಿ ಮತ್ತು ಅಧಿಕಾರಿ ಸಂಘಗಳು ಜನವರಿ 27ರಂದು ರಾಷ್ಟ್ರವ್ಯಾಪಿ ಮುಷ್ಕರವನ್ನು ಘೋಷಿಸಿವೆ. ಇದು ಹೆಚ್ಚಿನ ಸಾರ್ವಜನಿಕ ವಲಯದ ಬ್ಯಾಂಕುಗಳ ಸೇವೆಗಳನ್ನು ಅಡ್ಡಿಪಡಿಸುವ ನಿರೀಕ್ಷೆಯಿದೆ. ಈ ಮುಷ್ಕರಕ್ಕೆ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿದೆ. ತಮಗೆ ವಾರದಲ್ಲಿ 5 ದಿನಗಳ ಕಾಲ ಮಾತ್ರ ಕೆಲಸ ಮಾಡಲು ಅವಕಾಶ ನೀಡಬೇಕು, ಶನಿವಾರ ಹಾಗೂ ಭಾನುವಾರ ರಜೆ ನೀಡಬೇಕು ಎಂದು ಒತ್ತಾಯಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್
Jan 261 min read


ಬಾಹ್ಯಾಕಾಶ ವೀರ ಶುಭಾಂಶು ಶುಕ್ಲಾಗೆ ದೇಶದ ಅತ್ಯುನ್ನತ 'ಅಶೋಕ ಚಕ್ರ' ಗೌರವ:
2026ರ ಗಣರಾಜ್ಯೋತ್ಸವದ ಐತಿಹಾಸಿಕ ಸಂದರ್ಭದಲ್ಲಿ, ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾದ 'ಅಶೋಕ ಚಕ್ರ' ನೀಡಿ ಗೌರವಿಸಿದರು. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿ, ಅವರು ತೋರಿದ ಅಪ್ರತಿಮ ಧೈರ್ಯ ಮತ್ತು ತಾಂತ್ರಿಕ ನೈಪುಣ್ಯವನ್ನು ಪರಿಗಣಿಸಿ ಈ ಶ್ರೇಷ್ಠ ಗೌರವವನ್ನು ಅರ್ಪಿಸಲಾಗಿದೆ. ಅಶೋಕ ಚಕ್ರವು ಯುದ್ಧಭೂಮಿಯ ಹೊರಗೆ ತೋರುವ ಅದ್ಭುತ ಸಾಹಸಕ್ಕಾಗಿ ನೀಡಲಾಗುವ ಅತ್ಯುನ್ನತ
Jan 261 min read


ದೇಶಾದ್ಯಂತ 77ನೇ ಗಣರಾಜ್ಯೋತ್ಸವ ಸಡಗರ: 'ವಿಕಸಿತ ಭಾರತ' ಸಂಕಲ್ಪದೊಂದಿಗೆ ಜನತೆಗೆ ಶುಭ ಕೋರಿದ ಮೋದಿ!
ನವದೆಹಲಿ: ದೇಶದ 77ನೇ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಂಭ್ರಮ ಮನೆಮಾಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ (National War Memorial) ಭೇಟಿ ನೀಡಿ, ದೇಶದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ಹುತಾತ್ಮ ಸೈನಿಕರಿಗೆ ಪುಷ್ಪಗುಚ್ಛ ಅರ್ಪಿಸಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ರಕ್ಷಣಾ ಸಚಿವರು ಸೇರಿದಂತೆ ಮೂರು ಸೇನಾ ಪಡೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಈ ಬಾರಿಯ ಗಣರಾಜ್ಯೋತ್ಸವಕ್ಕೆ ವಿಶೇಷ ಅತಿಥಿಗಳಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಮತ್ತು ಯುರೋಪಿಯನ್ ಕೌನ್ಸಿಲ
Jan 261 min read


ಹಿಮಪಾತದ ಅಬ್ಬರಕ್ಕೆ ಹಿಮಾಚಲ ಸ್ತಬ್ಧ: 600ಕ್ಕೂ ಹೆಚ್ಚು ರಸ್ತೆಗಳು ಬಂದ್, ಮೈಕೊರೆಯುವ ಚಳಿಯಲ್ಲಿ ಪ್ರವಾಸಿಗರ ಪರದಾಟ!
ಶಿಮ್ಲಾ: ದೇವಭೂಮಿ ಹಿಮಾಚಲ ಪ್ರದೇಶದಲ್ಲಿ ಪ್ರಕೃತಿಯ ಮುನಿಸು ಮುಂದುವರಿದಿದ್ದು, ಭಾರೀ ಹಿಮಪಾತದಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮನಾಲಿ, ಶಿಮ್ಲಾ ಮತ್ತು ಕಾಲ್ಕಾ ಸೇರಿದಂತೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸತತವಾಗಿ ಹಿಮ ಬೀಳುತ್ತಿದ್ದು, ಒಂದೆಡೆ ಪ್ರವಾಸಿಗರು ಹಿಮದ ಸಂಭ್ರಮದಲ್ಲಿದ್ದರೆ, ಮತ್ತೊಂದೆಡೆ ಸಾವಿರಾರು ಜನರು ಊರುಗಳಿಗೆ ಮರಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕುಲು ಜಿಲ್ಲೆಯ ಕೋಥಿ ಮತ್ತು ಮನಾಲಿಯಲ್ಲಿ ಸುಮಾರು 8 ಕಿಲೋಮೀಟರ್ಗೂ ಅಧಿಕ ಉದ್ದದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರವಾಸಿಗರು ರಸ್ತೆಯಲ್ಲೇ ಕಾಲ ಕಳೆಯುವಂತಾಗಿದೆ. ರಾಜ್ಯಾದ್ಯಂತ ಹಿಮದ ಹೊದಿ
Jan 251 min read


ಗಣರಾಜ್ಯೋತ್ಸವ–2026ಕ್ಕೆ ಹೊಸ ಇತಿಹಾಸ: 140 ಪುರುಷರ CRPF ಪಡೆಯ ನೇತೃತ್ವ ವಹಿಸಲಿರುವ ಮಹಿಳಾ ಅಧಿಕಾರಿ ಸಿಮ್ರನ್ ಬಾಲಾ
ನವದೆಹಲಿ: ಗಣರಾಜ್ಯೋತ್ಸವ–2026ರ ಪಥಸಂಚಲನದಲ್ಲಿ ಇತಿಹಾಸ ನಿರ್ಮಾಣವಾಗಲಿದೆ. ಕೇಂದ್ರ ಮೀಸಲು ಪೊಲೀಸ್ ಪಡೆ (CRPF)ಯ 140 ಮಂದಿ ಪುರುಷರನ್ನೊಳಗೊಂಡ ಪಥಸಂಚಲನ ಪಡೆಯನ್ನು ಮೊದಲ ಬಾರಿಗೆ ಮಹಿಳಾ ಅಧಿಕಾರಿ ಸಿಮ್ರನ್ ಬಾಲಾ (Simran Bala) ನೇತೃತ್ವ ವಹಿಸಲಿದ್ದಾರೆ. CRPFನಲ್ಲಿ ಸೇವೆ ಸಲ್ಲಿಸುತ್ತಿರುವ ಸಿಮ್ರನ್ ಬಾಲಾ, ಗಣರಾಜ್ಯೋತ್ಸವದ ಪ್ರಮುಖ ಕಾರ್ಯಕ್ರಮದಲ್ಲಿ ಪುರುಷರ ಪಥಸಂಚಲನ ಪಡೆಗೆ ಕಮಾಂಡ್ ನೀಡುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲಿದ್ದಾರೆ. ಇದು ಕೇವಲ ವೈಯಕ್ತಿಕ ಸಾಧನೆ ಮಾತ್ರವಲ್ಲದೆ, ಮಹಿಳೆಯರ ಸಾಮರ್ಥ್ಯ ಮತ್ತು ಸಮಾನತೆಯ ಸಂಕೇತವಾಗಿಯೂ ಗುರುತಿಸಲಾಗಿದೆ. ರಾಷ್ಟ್ರೀಯ ಮಟ್ಟದ ಈ ಗೌರವ
Jan 241 min read


ಮಂಗಳೂರಿಗೆ ಒಲಿದ ‘ದೇಶದ ಅತ್ಯಂತ ಸುರಕ್ಷಿತ ನಗರ’ ಎಂಬ ಹೆಗ್ಗಳಿಕೆ: ನಂಬಿಯೋ (Numbeo) ಜಾಗತಿಕ ವರದಿ ಬಿಡುಗಡೆ
ನಂಬಿಯೋ (Numbeo) ಸಂಸ್ಥೆಯು ಬಿಡುಗಡೆ ಮಾಡಿರುವ ‘ಸೇಫ್ಟಿ ಇಂಡೆಕ್ಸ್–2026’ರ (ಸುರಕ್ಷತಾ ಸೂಚ್ಯಂಕ) ವರದಿಯಲ್ಲಿ ಕರಾವಳಿಯ ಹೆಮ್ಮೆಯ ನಗರಿ ಮಂಗಳೂರು ಭಾರತದಲ್ಲೇ ಅತ್ಯಂತ ಸುರಕ್ಷಿತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ವಿಶ್ವದಾದ್ಯಂತ ಒಟ್ಟು 304 ಪ್ರಮುಖ ನಗರಗಳನ್ನು ಒಳಗೊಂಡ ಈ ಸಮಗ್ರ ಸಮೀಕ್ಷೆಯಲ್ಲಿ, ಮಂಗಳೂರು ಅಗ್ರಸ್ಥಾನ ಪಡೆಯುವ ಮೂಲಕ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದೆ. ಈ ವರದಿಯು ಮಂಗಳೂರಿನ ನಾಗರಿಕರ ನೆಮ್ಮದಿಯ ಜೀವನ ಹಾಗೂ ನಗರದ ಶಿಸ್ತುಬದ್ಧ ವಾತಾವರಣಕ್ಕೆ ಹಿಡಿದ ಕನ್ನಡಿಯಾಗಿದೆ. ಸಾರ್ವಜನಿಕ ಸುರಕ್ಷತೆ, ಅಪರಾಧ ಚಟುವಟಿಕೆಗಳ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಹಾಗೂ ನಗರದ ಭದ
Jan 231 min read


ದೆಹಲಿಯಲ್ಲಿ ಅಕಾಲಿಕ ಮಳೆ: ಏಳು ವರ್ಷಗಳ ದಾಖಲೆ ಮುರಿದ ತಾಪಮಾನದ ಬೆನ್ನಲ್ಲೇ ತಂಪು ಹವಾಮಾನ
ನವದೆಹಲಿ: ದೇಶದ ರಾಜಧಾನಿ ದೆಹಲಿಯ ವಿವಿಧೆಡೆ ಶುಕ್ರವಾರ ಅಕಾಲಿಕ ಮಳೆಯಾಗಿದ್ದು, ಸುಡುಬಿಸಿಲಿನಿಂದ ಕಂಗಾಲಾಗಿದ್ದ ಜನತೆಗೆ ತುಸು ಸಮಾಧಾನ ತಂದಿದೆ. ಪಶ್ಚಿಮ ಪ್ರಕ್ಷುಬ್ಧತೆಯ (Western Disturbance) ಪರಿಣಾಮವಾಗಿ ಈ ಹವಾಮಾನ ಬದಲಾವಣೆ ಉಂಟಾಗಿದ್ದು, ಮುಂದಿನ ಕೆಲವು ದಿನಗಳ ಕಾಲ ನಗರದಲ್ಲಿ ತುಂತುರು ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕೇವಲ ಮಳೆಯಷ್ಟೇ ಅಲ್ಲದೆ, ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಗುಡುಗು ಮತ್ತು ಮಿಂಚಿನ ಆರ್ಭಟವೂ ಇರಲಿದೆ ಎಂದು ಇಲಾಖೆ ಎಚ್ಚರಿಸಿದೆ. ಗುರುವಾರವಷ್ಟೇ ದೆಹಲಿಯಲ
Jan 231 min read


ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅಧಿಕಾರ ಸ್ವೀಕಾರ
ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವರು ಇಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಜೆ.ಪಿ. ನಡ್ಡಾ ಅವರ ಅಧಿಕಾರ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ನಡೆದ ಸಾಂಸ್ಥಿಕ ಚುನಾವಣೆಯಲ್ಲಿ 45 ವರ್ಷದ ನಬಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿ ಕೆ. ಲಕ್ಷ್ಮಣ್ ಅವರು ನಬಿನ್ ಅವರ ಆಯ್ಕೆಯನ್ನು ಘೋಷಿಸಿ ಪ್ರಮಾಣಪತ್ರ ಹಸ್ತಾಂತರಿಸಿದರು. ಈ ಹಿಂದೆ ಪಕ್ಷದ ಕಾರ್ಯಾಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ್ದ ನಬಿನ್, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಮುನ್ನ ಬಿಹಾರ ಸರ್ಕಾರದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. 1980ರಲ
Jan 201 min read


ರಾಷ್ಟ್ರೀಯ ಹೆದ್ದಾರಿಗಳಲ್ಲಿ ನಗದು ಪಾವತಿ ಬಂದ್: ಏಪ್ರಿಲ್ 1 ರಿಂದ ಡಿಜಿಟಲ್ ಟೋಲ್ ಕಡ್ಡಾಯ
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮಹತ್ವದ ಸೂಚನೆ ನೀಡಿದೆ. ಏಪ್ರಿಲ್ 1 ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿಯನ್ನು ಸಂಪೂರ್ಣವಾಗಿ ನಿಷೇಧಿಸಲು ಸರ್ಕಾರ ಸಜ್ಜಾಗುತ್ತಿದೆ. ಟೋಲ್ ಕೇಂದ್ರಗಳಲ್ಲಿ ಉಂಟಾಗುವ ಭಾರಿ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಪ್ರಯಾಣಿಕರ ಸಮಯವನ್ನು ಉಳಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಅಧಿಕೃತ ಅಧಿಸೂಚನೆ ಇನ್ನಷ್ಟೇ ಹೊರಬೀಳಬೇಕಿದ್ದರೂ, ಸಚಿವಾಲಯವು ಡಿಜಿಟಲ್ ಪಾವತಿಯ ಸುಗಮ ಪರಿವರ್ತನೆಗೆ ಅಗತ್ಯವಿರುವ ಎಲ್ಲಾ ಸಿದ್ಧತೆಗಳನ್ನು ಈಗಾಗಲೇ ಆರಂಭಿಸಿದೆ. ಈ ಹೊಸ ನಿಯಮದ ಅನ್ವಯ,
Jan 171 min read


ಗಡಿಯಲ್ಲಿ ಪಾಕಿಸ್ತಾನದ ಕುತಂತ್ರ: ಜಮ್ಮು-ಕಾಶ್ಮೀರದಲ್ಲಿ ಡ್ರೋನ್ಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ
ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (LoC) ಬಳಿ ಪಾಕಿಸ್ತಾನದ ಡ್ರೋನ್ ಹಾವಳಿ ಮತ್ತೆ ಮುಂದುವರಿದಿದ್ದು, ಭಾನುವಾರ ರಾತ್ರಿ ಭಾರತೀಯ ಸೇನೆಯು ಯಶಸ್ವಿ ಕಾರ್ಯಾಚರಣೆ ನಡೆಸಿದೆ. ನೌಶೇರಾ ಸೆಕ್ಟರ್ನಲ್ಲಿ ಗಡಿ ದಾಟಿ ಬಂದ ಪಾಕಿಸ್ತಾನಿ ಡ್ರೋನ್ಗಳನ್ನು ಗುರ್ತಿಸಿದ ಸೇನಾ ಪಡೆಗಳು, ತಕ್ಷಣವೇ ಮೆಷಿನ್ ಗನ್ಗಳ ಮೂಲಕ ಗುಂಡು ಹಾರಿಸಿ ಅವುಗಳನ್ನು ಹೊಡೆದುರುಳಿಸಿವೆ. 'ಆಪರೇಷನ್ ಸಿಂಧೂರ'ದ ಸಮಯದಲ್ಲಿ ಕಂಡುಬಂದಿದ್ದ ಹಾರಾಟದ ಮಾದರಿಯಲ್ಲೇ ಈ ಡ್ರೋನ್ಗಳು ಕೂಡ ಸಂಚರಿಸುತ್ತಿರುವುದು ಕಂಡುಬಂದಿದೆ. ರಾಜೌರಿ ಜಿಲ್ಲೆಯ ನೌಶೇರಾ ಮಾತ್ರವಲ್ಲದೆ, ಸಾಂಬಾ ಸೆಕ್ಟರ್ನಲ್ಲಿಯೂ ಪಾಕಿಸ್ತಾನ ಆಕ್ರಮಿತ ಕ
Jan 121 min read
Archive
bottom of page



